Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು * - ಅನುವಾದಗಳ ವಿಷಯಸೂಚಿ

PDF XML CSV Excel API
Please review the Terms and Policies

ಅರ್ಥಗಳ ಅನುವಾದ ಅಧ್ಯಾಯ: ಅನ್ನಹ್ಲ್   ಶ್ಲೋಕ:
وَلَا تَتَّخِذُوْۤا اَیْمَانَكُمْ دَخَلًا بَیْنَكُمْ فَتَزِلَّ قَدَمٌ بَعْدَ ثُبُوْتِهَا وَتَذُوْقُوا السُّوْٓءَ بِمَا صَدَدْتُّمْ عَنْ سَبِیْلِ اللّٰهِ ۚ— وَلَكُمْ عَذَابٌ عَظِیْمٌ ۟
ನೀವು ನಿಮ್ಮ ಆಣೆಗಳನ್ನು ಪರಸ್ಪರ ವಂಚನೆ ಮಾಡುವುದಕ್ಕಾಗಿ ಬಳಸಬೇಡಿ. ಇದರಿಂದ ನಿಮ್ಮ ಪಾದಗಳು ಸ್ಥಿರವಾಗಿ ನಿಂತ ಬಳಿಕವೂ ಅಲುಗಾಡಬಹುದು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದ ನಿಮಿತ್ತ ನೀವು ಶಿಕ್ಷೆಯ ರುಚಿಯನ್ನು ನೋಡುವಿರಿ. (ಪರಲೋಕದಲ್ಲಿ) ನಿಮಗೆ ಕಠೋರವಾದ ಶಿಕ್ಷೆಯೂ ಇದೆ.
ಅರಬ್ಬಿ ವ್ಯಾಖ್ಯಾನಗಳು:
وَلَا تَشْتَرُوْا بِعَهْدِ اللّٰهِ ثَمَنًا قَلِیْلًا ؕ— اِنَّمَا عِنْدَ اللّٰهِ هُوَ خَیْرٌ لَّكُمْ اِنْ كُنْتُمْ تَعْلَمُوْنَ ۟
ಅಲ್ಲಾಹನ ಕರಾರನ್ನು ತುಚ್ಛ ಬೆಲೆಗೆ ಮಾರಾಟ ಮಾಡಬೇಡಿ. ಅಲ್ಲಾಹನ ಬಳಿ ಏನಿದೆಯೋ ಅದೇ ನಿಮಗೆ ಉತ್ತಮ. ನೀವು ತಿಳಿದವರಾಗಿದ್ದರೆ.
ಅರಬ್ಬಿ ವ್ಯಾಖ್ಯಾನಗಳು:
مَا عِنْدَكُمْ یَنْفَدُ وَمَا عِنْدَ اللّٰهِ بَاقٍ ؕ— وَلَنَجْزِیَنَّ الَّذِیْنَ صَبَرُوْۤا اَجْرَهُمْ بِاَحْسَنِ مَا كَانُوْا یَعْمَلُوْنَ ۟
ನಿಮ್ಮ ಬಳಿ ಏನಿವೆಯೋ ಅವೆಲ್ಲವೂ ನಶ್ವರವಾಗಿವೆ. ಆದರೆ ಅಲ್ಲಾಹನ ಬಳಿ ಏನಿವೆಯೋ ಅವು ಶಾಶ್ವತವಾಗಿವೆ. ತಾಳ್ಮೆಯಿಂದ ಜೀವಿಸುವವರು ಯಾರೋ—ಅವರು ಮಾಡುವ ಅತ್ಯುತ್ತಮ ಕರ್ಮಗಳಿಗೆ ನಾವು ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.
ಅರಬ್ಬಿ ವ್ಯಾಖ್ಯಾನಗಳು:
مَنْ عَمِلَ صَالِحًا مِّنْ ذَكَرٍ اَوْ اُ وَهُوَ مُؤْمِنٌ فَلَنُحْیِیَنَّهٗ حَیٰوةً طَیِّبَةً ۚ— وَلَنَجْزِیَنَّهُمْ اَجْرَهُمْ بِاَحْسَنِ مَا كَانُوْا یَعْمَلُوْنَ ۟
ಗಂಡಾಗಿರಲಿ, ಹೆಣ್ಣಾಗಿರಲಿ—ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ನಾವು ಖಂಡಿತವಾಗಿಯೂ ಅತ್ಯುತ್ತಮ ಬದುಕನ್ನು ನೀಡುವೆವು. ಅವರು ಮಾಡುವ ಅತ್ಯುತ್ತಮ ಕರ್ಮಗಳಿಗೆ ನಾವು ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.
ಅರಬ್ಬಿ ವ್ಯಾಖ್ಯಾನಗಳು:
فَاِذَا قَرَاْتَ الْقُرْاٰنَ فَاسْتَعِذْ بِاللّٰهِ مِنَ الشَّیْطٰنِ الرَّجِیْمِ ۟
ನೀವು ಕುರ್‌ಆನ್ ಪಠಿಸುವಾಗ ಬಹಿಷ್ಕೃತ ಶೈತಾನನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
اِنَّهٗ لَیْسَ لَهٗ سُلْطٰنٌ عَلَی الَّذِیْنَ اٰمَنُوْا وَعَلٰی رَبِّهِمْ یَتَوَكَّلُوْنَ ۟
ಸತ್ಯವಿಶ್ವಾಸಿಗಳು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುವವರ ಮೇಲೆ ಅವನಿಗೆ ಯಾವುದೇ ಅಧಿಕಾರವಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِنَّمَا سُلْطٰنُهٗ عَلَی الَّذِیْنَ یَتَوَلَّوْنَهٗ وَالَّذِیْنَ هُمْ بِهٖ مُشْرِكُوْنَ ۟۠
ಅವನಿಗೆ ಅಧಿಕಾರವಿರುವುದು ಅವನನ್ನು ಮಿತ್ರನಾಗಿ ಸ್ವೀಕರಿಸಿದವರ ಮೇಲೆ ಮತ್ತು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವವರ ಮೇಲೆ ಮಾತ್ರ.
ಅರಬ್ಬಿ ವ್ಯಾಖ್ಯಾನಗಳು:
وَاِذَا بَدَّلْنَاۤ اٰیَةً مَّكَانَ اٰیَةٍ ۙ— وَّاللّٰهُ اَعْلَمُ بِمَا یُنَزِّلُ قَالُوْۤا اِنَّمَاۤ اَنْتَ مُفْتَرٍ ؕ— بَلْ اَكْثَرُهُمْ لَا یَعْلَمُوْنَ ۟
ನಾವು ಒಂದು ವಚನದ ಸ್ಥಾನದಲ್ಲಿ ಇನ್ನೊಂದು ವಚನವನ್ನು ಬದಲಾಯಿಸಿದರೆ— ಅಲ್ಲಾಹು ಏನು ಅವತೀರ್ಣಗೊಳಿಸುತ್ತಿದ್ದಾನೆಂದು ಅವನಿಗೆ ಪೂರ್ಣ ಜ್ಞಾನವಿದೆ—ಅವರು ಹೇಳುತ್ತಾರೆ: “ನೀನು ಸುಳ್ಳಾರೋಪ ಮಾಡುವವನಾಗಿರುವೆ.” ಅಲ್ಲ, ವಾಸ್ತವವಾಗಿ ಅವರಲ್ಲಿ ಹೆಚ್ಚಿನವರಿಗೂ ವಿಷಯವೇನೆಂದೇ ತಿಳಿದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
قُلْ نَزَّلَهٗ رُوْحُ الْقُدُسِ مِنْ رَّبِّكَ بِالْحَقِّ لِیُثَبِّتَ الَّذِیْنَ اٰمَنُوْا وَهُدًی وَّبُشْرٰی لِلْمُسْلِمِیْنَ ۟
(ಪ್ರವಾದಿಯವರೇ) ಹೇಳಿರಿ: “ಸತ್ಯವಿಶ್ವಾಸಿಗಳನ್ನು ದೃಢವಾಗಿ ನಿಲ್ಲಿಸಲು ಮತ್ತು ಮುಸಲ್ಮಾನರಿಗೆ ಸನ್ಮಾರ್ಗದರ್ಶಿ ಮತ್ತು ಸುವಾರ್ತೆಯಾಗಿ ಪವಿತ್ರಾತ್ಮನು (ಜಿಬ್ರೀಲ್) ಇದನ್ನು ಅಲ್ಲಾಹನಿಂದ ಇಳಿಸಿ ತಂದಿದ್ದಾರೆ.”
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅನ್ನಹ್ಲ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು - ಅನುವಾದಗಳ ವಿಷಯಸೂಚಿ

ಅನುವಾದ - ಮುಹಮ್ಮದ್ ಹಂಝ ಪುತ್ತೂರು ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ