Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅನ್ನಿಸಾಅ್   ಶ್ಲೋಕ:
وَالّٰتِیْ یَاْتِیْنَ الْفَاحِشَةَ مِنْ نِّسَآىِٕكُمْ فَاسْتَشْهِدُوْا عَلَیْهِنَّ اَرْبَعَةً مِّنْكُمْ ۚ— فَاِنْ شَهِدُوْا فَاَمْسِكُوْهُنَّ فِی الْبُیُوْتِ حَتّٰی یَتَوَفّٰهُنَّ الْمَوْتُ اَوْ یَجْعَلَ اللّٰهُ لَهُنَّ سَبِیْلًا ۟
ನಿಮ್ಮ ಸ್ತಿçÃಯರ ಪೈಕಿ ಯಾರು ನಿರ್ಲಜ್ಜೆಯ ಕೃತ್ಯಗಳನ್ನು ಮಾಡುತ್ತಾರೋ ಅವರ ವಿರುದ್ಧ ನೀವು ನಿಮ್ಮ ಪೈಕಿಯ ನಾಲ್ಕು ಜನ ಸಾಕ್ಷಿಗಳನ್ನು ತನ್ನಿರಿ. ಇನ್ನು ಅವರು ಸಾಕ್ಷö್ಯವಹಿಸಿದರೆ ಆ ಸ್ತಿçÃಯರನ್ನು ಮರಣವು ಅವರ ಆಯುಸ್ಸನ್ನು ಮುಗಿಸುವವರಗೆ ಅಥವಾ ಅಲ್ಲಾಹನು ಅವರಿಗೆ ಇನ್ನಾವುದಾದರೂ ಮಾರ್ಗವನ್ನು ನಿಶ್ಚಯಿಸುವವರಗೆ ಗೃಹಬಂಧನದಲ್ಲಿಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَالَّذٰنِ یَاْتِیٰنِهَا مِنْكُمْ فَاٰذُوْهُمَا ۚ— فَاِنْ تَابَا وَاَصْلَحَا فَاَعْرِضُوْا عَنْهُمَا ؕ— اِنَّ اللّٰهَ كَانَ تَوَّابًا رَّحِیْمًا ۟
ನಿಮ್ಮ ಪೈಕಿ ಅಂತಹ ಕೃತ್ಯ ಮಾಡಿದ ಇಬ್ಬರಿಗೆ ಶಿಕ್ಷೆ ಕೊಡಿರಿ. ಆದರೆ ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ನೀವು ಅವರನ್ನು ಬಿಟ್ಟುಬಿಡಿರಿ. ನಿಸ್ಸಂದೇಹವಾಗಿಯು ಅಲ್ಲಾಹನು ಅತ್ಯಧಿಕ ಪಾಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
اِنَّمَا التَّوْبَةُ عَلَی اللّٰهِ لِلَّذِیْنَ یَعْمَلُوْنَ السُّوْٓءَ بِجَهَالَةٍ ثُمَّ یَتُوْبُوْنَ مِنْ قَرِیْبٍ فَاُولٰٓىِٕكَ یَتُوْبُ اللّٰهُ عَلَیْهِمْ ؕ— وَكَانَ اللّٰهُ عَلِیْمًا حَكِیْمًا ۟
ಅಜ್ಞಾನದಿಂದ ತಪ್ಪು ಮಾಡಿ ಕೂಡಲೇ ಪಶ್ಚಾತ್ತಾಪ ಪಡುವವರ ಪಶ್ಚಾತ್ತಾಪವೇ ಅಲ್ಲಾಹನ ಬಳಿ ಸ್ವೀಕಾರಾರ್ಹವಾಗಿದೆ. ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಮಹಾ ಜ್ಞಾನವಂತನೂ, ಯುಕ್ತಿಪೂರ್ಣನೂ ಆಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَلَیْسَتِ التَّوْبَةُ لِلَّذِیْنَ یَعْمَلُوْنَ السَّیِّاٰتِ ۚ— حَتّٰۤی اِذَا حَضَرَ اَحَدَهُمُ الْمَوْتُ قَالَ اِنِّیْ تُبْتُ الْـٰٔنَ وَلَا الَّذِیْنَ یَمُوْتُوْنَ وَهُمْ كُفَّارٌ ؕ— اُولٰٓىِٕكَ اَعْتَدْنَا لَهُمْ عَذَابًا اَلِیْمًا ۟
ಪಾಪವೆಸಗುತ್ತಲೇ ಇದ್ದು ಮರಣಾ ಸನ್ನತೆಯುಂಟಾದಾಗ ನಾನೀಗ ಪಶ್ಚಾತ್ತಾಪ ಪಟ್ಟಿರುತ್ತೇನೆ ಎಂದು ಹೇಳುವವರ ಪಶ್ಚಾತ್ತಾಪವು ಸ್ವೀಕಾರಾರ್ಹವಲ್ಲ. ಮತ್ತು ಸತ್ಯನಿಷೇಧದಲ್ಲೇ ಮರಣ ಹೊಂದುವವರ ಪಶ್ಚಾತ್ತಾಪವು ಸ್ವೀಕಾರಾರ್ಹವಲ್ಲ ಅವರಿಗೇ ನಾವು ವೇದನಾಜನಕ ಶಿಕ್ಷೆಯನ್ನು ಸಿದ್ಧಗೊಳಿಸಿರುತ್ತೇವೆ.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوْا لَا یَحِلُّ لَكُمْ اَنْ تَرِثُوا النِّسَآءَ كَرْهًا ؕ— وَلَا تَعْضُلُوْهُنَّ لِتَذْهَبُوْا بِبَعْضِ مَاۤ اٰتَیْتُمُوْهُنَّ اِلَّاۤ اَنْ یَّاْتِیْنَ بِفَاحِشَةٍ مُّبَیِّنَةٍ ۚ— وَعَاشِرُوْهُنَّ بِالْمَعْرُوْفِ ۚ— فَاِنْ كَرِهْتُمُوْهُنَّ فَعَسٰۤی اَنْ تَكْرَهُوْا شَیْـًٔا وَّیَجْعَلَ اللّٰهُ فِیْهِ خَیْرًا كَثِیْرًا ۟
ಓ ಸತ್ಯವಿಶ್ವಾಸಿಗಳೇ, ಸ್ತಿçÃಯರನ್ನು ಬಲವಂತವಾಗಿ ವಾರೀಸು ಸೊತ್ತಿನಂತೆ ಕೈವಶವಿರಿಸಕೊಳ್ಳವುದು ನಿಮಗೆ ಸಮ್ಮತಾರ್ಹವಲ್ಲ. ನೀವು ಅವರಿಗೆ ನೀಡಿರುವುದರಲ್ಲಿ (ವಧುಧನದಿಂದ) ಸ್ವಲ್ಪವನ್ನು ಪಡೆಯಲಿಕ್ಕಾಗಿ ನೀವವರನ್ನು ತಡೆದಿರಿಸಿಕೊಳ್ಳಬೇಡಿರಿ. ಇನ್ನು ಅವರು ಬಹಿರಂಗವಾದ ಯಾವುದಾದರೂ ನಿರ್ಲಜ್ಜೆಯ ಕಾರ್ಯವನ್ನು ಕೈಗೊಂಡರೆ ಅದು ಬೇರೆ ವಿಚಾರ. ನೀವು ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ. ನಿಮಗೆ ಅವರು ಅಪ್ರಿಯವೆನಿಸುವುದಾದರೆ ನಿಮ್ಮ ಅಪ್ರಿಯವಾದ ಆ ಒಂದು ವಿಚಾರದಲ್ಲಿ ಅಲ್ಲಾಹನು ಧಾರಾಳ ಒಳಿತುಗಳನ್ನುಂಟು ಮಾಡಬಹುದು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅನ್ನಿಸಾಅ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ