Check out the new design

पवित्र कुरअानको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरः: इस्रा   श्लोक:
وَمَا مَنَعَنَاۤ اَنْ نُّرْسِلَ بِالْاٰیٰتِ اِلَّاۤ اَنْ كَذَّبَ بِهَا الْاَوَّلُوْنَ ؕ— وَاٰتَیْنَا ثَمُوْدَ النَّاقَةَ مُبْصِرَةً فَظَلَمُوْا بِهَا ؕ— وَمَا نُرْسِلُ بِالْاٰیٰتِ اِلَّا تَخْوِیْفًا ۟
ದೃಷ್ಟಾಂತಗಳನ್ನು ಕಳುಹಿಸುವುದರಿಂದ ನಮ್ಮನ್ನು ತಡೆದಿರುವುದು ಕೇವಲ ಅವುಗಳನ್ನು ಪೂರ್ವಜರು ಸುಳ್ಳಾಗಿಸಿಬಿಟ್ಟಿದ್ದರೆಂಬ ಸಂಗತಿಯಾಗಿದೆ ನಾವು ಸಮೂದ್ ಜನಾಂಗಕ್ಕೆ ಸ್ಪಷ್ಟ ದೃಷ್ಟಾಂತವಾಗಿ ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರೊಂದಿಗೆ ಅಕ್ರಮವೆಸಗಿದರು ಮತ್ತು ನಾವು ಭಯ ಹುಟ್ಟಿಸಲೆಂದೇ ದೃಷ್ಟಾಂತಗಳನ್ನು ಕಳುಹಿಸುತ್ತೇವೆ.
अरबी व्याख्याहरू:
وَاِذْ قُلْنَا لَكَ اِنَّ رَبَّكَ اَحَاطَ بِالنَّاسِ ؕ— وَمَا جَعَلْنَا الرُّءْیَا الَّتِیْۤ اَرَیْنٰكَ اِلَّا فِتْنَةً لِّلنَّاسِ وَالشَّجَرَةَ الْمَلْعُوْنَةَ فِی الْقُرْاٰنِ ؕ— وَنُخَوِّفُهُمْ ۙ— فَمَا یَزِیْدُهُمْ اِلَّا طُغْیَانًا كَبِیْرًا ۟۠
(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮ ಪ್ರಭು ಜನರನ್ನು ಸುತ್ತುವರೆದಿದ್ದಾನೆ ಎಂದು ನಾವು ನಿಮಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿದಂತಹ ಆ ದೃಶ್ಯವು (ಮೇರಾಜ್‌ನ್ ರಾತ್ರಿ) ಜನರಿಗೆ ಸ್ಪಷ್ಟ ಪರೀಕ್ಷೆಯೇ ಆಗಿತ್ತು ಮತ್ತು ಕುರ್‌ಆನಿನಲ್ಲಿ ಶಪಿಸಲ್ಪಟ್ಟ ಆ ವೃಕ್ಷವು ಸಹ. ನಾವು ಅವರನ್ನು ಹೆದರಿಸುತ್ತಲೇ ಇದ್ದೇವೆ. ಆದರೆ ಅದು ಅವರಿಗೆ ಮಹಾ ಅತಿಕ್ರಮವನ್ನೇ ಹೆಚ್ಚಿಸುತ್ತಿದೆ.
अरबी व्याख्याहरू:
وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— قَالَ ءَاَسْجُدُ لِمَنْ خَلَقْتَ طِیْنًا ۟ۚ
ನಾವು ಮಲಕ್‌ಗಳಿಗೆ: ನೀವು ಆದಮನಿಗೆ ಸಾಷ್ಟಾಂಗವೆರಗಿರಿ ಎಂದು ಆದೇಶ ನೀಡಿದ ಸಂದರ್ಭ ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ಹೇಳಿದನು: ನೀನು ಮಣ್ಣಿನಿಂದ ಸೃಷ್ಟಿಸಿದವನಿಗೆ ನಾವು ಸಾಷ್ಟಾಂಗವೆರಗಬೇಕೇ?
अरबी व्याख्याहरू:
قَالَ اَرَءَیْتَكَ هٰذَا الَّذِیْ كَرَّمْتَ عَلَیَّ ؗ— لَىِٕنْ اَخَّرْتَنِ اِلٰی یَوْمِ الْقِیٰمَةِ لَاَحْتَنِكَنَّ ذُرِّیَّتَهٗۤ اِلَّا قَلِیْلًا ۟
ಮತ್ತು ಹೇಳಿದನು ನೋಡು, ನೀನು ನನ್ನ ಮೇಲೆ ಶ್ರೇಷ್ಟತೆಯನ್ನು ನೀಡಿದ ವ್ಯಕ್ತಿ ಇವನಾಗಿದ್ದಾನೆ. ಆದರೆ ನೀನೇನಾದರೂ ನನಗೆ ಪ್ರಳಯ ದಿನದವರೆಗೆ ಕಾಲಾವಕಾಶ ನೀಡಿದರೆ ನಾನು ಕೆಲವರ ಹೊರತು ಇಡೀ ಅವನ ಸಂತತಿಯನ್ನು ಬೇರು ಸಹಿತ ಕಿತ್ತೆಸೆಯುವೆನು.
अरबी व्याख्याहरू:
قَالَ اذْهَبْ فَمَنْ تَبِعَكَ مِنْهُمْ فَاِنَّ جَهَنَّمَ جَزَآؤُكُمْ جَزَآءً مَّوْفُوْرًا ۟
ಅಲ್ಲಾಹನು ಹೇಳಿದನು: ತೊಲಗು ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾನೋ ನರಕವು ನಿಮ್ಮೆಲ್ಲರ ಪ್ರತಿಫಲವಾಗಿರುವುದು. ಅದು ಪರಿಪೂರ್ಣ ಪ್ರತಿಫಲವಾಗಿದೆ.
अरबी व्याख्याहरू:
وَاسْتَفْزِزْ مَنِ اسْتَطَعْتَ مِنْهُمْ بِصَوْتِكَ وَاَجْلِبْ عَلَیْهِمْ بِخَیْلِكَ وَرَجِلِكَ وَشَارِكْهُمْ فِی الْاَمْوَالِ وَالْاَوْلَادِ وَعِدْهُمْ ؕ— وَمَا یَعِدُهُمُ الشَّیْطٰنُ اِلَّا غُرُوْرًا ۟
ಅವರಲ್ಲಿ ನಿನಗೆ ಸಾಧ್ಯವಿರುವವರನ್ನೆಲ್ಲಾ ನಿನ್ನ ಸ್ವರದಿಂದ ದಾರಿಗೆಡಿಸು. ಅವರ ಮೇಲೆ ನಿನ್ನ ಸವಾರರನ್ನು ಹಾಗೂ ಕಾಲಾಳುಗಳನ್ನು ಎರಗಿಸು ಮತ್ತು ಅವರ ಸಂಪತ್ತು ಹಾಗೂ ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು ಮತ್ತು ಅವರಿಗೆ ವಾಗ್ದಾನಗಳನ್ನು ನೀಡು, ಶೈತಾನನು ಅವರಿಗೆ ವಂಚನೆಯ ಹೊರತು ಬೇರಾವ ವಾಗ್ದಾನವನ್ನು ಮಾಡಲಾರ.
अरबी व्याख्याहरू:
اِنَّ عِبَادِیْ لَیْسَ لَكَ عَلَیْهِمْ سُلْطٰنٌ ؕ— وَكَفٰی بِرَبِّكَ وَكِیْلًا ۟
ನಿಶ್ಚಯವಾಗಿಯು ನನ್ನ ನಿಷ್ಠಾವಂತ ದಾಸರ ಮೇಲೆ ನಿನ್ನ ಯಾವುದೇ ಅಧಿಕಾರವಿರದು. ಕಾರ್ಯಸಾಧಕನಾಗಿ ನಿನ್ನ ಪ್ರಭುವೇ ಸಾಕು.
अरबी व्याख्याहरू:
رَبُّكُمُ الَّذِیْ یُزْجِیْ لَكُمُ الْفُلْكَ فِی الْبَحْرِ لِتَبْتَغُوْا مِنْ فَضْلِهٖ ؕ— اِنَّهٗ كَانَ بِكُمْ رَحِیْمًا ۟
ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು ಖಂಡಿತವಾಗಿಯೂ ಅವನು ನಿಮ್ಮ ಮೇಲೆ ತುಂಬಾ ಕರುಣೆವುಳ್ಳವನಾಗಿದ್ದಾನೆ.
अरबी व्याख्याहरू:
 
अर्थको अनुवाद सूरः: इस्रा
अध्यायहरूको (सूरःहरूको) सूची رقم الصفحة
 
पवित्र कुरअानको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुस्