Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ហុិជរ៍   អាយ៉ាត់:
اِذْ دَخَلُوْا عَلَیْهِ فَقَالُوْا سَلٰمًا ؕ— قَالَ اِنَّا مِنْكُمْ وَجِلُوْنَ ۟
ಅತಿಥಿಗಳು ಅವರ ಬಳಿಗೆ ಬಂದು ಸಲಾಮ್ ಹೇಳಿದ ಸಂದರ್ಭ, ಆಗ ಇಬ್ರಾಹೀಮ್ ನಿಜವಾಗಿಯೂ ನಾವು ನಿಮ್ಮ ಬಗ್ಗೆ ಭಯಪಡುತ್ತೇವೆಂದರು.
តាហ្វសៀរជាភាសា​អារ៉ាប់ជាច្រេីន:
قَالُوْا لَا تَوْجَلْ اِنَّا نُبَشِّرُكَ بِغُلٰمٍ عَلِیْمٍ ۟
ಆಗ ಅವರು ಹೇಳಿದರು; ನೀವು ಭಯಪಡಬೇಡಿ ನಾವು ನಿಮಗೆ ಜ್ಞಾನಿಯಾದ ಒಬ್ಬ ಪುತ್ರನ ಸುವಾರ್ತೆಯನ್ನು ನೀಡುತ್ತಿದ್ದೇವೆ.
តាហ្វសៀរជាភាសា​អារ៉ាប់ជាច្រេីន:
قَالَ اَبَشَّرْتُمُوْنِیْ عَلٰۤی اَنْ مَّسَّنِیَ الْكِبَرُ فَبِمَ تُبَشِّرُوْنَ ۟
ಅವರು ಹೇಳಿದರು; ನನಗೆ ವೃದ್ಧಾಪ್ಯ ಬಾಧಿಸಿದ ಮೇಲೆ ನೀವು ಸುವಾರ್ತೆ ನೀಡುತ್ತಿರುವಿರಾ ? ಎಂತಹ ಸುವಾರ್ತೆಯನ್ನು ನೀಡುತ್ತಿರುವಿರಿ ?
តាហ្វសៀរជាភាសា​អារ៉ាប់ជាច្រេីន:
قَالُوْا بَشَّرْنٰكَ بِالْحَقِّ فَلَا تَكُنْ مِّنَ الْقٰنِطِیْنَ ۟
ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ ಹೊಂದಿದವರಲ್ಲಿ ಸೇರಬೇಡಿರಿ.
តាហ្វសៀរជាភាសា​អារ៉ាប់ជាច្រេីន:
قَالَ وَمَنْ یَّقْنَطُ مِنْ رَّحْمَةِ رَبِّهٖۤ اِلَّا الضَّآلُّوْنَ ۟
ಇಬ್ರಾಹೀಮರು; ತನ್ನ ಪ್ರಭುವಿನ ಕಾರುಣ್ಯದಿಂದ ದಾರಿತಪ್ಪಿದವರ ಹೊರತು ಇನ್ನಾರೂ ನಿರಾಶರಾಗುತ್ತಾರೆ? ಎಂದರು.
តាហ្វសៀរជាភាសា​អារ៉ាប់ជាច្រេីន:
قَالَ فَمَا خَطْبُكُمْ اَیُّهَا الْمُرْسَلُوْنَ ۟
ಮತ್ತು ಹೇಳಿದರು; ಓ ಮಲಕ್‌ಗಳೇ ನೀವು ಯಾವ ಕಾರ್ಯಾಚರಣೆಗಾಗಿ ಬಂದಿರುವಿರಿ?
តាហ្វសៀរជាភាសា​អារ៉ាប់ជាច្រេីន:
قَالُوْۤا اِنَّاۤ اُرْسِلْنَاۤ اِلٰی قَوْمٍ مُّجْرِمِیْنَ ۟ۙ
ಅವರು ಉತ್ತರಿಸಿದರು; ನಾವು ಒಂದು ಅಪರಾಧಿ ಜನಾಂಗದಡೆಗೆ ಕಳುಹಿಸಲ್ಪಟ್ಟಿದ್ದೇವೆ.
តាហ្វសៀរជាភាសា​អារ៉ាប់ជាច្រេីន:
اِلَّاۤ اٰلَ لُوْطٍ ؕ— اِنَّا لَمُنَجُّوْهُمْ اَجْمَعِیْنَ ۟ۙ
ಆದರೆ ಲೂತರ ಕುಟುಂಬದ ಹೊರತು, ಅವರ ಕುಟುಂಬವನ್ನು ನಾವು ರಕ್ಷಿಸುವೆವು.
តាហ្វសៀរជាភាសា​អារ៉ាប់ជាច្រេីន:
اِلَّا امْرَاَتَهٗ قَدَّرْنَاۤ ۙ— اِنَّهَا لَمِنَ الْغٰبِرِیْنَ ۟۠
ಲೂತರ ಪತ್ನಿಯ ಹೊರತು ನಾವು ಅವಳನ್ನು ಹಿಂದುಳಿದವರಲ್ಲಿ ನಿಶ್ಚಯಿಸಿಬಿಟ್ಟಿರುವೆವು.
តាហ្វសៀរជាភាសា​អារ៉ាប់ជាច្រេីន:
فَلَمَّا جَآءَ اٰلَ لُوْطِ ١لْمُرْسَلُوْنَ ۟ۙ
ಅನಂತರ ಮಲಕ್‌ಗಳು ಲೂತರ ಕುಟುಂಬದ ಬಳಿಗೆ ತಲುಪಿದಾಗ.
តាហ្វសៀរជាភាសា​អារ៉ាប់ជាច្រេីន:
قَالَ اِنَّكُمْ قَوْمٌ مُّنْكَرُوْنَ ۟
ಲೂತ್ ನೀವು ಅಪರಿಚಿತರಾಗಿ ಕಾಣುತ್ತಿರುವಿರಿ ಎಂದರು.
តាហ្វសៀរជាភាសា​អារ៉ាប់ជាច្រេីន:
قَالُوْا بَلْ جِئْنٰكَ بِمَا كَانُوْا فِیْهِ یَمْتَرُوْنَ ۟
ಅವರು ಹೇಳಿದರು, ಅಲ್ಲ, ಯಾವುದರ ಬಗ್ಗೆ ಇವರು ಸಂಶಯ ಪಡುತ್ತಿರುವರೋ ಅದನ್ನು ನಾವು ನಿಮ್ಮ ಬಳಿಗೆ ತಂದಿದ್ದೇವೆ
តាហ្វសៀរជាភាសា​អារ៉ាប់ជាច្រេីន:
وَاَتَیْنٰكَ بِالْحَقِّ وَاِنَّا لَصٰدِقُوْنَ ۟
ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ ಮತ್ತು ಖಂಡಿತವಾಗಿಯೂ ನಾವು ಸತ್ಯವಂತರಾಗಿದ್ದೇವೆ.
តាហ្វសៀរជាភាសា​អារ៉ាប់ជាច្រេីន:
فَاَسْرِ بِاَهْلِكَ بِقِطْعٍ مِّنَ الَّیْلِ وَاتَّبِعْ اَدْبَارَهُمْ وَلَا یَلْتَفِتْ مِنْكُمْ اَحَدٌ وَّامْضُوْا حَیْثُ تُؤْمَرُوْنَ ۟
ಆದ್ದರಿಂದ ನೀವು ರಾತ್ರಿಯ ಸ್ವಲ್ಪಭಾಗ ಉಳಿದಿರುವಾಗ ನಿಮ್ಮ ಪರಿವಾರದೊಂದಿಗೆ ಹೊರಟುಬಿಡಿ, ನೀವು ಅವರ ಬೆನ್ನ ಹಿಂದೆಯೇ ಇರಬೇಕು ಜಾಗೃತೆ! ನಿಮ್ಮ ಪೈಕಿ ಯಾರು ಹಿಂತಿರುಗಿಯೂ ನೋಡದಿರಲಿ ಮತ್ತು ನಿಮಗೆ ಆದೇಶ ನೀಡಲಾಗುತ್ತಿರುವ ಕಡೆಗೆ ಸಾಗಿರಿ.
តាហ្វសៀរជាភាសា​អារ៉ាប់ជាច្រេីន:
وَقَضَیْنَاۤ اِلَیْهِ ذٰلِكَ الْاَمْرَ اَنَّ دَابِرَ هٰۤؤُلَآءِ مَقْطُوْعٌ مُّصْبِحِیْنَ ۟
ಬೆಳಗಾಗುತ್ತಲೇ ಅವರೆಲ್ಲರನ್ನು ಮೂಲೋತ್ಪಾಟನೆ ಗೊಳಿಸಲಾಗುವುದೆಂಬ ಈ ತೀರ್ಮಾನವನ್ನು ನಾವು ಅವರಿಗೆ ನೀಡಿದೆವು.
តាហ្វសៀរជាភាសា​អារ៉ាប់ជាច្រេីន:
وَجَآءَ اَهْلُ الْمَدِیْنَةِ یَسْتَبْشِرُوْنَ ۟
ಅಷÀ್ಟರಲ್ಲಿ ಪಟ್ಟಣದ ವಾಸಿಗಳು ಹರ್ಷಿತರಾಗಿ ಧಾವಿಸಿದರು.
តាហ្វសៀរជាភាសា​អារ៉ាប់ជាច្រេីន:
قَالَ اِنَّ هٰۤؤُلَآءِ ضَیْفِیْ فَلَا تَفْضَحُوْنِ ۟ۙ
ಲೂತ್ ಹೇಳಿದರು; ಇವರಂತೂ ನನ್ನ ಅತಿಥಿಗಳು ಆದ್ದರಿಂದ ನೀವು ನನ್ನನ್ನು ಅವಮಾನಿಸದಿರಿ.
តាហ្វសៀរជាភាសា​អារ៉ាប់ជាច្រេីន:
وَاتَّقُوا اللّٰهَ وَلَا تُخْزُوْنِ ۟
ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅವಮಾನಿಸದಿರಿ.
តាហ្វសៀរជាភាសា​អារ៉ាប់ជាច្រេីន:
قَالُوْۤا اَوَلَمْ نَنْهَكَ عَنِ الْعٰلَمِیْنَ ۟
ಅವರು ಹೇಳಿದರು; ಲೋಕದವರ ವಿಚಾರದಲ್ಲಿ ನಾವು ನಿಮ್ಮನ್ನು ತಡೆದಿರಲಿಲ್ಲವೇ ?
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ហុិជរ៍
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ