ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ * - ಅನುವಾದಗಳ ವಿಷಯಸೂಚಿ

XML CSV Excel API
Please review the Terms and Policies

ಅರ್ಥಗಳ ಅನುವಾದ ಅಧ್ಯಾಯ: ಸೂರ ಅತ್ತಹ್ರೀಮ್   ಶ್ಲೋಕ:

ಸೂರ ಅತ್ತಹ್ರೀಮ್

یٰۤاَیُّهَا النَّبِیُّ لِمَ تُحَرِّمُ مَاۤ اَحَلَّ اللّٰهُ لَكَ ۚ— تَبْتَغِیْ مَرْضَاتَ اَزْوَاجِكَ ؕ— وَاللّٰهُ غَفُوْرٌ رَّحِیْمٌ ۟
ಓ ಪ್ರವಾದಿಯವರೇ! ಅಲ್ಲಾಹು ನಿಮಗೆ ಧರ್ಮಸಮ್ಮತಗೊಳಿಸಿದ ವಸ್ತುವನ್ನು ನೀವೇಕೆ ನಿಷಿದ್ಧಗೊಳಿಸುತ್ತೀರಿ? ನೀವು ನಿಮ್ಮ ಪತ್ನಿಯರ ಸಂಪ್ರೀತಿಯನ್ನು ಪಡೆಯಲು ಬಯಸುತ್ತೀರಾ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.[1]
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪತ್ನಿ ಝೈನಬ್ ಬಿಂತ್ ಜಹ್ಶ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರವರ ಮನೆಯಲ್ಲಿ ಸ್ವಲ್ಪ ಹೊತ್ತು ತಂಗಿ ಅಲ್ಲಿ ಜೇನು ಸವಿಯುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರ ಮನೆಯಲ್ಲಿ ಹೆಚ್ಚು ತಂಗುವುದನ್ನು ನಿಲ್ಲಿಸಲು ಆಯಿಶ ಮತ್ತು ಹಫ್ಸ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಒಂದು ಉಪಾಯ ಹೂಡಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇವರಿಬ್ಬರಲ್ಲಿ ಯಾರ ಬಳಿಗೆ ಮೊದಲು ಬಂದರೂ ಅವರ ಬಾಯಿಂದ ಒಂದು ರೀತಿಯ ಕೆಟ್ಟ ಪರಿಮಳ ಬರುತ್ತದೆ ಎಂದು ಹೇಳಬೇಕು ಎಂದು ಇವರಿಬ್ಬರು ನಿರ್ಧರಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದಾಗ ಅವರು ಇದೇ ರೀತಿ ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾನು ಝೈನಬರ ಮನೆಯಲ್ಲಿ ಸ್ವಲ್ಪ ಜೇನು ಸವಿದಿದ್ದೆ. ಇನ್ನು ಮುಂದೆ ನಾನು ಅದನ್ನು ಕುಡಿಯುವುದಿಲ್ಲವೆಂದು ಆಣೆ ಮಾಡುತ್ತೇನೆ. ಆದರೆ ಈ ವಿಷಯವನ್ನು ನೀನು ಯಾರಿಗೂ ತಿಳಿಸಬಾರದು.”
ಅರಬ್ಬಿ ವ್ಯಾಖ್ಯಾನಗಳು:
قَدْ فَرَضَ اللّٰهُ لَكُمْ تَحِلَّةَ اَیْمَانِكُمْ ۚ— وَاللّٰهُ مَوْلٰىكُمْ ۚ— وَهُوَ الْعَلِیْمُ الْحَكِیْمُ ۟
ಅಲ್ಲಾಹು ನಿಮಗೆ ನಿಮ್ಮ ಆಣೆಗಳ ವಿಮುಕ್ತತೆಯನ್ನು ಈಗಾಗಲೇ ನಿಶ್ಚಯಿಸಿದ್ದಾನೆ.[1] ಅಲ್ಲಾಹು ನಿಮ್ಮ ರಕ್ಷಕನಾಗಿದ್ದಾನೆ. ಅವನು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
[1] ಅಂದರೆ ಆಣೆಯನ್ನು ಉಲ್ಲಂಘಿಸಿದರೆ ಅದಕ್ಕೆ ನೀಡಬೇಕಾದ ಪರಿಹಾರವನ್ನು ಅಲ್ಲಾಹು ಈಗಾಗಲೇ ನಿಶ್ಚಯಿಸಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاِذْ اَسَرَّ النَّبِیُّ اِلٰی بَعْضِ اَزْوَاجِهٖ حَدِیْثًا ۚ— فَلَمَّا نَبَّاَتْ بِهٖ وَاَظْهَرَهُ اللّٰهُ عَلَیْهِ عَرَّفَ بَعْضَهٗ وَاَعْرَضَ عَنْ بَعْضٍ ۚ— فَلَمَّا نَبَّاَهَا بِهٖ قَالَتْ مَنْ اَنْۢبَاَكَ هٰذَا ؕ— قَالَ نَبَّاَنِیَ الْعَلِیْمُ الْخَبِیْرُ ۟
ಪ್ರವಾದಿಯವರು ತಮ್ಮ ಪತ್ನಿಯರಲ್ಲಿ ಒಬ್ಬಳಿಗೆ ಗುಟ್ಟಾಗಿ ಒಂದು ಮಾತನ್ನು ಹೇಳಿದ ಸಂದರ್ಭ(ವನ್ನು ಸ್ಮರಿಸಿ).[1] ಅವಳು ಅದನ್ನು (ಇನ್ನೊಬ್ಬ ಪತ್ನಿಗೆ) ತಿಳಿಸಿದಾಗ ಮತ್ತು ಅಲ್ಲಾಹು ತನ್ನ ಪ್ರವಾದಿಗೆ ಅದನ್ನು ಬಹಿರಂಗಪಡಿಸಿದಾಗ, ಅವರು ಅದರ ಕೆಲವು ಭಾಗಗಳನ್ನು (ಪತ್ನಿಗೆ) ತಿಳಿಸಿ ಕೆಲವು ಭಾಗಗಳನ್ನು ನಿರ್ಲಕ್ಷಿಸಿದರು. ನಂತರ ಅವರು ಅದನ್ನು ಪತ್ನಿಗೆ ತಿಳಿಸಿದಾಗ ಅವಳು ಕೇಳಿದಳು: “ನಿಮಗೆ ಇದನ್ನು ತಿಳಿಸಿದ್ದು ಯಾರು?” ಅವರು ಉತ್ತರಿಸಿದರು: “ಸರ್ವಜ್ಞನು ಮತ್ತು ಸೂಕ್ಷ್ಮಜ್ಞಾನಿಯಾದ ಅಲ್ಲಾಹು ನನಗೆ ತಿಳಿಸಿದನು.”
[1] ನಾನು ಇನ್ನು ಮುಂದೆ ಜೇನು ಸೇವಿಸುವುದಿಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಹಫ್ಸರಿಗೆ ತಿಳಿಸಿದ್ದರು. ಅವರು ಅದನ್ನು ಆಯಿಶರಿಗೆ ತಿಳಿಸಿದರು.
ಅರಬ್ಬಿ ವ್ಯಾಖ್ಯಾನಗಳು:
اِنْ تَتُوْبَاۤ اِلَی اللّٰهِ فَقَدْ صَغَتْ قُلُوْبُكُمَا ۚ— وَاِنْ تَظٰهَرَا عَلَیْهِ فَاِنَّ اللّٰهَ هُوَ مَوْلٰىهُ وَجِبْرِیْلُ وَصَالِحُ الْمُؤْمِنِیْنَ ۚ— وَالْمَلٰٓىِٕكَةُ بَعْدَ ذٰلِكَ ظَهِیْرٌ ۟
(ಪ್ರವಾದಿಯ ಇಬ್ಬರು ಪತ್ನಿಯರೇ!) ನೀವು ಅಲ್ಲಾಹನ ಮುಂದೆ ಪಶ್ಚಾತ್ತಾಪಪಡುವುದಾದರೆ (ಅದು ಉತ್ತಮವಾಗಿದೆ). ನಿಶ್ಚಯವಾಗಿಯೂ ನಿಮ್ಮ ಹೃದಯಗಳು ವಕ್ರವಾಗಿವೆ. ಆದರೆ ನೀವು ಪ್ರವಾದಿಯ ವಿರುದ್ಧ ಪರಸ್ಪರ ಸಹಾಯ ಮಾಡುವುದಾದರೆ ನಿಶ್ಚಯವಾಗಿಯೂ ಅಲ್ಲಾಹು ಅವರ ರಕ್ಷಕನಾಗಿದ್ದಾನೆ. ಜಿಬ್ರೀಲ್, ನೀತಿವಂತರಾದ ಸತ್ಯವಿಶ್ವಾಸಿಗಳು ಮತ್ತು ಅವರೆಲ್ಲರ ಹೊರತಾಗಿ ದೇವದೂತರು‍ಗಳು ಕೂಡ ಅವರಿಗೆ ಸಹಾಯ ಮಾಡಲಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
عَسٰی رَبُّهٗۤ اِنْ طَلَّقَكُنَّ اَنْ یُّبْدِلَهٗۤ اَزْوَاجًا خَیْرًا مِّنْكُنَّ مُسْلِمٰتٍ مُّؤْمِنٰتٍ قٰنِتٰتٍ تٰٓىِٕبٰتٍ عٰبِدٰتٍ سٰٓىِٕحٰتٍ ثَیِّبٰتٍ وَّاَبْكَارًا ۟
ಅವರು ನಿಮಗೆ ವಿಚ್ಛೇದನೆ (ತಲಾಕ್) ನೀಡಿದರೆ, ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ನಿಮಗಿಂತಲೂ ಉತ್ತಮ ಪತ್ನಿಯರನ್ನು ಬದಲಿಯಾಗಿ ನೀಡುವನು. ಅವರು ಮುಸ್ಲಿಮರು, ಸತ್ಯವಿಶ್ವಾಸಿಗಳು, ದೇವಭಯವುಳ್ಳವರು, ಪಶ್ಚಾತ್ತಾಪಪಡುವವರು, ಆರಾಧನೆಯಲ್ಲಿ ಮಗ್ನರಾಗುವವರು, ಉಪವಾಸ ಆಚರಿಸುವವರು, ವಿಧವೆಗಳು ಮತ್ತು ಕನ್ಯೆಯರಾಗಿರುವರು.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوْا قُوْۤا اَنْفُسَكُمْ وَاَهْلِیْكُمْ نَارًا وَّقُوْدُهَا النَّاسُ وَالْحِجَارَةُ عَلَیْهَا مَلٰٓىِٕكَةٌ غِلَاظٌ شِدَادٌ لَّا یَعْصُوْنَ اللّٰهَ مَاۤ اَمَرَهُمْ وَیَفْعَلُوْنَ مَا یُؤْمَرُوْنَ ۟
ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ನರಕಾಗ್ನಿಯಿಂದ ಪಾರು ಮಾಡಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರ ಹೃದಯದ ಬಲಿಷ್ಠ ದೇವದೂತರು‍ಗಳಿದ್ದಾರೆ. ಅಲ್ಲಾಹನ ಯಾವುದೇ ಆಜ್ಞೆಯನ್ನೂ ಅವರು ಧಿಕ್ಕರಿಸುವುದಿಲ್ಲ. ಅವರಿಗೆ ಆಜ್ಞಾಪಿಸಲಾಗುವುದೆಲ್ಲವನ್ನೂ ಅವರು ನಿರ್ವಹಿಸುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ كَفَرُوْا لَا تَعْتَذِرُوا الْیَوْمَ ؕ— اِنَّمَا تُجْزَوْنَ مَا كُنْتُمْ تَعْمَلُوْنَ ۟۠
ಓ ಸತ್ಯನಿಷೇಧಿಗಳೇ! ಇಂದು ನೀವು ನೆಪಗಳನ್ನು ಹೇಳಬೇಡಿ. ನಿಮಗೆ ನಿಮ್ಮ ಕರ್ಮಗಳ ಪ್ರತಿಫಲವನ್ನು ಮಾತ್ರ ನೀಡಲಾಗುವುದು.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوْا تُوْبُوْۤا اِلَی اللّٰهِ تَوْبَةً نَّصُوْحًا ؕ— عَسٰی رَبُّكُمْ اَنْ یُّكَفِّرَ عَنْكُمْ سَیِّاٰتِكُمْ وَیُدْخِلَكُمْ جَنّٰتٍ تَجْرِیْ مِنْ تَحْتِهَا الْاَنْهٰرُ ۙ— یَوْمَ لَا یُخْزِی اللّٰهُ النَّبِیَّ وَالَّذِیْنَ اٰمَنُوْا مَعَهٗ ۚ— نُوْرُهُمْ یَسْعٰی بَیْنَ اَیْدِیْهِمْ وَبِاَیْمَانِهِمْ یَقُوْلُوْنَ رَبَّنَاۤ اَتْمِمْ لَنَا نُوْرَنَا وَاغْفِرْ لَنَا ۚ— اِنَّكَ عَلٰی كُلِّ شَیْءٍ قَدِیْرٌ ۟
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮುಂದೆ ನಿಷ್ಕಳಂಕವಾಗಿ ಪಶ್ಚಾತ್ತಾಪಪಡಿರಿ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ಪಾಪಗಳನ್ನು ಅಳಿಸಿಬಿಡಬಹುದು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ನಿಮ್ಮನ್ನು ಪ್ರವೇಶ ಮಾಡಿಸಬಹುದು. ಅದು ಅಲ್ಲಾಹು ಪ್ರವಾದಿಯನ್ನು ಮತ್ತು ಅವರ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ಅವಮಾನಿಸದ ದಿನ. ಅವರ ಬೆಳಕು ಅವರ ಮುಂಭಾಗದಿಂದ ಮತ್ತು ಬಲಭಾಗದಿಂದ ಹರಿಯುತ್ತಿರುವುದು. ಅವರು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮ ಬೆಳಕನ್ನು ನಮಗೆ ಪೂರ್ಣವಾಗಿ ನೀಡು. ನಮ್ಮನ್ನು ಕ್ಷಮಿಸು. ನಿಶ್ಚಯವಾಗಿಯೂ ನಿನಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿದೆ.”
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا النَّبِیُّ جَاهِدِ الْكُفَّارَ وَالْمُنٰفِقِیْنَ وَاغْلُظْ عَلَیْهِمْ ؕ— وَمَاْوٰىهُمْ جَهَنَّمُ ؕ— وَبِئْسَ الْمَصِیْرُ ۟
ಓ ಪ್ರವಾದಿಯವರೇ! ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳ ವಿರುದ್ಧ ಹೋರಾಡಿರಿ. ಅವರೊಡನೆ ಕಠೋರವಾಗಿ ವರ್ತಿಸಿರಿ. ನರಕವೇ ಅವರ ವಾಸಸ್ಥಳ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
ضَرَبَ اللّٰهُ مَثَلًا لِّلَّذِیْنَ كَفَرُوا امْرَاَتَ نُوْحٍ وَّامْرَاَتَ لُوْطٍ ؕ— كَانَتَا تَحْتَ عَبْدَیْنِ مِنْ عِبَادِنَا صَالِحَیْنِ فَخَانَتٰهُمَا فَلَمْ یُغْنِیَا عَنْهُمَا مِنَ اللّٰهِ شَیْـًٔا وَّقِیْلَ ادْخُلَا النَّارَ مَعَ الدّٰخِلِیْنَ ۟
ಅಲ್ಲಾಹು ಸತ್ಯನಿಷೇಧಿಗಳಿಗೆ ನೂಹರ ಪತ್ನಿ ಮತ್ತು ಲೂತರ ಪತ್ನಿಯನ್ನು ಉದಾಹರಣೆಯಾಗಿ ತೋರಿಸಿದ್ದಾನೆ. ಇವರಿಬ್ಬರು ನಮ್ಮ ದಾಸರಲ್ಲಿ ನೀತಿವಂತರಾಗಿದ್ದ ಇಬ್ಬರು ದಾಸರ ಮನೆಯಲ್ಲಿ ವಾಸವಾಗಿದ್ದರು. ಆದರೆ ಅವರು (ಪತ್ನಿಯರು) ಅವರನ್ನು ವಂಚಿಸಿದರು. ಆಗ ಅಲ್ಲಾಹನ ಶಿಕ್ಷೆಯಿಂದ ಅವರನ್ನು ಪಾರು ಮಾಡಲು ಅವರಿಗೆ (ಆ ಇಬ್ಬರು ಪ್ರವಾದಿಗಳಿಗೆ) ಸಾಧ್ಯವಾಗಲಿಲ್ಲ. “ನರಕಾಗ್ನಿಯನ್ನು ಪ್ರವೇಶಿಸುವವರೊಡನೆ ನೀವು ಕೂಡ ಪ್ರವೇಶಿಸಿರಿ” ಎಂದು ಅವರೊಡನೆ (ಆ ಪತ್ನಿಯರೊಡನೆ) ಹೇಳಲಾಯಿತು.
ಅರಬ್ಬಿ ವ್ಯಾಖ್ಯಾನಗಳು:
وَضَرَبَ اللّٰهُ مَثَلًا لِّلَّذِیْنَ اٰمَنُوا امْرَاَتَ فِرْعَوْنَ ۘ— اِذْ قَالَتْ رَبِّ ابْنِ لِیْ عِنْدَكَ بَیْتًا فِی الْجَنَّةِ وَنَجِّنِیْ مِنْ فِرْعَوْنَ وَعَمَلِهٖ وَنَجِّنِیْ مِنَ الْقَوْمِ الظّٰلِمِیْنَ ۟ۙ
ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಫರೋಹನ ಪತ್ನಿಯನ್ನು ಉದಾಹರಣೆಯಾಗಿ ತೋರಿಸಿದ್ದಾನೆ. ಅವಳು ಹೇಳಿದ ಸಂದರ್ಭ: “ನನ್ನ ಪರಿಪಾಲಕನೇ! ನನಗೆ ನಿನ್ನ ಬಳಿ ಸ್ವರ್ಗದಲ್ಲಿ ಒಂದು ಭವನವನ್ನು ನಿರ್ಮಿಸಿಕೊಡು. ನನ್ನನ್ನು ಫರೋಹ ಮತ್ತು ಅವನ ಕೃತ್ಯಗಳಿಂದ ರಕ್ಷಿಸು. ಅಕ್ರಮಿಗಳಾದ ಜನರಿಂದಲೂ ನನ್ನನ್ನು ರಕ್ಷಿಸು.”
ಅರಬ್ಬಿ ವ್ಯಾಖ್ಯಾನಗಳು:
وَمَرْیَمَ ابْنَتَ عِمْرٰنَ الَّتِیْۤ اَحْصَنَتْ فَرْجَهَا فَنَفَخْنَا فِیْهِ مِنْ رُّوْحِنَا وَصَدَّقَتْ بِكَلِمٰتِ رَبِّهَا وَكُتُبِهٖ وَكَانَتْ مِنَ الْقٰنِتِیْنَ ۟۠
ಅದೇ ರೀತಿ ಇಮ್ರಾನರ ಮಗಳಾದ ಮರ್ಯಮರನ್ನು ಕೂಡ (ಉದಾಹರಣೆಯಾಗಿ ತೋರಿಸಿದ್ದಾನೆ). ಆಕೆ ತನ್ನ ಗುಹ್ಯಭಾಗವನ್ನು ಕಾಪಾಡಿದ್ದಳು. ನಾವು ನಮ್ಮ ಕಡೆಯಿಂದ ಅದಕ್ಕೆ ಆತ್ಮವನ್ನು ಊದಿದೆವು. ಆಕೆ ತನ್ನ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ಮತ್ತು ಗ್ರಂಥಗಳಲ್ಲಿ ವಿಶ್ವಾಸವಿಟ್ಟಿದ್ದಳು. ಆಕೆ ಆರಾಧನಾ ನಿರತರಲ್ಲಿ ಸೇರಿದವರಾಗಿದ್ದಳು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಸೂರ ಅತ್ತಹ್ರೀಮ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಅನುವಾದಗಳ ವಿಷಯಸೂಚಿ

ಪವಿತ್ರ ಕುರ್‌ಆನ್ ಕನ್ನಡ ಅರ್ಥಾನುವಾದ - ಮುಹಮ್ಮದ್ ಹಂಝ ಪುತ್ತೂರು

ಮುಚ್ಚಿ