Check out the new design

وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری * - پێڕستی وه‌رگێڕاوه‌كان


وه‌رگێڕانی ماناكان سوره‌تی: المائدة   ئایه‌تی:
یَوْمَ یَجْمَعُ اللّٰهُ الرُّسُلَ فَیَقُوْلُ مَاذَاۤ اُجِبْتُمْ ؕ— قَالُوْا لَا عِلْمَ لَنَا ؕ— اِنَّكَ اَنْتَ عَلَّامُ الْغُیُوْبِ ۟
ಅಲ್ಲಾಹನು ಸಕಲ ಸಂದೇಶವಾಹಕರನ್ನು ಒಟ್ಟುಗೂಡಿಸಿ (ನಿಮ್ಮ ಅನುಯಾಯಿಗಳಿಂದ) ನಿಮಗೆ (ಆಹ್ವಾನದ) ಯಾವ ಪ್ರತಿಕ್ರಿಯೆಯು ಲಭಿಸಿತ್ತು? ಎಂದು ಕೇಳುವ ದಿನ ನಮಗೆ (ಭಯಭಿತರಾಗಿ) ಯಾವ ಅರಿವೂ ಇಲ್ಲ. ಅಗೋಚರ ಮಾತುಗಳನ್ನು ಚೆನ್ನಾಗಿ ಅರಿಯುವವನು ನೀನೇ ಆಗಿರುವೆ ಎಂದು ಅವರು ಹೇಳುವರು.
تەفسیرە عەرەبیەکان:
اِذْ قَالَ اللّٰهُ یٰعِیْسَی ابْنَ مَرْیَمَ اذْكُرْ نِعْمَتِیْ عَلَیْكَ وَعَلٰی وَالِدَتِكَ ۘ— اِذْ اَیَّدْتُّكَ بِرُوْحِ الْقُدُسِ ۫— تُكَلِّمُ النَّاسَ فِی الْمَهْدِ وَكَهْلًا ۚ— وَاِذْ عَلَّمْتُكَ الْكِتٰبَ وَالْحِكْمَةَ وَالتَّوْرٰىةَ وَالْاِنْجِیْلَ ۚ— وَاِذْ تَخْلُقُ مِنَ الطِّیْنِ كَهَیْـَٔةِ الطَّیْرِ بِاِذْنِیْ فَتَنْفُخُ فِیْهَا فَتَكُوْنُ طَیْرًا بِاِذْنِیْ وَتُبْرِئُ الْاَكْمَهَ وَالْاَبْرَصَ بِاِذْنِیْ ۚ— وَاِذْ تُخْرِجُ الْمَوْتٰی بِاِذْنِیْ ۚ— وَاِذْ كَفَفْتُ بَنِیْۤ اِسْرَآءِیْلَ عَنْكَ اِذْ جِئْتَهُمْ بِالْبَیِّنٰتِ فَقَالَ الَّذِیْنَ كَفَرُوْا مِنْهُمْ اِنْ هٰذَاۤ اِلَّا سِحْرٌ مُّبِیْنٌ ۟
ಅಲ್ಲಾಹನು (ಈಸಾರೊಂದಿಗೆ) ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ಮರ್ಯಮರ ಪುತ್ರನಾದ ಈಸಾ! ನಿಮ್ಮ ಮೇಲೂ, ನಿಮ್ಮ ತಾಯಿಯ ಮೇಲೂ ಮಾಡಲಾಗಿರುವ ನನ್ನ ಅನುಗ್ರಹಗಳನ್ನು ಸ್ಮರಿಸಿರಿ. ನಾನು ನಿಮಗೆ ಪವಿತ್ರಾತ್ಮನ ಮೂಲಕ ಬೆಂಬಲ ನೀಡಿದೆ. ನೀವು ತೊಟ್ಟಿಲಿನಲ್ಲಿರುವಾಗ ಮತ್ತು ಹಿರಿಯ ವಯಸ್ಕನಾಗಿರುವಾಗ ಜನರೊಂದಿಗೆ ಮಾತನಾಡುತ್ತಿದ್ದೀರಿ ಮತ್ತು ನಿಮಗೆ ನಾನು ಗ್ರಂಥ ಹಾಗೂ ಸುಜ್ಞಾನವನ್ನು, ತೌರಾತ್ ಮತ್ತು ಇಂಜೀಲ್‌ನ ಶಿಕ್ಷಣವನ್ನು ಕಲಿಸಿಕೊಟ್ಟಿದ್ದೆ. ಮತ್ತು ನೀವು ನನ್ನ ಅಪ್ಪಣೆಯಿಂದ ಮಣ್ಣಿನಿಂದ ಪಕ್ಷಿಯ ರೂಪವನ್ನು ಮಾಡಿ, ನಂತರ ನೀವು ಅದರಲ್ಲಿ ಊದುವಾಗ ಅದು ನನ್ನ ಅಪ್ಪಣೆಯಿಂದ ಪಕ್ಷಿಯಾಗಿ ಮಾರ್ಪಡುತ್ತಿತ್ತು. ಮತ್ತು ನೀವು ನನ್ನ ಅಪ್ಪಣೆಯಿಂದ ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುತ್ತಿದ್ದೀರಿ ಮತ್ತು ನೀವು ನನ್ನ ಅಪ್ಪಣೆಯಿಂದ ಮೃತಪಟ್ಟವರನ್ನು ಎಬ್ಬಿಸುತ್ತಿದ್ದೀರಿ ಮತ್ತು ನೀವು ಇಸ್ರಾಯೀಲ್ ಸಂತತಿಗಳೆಡೆಗೆ ಸುವ್ಯಕ್ತ ದುಷ್ಟಾಂತಗಳೊAದಿಗೆ ಬಂದಾಗ ಅವರ ಪೈಕಿಯ ಸತ್ಯನಿಷೇಧಿಗಳು 'ಇದು ಸ್ಪಷ್ಟ ಜಾದುವಿನ ಹೊರತು ಇನ್ನೇನೂ ಅಲ್ಲ ಎಂದು ಹೇಳಿದಾಗ ನಾವು ನಿಮ್ಮನ್ನು ಅವರ ಕೇಡಿನಿಂದ ರಕ್ಷಿಸಿದೆವು.'
تەفسیرە عەرەبیەکان:
وَاِذْ اَوْحَیْتُ اِلَی الْحَوَارِیّٖنَ اَنْ اٰمِنُوْا بِیْ وَبِرَسُوْلِیْ ۚ— قَالُوْۤا اٰمَنَّا وَاشْهَدْ بِاَنَّنَا مُسْلِمُوْنَ ۟
ಮತ್ತು “ನೀವು ನನ್ನಲ್ಲೂ, ನನ್ನ ಸಂದೇಶವಾಹಕರಲ್ಲೂ (ಈಸಾ) ವಿಶ್ವಾಸವಿಡಿರಿ ಎಂದು ನಾವು ಹವಾರಿಗಳಿಗೆ ದಿವ್ಯ ಸಂದೇಶ ನೀಡಿದ ಸಂದರ್ಭವನ್ನು (ಸ್ಮರಿಸಿರಿ) ಆಗ ಅವರು ಹೇಳಿದರು: ನಾವು ವಿಶ್ವಾಸವಿಟ್ಟಿದ್ದೇವೆ ಮತ್ತು ನಾವು ವಿಧೇಯರೆಂಬುದಕ್ಕೆ ನೀನು ಸಾಕ್ಷö್ಯವಹಿಸು.
تەفسیرە عەرەبیەکان:
اِذْ قَالَ الْحَوَارِیُّوْنَ یٰعِیْسَی ابْنَ مَرْیَمَ هَلْ یَسْتَطِیْعُ رَبُّكَ اَنْ یُّنَزِّلَ عَلَیْنَا مَآىِٕدَةً مِّنَ السَّمَآءِ ؕ— قَالَ اتَّقُوا اللّٰهَ اِنْ كُنْتُمْ مُّؤْمِنِیْنَ ۟
ಹವಾರಿಗಳು ಹೇಳಿದ ಸಂದರ್ಭವು ಗಮನಾರ್ಹವಾಗಿದೆ: ಓ ಮರ್ಯಮರ ಪುತ್ರನಾದ ಈಸಾ, ನಿಮ್ಮ ಪ್ರಭುವಿಗೆ ಆಕಾಶದಿಂದ ನಮ್ಮ ಮೇಲೆ ಒಂದು ಭಕ್ಷö್ಯ ಹರಿವಾಣವನ್ನು ಇಳಿಸಿಕೊಡಲು ಸಾಧ್ಯವಿದೆಯೇ? ಅವರು ಹೇಳಿದರು: ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
تەفسیرە عەرەبیەکان:
قَالُوْا نُرِیْدُ اَنْ نَّاْكُلَ مِنْهَا وَتَطْمَىِٕنَّ قُلُوْبُنَا وَنَعْلَمَ اَنْ قَدْ صَدَقْتَنَا وَنَكُوْنَ عَلَیْهَا مِنَ الشّٰهِدِیْنَ ۟
ಅವರು ಹೇಳಿದರು: ನಾವು ಅದರಿಂದ ತಿನ್ನಲು ಮತ್ತು ನಮ್ಮ ಹೃದಯಗಳಿಗೆ ಸಮಾಧಾನ ಸಿಗಲು ಮತ್ತು ನೀವು ನಮ್ಮೊಂದಿಗೆ ಹೇಳಿದ್ದು ಸತ್ಯವಾಗಿತ್ತೆಂದು ನಮಗೆ ಮನವರಿಕೆಯಾಗಲು ಮತ್ತು ನಾವು ಸಾಕ್ಷö್ಯವಹಿಸುವವರೊಂದಿಗೆ ಸೇರಲು ಬಯಸುತ್ತೇವೆ.
تەفسیرە عەرەبیەکان:
 
وه‌رگێڕانی ماناكان سوره‌تی: المائدة
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری - پێڕستی وه‌رگێڕاوه‌كان

وەرگێڕان: شێخ بەشیر مەیسوری. پەرەیپێدراوە بە سەرپەرشتیاری ناوەندی ڕواد بۆ وەرگێڕان.

داخستن