Check out the new design

وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری * - پێڕستی وه‌رگێڕاوه‌كان


وه‌رگێڕانی ماناكان سوره‌تی: المائدة   ئایه‌تی:
یٰۤاَیُّهَا الَّذِیْنَ اٰمَنُوْۤا اِذَا قُمْتُمْ اِلَی الصَّلٰوةِ فَاغْسِلُوْا وُجُوْهَكُمْ وَاَیْدِیَكُمْ اِلَی الْمَرَافِقِ وَامْسَحُوْا بِرُءُوْسِكُمْ وَاَرْجُلَكُمْ اِلَی الْكَعْبَیْنِ ؕ— وَاِنْ كُنْتُمْ جُنُبًا فَاطَّهَّرُوْا ؕ— وَاِنْ كُنْتُمْ مَّرْضٰۤی اَوْ عَلٰی سَفَرٍ اَوْ جَآءَ اَحَدٌ مِّنْكُمْ مِّنَ الْغَآىِٕطِ اَوْ لٰمَسْتُمُ النِّسَآءَ فَلَمْ تَجِدُوْا مَآءً فَتَیَمَّمُوْا صَعِیْدًا طَیِّبًا فَامْسَحُوْا بِوُجُوْهِكُمْ وَاَیْدِیْكُمْ مِّنْهُ ؕ— مَا یُرِیْدُ اللّٰهُ لِیَجْعَلَ عَلَیْكُمْ مِّنْ حَرَجٍ وَّلٰكِنْ یُّرِیْدُ لِیُطَهِّرَكُمْ وَلِیُتِمَّ نِعْمَتَهٗ عَلَیْكُمْ لَعَلَّكُمْ تَشْكُرُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ನಮಾಝ್‌ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಕೈಗಳನ್ನು ತೊಳೆಯಿರಿ. ನಿಮ್ಮ ತಲೆಗಳನ್ನು (ಕೈಗಳನ್ನು ವದ್ದೆ ಮಾಡಿ) ಸವರಿರಿ ಮತ್ತು ಕಾಲುಗಳನ್ನು ಮಣಿಗಂಟುಗಳವರೆಗೆ ತೊಳೆಯಿರಿ. ನೀವು ಜನಾಬತ್‌ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿರಿ. ಮತ್ತು ನೀವು ರೋಗಿಗಳೋ, ಪ್ರಯಾಣಿಕರೋ ಆಗಿದ್ದು, ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಭೋಗ ಮಾಡಿದರೆ ಮತ್ತು ನಿಮಗೆ ನೀರು ದೊರಕದಿದ್ದರೆ ಶುದ್ಧವಾದ ಮಣ್ಣಿನಿಂದ ತಯಮ್ಮುಮ್ ಮಾಡಿರಿ. (ಅಂದರೆ ನಿಮ್ಮ ಹಸ್ತಗಳನ್ನು ಮಣ್ಣಿನ ಮೇಲೆ ಬಡಿದು) ಅದನ್ನು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿರಿ. ನಿಮ್ಮ ಮೇಲೆ ಯಾವುದೇ ರೀತಿಯ ಸಂಕಷ್ಟವನ್ನುAಟು ಮಾಡಲು ಅಲ್ಲಾಹನು ಇಚ್ಛಿಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ದಯಪಾಲಿಸಲು ಇಚ್ಛಿಸುತ್ತಾನೆ. ಇದು ನೀವು ಕೃತಜ್ಞತೆ ಸಲ್ಲಿಸಲೆಂದಾಗಿದೆ.
تەفسیرە عەرەبیەکان:
وَاذْكُرُوْا نِعْمَةَ اللّٰهِ عَلَیْكُمْ وَمِیْثَاقَهُ الَّذِیْ وَاثَقَكُمْ بِهٖۤ ۙ— اِذْ قُلْتُمْ سَمِعْنَا وَاَطَعْنَا ؗ— وَاتَّقُوا اللّٰهَ ؕ— اِنَّ اللّٰهَ عَلِیْمٌۢ بِذَاتِ الصُّدُوْرِ ۟
ಅಲ್ಲಾಹನು ನಿಮ್ಮ ಮೇಲೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. 'ನಾವು ಆಲಿಸಿದೆವು ಮತ್ತು ಅನುಸರಿಸಿದೆವು' ಎಂದು ನೀವು ಹೇಳಿದ ಸಂದರ್ಭದಲ್ಲಿ ಅಲ್ಲಾಹನು ನಿಮ್ಮೊಂದಿಗೆ ಪಡೆದ ದೃಢವಾದ ಕರಾರನ್ನು ಸ್ಮರಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಹೃದಯಗಳ ರಹಸ್ಯಗಳನ್ನು ಅರಿಯುವವನಾಗಿದ್ದಾನೆ.
تەفسیرە عەرەبیەکان:
یٰۤاَیُّهَا الَّذِیْنَ اٰمَنُوْا كُوْنُوْا قَوّٰمِیْنَ لِلّٰهِ شُهَدَآءَ بِالْقِسْطِ ؗ— وَلَا یَجْرِمَنَّكُمْ شَنَاٰنُ قَوْمٍ عَلٰۤی اَلَّا تَعْدِلُوْا ؕ— اِعْدِلُوْا ۫— هُوَ اَقْرَبُ لِلتَّقْوٰی ؗ— وَاتَّقُوا اللّٰهَ ؕ— اِنَّ اللّٰهَ خَبِیْرٌ بِمَا تَعْمَلُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೋಸ್ಕರ ಸತ್ಯದಲ್ಲಿ ನೆಲೆನಿಲ್ಲಿರಿ. ನ್ಯಾಯದೊಂದಿಗೆ ಸಾಕ್ಷಿವಹಿಸುವವರಾಗಿರಿ. ಯಾವುದೇ ಸಮುದಾಯದೊಂದಿಗಿನ ವೈರತ್ವವು ನಿಮ್ಮನ್ನು ಅನ್ಯಾಯಕ್ಕೆ ಪ್ರೇರೇಪಿಸದಿರಲಿ. ನೀವು ನ್ಯಾಯವನ್ನು ಪಾಲಿಸಿರಿ. ಇದೇ ಭಯಭಕ್ತಿಗೆ ಅತೀ ಸಮೀಪವಾಗಿದೆ,. ಖಂಡಿತವಾಗಿಯು ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಅರಿವುಳ್ಳವನಾಗಿದ್ದಾನೆ.
تەفسیرە عەرەبیەکان:
وَعَدَ اللّٰهُ الَّذِیْنَ اٰمَنُوْا وَعَمِلُوا الصّٰلِحٰتِ ۙ— لَهُمْ مَّغْفِرَةٌ وَّاَجْرٌ عَظِیْمٌ ۟
ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರಿಗೆ ಪಾಪವಿಮೋಚನೆ ಹಾಗೂ ಮಹಾ ಪ್ರತಿಫಲವಿದೆಯೆಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ.
تەفسیرە عەرەبیەکان:
 
وه‌رگێڕانی ماناكان سوره‌تی: المائدة
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری - پێڕستی وه‌رگێڕاوه‌كان

وەرگێڕان: شێخ بەشیر مەیسوری. پەرەیپێدراوە بە سەرپەرشتیاری ناوەندی ڕواد بۆ وەرگێڕان.

داخستن