Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ហាទីត   អាយ៉ាត់:
وَالَّذِیْنَ اٰمَنُوْا بِاللّٰهِ وَرُسُلِهٖۤ اُولٰٓىِٕكَ هُمُ الصِّدِّیْقُوْنَ ۖۗ— وَالشُّهَدَآءُ عِنْدَ رَبِّهِمْ ؕ— لَهُمْ اَجْرُهُمْ وَنُوْرُهُمْ ؕ— وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ الْجَحِیْمِ ۟۠
ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದವರೇ ತಮ್ಮ ಪ್ರಭುವಿನ ಸನ್ನಿಧಿಯಲ್ಲಿ ಸತ್ಯವಂತರೂ ಮತ್ತು ಸಾಕ್ಷಿಗಳೂ ಆಗಿದ್ದಾರೆ, ಅವರಿಗೆ ಅವರ ಪ್ರತಿಫಲವೂ, ಅವರ ಪ್ರಕಾಶವೂ ಇದೆ. ಸತ್ಯನಿಷೇಧಿಸಿ ನಮ್ಮ ಸೂಕ್ತಿಗಳನ್ನು ಸುಳ್ಳಾಗಿಸಿದವರೇ ನರಕದವರಾಗಿದ್ದಾರೆ.
តាហ្វសៀរជាភាសា​អារ៉ាប់ជាច្រេីន:
اِعْلَمُوْۤا اَنَّمَا الْحَیٰوةُ الدُّنْیَا لَعِبٌ وَّلَهْوٌ وَّزِیْنَةٌ وَّتَفَاخُرٌ بَیْنَكُمْ وَتَكَاثُرٌ فِی الْاَمْوَالِ وَالْاَوْلَادِ ؕ— كَمَثَلِ غَیْثٍ اَعْجَبَ الْكُفَّارَ نَبَاتُهٗ ثُمَّ یَهِیْجُ فَتَرٰىهُ مُصْفَرًّا ثُمَّ یَكُوْنُ حُطَامًا ؕ— وَفِی الْاٰخِرَةِ عَذَابٌ شَدِیْدٌ ۙ— وَّمَغْفِرَةٌ مِّنَ اللّٰهِ وَرِضْوَانٌ ؕ— وَمَا الْحَیٰوةُ الدُّنْیَاۤ اِلَّا مَتَاعُ الْغُرُوْرِ ۟
ತಿಳಿಯಿರಿ; ಇಹಲೋಕದ ಜೀವನವು ಆಟ, ವಿನೋದ, ಶೃಂಗಾರ ಮತ್ತು ಪರಸ್ಪರರ ನಡುವೆ ಜಂಭ ಕೊಚ್ಚಿಕೊಳ್ಳುವುದು, ಸಂಪತ್ತು ಸಂತಾನಗಳಲ್ಲಿ ಪೈಪೋಟಿ ನಡೆಸುವುದು ಮಾತ್ರವಾಗಿದೆ. ಅದರ ಉಪಮೆಯು ಒಂದು ಮಳೆಯಂತಿದೆ. ಅದ್ದರಿಂದ ಬೆಳೆದಿರುವ ಕೃಷಿಯು ಕೃಷಿಕರನ್ನು ಆಕರ್ಷಿಸುತ್ತದೆ, ಅನಂತರ ಅದು ಬಲಿತು ಹಳದಿ ವರ್ಣಕ್ಕೆ ತಿರುಗಿರುವುದಾಗಿ ನೀವು ಕಾಣುವಿರಿ, ಬಳಿಕ ಅದು ಒಣಗಿ ಹೊಟ್ಟಾಗಿಬಿಡುತ್ತದೆ. ಪರಲೋಕದಲ್ಲಿ (ದುರ್ಜನರಿಗೆ) ಅತ್ಯುಗ್ರ ಶಿಕ್ಷೆಯಿದೆ. ಹಾಗು (ಸಜ್ಜನರಿಗೆ) ಅಲ್ಲಾಹನ ಕಡೆಯ ಕ್ಷಮೆ ಹಾಗು ಸಂಪ್ರೀತಿ ಇದೆ. ಮತ್ತು ಈ ಇಹಲೋಕದ ಜೀವನವು ವಂಚನಾತ್ಮಕ ಸರಕಲ್ಲದೇ ಬೇರೇನು ಅಲ್ಲ.
តាហ្វសៀរជាភាសា​អារ៉ាប់ជាច្រេីន:
سَابِقُوْۤا اِلٰی مَغْفِرَةٍ مِّنْ رَّبِّكُمْ وَجَنَّةٍ عَرْضُهَا كَعَرْضِ السَّمَآءِ وَالْاَرْضِ ۙ— اُعِدَّتْ لِلَّذِیْنَ اٰمَنُوْا بِاللّٰهِ وَرُسُلِهٖ ؕ— ذٰلِكَ فَضْلُ اللّٰهِ یُؤْتِیْهِ مَنْ یَّشَآءُ ؕ— وَاللّٰهُ ذُو الْفَضْلِ الْعَظِیْمِ ۟
(ಓ ನನ್ನ ದಾಸರೇ) ನೀವು ತಮ್ಮ ಪ್ರಭುವಿನ ಕ್ಷಮೆ ಮತ್ತು ಆಕಾಶ, ಭೂಮಿಗಳಷ್ಟೂ ವಿಶಾಲವುಳ್ಳ ಸ್ವರ್ಗೋದ್ಯಾನದ ಕಡೆಗೆ ಧಾವಿಸಿರಿ, ಇದು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿದವರಿಗೆ ಸಿದ್ಧಗೊಳಿಸಲಾಗಿದೆ, ಇದು ಅಲ್ಲಾಹನ ಅನುಗ್ರಹವಾಗಿದೆ, ಅವನು ಇದನ್ನು ತಾನಿಚ್ಛಿದವರಿಗೆ ದಯಪಾಲಿಸುವನು ಮತ್ತು ಅಲ್ಲಾಹನು ಮಹಾ ಅನುಗ್ರಹವಂತನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
مَاۤ اَصَابَ مِنْ مُّصِیْبَةٍ فِی الْاَرْضِ وَلَا فِیْۤ اَنْفُسِكُمْ اِلَّا فِیْ كِتٰبٍ مِّنْ قَبْلِ اَنْ نَّبْرَاَهَا ؕ— اِنَّ ذٰلِكَ عَلَی اللّٰهِ یَسِیْرٌ ۟ۙ
ಭೂಮಿಯಲ್ಲಾಗಲಿ ಸ್ವತಃ ನಿಮ್ಮಲ್ಲಾಗಲಿ ಸಂಭವಿಸುವ ಯಾವುದೇ ವಿಪತ್ತು ನಾವು ಅವನನ್ನು ಸೃಷ್ಟಿಸುವ ಮುಂಚೆ ಅದನ್ನು ಒಂದು ಗ್ರಂಥದಲ್ಲಿ ದಾಖಲಿಸದೇ ಸಂಭವಿಸುವುದಿಲ್ಲ. ಇದು ಅಲ್ಲಾಹನಿಗೆ ಅತೀ ಸುಲಭವಾಗಿದೆ.
តាហ្វសៀរជាភាសា​អារ៉ាប់ជាច្រេីន:
لِّكَیْلَا تَاْسَوْا عَلٰی مَا فَاتَكُمْ وَلَا تَفْرَحُوْا بِمَاۤ اٰتٰىكُمْ ؕ— وَاللّٰهُ لَا یُحِبُّ كُلَّ مُخْتَالٍ فَخُوْرِ ۟ۙ
ಇದೇಕೆಂದರೆ ನಿಮಗುಂಟಾದ ನಷ್ಟದ ಬಗ್ಗೆ ನೀವು ವ್ಯಥೆ ಪಡಬಾರದೆಂದು ಅಥವ ನಿಮಗೆ ದಯಪಾಲಿಸಲಾದ ವಸ್ತುವಿನ ಮೇಲೆ ನೀವು ಹಿಗ್ಗಬಾರದೆಂದಾಗಿದೆ. ಗರ್ವತೋರುವ ದುರಭಿಮಾನಿಗಳನ್ನು ಅಲ್ಲಾಹನು ಮೆಚ್ಚುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
١لَّذِیْنَ یَبْخَلُوْنَ وَیَاْمُرُوْنَ النَّاسَ بِالْبُخْلِ ؕ— وَمَنْ یَّتَوَلَّ فَاِنَّ اللّٰهَ هُوَ الْغَنِیُّ الْحَمِیْدُ ۟
ಅವರು ಸ್ವತಃ ಜಿಪುಣತೆ ತೋರುತ್ತಾರೆ ಹಾಗು ಇತರರಿಗೂ ಜಿಪುಣತೆಯ ಆದೇಶ ನೀಡುತ್ತಾರೆ. ಕೇಳಿರಿ ! ಯಾರು (ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದರಿಂದ) ವಿಮುಖನಾಗುತ್ತಾನೋ, ಅಲ್ಲಾಹನು ನಿರಪೇಕ್ಷಕನೂ ಸ್ತುತ್ಯರ್ಹನೂ ಆಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ហាទីត
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ