Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: അൻആം   ആയത്ത്:
وَكَذٰلِكَ فَتَنَّا بَعْضَهُمْ بِبَعْضٍ لِّیَقُوْلُوْۤا اَهٰۤؤُلَآءِ مَنَّ اللّٰهُ عَلَیْهِمْ مِّنْ بَیْنِنَا ؕ— اَلَیْسَ اللّٰهُ بِاَعْلَمَ بِالشّٰكِرِیْنَ ۟
ಹೀಗೆ ನಾವು ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷೆಗೊಳಪಡಿಸಿದೆವು. ಇದು ನಮ್ಮೆಲ್ಲರ ನಡುವೆ ಅಲ್ಲಾಹನು ಅನುಗ್ರಹಿಸಿದ್ದು ಇವರ ಮೇಲೆಯೇ? ಎಂದು ಸರದಾರರು ಹೇಳಲೆಂದಾಗಿದೆ. ಕೃತಜ್ಞತೆ ತೋರುವವರನ್ನು ಅಲ್ಲಾಹನು ಬಹಳ ಚೆನ್ನಾಗಿ ಅರಿಯುವನಲ್ಲವೇ?
അറബി ഖുർആൻ വിവരണങ്ങൾ:
وَاِذَا جَآءَكَ الَّذِیْنَ یُؤْمِنُوْنَ بِاٰیٰتِنَا فَقُلْ سَلٰمٌ عَلَیْكُمْ كَتَبَ رَبُّكُمْ عَلٰی نَفْسِهِ الرَّحْمَةَ ۙ— اَنَّهٗ مَنْ عَمِلَ مِنْكُمْ سُوْٓءًا بِجَهَالَةٍ ثُمَّ تَابَ مِنْ بَعْدِهٖ وَاَصْلَحَ ۙ— فَاَنَّهٗ غَفُوْرٌ رَّحِیْمٌ ۟
ಮತ್ತು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: ನಿಮ್ಮ ಮೇಲೆ ಶಾಂತಿಯಿರಲಿ. ನಿಮ್ಮ ಪ್ರಭು ಕರುಣೆತೋರುವುದನ್ನು ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ಅಂದರೆ ನಿಮ್ಮ ಪೈಕಿ ಯಾರಾದರೂ ಅಜ್ಞಾನದಿಂದ ದುಷ್ಕೃತ್ಯವನ್ನು ಮಾಡಿದರೆ, ತರುವಾಯ ಅವನು ಅದರ ಬಳಿಕ ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ಅಲ್ಲಾಹನು ಅತ್ಯಧಿಕ ಕ್ಷಮಿಸುವವನು, ಕರುಣಾನಿಧಿÀಯು ಆಗಿದ್ದಾನೆ.
അറബി ഖുർആൻ വിവരണങ്ങൾ:
وَكَذٰلِكَ نُفَصِّلُ الْاٰیٰتِ وَلِتَسْتَبِیْنَ سَبِیْلُ الْمُجْرِمِیْنَ ۟۠
ಹೀಗೆ ಅಪರಾಧಿಗಳ ಮಾರ್ಗವು (ವರ್ತನೆ) ಬಹಿರಂಗವಾಗಲೆAದು ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
അറബി ഖുർആൻ വിവരണങ്ങൾ:
قُلْ اِنِّیْ نُهِیْتُ اَنْ اَعْبُدَ الَّذِیْنَ تَدْعُوْنَ مِنْ دُوْنِ اللّٰهِ ؕ— قُلْ لَّاۤ اَتَّبِعُ اَهْوَآءَكُمْ ۙ— قَدْ ضَلَلْتُ اِذًا وَّمَاۤ اَنَا مِنَ الْمُهْتَدِیْنَ ۟
ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವರನ್ನು ಆರಾಧಿಸುವುದನ್ನು ನನಗೆ ನಿಷೇಧಿಸಲಾಗಿದೆ. ಹೇಳಿರಿ: ನಾನು ನಿಮ್ಮ ಸ್ವೇಚ್ಛೆಗಳನ್ನು ಅನುಸರಿಸುವುದಿಲ್ಲ. ಹಾಗೆ ಮಾಡಿದರೆ ನಾನು ಮಾರ್ಗ ಭ್ರಷ್ಟನಾಗುವೆನು ಮತ್ತು ಸನ್ಮಾರ್ಗ ಪ್ರಾಪ್ತರಲ್ಲಿ ಸೇರಿದವನಾಗಲಾರನು.
അറബി ഖുർആൻ വിവരണങ്ങൾ:
قُلْ اِنِّیْ عَلٰی بَیِّنَةٍ مِّنْ رَّبِّیْ وَكَذَّبْتُمْ بِهٖ ؕ— مَا عِنْدِیْ مَا تَسْتَعْجِلُوْنَ بِهٖ ؕ— اِنِ الْحُكْمُ اِلَّا لِلّٰهِ ؕ— یَقُصُّ الْحَقَّ وَهُوَ خَیْرُ الْفٰصِلِیْنَ ۟
ಹೇಳಿರಿ: ಖಂಡಿತವಾಗಿಯು ನಾನು ನನ್ನ ಪ್ರಭುವಿನ ಕಡೆಯ ಸ್ಪಷ್ಟ ಆಧಾರದ ಮೇಲಿರುವೆನು. ನೀವದನ್ನು ನಿರಾಕರಿಸುವಿರಿ. ನೀವು ಯಾವುದಕ್ಕಾಗಿ (ಯಾತನೆಗಾಗಿ) ಆತುರಪಡುತ್ತೀರೋ ಅದು ನನ್ನ ಬಳಿಯಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಮಾತ್ರವಿದೆ. ಅವನು ಸತ್ಯವನ್ನು ವಿವರಿಸಿ ಕೊಡುತ್ತಾನೆ. ಮತ್ತು ಅವನು ತೀರ್ಪು ನೀಡವವರಲ್ಲಿ ಅತ್ಯುತ್ತಮನಾಗಿದ್ದಾನೆ.
അറബി ഖുർആൻ വിവരണങ്ങൾ:
قُلْ لَّوْ اَنَّ عِنْدِیْ مَا تَسْتَعْجِلُوْنَ بِهٖ لَقُضِیَ الْاَمْرُ بَیْنِیْ وَبَیْنَكُمْ ؕ— وَاللّٰهُ اَعْلَمُ بِالظّٰلِمِیْنَ ۟
ಹೇಳಿರಿ: ನೀವು ಆತುರಪಡುತ್ತಿರುವ ಆ ಯಾತನೆಯು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ಈಗಾಗಲೇ ತೀರ್ಪು ಆಗಿಬಿಡುತ್ತಿತ್ತು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
അറബി ഖുർആൻ വിവരണങ്ങൾ:
وَعِنْدَهٗ مَفَاتِحُ الْغَیْبِ لَا یَعْلَمُهَاۤ اِلَّا هُوَ ؕ— وَیَعْلَمُ مَا فِی الْبَرِّ وَالْبَحْرِ ؕ— وَمَا تَسْقُطُ مِنْ وَّرَقَةٍ اِلَّا یَعْلَمُهَا وَلَا حَبَّةٍ فِیْ ظُلُمٰتِ الْاَرْضِ وَلَا رَطْبٍ وَّلَا یَابِسٍ اِلَّا فِیْ كِتٰبٍ مُّبِیْنٍ ۟
ಮತ್ತು ಅಗೋಚರದ ಕೀಲಿ ಕೈಗಳು ಅಲ್ಲಾಹನ ಬಳಿ ಮಾತ್ರವಿದೆ. ಅಲ್ಲಾಹನ ಹೊರತು ಇನ್ನಾರೂ ಅವುಗಳನ್ನು ಅರಿಯಲಾರರು. ನೆಲ, ಜಲದಲ್ಲಿರುವ ಸಕಲ ವಸ್ತುಗಳನ್ನು ಅವನು ಅರಿಯುತ್ತಾನೆ. ಅವನು ಅರಿಯದೆ ಒಂದು ಎಲೆಯು ಉದುರದು ಮತ್ತು ಭೂಮಿಯ ಅಂಧಕಾರಗಳಲ್ಲಿ ಹುದುಗಿರುವ ಒಂದು ಧಾನ್ಯವಾಗಿರಿಲಿ, ಹಸಿಯೋ ಒಣವೋ ಆಗಿರುವ ವಸ್ತುವಾಗಿರಲಿ ಅವನ ಬಳಿ ಇರುವ ಸ್ಪಷ್ಟವಾದ ಒಂದು ಗ್ರಂಥದಲ್ಲಿ ಉಲ್ಲೇಖವಿದೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: അൻആം
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക