Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಆಲು ಇಮ್ರಾನ್   ಶ್ಲೋಕ:
ثُمَّ اَنْزَلَ عَلَیْكُمْ مِّنْ بَعْدِ الْغَمِّ اَمَنَةً نُّعَاسًا یَّغْشٰی طَآىِٕفَةً مِّنْكُمْ ۙ— وَطَآىِٕفَةٌ قَدْ اَهَمَّتْهُمْ اَنْفُسُهُمْ یَظُنُّوْنَ بِاللّٰهِ غَیْرَ الْحَقِّ ظَنَّ الْجَاهِلِیَّةِ ؕ— یَقُوْلُوْنَ هَلْ لَّنَا مِنَ الْاَمْرِ مِنْ شَیْءٍ ؕ— قُلْ اِنَّ الْاَمْرَ كُلَّهٗ لِلّٰهِ ؕ— یُخْفُوْنَ فِیْۤ اَنْفُسِهِمْ مَّا لَا یُبْدُوْنَ لَكَ ؕ— یَقُوْلُوْنَ لَوْ كَانَ لَنَا مِنَ الْاَمْرِ شَیْءٌ مَّا قُتِلْنَا هٰهُنَا ؕ— قُلْ لَّوْ كُنْتُمْ فِیْ بُیُوْتِكُمْ لَبَرَزَ الَّذِیْنَ كُتِبَ عَلَیْهِمُ الْقَتْلُ اِلٰی مَضَاجِعِهِمْ ۚ— وَلِیَبْتَلِیَ اللّٰهُ مَا فِیْ صُدُوْرِكُمْ وَلِیُمَحِّصَ مَا فِیْ قُلُوْبِكُمْ ؕ— وَاللّٰهُ عَلِیْمٌۢ بِذَاتِ الصُّدُوْرِ ۟
ತರುವಾಯ ಅವನು ಆ ದುಃಖದ ಬಳಿಕ ನಿಮ್ಮ ಮೇಲೆ ನಿರ್ಭಯತೆಯನ್ನು ಇಳಿಸಿದನು ಮತ್ತು ನಿಮ್ಮಲ್ಲಿ ಒಂದು ತಂಡಕ್ಕೆ ಸಮಾಧಾನದ ತೂಕಡಿಕೆಯು ಹತ್ತತೊಡಗಿತು. ಇನ್ನು ಕೆಲವರು ತಮ್ಮದೇ ಕುರಿತಾದ ಚಿಂತೆಯಲ್ಲಿ ಮುಳುಗಿದ್ದರು ಮತ್ತು ಅವರು ಅಲ್ಲಾಹನ ಕುರಿತು ಸತ್ಯಕ್ಕೆ ವಿರುದ್ಧವಾದ ಅಜ್ಞಾನಜನ್ಯ ತುಂಬಿದ ಸಂದೇಹಗಳನ್ನು ಮಾಡತೊಡಗಿದರು ಮತ್ತು ಹೇಳುತ್ತಿದ್ದರು: ನಮಗೆ ಯಾವುದಾದರು ವಿಷಯದಲ್ಲಿ ಅಧಿಕಾರವಿದೆಯೇ? ನೀವು ಹೇಳಿರಿ: ಸಕಲ ಕಾರ್ಯವೂ ಅಲ್ಲಾಹನ ಅಧಿಕಾರದಲ್ಲಿದೆ. ಇವರು ತಮ್ಮ ಮನಸ್ಸುಗಳಲ್ಲಿರುವ ರಹಸ್ಯವನ್ನು ನಿಮಗೆ ತಿಳಿಸುವುದಿಲ್ಲ ಮತ್ತು ಹೇಳುತ್ತಾರೆ: ನಮಗೇನಾದರೂ ಅಧಿಕಾರವಿರುತ್ತಿದ್ದರೆ ನಾವು ಇಲ್ಲಿ ಕೊಲ್ಲಲ್ಪಡುತ್ತಿರಲಿಲ್ಲ. ನೀವು ಹೇಳಿರಿ: ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಯಾರ ವಿಧಿಯಲ್ಲಿ ಕೊಲೆ ಯಾಗುವುದಿರುತ್ತದೆಯೋ ಅವರು ತಮ್ಮ ಮರಣಾ ಸ್ಥಳಕ್ಕೆ ಬರುತ್ತಿದ್ದರು. ಅಲ್ಲಾಹನಿಗೆ ನಿಮ್ಮ ಹೃದಯಗಳಲ್ಲಿ ಅಡಿಗಿರುವುದನ್ನು ಪರೀಕ್ಷಿಸಲಿಕ್ಕಿತ್ತು ಮತ್ತು ಹೃದಯಗಳಲ್ಲಿರುವ ವಿಚಾರಗಳನ್ನು ಶುದ್ಧೀಕರಿಸಲಿಕ್ಕಿತ್ತು ಮತ್ತು ಅಲ್ಲಾಹನು ಹೃದಯಗಳಲ್ಲಿರುವುದನ್ನು ತಿಳಿಯುವವನಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
اِنَّ الَّذِیْنَ تَوَلَّوْا مِنْكُمْ یَوْمَ الْتَقَی الْجَمْعٰنِ ۙ— اِنَّمَا اسْتَزَلَّهُمُ الشَّیْطٰنُ بِبَعْضِ مَا كَسَبُوْا ۚ— وَلَقَدْ عَفَا اللّٰهُ عَنْهُمْ ؕ— اِنَّ اللّٰهَ غَفُوْرٌ حَلِیْمٌ ۟۠
ಎರಡು ಸೈನ್ಯಗಳು ಕದನದಲ್ಲಿ ಎದುರು ಬದುರುಗೊಂಡ ದಿನ ನಿಮ್ಮಲ್ಲಿ ಬೆನ್ನು ತಿರುಗಿಸಿ ಓಡಿದವರಾರೋ ಅವರು ಮಾಡಿದ ಕೆಲವು ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ದಾರಿ ತಪ್ಪಿಸಿದನು. ಆದರೆ ಅಲ್ಲಾಹನು ಅವರನ್ನು ಕ್ಷಮಿಸಿದನು. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ವಿವೇಕವಂತನೂ ಆಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوْا لَا تَكُوْنُوْا كَالَّذِیْنَ كَفَرُوْا وَقَالُوْا لِاِخْوَانِهِمْ اِذَا ضَرَبُوْا فِی الْاَرْضِ اَوْ كَانُوْا غُزًّی لَّوْ كَانُوْا عِنْدَنَا مَا مَاتُوْا وَمَا قُتِلُوْا ۚ— لِیَجْعَلَ اللّٰهُ ذٰلِكَ حَسْرَةً فِیْ قُلُوْبِهِمْ ؕ— وَاللّٰهُ یُحْیٖ وَیُمِیْتُ ؕ— وَاللّٰهُ بِمَا تَعْمَلُوْنَ بَصِیْرٌ ۟
ಓ ಸತ್ಯವಿಶ್ವಸಿಗಳೇ, ತಮ್ಮ ಸಹೋದರರು ಯಾತ್ರೆಗಾಗಿ ಆಥವಾ ಯುದ್ಧಕ್ಕಾಗಿ ಹೊರಟು (ಸಾವನ್ನಪ್ಪಿದರೆ) ಅವರು ನಮ್ಮ ಬಳಿಯಿರುತ್ತಿದ್ದರೆ ಸಾವನ್ನಪ್ಪುತ್ತಿರಲಿಲ್ಲ ಅಥವಾ ಕೊಲ್ಲಲ್ಪಡುತ್ತಿರಲಿಲ್ಲ ಎಂದು ಹೇಳುವ ಅವಿಶ್ವಾಸಿಗಳಂತೆ ನೀವಾಗಬಾರದು. ಅಲ್ಲಾಹನು ಅವರ ಈ ಭಾವನೆಯನ್ನು ಅವರ ಹೃದಯದಲ್ಲಿ ಖೇದಕರ ವಿಷಯವನ್ನಾಗಿಸಲೆಂದಾಗಿದೆ. ಜೀವ ಕೊಡುವವನು, ಮರಣ ನೀಡುವವನು ಅಲ್ಲಾಹನಾಗಿದ್ದಾನೆ. ಮತ್ತು ಅಲ್ಲಾಹನು ನಿಮ್ಮ ಕರ್ಮಗಳನ್ನು ವೀಕ್ಷಿಸುತ್ತಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَلَىِٕنْ قُتِلْتُمْ فِیْ سَبِیْلِ اللّٰهِ اَوْ مُتُّمْ لَمَغْفِرَةٌ مِّنَ اللّٰهِ وَرَحْمَةٌ خَیْرٌ مِّمَّا یَجْمَعُوْنَ ۟
ಖಂಡಿತವಾಗಿಯು ನೀವು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದರೇ ಅಥವಾ ಮರಣವನ್ನಪ್ಪಿದರೇ ನಿಸ್ಸಂಶಯವಾಗಿಯು ಅಲ್ಲಾಹನಿಂದ ಲಭಿಸುವ ಪಾಪವಿಮೋಚನೆ ಮತ್ತು ಕಾರುಣ್ಯವು ಅವರು ಶೇಖರಿಸಿಡುವುದಕ್ಕಿಂತಲೂ ಉತ್ತಮವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಆಲು ಇಮ್ರಾನ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ