Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ហាទីត   អាយ៉ាត់:
هُوَ الَّذِیْ خَلَقَ السَّمٰوٰتِ وَالْاَرْضَ فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ ؕ— یَعْلَمُ مَا یَلِجُ فِی الْاَرْضِ وَمَا یَخْرُجُ مِنْهَا وَمَا یَنْزِلُ مِنَ السَّمَآءِ وَمَا یَعْرُجُ فِیْهَا ؕ— وَهُوَ مَعَكُمْ اَیْنَ مَا كُنْتُمْ ؕ— وَاللّٰهُ بِمَا تَعْمَلُوْنَ بَصِیْرٌ ۟
ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ತರುವಾಯ ಅವನು ಸಿಂಹಾಸನಾರೂಢನಾದನು, ಭೂಮಿಯೊಳಗೆ ಪ್ರವೇಶಿಸುವ ಅದರಿಂದ ಹೊರಬರುವ, ಆಕಾಶದಿಂದ ಕೆಳಗಿಳಿಯುವ, ಮತ್ತು ಅದರಲ್ಲಿ ಏರಿ ಹೋಗುವ ಸಕಲವನ್ನೂ ಅವನು ಚೆನ್ನಾಗಿ ಬಲ್ಲನು ನೀವೆಲ್ಲೇ ಇದ್ದರೂ ಅವನು ನಿಮ್ಮ ಜೊತೆಗಿರುವನು ಮತ್ತು ನೀವು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ನೋಡುವವನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
لَهٗ مُلْكُ السَّمٰوٰتِ وَالْاَرْضِ ؕ— وَاِلَی اللّٰهِ تُرْجَعُ الْاُمُوْرُ ۟
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅವನಿಗೇ ಆಗಿದೆ ಮತ್ತು ಸಕಲ ಕಾರ್ಯಗಳು ಅವನೆಡೆಗೇ ಮರಳಿಸಲಾಗುತ್ತವೆ.
តាហ្វសៀរជាភាសា​អារ៉ាប់ជាច្រេីន:
یُوْلِجُ الَّیْلَ فِی النَّهَارِ وَیُوْلِجُ النَّهَارَ فِی الَّیْلِ ؕ— وَهُوَ عَلِیْمٌۢ بِذَاتِ الصُّدُوْرِ ۟
ಅವನೇ ರಾತ್ರಿಯನ್ನು ಹಗಲಿನೊಳಗೆ, ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಅವನು ಹೃದಯಗಳಲ್ಲಿರುವ ರಹಸ್ಯಗಳನ್ನು ಚೆನ್ನಾಗಿ ಅರಿಯುತ್ತಾನೆ.
តាហ្វសៀរជាភាសា​អារ៉ាប់ជាច្រេីន:
اٰمِنُوْا بِاللّٰهِ وَرَسُوْلِهٖ وَاَنْفِقُوْا مِمَّا جَعَلَكُمْ مُّسْتَخْلَفِیْنَ فِیْهِ ؕ— فَالَّذِیْنَ اٰمَنُوْا مِنْكُمْ وَاَنْفَقُوْا لَهُمْ اَجْرٌ كَبِیْرٌ ۟
ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ ಮತ್ತು ಅವನು ನಿಮ್ಮನ್ನು ಯಾವ ಸಂಪತ್ತಿನ ವಾರೀಸುದಾರರನ್ನಾಗಿ ಮಾಡಿರುವನೋ ಅದರಿಂದ ಖರ್ಚು ಮಾಡಿರಿ. ನಿಮ್ಮ ಪೈಕಿ ವಿಶ್ವಾಸವಿರಿಸಿ, ದಾನಧರ್ಮಗಳನ್ನು ನೀಡಿದವರಿಗೆ ಮಹಾ ಪ್ರತಿಫಲವಿದೆ.
តាហ្វសៀរជាភាសា​អារ៉ាប់ជាច្រេីន:
وَمَا لَكُمْ لَا تُؤْمِنُوْنَ بِاللّٰهِ ۚ— وَالرَّسُوْلُ یَدْعُوْكُمْ لِتُؤْمِنُوْا بِرَبِّكُمْ وَقَدْ اَخَذَ مِیْثَاقَكُمْ اِنْ كُنْتُمْ مُّؤْمِنِیْنَ ۟
ನೀವು ಅಲ್ಲಾಹನಲ್ಲಿ ವಿಶ್ವಾಸವಿಡದಿರಲು ನಿಮಗೇನಾಗಿದೆ? ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿರಿಸಲೆಂದು ಈ ಸಂದೇಶವಾಹಕರು ನಿಮ್ಮನ್ನು ಕರೆಯುತ್ತಿದ್ದಾರೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ಅವನು (ಅಲ್ಲಾಹನು) ನಿಮ್ಮಿಂದ ಕರಾರನ್ನು ಪಡೆದುಕೊಂಡಿರುವನು.
តាហ្វសៀរជាភាសា​អារ៉ាប់ជាច្រេីន:
هُوَ الَّذِیْ یُنَزِّلُ عَلٰی عَبْدِهٖۤ اٰیٰتٍۢ بَیِّنٰتٍ لِّیُخْرِجَكُمْ مِّنَ الظُّلُمٰتِ اِلَی النُّوْرِ ؕ— وَاِنَّ اللّٰهَ بِكُمْ لَرَءُوْفٌ رَّحِیْمٌ ۟
ಅಲ್ಲಾಹನೇ ನಿಮ್ಮನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರಲೆಂದು ತನ್ನ ದಾಸನ ಮೇಲೆ ಸುಸ್ಪಷ್ಟವಾದ ಸೂಕ್ತಿಗಳನ್ನು ಅವತೀರ್ಣಗೊಳಿಸಿದ್ದಾನೆ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಮೇಲೆ ಕೃಪಾಳುವೂ, ಕರುಣಾನಿಧಿಯೂ ಆಗಿದ್ದಾನೆ
តាហ្វសៀរជាភាសា​អារ៉ាប់ជាច្រេីន:
وَمَا لَكُمْ اَلَّا تُنْفِقُوْا فِیْ سَبِیْلِ اللّٰهِ وَلِلّٰهِ مِیْرَاثُ السَّمٰوٰتِ وَالْاَرْضِ ؕ— لَا یَسْتَوِیْ مِنْكُمْ مَّنْ اَنْفَقَ مِنْ قَبْلِ الْفَتْحِ وَقٰتَلَ ؕ— اُولٰٓىِٕكَ اَعْظَمُ دَرَجَةً مِّنَ الَّذِیْنَ اَنْفَقُوْا مِنْ بَعْدُ وَقَاتَلُوْاؕ— وَكُلًّا وَّعَدَ اللّٰهُ الْحُسْنٰی ؕ— وَاللّٰهُ بِمَا تَعْمَلُوْنَ خَبِیْرٌ ۟۠
ನಿಮಗೇನಾಗಿಬಿಟ್ಟಿದೆ? ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವಲ್ಲ! ವಾಸ್ತವದಲ್ಲಿ ಆಕಾಶಗಳ ಹಾಗು ಭೂಮಿಯ ಒಡೆತನವು ಅಲ್ಲಾಹನದ್ದಾಗಿದೆ. ನಿಮ್ಮ ಪೈಕಿ ಮಕ್ಕಾಃ ವಿಜಯದ ಮೊದಲು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರುವವರು, ಯುದ್ಧ ಮಾಡಿರುವವರು, ವಿಜಯದ ನಂತರ ಖರ್ಚು ಮಾಡಿರುವ ಹಾಗು ಯುದ್ಧ ಮಾಡಿರುವವರಿಗಿಂತ ಶ್ರೇಷ್ಠ ಪದವಿಯುಳ್ಳವರಾಗಿದ್ದಾರೆ. ಆದರೆ ಅಲ್ಲಾಹನ ಒಳಿತಿನ ವಾಗ್ದಾನವಂತು ಎಲ್ಲರೊಂದಿಗೂ ಇದೆ ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ.
តាហ្វសៀរជាភាសា​អារ៉ាប់ជាច្រេីន:
مَنْ ذَا الَّذِیْ یُقْرِضُ اللّٰهَ قَرْضًا حَسَنًا فَیُضٰعِفَهٗ لَهٗ وَلَهٗۤ اَجْرٌ كَرِیْمٌ ۟
ಅಲ್ಲಾಹನಿಗೆ ಉತ್ತಮ ಸಾಲ ಕೊಡುವವನಾರಿದ್ದಾನೆ ? ಬಳಿಕ ಅಲ್ಲಾಹನು ಅದನ್ನು ಇಮ್ಮಡಿಗೊಳಿಸಿ ಅವನಿಗೆ ಕೊಡುವನು, ಹಾಗು ಅವನಿಗೆ ಗೌರವಾನ್ವಿತ ಪ್ರತಿಫಲವಿದೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ហាទីត
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ