Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: അൻആം   ആയത്ത്:
وَقَالُوْا هٰذِهٖۤ اَنْعَامٌ وَّحَرْثٌ حِجْرٌ ۖۗ— لَّا یَطْعَمُهَاۤ اِلَّا مَنْ نَّشَآءُ بِزَعْمِهِمْ وَاَنْعَامٌ حُرِّمَتْ ظُهُوْرُهَا وَاَنْعَامٌ لَّا یَذْكُرُوْنَ اسْمَ اللّٰهِ عَلَیْهَا افْتِرَآءً عَلَیْهِ ؕ— سَیَجْزِیْهِمْ بِمَا كَانُوْا یَفْتَرُوْنَ ۟
ಇವು ನಿಷೇಧಿಸಲಾದ ಜಾನುವಾರುಗಳು ಮತ್ತು ಕೃಷಿಗಳು ಇವುಗಳನ್ನು ನಾವು ಇಚ್ಛಿಸುವವರ ಹೊರತು ಇನ್ನಾರೂ ತಿನ್ನುವಂತಿಲ್ಲ ಎಂದು ಅವರು ತಮ್ಮ ಸ್ವೇಚ್ಛೆಯಂತೆ ಹೇಳುತ್ತಾರೆ. ಮತ್ತು ಕೆಲವು ಜಾನುವಾರುಗಳ ಮೇಲೆ ಸವಾರಿ ಮಾಡುವುದನ್ನು ನಿಷಿದ್ಧಗೊಳಿಸಲಾಗಿದೆ ಮತ್ತು ಅಲ್ಲಾಹನ ನಾಮವನ್ನು ಉಚ್ಛರಿಸಿದ ಕೆಲವು ಜಾನುವಾರುಗಳೂ ಇವೆ. ಇವೆಲ್ಲವೂ ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿರುವುದಾಗಿದೆ. ಶೀಘ್ರವೇ ಅಲ್ಲಾಹನು ಅವರು ಮಾಡಿರುವುದಕ್ಕೆ ತಕ್ಕ ಪ್ರತಿಫಲವನ್ನು ಅವರಿಗೆ ನೀಡಲಿರುವನು.
അറബി ഖുർആൻ വിവരണങ്ങൾ:
وَقَالُوْا مَا فِیْ بُطُوْنِ هٰذِهِ الْاَنْعَامِ خَالِصَةٌ لِّذُكُوْرِنَا وَمُحَرَّمٌ عَلٰۤی اَزْوَاجِنَا ۚ— وَاِنْ یَّكُنْ مَّیْتَةً فَهُمْ فِیْهِ شُرَكَآءُ ؕ— سَیَجْزِیْهِمْ وَصْفَهُمْ ؕ— اِنَّهٗ حَكِیْمٌ عَلِیْمٌ ۟
ಮತ್ತು ಅವರು ಹೇಳುತ್ತಾರೆ: ಈ ಜಾನುವಾರುಗಳ ಗರ್ಭಾಶಯಗಳಲ್ಲಿರುವುದು ನಮ್ಮ ಪೈಕಿ ಪುರುಷರಿಗೆ ಮಾತ್ರವಿರುವುದು ಮತ್ತು ಅವು ನಮ್ಮ ಸ್ತಿçÃಯರಿಗೆ ನಿಷಿದ್ಧವಾಗಿದೆ. ಅದು ಸತ್ತದ್ದಾಗಿದ್ದರೆ ಅದರಲ್ಲಿ ಅವರೆಲ್ಲರೂ ಪಾಲುದಾರರಾಗುವರು. ಅವರ ಈ ಮಿಥ್ಯವಾದದ ಶಿಕ್ಷೆಯನ್ನು ಅವನು ಸದ್ಯದಲ್ಲೇ ಅವರಿಗೆ ನೀಡುವನು. ನಿಸ್ಸಂಶಯವಾಗಿಯು ಅವನು ಯುಕ್ತಿಪೂರ್ಣನೂ, ಮಹಾ ಜ್ಞಾನಿಯೂ ಆಗಿದ್ದಾನೆ.
അറബി ഖുർആൻ വിവരണങ്ങൾ:
قَدْ خَسِرَ الَّذِیْنَ قَتَلُوْۤا اَوْلَادَهُمْ سَفَهًا بِغَیْرِ عِلْمٍ وَّحَرَّمُوْا مَا رَزَقَهُمُ اللّٰهُ افْتِرَآءً عَلَی اللّٰهِ ؕ— قَدْ ضَلُّوْا وَمَا كَانُوْا مُهْتَدِیْنَ ۟۠
ವಾಸ್ತವದಲ್ಲಿ ತಮ್ಮ ಮಕ್ಕಳನ್ನು ಯಾವುದೇ ಜ್ಞಾನವಿಲ್ಲದೆ ಮೂರ್ಖತನದಿಂದ ಕೊಂದವರು ಮತ್ತು ಅಲ್ಲಾಹನು ಅವರಿಗೆ ನೀಡಿದ್ದನ್ನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿ ನಿಷಿದ್ಧಗೊಳಿಸಿದವರು ಖಂಡಿತವಾಗಿಯು ನಷ್ಟದಲ್ಲಿ ಬಿದ್ದು ಬಿಟ್ಟರು ಮತ್ತು ಅವರು ಮಾರ್ಗ ಭ್ರಷ್ಟರಾದರು. ಅವರು ಸನ್ಮಾರ್ಗ ಹೊಂದಿದವರಾಗಲಿಲ್ಲ.
അറബി ഖുർആൻ വിവരണങ്ങൾ:
وَهُوَ الَّذِیْۤ اَنْشَاَ جَنّٰتٍ مَّعْرُوْشٰتٍ وَّغَیْرَ مَعْرُوْشٰتٍ وَّالنَّخْلَ وَالزَّرْعَ مُخْتَلِفًا اُكُلُهٗ وَالزَّیْتُوْنَ وَالرُّمَّانَ مُتَشَابِهًا وَّغَیْرَ مُتَشَابِهٍ ؕ— كُلُوْا مِنْ ثَمَرِهٖۤ اِذَاۤ اَثْمَرَ وَاٰتُوْا حَقَّهٗ یَوْمَ حَصَادِهٖ ۖؗ— وَلَا تُسْرِفُوْا ؕ— اِنَّهٗ لَا یُحِبُّ الْمُسْرِفِیْنَ ۟ۙ
ಚಪ್ಪರಗಳಲ್ಲಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು ಮತ್ತು ಖರ್ಜೂರದ ಮರಗಳನ್ನೂ, ವೈವಿದ್ಯಮಯ ಫಲಗಳಿರುವ ಹೊಲಗಳನ್ನೂ, ಒಂದಕ್ಕೊAದು ಸಾದೃಶ್ಯವಿರುವಂತಹ ಸಾದೃಶ್ಯವಿಲ್ಲದಂತಹ ಓಲಿವ್ ಮತ್ತು ದಾಳಿಂಬೆಗಳನ್ನು ಉಂಟು ಮಾಡಿದವನು ಅವನೇ, ಫಲ ಬಿಡುವಾಗ ಅವುಗಳ ಫಲಗಳನ್ನು ತಿನ್ನಿರಿ ಮತ್ತು ಅವುಗಳ ಫಸಲುಗಳನ್ನು ಕೊಯ್ಯುವ ದಿನ ಅವುಗಳ ಹಕ್ಕನ್ನು(ಕಡ್ಡಾಯ ದಾನ) ನೀಡಿರಿ ಮತ್ತು ನೀವು ದುರ್ವ್ಯಯ ಮಾಡಬೇಡಿರಿ. ಖಂಡಿತವಾಗಿಯು ಅಲ್ಲಾಹನು ದುರ್ವ್ಯಯ ಮಾಡುವವರನ್ನು ಇಷ್ಟಪಡುವುದಿಲ್ಲ.
അറബി ഖുർആൻ വിവരണങ്ങൾ:
وَمِنَ الْاَنْعَامِ حَمُوْلَةً وَّفَرْشًا ؕ— كُلُوْا مِمَّا رَزَقَكُمُ اللّٰهُ وَلَا تَتَّبِعُوْا خُطُوٰتِ الشَّیْطٰنِ ؕ— اِنَّهٗ لَكُمْ عَدُوٌّ مُّبِیْنٌ ۟ۙ
ಮತ್ತು ಜಾನುವಾರುಗಳ ಪೈಕಿ ಭಾರ ಹೊರುವವುಗಳನ್ನೂ, ಗಿಡ್ಡ ಕಾಲುಗಳಿರುವವುಗಳನ್ನೂ (ಸೃಷ್ಟಿಸಿದ್ದಾನೆ) ಅಲ್ಲಾಹನು ನಿಮಗೆ ನೀಡಿರುವುದನ್ನು ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ನಿಸ್ಸಂದೇಹವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: അൻആം
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക