Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅನ್ನೂರ್   ಶ್ಲೋಕ:
فَاِنْ لَّمْ تَجِدُوْا فِیْهَاۤ اَحَدًا فَلَا تَدْخُلُوْهَا حَتّٰی یُؤْذَنَ لَكُمْ ۚ— وَاِنْ قِیْلَ لَكُمُ ارْجِعُوْا فَارْجِعُوْا هُوَ اَزْكٰی لَكُمْ ؕ— وَاللّٰهُ بِمَا تَعْمَلُوْنَ عَلِیْمٌ ۟
ನಿಮಗೆ ಅಲ್ಲಿ ಯಾರೂ ಕಾಣದಿದ್ದರೆ ಅನುಮತಿ ಸಿಗುವ ತನಕ ನೀವು ಅದರೊಳಗೆ ಪ್ರವೇಶಿಸಬೇಡಿರಿ ಇನ್ನೂ ಮರಳಿ ಹೋಗಿರಿ ಎಂದು ನಿಮ್ಮೊಂದಿಗೆ ಹೇಳಲಾದರೆ, ನೀವು ಮರಳಿ ಬಿಡಿರಿ. ಇದು ನಿಮ್ಮ ಪಾಲಿಗೆ ಅತ್ಯಂತ ಶುದ್ಧವಾದುದು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲನು.
ಅರಬ್ಬಿ ವ್ಯಾಖ್ಯಾನಗಳು:
لَیْسَ عَلَیْكُمْ جُنَاحٌ اَنْ تَدْخُلُوْا بُیُوْتًا غَیْرَ مَسْكُوْنَةٍ فِیْهَا مَتَاعٌ لَّكُمْ ؕ— وَاللّٰهُ یَعْلَمُ مَا تُبْدُوْنَ وَمَا تَكْتُمُوْنَ ۟
ಇನ್ನು ಜನ ವಾಸವಿಲ್ಲದ ಮನೆಗಳಲ್ಲಿ ನಿಮಗೆ ಉಪಯೋಗವಾಗುವಂತಹ ವಸ್ತುಗಳಿದ್ದರೆ ನೀವು ಪ್ರವೇಶಿಸುವುದರಿಂದ ನಿಮ್ಮ ಮೇಲೆ ಯಾವುದೇ ದೋಷವಿರುವುದಿಲ್ಲ ಮತ್ತು ಅಲ್ಲಾಹನು ನೀವು ಬಹಿರಂಗಗೊಳಿಸುವುದನ್ನು, ಬಚ್ಚಿಡುವುದನ್ನು ಚೆನ್ನಾಗಿ ಬಲ್ಲನು.
ಅರಬ್ಬಿ ವ್ಯಾಖ್ಯಾನಗಳು:
قُلْ لِّلْمُؤْمِنِیْنَ یَغُضُّوْا مِنْ اَبْصَارِهِمْ وَیَحْفَظُوْا فُرُوْجَهُمْ ؕ— ذٰلِكَ اَزْكٰی لَهُمْ ؕ— اِنَّ اللّٰهَ خَبِیْرٌ بِمَا یَصْنَعُوْنَ ۟
ಓ ಸಂದೇಶವಾಹಕರೇ! ಸತ್ಯವಿಶ್ವಾಸಿ ಪುರುಷರಿಗೆ ಹೇಳಿರಿ: ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ ಮತ್ತು ತಮ್ಮ ಗುಪ್ತಾಂಗಗಳನ್ನು ಸುರಕ್ಷಿತವಾಗಿರಿಸಲಿ. ಇದು ಅವರ ಪಾಲಿಗೆ ಶುದ್ಧವಾದುದು.ಅಲ್ಲಾಹನು ಅವರು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.
ಅರಬ್ಬಿ ವ್ಯಾಖ್ಯಾನಗಳು:
وَقُلْ لِّلْمُؤْمِنٰتِ یَغْضُضْنَ مِنْ اَبْصَارِهِنَّ وَیَحْفَظْنَ فُرُوْجَهُنَّ وَلَا یُبْدِیْنَ زِیْنَتَهُنَّ اِلَّا مَا ظَهَرَ مِنْهَا وَلْیَضْرِبْنَ بِخُمُرِهِنَّ عَلٰی جُیُوْبِهِنَّ ۪— وَلَا یُبْدِیْنَ زِیْنَتَهُنَّ اِلَّا لِبُعُوْلَتِهِنَّ اَوْ اٰبَآىِٕهِنَّ اَوْ اٰبَآءِ بُعُوْلَتِهِنَّ اَوْ اَبْنَآىِٕهِنَّ اَوْ اَبْنَآءِ بُعُوْلَتِهِنَّ اَوْ اِخْوَانِهِنَّ اَوْ بَنِیْۤ اِخْوَانِهِنَّ اَوْ بَنِیْۤ اَخَوٰتِهِنَّ اَوْ نِسَآىِٕهِنَّ اَوْ مَا مَلَكَتْ اَیْمَانُهُنَّ اَوِ التّٰبِعِیْنَ غَیْرِ اُولِی الْاِرْبَةِ مِنَ الرِّجَالِ اَوِ الطِّفْلِ الَّذِیْنَ لَمْ یَظْهَرُوْا عَلٰی عَوْرٰتِ النِّسَآءِ ۪— وَلَا یَضْرِبْنَ بِاَرْجُلِهِنَّ لِیُعْلَمَ مَا یُخْفِیْنَ مِنْ زِیْنَتِهِنَّ ؕ— وَتُوْبُوْۤا اِلَی اللّٰهِ جَمِیْعًا اَیُّهَ الْمُؤْمِنُوْنَ لَعَلَّكُمْ تُفْلِحُوْنَ ۟
ಸತ್ಯವಿಶ್ವಾಸಿ ಸ್ತಿçÃಯರಿಗೆ ಹೇಳಿರಿ: ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ ಮತ್ತು ತಮ್ಮ ಗುಪ್ತಾಂಗಗಳನ್ನು ಸುರಕ್ಷಿತವಾಗಿರಿಸಲಿ. ಮತ್ತು ತಮ್ಮ ಶಿರೋವಸ್ತçಗಳನ್ನು ತಮ್ಮ ಎದೆಗಳ ಮೇಲೆ ಎಳೆದುಕೊಂಡಿರಲಿ ಮತ್ತು ತಮ್ಮ ಅಲಂಕಾರವನ್ನು ಯಾರ ಮುಂದೆಯೂ ಪ್ರಕಟಗೊಳಿಸದಿರಲಿ. ಆದರೆ ಸ್ವಯಂ ಪ್ರಕಟವಾಗುವಂತಹವುಗಳ ಹೊರತು ತಮ್ಮ ಪತಿಯರ, ಅಥವಾ ತಮ್ಮ ಪಿತರ ಅಥವಾ ಪತಿಯರ ಪಿತರ ಅಥವಾ ತಮ್ಮ ಪುತ್ರರ ಅಥವಾ ತಮ್ಮ ಪತಿಯರ ಪುತ್ರರ ಅಥವಾ ತಮ್ಮ ಸಹೋದರರ ಅಥವಾ ತಮ್ಮ ಸಹೋದರ ಪುತ್ರರ ಅಥವಾ ತಮ್ಮ ಸಹೋದರಿ ಪುತ್ರರ ಅಥವಾ ತಮ್ಮ ಸಹವಾಸದ ಸ್ತಿçÃಯರ ಅಥವಾ ಗುಲಾಮರ ಅಥವಾ ಕಾಮಾಪೇಕ್ಷೇಯಿಲ್ಲ ದಂತಹ ಪುರುಷ ಸೇವಕರ ಅಥವಾ ಸ್ತಿçÃಯರ ರಹಸ್ಯ ಸಂಗತಿಗಳ ಕುರಿತು ಆಸಕ್ತಿ ಹುಟ್ಟದ ಬಾಲಕರ ಹೊರತು, ತಮ್ಮ ಗುಪ್ತ ಅಲಂಕಾರವು ಗಮನಕ್ಕೆ ಬರುವಂತೆ ಅವರು ತಮ್ಮ ಪಾದಗಳನ್ನು ನೆಲಕ್ಕೆ ಬಡಿಯದಿರಲಿ. ಓ ಸತ್ಯವಿಶ್ವಾಸಿಗಳೇ, ನೀವೆಲ್ಲರೂ ಅಲ್ಲಾಹನೆಡೆಗೆ ಪಶ್ಚಾತ್ತಾಪದೊಂದಿಗೆ ಮರಳಿರಿ. ಇದು ನೀವು ಯಶಸ್ಸು ಪಡೆಯಲೆಂದಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅನ್ನೂರ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ