Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាល់អ៊ីសរ៉ក   អាយ៉ាត់:
وَبِالْحَقِّ اَنْزَلْنٰهُ وَبِالْحَقِّ نَزَلَ ؕ— وَمَاۤ اَرْسَلْنٰكَ اِلَّا مُبَشِّرًا وَّنَذِیْرًا ۟ۘ
ನಾವು ಇದನ್ನು (ಕುರ್‌ಆನನ್ನು) ಸತ್ಯದೊಂದಿಗೇ ಅವತೀರ್ಣಗೊಳಿಸಿದ್ದೇವೆ ಮತ್ತು ಅದು ಸತ್ಯದೊಂದಿಗೇ ಅವತೀರ್ಣವಾಗಿದೆ. ನಾವು ನಿಮ್ಮನ್ನು ಸುವಾರ್ತೆ ತಿಳಿಸುವುದಕ್ಕಾಗಿ ಮತ್ತು ಮುನ್ನೆಚ್ಚರಿಕೆ ನೀಡುವುದಕ್ಕಾಗಿಯೇ ಹೊರತು ಕಳುಹಿಸಿಲ್ಲ.
តាហ្វសៀរជាភាសា​អារ៉ាប់ជាច្រេីន:
وَقُرْاٰنًا فَرَقْنٰهُ لِتَقْرَاَهٗ عَلَی النَّاسِ عَلٰی مُكْثٍ وَّنَزَّلْنٰهُ تَنْزِیْلًا ۟
ನೀವು ಈ ಕುರ್‌ಆನನ್ನು ಜನರಿಗೆ ಸಾವಕಾಶವಾಗಿ ಓದಿಕೊಡುವುದಕ್ಕಾಗಿ ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿದ್ದೇವೆ. ನಾವು ಅದನ್ನು ನಿಮಗೆ ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ.
តាហ្វសៀរជាភាសា​អារ៉ាប់ជាច្រេីន:
قُلْ اٰمِنُوْا بِهٖۤ اَوْ لَا تُؤْمِنُوْا ؕ— اِنَّ الَّذِیْنَ اُوْتُوا الْعِلْمَ مِنْ قَبْلِهٖۤ اِذَا یُتْلٰی عَلَیْهِمْ یَخِرُّوْنَ لِلْاَذْقَانِ سُجَّدًا ۟ۙ
ಹೇಳಿರಿ “ನೀವು ಇದರಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿ ಅಥವಾ ವಿಶ್ವಾಸವಿಡಬೇಡಿ. ನಿಶ್ಚಯವಾಗಿಯೂ ಇದಕ್ಕೆ ಮೊದಲು ಜ್ಞಾನ ನೀಡಲಾದವರು ಯಾರೋ—ಅವರಿಗೆ ಇದನ್ನು ಓದಿಕೊಟ್ಚರೆ ಅವರು ಸಾಷ್ಟಾಂಗ ಮಾಡುತ್ತಾ ಗಲ್ಲಗಳ ಮೇಲೆ ಬೀಳುತ್ತಾರೆ.”
តាហ្វសៀរជាភាសា​អារ៉ាប់ជាច្រេីន:
وَّیَقُوْلُوْنَ سُبْحٰنَ رَبِّنَاۤ اِنْ كَانَ وَعْدُ رَبِّنَا لَمَفْعُوْلًا ۟
ಅವರು ಹೇಳುತ್ತಾರೆ: “ನಮ್ಮ ಪರಿಪಾಲಕನು (ಅಲ್ಲಾಹು) ಪರಿಶುದ್ಧನು! ನಮ್ಮ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಖಂಡಿತ ಜಾರಿಯಾಗುತ್ತದೆ.”
តាហ្វសៀរជាភាសា​អារ៉ាប់ជាច្រេីន:
وَیَخِرُّوْنَ لِلْاَذْقَانِ یَبْكُوْنَ وَیَزِیْدُهُمْ خُشُوْعًا ۟
ಅವರು ಅಳುತ್ತಾ ಗಲ್ಲಗಳ ಮೇಲೆ ಬೀಳುತ್ತಾರೆ. ಅದು ಅವರಿಗೆ ವಿನಮ್ರತೆಯನ್ನು ಹೆಚ್ಚಿಸುತ್ತದೆ.
តាហ្វសៀរជាភាសា​អារ៉ាប់ជាច្រេីន:
قُلِ ادْعُوا اللّٰهَ اَوِ ادْعُوا الرَّحْمٰنَ ؕ— اَیًّا مَّا تَدْعُوْا فَلَهُ الْاَسْمَآءُ الْحُسْنٰی ۚ— وَلَا تَجْهَرْ بِصَلَاتِكَ وَلَا تُخَافِتْ بِهَا وَابْتَغِ بَیْنَ ذٰلِكَ سَبِیْلًا ۟
(ಪ್ರವಾದಿಯವರೇ) ಹೇಳಿರಿ: “ನೀವು ಅಲ್ಲಾಹು ಎಂದು ಕರೆಯಿರಿ ಅಥವಾ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಅತ್ಯುತ್ತಮವಾದ ಹೆಸರುಗಳಿವೆ.” ನೀವು ನಮಾಝನ್ನು ಏರಿದ ಧ್ವನಿಯಲ್ಲಿ ನಿರ್ವಹಿಸಬೇಡಿ. ಸಂಪೂರ್ಣ ತಗ್ಗಿದ ಧ್ವನಿಯಲ್ಲೂ ನಿರ್ವಹಿಸಬೇಡಿ. ಬದಲಿಗೆ, ಅವುಗಳ ನಡುವಿನ ಮಾರ್ಗವನ್ನು ಹುಡುಕಿರಿ.
តាហ្វសៀរជាភាសា​អារ៉ាប់ជាច្រេីន:
وَقُلِ الْحَمْدُ لِلّٰهِ الَّذِیْ لَمْ یَتَّخِذْ وَلَدًا وَّلَمْ یَكُنْ لَّهٗ شَرِیْكٌ فِی الْمُلْكِ وَلَمْ یَكُنْ لَّهٗ وَلِیٌّ مِّنَ الذُّلِّ وَكَبِّرْهُ تَكْبِیْرًا ۟۠
ಹೇಳಿರಿ: “ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ಅವನಿಗೆ ಯಾವುದೇ ಸಂತಾನವಿಲ್ಲ. ವಿಶ್ವದ ಆಧಿಪತ್ಯದಲ್ಲಿ ಅವನಿಗೆ ಯಾವುದೇ ಪಾಲುದಾರರಿಲ್ಲ. ಯಾವುದೇ ಸಂರಕ್ಷಕನನ್ನು ಇಟ್ಟುಕೊಳ್ಳುವಷ್ಟು ಅವನು ದುರ್ಬಲನೂ ಅಲ್ಲ. ಅವನ ಮಹತ್ವವನ್ನು ಪೂರ್ಣರೀತಿಯಲ್ಲಿ ಕೊಂಡಾಡಿರಿ.”
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់អ៊ីសរ៉ក
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ