Check out the new design

पवित्र कुरअानको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरः: बकरः   श्लोक:
اَلَمْ تَرَ اِلَی الْمَلَاِ مِنْ بَنِیْۤ اِسْرَآءِیْلَ مِنْ بَعْدِ مُوْسٰی ۘ— اِذْ قَالُوْا لِنَبِیٍّ لَّهُمُ ابْعَثْ لَنَا مَلِكًا نُّقَاتِلْ فِیْ سَبِیْلِ اللّٰهِ ؕ— قَالَ هَلْ عَسَیْتُمْ اِنْ كُتِبَ عَلَیْكُمُ الْقِتَالُ اَلَّا تُقَاتِلُوْا ؕ— قَالُوْا وَمَا لَنَاۤ اَلَّا نُقَاتِلَ فِیْ سَبِیْلِ اللّٰهِ وَقَدْ اُخْرِجْنَا مِنْ دِیَارِنَا وَاَبْنَآىِٕنَا ؕ— فَلَمَّا كُتِبَ عَلَیْهِمُ الْقِتَالُ تَوَلَّوْا اِلَّا قَلِیْلًا مِّنْهُمْ ؕ— وَاللّٰهُ عَلِیْمٌۢ بِالظّٰلِمِیْنَ ۟
ಮೂಸಾರ ನಂತರ ಇಸ್ರಾಯೀಲ್ ಸಂತತಿಗಳ ಒಂದು ಸಮೂಹದೆಡೆಗೆ ನೀವು ನೋಡಿಲ್ಲವೇ? ಅವರು ತಮ್ಮ ಸಂದೇಶವಾಹಕರಿಗೆ ಹೇಳಿದರು ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿಕ್ಕಾಗಿ ನೀವು ನಮಗಾಗಿ ಒಬ್ಬ ರಾಜನನ್ನು ನಿಯೋಗಿಸಿರಿ ಎಂದು ಹೇಳಿದ ಸಂದರ್ಭ. ಸಂದೇಶವಾಹಕರು ಹೇಳಿದರು; ನಿಮ್ಮ ಮೇಲೆ ಯುದ್ಧವು ಕಡ್ಡಾಯಗೊಳಿಸಿದಾಗ ನೀವು ಯುದ್ಧ ಮಾಡದಿರಲೂ ಸಾಧ್ಯತೆಯಿದೆ ಅವರು ಹೇಳಿದರು. ನಮ್ಮನ್ನು ನಮ್ಮ ಮನೆಗಳಿಂದ ಹಾಗೂ ನಮ್ಮ ಮಕ್ಕಳಿಂದ ದೂರ ಮಾಡಲಾಗಿರುವಾಗ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ನಮಗೇನಾಗಿದೆ. ಹಾಗೆಯೇ ಅವರ ಮೇಲೆ ಯುದ್ಧವು ಕಡ್ಡಾಯಗೊಳಿಸಿದಾಗ ಅವರಲ್ಲಿ ಅತ್ಯಲ್ಪ ಮಂದಿಯನ್ನು ಬಿಟ್ಟು ಉಳಿದವರೆಲ್ಲಾ ವಿಮುಖರಾಗಿಬಿಟ್ಟರು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.
अरबी व्याख्याहरू:
وَقَالَ لَهُمْ نَبِیُّهُمْ اِنَّ اللّٰهَ قَدْ بَعَثَ لَكُمْ طَالُوْتَ مَلِكًا ؕ— قَالُوْۤا اَنّٰی یَكُوْنُ لَهُ الْمُلْكُ عَلَیْنَا وَنَحْنُ اَحَقُّ بِالْمُلْكِ مِنْهُ وَلَمْ یُؤْتَ سَعَةً مِّنَ الْمَالِ ؕ— قَالَ اِنَّ اللّٰهَ اصْطَفٰىهُ عَلَیْكُمْ وَزَادَهٗ بَسْطَةً فِی الْعِلْمِ وَالْجِسْمِ ؕ— وَاللّٰهُ یُؤْتِیْ مُلْكَهٗ مَنْ یَّشَآءُ ؕ— وَاللّٰهُ وَاسِعٌ عَلِیْمٌ ۟
ಅವರೊಂದಿಗೆ ಅವರ ಪೈಗಂಬರರು ಹೇಳಿದರು; ಅಲ್ಲಾಹನು ತಾಲೂತರನ್ನು ನಿಮ್ಮ ರಾಜನಾಗಿ ನೇಮಿಸಿರುವನು. ಅವರು ಹೇಳಿದರು; ನಮ್ಮ ಮೇಲೆ ಅವನಿಗೆ ಆಡಳಿತ ಸಿಗುವುದಾದರೂ ಹೇಗೆ? ಆಡಳಿತಕ್ಕೆ ಅವನಿಗಿಂತ ಹೆಚ್ಚು ಯೋಗ್ಯರು ನಾವಾಗಿದ್ದೇವೆ ಮತ್ತು ಅವನ ಬಳಿ ಸಂಪತ್ತೂ ಇಲ್ಲ. ಪೈಗಂಬರರು ಹೇಳಿದರು; ಕೇಳಿರಿ, ಅಲ್ಲಾಹನು ಅವನನ್ನೇ ನಿಮ್ಮ ಮೇಲೆ ಆಯ್ಕೆ ಮಾಡಿರುವನು ಮತ್ತು ಅವನಿಗೆ ಅಪಾರ ಜ್ಞಾನ, ದೇಹದಾರ್ಢ್ಯವನ್ನು ನೀಡಲಾಗಿದೆ. ಮತ್ತು ಅಲ್ಲಾಹನು ತನ್ನ ಅಧಿಪತ್ಯವನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಅತಿ ವಿಶಾಲನೂ ಸರ್ವಜ್ಞಾನಿಯೂ ಆಗಿದ್ದಾನೆ.
अरबी व्याख्याहरू:
وَقَالَ لَهُمْ نَبِیُّهُمْ اِنَّ اٰیَةَ مُلْكِهٖۤ اَنْ یَّاْتِیَكُمُ التَّابُوْتُ فِیْهِ سَكِیْنَةٌ مِّنْ رَّبِّكُمْ وَبَقِیَّةٌ مِّمَّا تَرَكَ اٰلُ مُوْسٰی وَاٰلُ هٰرُوْنَ تَحْمِلُهُ الْمَلٰٓىِٕكَةُ ؕ— اِنَّ فِیْ ذٰلِكَ لَاٰیَةً لَّكُمْ اِنْ كُنْتُمْ مُّؤْمِنِیْنَ ۟۠
ಅನಂತರ ಅವರ ಪೈಗಂಬರರು ಅವರಿಗೆ ಹೇಳಿದರು; ಅವನ ಅಧಿಪತ್ಯದ ಸಂಕೇತವಾಗಿ ನಿಮ್ಮಲ್ಲಿಗೆ ದೂತರು ಒಂದು ಪೆಟ್ಟಿಗೆಯನ್ನು ಹೊತ್ತು ತರುವರು. ಅದರಲ್ಲಿ ನಿಮ್ಮ ಪ್ರಭುವಿನ ಕಡೆಯ ಮನಶಾಂತಿಯಿರುತ್ತದೆ. ಮತ್ತು ಮೂಸಾ ಹಾಗು ಹಾರೂನರ ಪರಿವಾರವು ಬಿಟ್ಟ ಅವಶೇಷಗಳೂ ಇವೆ. ನಿಸ್ಸಂಶಯವಾಗಿಯು ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇದು ನಿಮಗೆ ಸ್ಪಷ್ಟ ನಿದರ್ಶನವಾಗಿದೆ.
अरबी व्याख्याहरू:
 
अर्थको अनुवाद सूरः: बकरः
अध्यायहरूको (सूरःहरूको) सूची رقم الصفحة
 
पवित्र कुरअानको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुस्