Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: សទ   អាយ៉ាត់:

ಸ್ವಾದ್

صٓ وَالْقُرْاٰنِ ذِی الذِّكْرِ ۟ؕ
ಸ್ವಾದ್. ಉಪದೇಶವನ್ನು ಒಳಗೊಂಡಿರುವ ಕುರ್‌ಆನ್‍ನ ಮೇಲಾಣೆ!
តាហ្វសៀរជាភាសា​អារ៉ាប់ជាច្រេីន:
بَلِ الَّذِیْنَ كَفَرُوْا فِیْ عِزَّةٍ وَّشِقَاقٍ ۟
ಆದರೆ ಸತ್ಯನಿಷೇಧಿಗಳು ದುರಭಿಮಾನ ಮತ್ತು ವಿರೋಧದಲ್ಲಿದ್ದಾರೆ.
តាហ្វសៀរជាភាសា​អារ៉ាប់ជាច្រេីន:
كَمْ اَهْلَكْنَا مِنْ قَبْلِهِمْ مِّنْ قَرْنٍ فَنَادَوْا وَّلَاتَ حِیْنَ مَنَاصٍ ۟
ನಾವು ಅವರಿಗಿಂತ ಮುಂಚೆ ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಆಗ ಅವರು ಎಲ್ಲಾ ರೀತಿಯಲ್ಲೂ ಚೀತ್ಕರಿಸಿದರು. ಆದರೆ ಅದು ಪಾರಾಗುವ ಸಮಯವಾಗಿರಲಿಲ್ಲ.
តាហ្វសៀរជាភាសា​អារ៉ាប់ជាច្រេីន:
وَعَجِبُوْۤا اَنْ جَآءَهُمْ مُّنْذِرٌ مِّنْهُمْ ؗ— وَقَالَ الْكٰفِرُوْنَ هٰذَا سٰحِرٌ كَذَّابٌ ۟ۖۚ
ಅವರಿಂದಲೇ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿರುವುದನ್ನು ಕಂಡು ಅವರು ಆಶ್ಚರ್ಯಪಟ್ಟರು. ಸತ್ಯನಿಷೇಧಿಗಳು ಹೇಳಿದರು: “ಇವನೊಬ್ಬ ಮಾಟಗಾರ ಮತ್ತು ಸುಳ್ಳುಗಾರ!
តាហ្វសៀរជាភាសា​អារ៉ាប់ជាច្រេីន:
اَجَعَلَ الْاٰلِهَةَ اِلٰهًا وَّاحِدًا ۖۚ— اِنَّ هٰذَا لَشَیْءٌ عُجَابٌ ۟
ಇವನು ಇಷ್ಟೊಂದು ದೇವರುಗಳನ್ನು ಏಕೈಕ ದೇವರಾಗಿ ಮಾಡಿದನೇ? ನಿಜಕ್ಕೂ ಇದೊಂದು ಅಚ್ಚರಿದಾಯಕ ವಿಷಯವಾಗಿದೆ!”
តាហ្វសៀរជាភាសា​អារ៉ាប់ជាច្រេីន:
وَانْطَلَقَ الْمَلَاُ مِنْهُمْ اَنِ امْشُوْا وَاصْبِرُوْا عَلٰۤی اٰلِهَتِكُمْ ۖۚ— اِنَّ هٰذَا لَشَیْءٌ یُّرَادُ ۟ۚ
ಅವರಲ್ಲಿನ ಸರದಾರರು ಹೇಳುತ್ತಾ ಸಾಗಿದರು: “ನಿಮ್ಮ ಧರ್ಮದಲ್ಲೇ ಮುಂದುವರಿಯಿರಿ ಮತ್ತು ನಿಮ್ಮ ದೇವರುಗಳ ವಿಷಯದಲ್ಲಿ ತಾಳ್ಮೆಯಿಂದಿರಿ. ಖಂಡಿತವಾಗಿಯೂ ಇದೊಂದು ಉದ್ದೇಶಪೂರ್ವಕ ಸಂಗತಿಯಾಗಿದೆ.
តាហ្វសៀរជាភាសា​អារ៉ាប់ជាច្រេីន:
مَا سَمِعْنَا بِهٰذَا فِی الْمِلَّةِ الْاٰخِرَةِ ۖۚ— اِنْ هٰذَاۤ اِلَّا اخْتِلَاقٌ ۟ۖۚ
ನಾವು ಕೊನೆಯ ಧರ್ಮದಲ್ಲಿಯೂ[1] ಇದರ ಬಗ್ಗೆ ಕೇಳಿಲ್ಲ. ಇದೊಂದು ಸುಳ್ಳು ಸೃಷ್ಟಿಯಲ್ಲದೆ ಇನ್ನೇನೂ ಅಲ್ಲ!”
[1] ಕೊನೆಯ ಧರ್ಮ ಎಂದರೆ ಬಹುಶಃ ಅವರದ್ದೇ ಬಹುದೇವಾರಾಧಕ ಧರ್ಮ ಅಥವಾ ಕ್ರೈಸ್ತ ಧರ್ಮವಾಗಿಬಹುದು.
តាហ្វសៀរជាភាសា​អារ៉ាប់ជាច្រេីន:
ءَاُنْزِلَ عَلَیْهِ الذِّكْرُ مِنْ بَیْنِنَا ؕ— بَلْ هُمْ فِیْ شَكٍّ مِّنْ ذِكْرِیْ ۚ— بَلْ لَّمَّا یَذُوْقُوْا عَذَابِ ۟ؕ
(ಅವರು ಹೇಳಿದರು): “ನಮ್ಮೆಲ್ಲರ ನಡುವೆ ಅವನಿಗೆ ಮಾತ್ರ ದೇವವಾಣಿಯನ್ನು ಅವತೀರ್ಣಗೊಳಿಸಲಾಗಿದೆಯೇ?” ಅಲ್ಲ, ವಾಸ್ತವವಾಗಿ ಅವರು ನನ್ನ ದೇವವಾಣಿಯ ಬಗ್ಗೆ ಸಂಶಯದಲ್ಲಿದ್ದಾರೆ. ಅಲ್ಲ, ವಾಸ್ತವವಾಗಿ ಅವರು ಈ ತನಕ ನನ್ನ ಶಿಕ್ಷೆಯ ರುಚಿಯನ್ನು ನೋಡಿಲ್ಲ.
តាហ្វសៀរជាភាសា​អារ៉ាប់ជាច្រេីន:
اَمْ عِنْدَهُمْ خَزَآىِٕنُ رَحْمَةِ رَبِّكَ الْعَزِیْزِ الْوَهَّابِ ۟ۚ
ಅವರ ಬಳಿ ಪ್ರಬಲನು ಮತ್ತು ಮಹಾ ಔದಾರ್ಯವಂತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯ ಖಜಾನೆಗಳಿವೆಯೇ?
តាហ្វសៀរជាភាសា​អារ៉ាប់ជាច្រេីន:
اَمْ لَهُمْ مُّلْكُ السَّمٰوٰتِ وَالْاَرْضِ وَمَا بَیْنَهُمَا ۫— فَلْیَرْتَقُوْا فِی الْاَسْبَابِ ۟
ಅಥವಾ ಭೂಮ್ಯಾಕಾಶಗಳು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಸಾರ್ವಭೌಮತ್ವವು ಅವರಿಗೆ ಸೇರಿದೆಯೇ? ಹಾಗಿದ್ದರೆ ಅವರು ಆ ಮಾರ್ಗಗಳ ಮೂಲಕ (ಆಕಾಶಲೋಕಕ್ಕೆ) ಏರಿ ಹೋಗಲಿ!
តាហ្វសៀរជាភាសា​អារ៉ាប់ជាច្រេីន:
جُنْدٌ مَّا هُنَالِكَ مَهْزُوْمٌ مِّنَ الْاَحْزَابِ ۟
ಇವರು (ದೊಡ್ಡ ದೊಡ್ಡ) ಸೈನ್ಯಗಳ ಪೈಕಿ ಸೋತು ಸುಣ್ಣವಾಗುವ ಒಂದು (ಚಿಕ್ಕ) ಸೈನ್ಯವಾಗಿದ್ದಾರೆ.
តាហ្វសៀរជាភាសា​អារ៉ាប់ជាច្រេីន:
كَذَّبَتْ قَبْلَهُمْ قَوْمُ نُوْحٍ وَّعَادٌ وَّفِرْعَوْنُ ذُو الْاَوْتَادِ ۟ۙ
ಅವರಿಗಿಂತ ಮೊದಲು ನೂಹರ ಜನರು, ಆದ್ ಗೋತ್ರದವರು ಮತ್ತು ಗೂಟಗಳ ಒಡೆಯನಾದ ಫರೋಹ[1] ಸತ್ಯವನ್ನು ನಿಷೇಧಿಸಿದ್ದರು.
[1] ಅವನು ಎಷ್ಟರಮಟ್ಟಿಗೆ ಕ್ರೂರನಾಗಿದ್ದನೆಂದರೆ ಅವನಿಗೆ ಯಾರ ಮೇಲಾದರೂ ಕೋಪ ಬಂದರೆ ಅವನ ಕೈ-ಕಾಲು ಮತ್ತು ತಲೆಗಳಿಗೆ ಗೂಟಗಳನ್ನು ಬಡಿಯುತ್ತಿದ್ದನು.
តាហ្វសៀរជាភាសា​អារ៉ាប់ជាច្រេីន:
وَثَمُوْدُ وَقَوْمُ لُوْطٍ وَّاَصْحٰبُ لْـَٔیْكَةِ ؕ— اُولٰٓىِٕكَ الْاَحْزَابُ ۟
ಸಮೂದ್ ಗೋತ್ರ, ಲೂತರ ಜನರು ಮತ್ತು ಐಕತ್‌ನ ಜನರು ಕೂಡ (ಸತ್ಯವನ್ನು ನಿಷೇಧಿಸಿದ್ದರು). ಇವು (ದೊಡ್ಡ ದೊಡ್ಡ) ಸೈನ್ಯಗಳಾಗಿದ್ದವು.
តាហ្វសៀរជាភាសា​អារ៉ាប់ជាច្រេីន:
اِنْ كُلٌّ اِلَّا كَذَّبَ الرُّسُلَ فَحَقَّ عِقَابِ ۟۠
ಇವರಲ್ಲಿ ಸಂದೇಶವಾಹಕರುಗಳನ್ನು ನಿಷೇಧಿಸದವರು ಯಾರೂ ಇರಲಿಲ್ಲ. ಆದ್ದರಿಂದ ನನ್ನ ಶಿಕ್ಷೆಯು (ಅವರ ವಿಷಯದಲ್ಲಿ) ಖಾತ್ರಿಯಾಯಿತು.
តាហ្វសៀរជាភាសា​អារ៉ាប់ជាច្រេីន:
وَمَا یَنْظُرُ هٰۤؤُلَآءِ اِلَّا صَیْحَةً وَّاحِدَةً مَّا لَهَا مِنْ فَوَاقٍ ۟
ಇವರು ಒಂದು ಭಯಾನಕ ಚೀತ್ಕಾರವನ್ನಲ್ಲದೆ ಬೇರೇನನ್ನೂ ಕಾಯುವುದಿಲ್ಲ. ಅದರಲ್ಲಿ ಯಾವುದೇ ವಿರಾಮ (ಅಥವಾ ಕಾಲಾವಕಾಶ) ಇರುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
وَقَالُوْا رَبَّنَا عَجِّلْ لَّنَا قِطَّنَا قَبْلَ یَوْمِ الْحِسَابِ ۟
ಅವರು ಹೇಳುವರು: “ನಮ್ಮ ಪರಿಪಾಲಕನೇ! ವಿಚಾರಣೆಯ ದಿನಕ್ಕಿಂತ ಮೊದಲೇ ನಮ್ಮ ವಿಧಿಬರಹವನ್ನು ನಮಗೆ ನೀಡು.”
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: សទ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ