Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಯೂನುಸ್   ಶ್ಲೋಕ:
وَاتْلُ عَلَیْهِمْ نَبَاَ نُوْحٍ ۘ— اِذْ قَالَ لِقَوْمِهٖ یٰقَوْمِ اِنْ كَانَ كَبُرَ عَلَیْكُمْ مَّقَامِیْ وَتَذْكِیْرِیْ بِاٰیٰتِ اللّٰهِ فَعَلَی اللّٰهِ تَوَكَّلْتُ فَاَجْمِعُوْۤا اَمْرَكُمْ وَشُرَكَآءَكُمْ ثُمَّ لَا یَكُنْ اَمْرُكُمْ عَلَیْكُمْ غُمَّةً ثُمَّ اقْضُوْۤا اِلَیَّ وَلَا تُنْظِرُوْنِ ۟
(ಓ ಪೈಗಂಬರರೇ) ತಾವು ಅವರಿಗೆ ನೂಹ್‌ರವರ ವೃತ್ತಾಂತವನ್ನು ಓದಿ ಹೇಳಿರಿ. ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ; ಓ ನನ್ನ ಜನಾಂಗವೇ, ನಿಮ್ಮ ನಡುವೆ ನನ್ನ ಇರುವಿಕೆಯು ಮತ್ತು ಅಲ್ಲಾಹನ ಸೂಕ್ತಿಗಳ ಮೂಲಕ ನಿಮ್ಮನ್ನು ಎಚ್ಚರಗೊಳಿಸುವುದು ನಿಮಗೆ ಭಾರವೆನಿಸುವುದಾದರೆ ನಾನಂತು ಅಲ್ಲಾಹನ ಮೇಲೆ ಭರವಸೆಯಿಟ್ಟಿದ್ದೇನೆ. ನೀವು ನಿಮ್ಮ ಸಹಭಾಗಿ ದೇವರುಗಳೊಂದಿಗೆ ನಿಮ್ಮ ಯೋಜನೆಯನ್ನು ದೃಢಪಡಿಸಿರಿ. ಆಮೇಲೆ ನಿಮ್ಮ ಆ ಯೋಜನೆಯ ಯಾವ ಅಂಶವು ನಿಮ್ಮಿಂದ ಅಡಗಿರದಿರಲಿ. ಅನಂತರ ನನ್ನ ವಿರುದ್ಧ ಕಾರ್ಯಾಚರಣೆಗಿಳಿಯಿರಿ ಹಾಗು ನನಗೆ ಕಾಲಾವಕಾಶವನ್ನೂ ನೀಡಬೇಡಿರಿ.
ಅರಬ್ಬಿ ವ್ಯಾಖ್ಯಾನಗಳು:
فَاِنْ تَوَلَّیْتُمْ فَمَا سَاَلْتُكُمْ مِّنْ اَجْرٍ ؕ— اِنْ اَجْرِیَ اِلَّا عَلَی اللّٰهِ ۙ— وَاُمِرْتُ اَنْ اَكُوْنَ مِنَ الْمُسْلِمِیْنَ ۟
ಅನಂತರವೂ ನೀವು ವಿಮುಖರಾಗುವುದಾದರೆ ನಾನು ನಿಮ್ಮಲ್ಲಿ ಯಾವ ಪ್ರತಿಫಲವನ್ನಂತು ಬೇಡಿರುವುದಿಲ್ಲ. ನನ್ನ ಪ್ರತಿಫಲವಂತು ಅಲ್ಲಾಹನ ಹೊಣೆಯಲ್ಲಿದೆ ಮತ್ತು (ಅಲ್ಲಾಹನಿಗೆ) ವಿಧೇಯರಾದವರಲ್ಲಿ ಸೇರಲು ನನಗೆ ಆಜ್ಞಾಪಿಸಲಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
فَكَذَّبُوْهُ فَنَجَّیْنٰهُ وَمَنْ مَّعَهٗ فِی الْفُلْكِ وَجَعَلْنٰهُمْ خَلٰٓىِٕفَ وَاَغْرَقْنَا الَّذِیْنَ كَذَّبُوْا بِاٰیٰتِنَا ۚ— فَانْظُرْ كَیْفَ كَانَ عَاقِبَةُ الْمُنْذَرِیْنَ ۟
ಆದರೆ ಅವರು (ಅವರ ಜನಾಂಗ) ನೂಹ್‌ರವರನ್ನು ಸುಳ್ಳಾಗಿಸಿದರು. ಅನಂತರ ನಾವು ಅವರನ್ನು, ಅವರ ಜೊತೆ ಹಡಗಿನಲ್ಲಿದ್ದವರನ್ನೂ ರಕ್ಷಿಸಿದೆವು ಮತ್ತು ಅವರನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಿದ್ದವರನ್ನು ಮುಳುಗಿಸಿಬಿಟ್ಟೆವು. ಆದ್ದರಿಂದ ನೀವು ಮುನ್ನೆಚ್ಚರಿಕೆ ನೀಡಲ್ಪಟ್ಟವರ ಗತಿ ಏನಾಯಿತೆಂಬುದನ್ನು ನೋಡಿರಿ.
ಅರಬ್ಬಿ ವ್ಯಾಖ್ಯಾನಗಳು:
ثُمَّ بَعَثْنَا مِنْ بَعْدِهٖ رُسُلًا اِلٰی قَوْمِهِمْ فَجَآءُوْهُمْ بِالْبَیِّنٰتِ فَمَا كَانُوْا لِیُؤْمِنُوْا بِمَا كَذَّبُوْا بِهٖ مِنْ قَبْلُ ؕ— كَذٰلِكَ نَطْبَعُ عَلٰی قُلُوْبِ الْمُعْتَدِیْنَ ۟
ತರುವಾಯ ನಾವು ನೂಹ್‌ರವರ ನಂತರ ಇತರ ಸಂದೇಶವಾಹಕರನ್ನು ತಮ್ಮತಮ್ಮ ಜನಾಂಗದೆಡೆಗೆ ನಿಯೋಗಿಸಿದೆವು. ಅವರೆಲ್ಲ ಸುಸ್ಪಷ್ಟ ಪುರಾವೆಗಳೊಂದಿಗೆ ಅವರೆಡೆಗೆ ಆಗಮಿಸಿದರು. ಆದರೆ ಅವರು ಈ ಮುಂಚೆ ಸುಳ್ಳಾಗಿಸಿದ್ದನ್ನು ವಿಶ್ವಾಸವಿಡುವವರಾಗಿರಲಿಲ್ಲ. ಇದೇ ಪ್ರಕಾರ ನಾವು ಮೇರೆ ಮೀರುವವರ ಹೃದಯಗಳ ಮೇಲೆ ಮುದ್ರೆಯೊತ್ತಿಬಿಡುವೆವು.
ಅರಬ್ಬಿ ವ್ಯಾಖ್ಯಾನಗಳು:
ثُمَّ بَعَثْنَا مِنْ بَعْدِهِمْ مُّوْسٰی وَهٰرُوْنَ اِلٰی فِرْعَوْنَ وَمَلَاۡىِٕهٖ بِاٰیٰتِنَا فَاسْتَكْبَرُوْا وَكَانُوْا قَوْمًا مُّجْرِمِیْنَ ۟
. ತರುವಾಯ ನಾವು ಆ ಸಂದೇಶವಾಹಕರ ನಂತರ ಮೂಸಾ ಮತ್ತು ಹಾರೂನರವರನ್ನು ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ನಮ್ಮ ದೃಷ್ಟಾಂತಗಳೊAದಿಗೆ ನಿಯೋಗಿಸಿದೆವು. ಆದರೆ ಅವರು ಅಹಂಕಾರ ತೋರಿದರು ಮತ್ತು ಅವರು ಅಪರಾಧಿ ಜನಾಂಗವಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
فَلَمَّا جَآءَهُمُ الْحَقُّ مِنْ عِنْدِنَا قَالُوْۤا اِنَّ هٰذَا لَسِحْرٌ مُّبِیْنٌ ۟
ಅನಂತರ ಅವರ ಬಳಿಗೆ ನಮ್ಮ ಕಡೆಯಿಂದ ಸತ್ಯವು ಬಂದಾಗ ಖಂಡಿತವಾಗಿಯೂ ಇದು ಸ್ಪಷ್ಟ ಜಾದೂವಾಗಿದೆ ಎಂದರು.
ಅರಬ್ಬಿ ವ್ಯಾಖ್ಯಾನಗಳು:
قَالَ مُوْسٰۤی اَتَقُوْلُوْنَ لِلْحَقِّ لَمَّا جَآءَكُمْ ؕ— اَسِحْرٌ هٰذَا ؕ— وَلَا یُفْلِحُ السّٰحِرُوْنَ ۟
ಮೂಸಾ ಉತ್ತರಿಸಿದರು. ಸತ್ಯವು ನಿಮ್ಮೆಡೆಗೆ ಬಂದಾಗ ನೀವು ಇಂತಹ ಮಾತನ್ನು ಹೇಳುತ್ತಿರುವಿರಾ ? ಇದು ಜಾದುವೇ ? ವಸ್ತುತಃ ಜಾದೂಗಾರರು ಯಶಸ್ಸು ಪಡೆಯಲಾರರು.
ಅರಬ್ಬಿ ವ್ಯಾಖ್ಯಾನಗಳು:
قَالُوْۤا اَجِئْتَنَا لِتَلْفِتَنَا عَمَّا وَجَدْنَا عَلَیْهِ اٰبَآءَنَا وَتَكُوْنَ لَكُمَا الْكِبْرِیَآءُ فِی الْاَرْضِ ؕ— وَمَا نَحْنُ لَكُمَا بِمُؤْمِنِیْنَ ۟
ಅವರು ಹೇಳಿದರು; ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡಿದ್ದೇವೆಯೋ ಅದರಿಂದ ನೀವು ನಮ್ಮನ್ನು ಸರಿಸಿಬಿಡಲೆಂದೂ, ಭೂಮಿಯಲ್ಲಿ ನಿಮಗಿಬ್ಬರಿಗೂ ಹಿರಿಮೆ ಸಿಗಲೆಂದೂ ನೀವು ನಮ್ಮ ಬಳಿಗೆ ಬಂದಿರುವಿರಾ? ನಾವು ನಿಮ್ಮಿಬ್ಬರನ್ನು ಎಂದಿಗೂ ನಂಬುವವರಲ್ಲ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಯೂನುಸ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ