Check out the new design

पवित्र कुरअानको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरः: फातिर   श्लोक:
وَمَا یَسْتَوِی الْاَعْمٰی وَالْبَصِیْرُ ۟ۙ
ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಲ್ಲ.
अरबी व्याख्याहरू:
وَلَا الظُّلُمٰتُ وَلَا النُّوْرُ ۟ۙ
ಅಂಧಕಾರಗಳು ಮತ್ತು ಪ್ರಕಾಶವೂ ಸಮಾನವಲ್ಲ.
अरबी व्याख्याहरू:
وَلَا الظِّلُّ وَلَا الْحَرُوْرُ ۟ۚ
ಮತ್ತು ನೆರಳು ಮತ್ತು ಬಿಸಿಲು ಸಮಾನವಾಗುವುದಿಲ್ಲ.
अरबी व्याख्याहरू:
وَمَا یَسْتَوِی الْاَحْیَآءُ وَلَا الْاَمْوَاتُ ؕ— اِنَّ اللّٰهَ یُسْمِعُ مَنْ یَّشَآءُ ۚ— وَمَاۤ اَنْتَ بِمُسْمِعٍ مَّنْ فِی الْقُبُوْرِ ۟
ಸಜೀವರೂ, ಮೃತರೂ ಸಮಾನರಲ್ಲ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ ಮತ್ತು ನೀವು ಗೋರಿಗಳಲ್ಲಿರುವವರಿಗೆ ಕೇಳಿಸಲಾರಿರಿ.
अरबी व्याख्याहरू:
اِنْ اَنْتَ اِلَّا نَذِیْرٌ ۟
ನೀವು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ.
अरबी व्याख्याहरू:
اِنَّاۤ اَرْسَلْنٰكَ بِالْحَقِّ بَشِیْرًا وَّنَذِیْرًا ؕ— وَاِنْ مِّنْ اُمَّةٍ اِلَّا خَلَا فِیْهَا نَذِیْرٌ ۟
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸತ್ಯದೊಂದಿಗೆ ಸುವಾರ್ತೆ ಕೊಡುವವರಾಗಿಯೂ, ಮುನ್ನೆಚ್ಚರಿಕೆ ನೀಡುವವರಾಗಿಯೂ ಕಳುಹಿಸಿರುತ್ತೇವೆ ಮತ್ತು ಯಾವೊಬ್ಬ ಮುನ್ನೆಚ್ಚರಿಕೆಗಾರನು ಬಂದಿರದ ಯಾವ ಸಮುದಾಯವೂ ಗತಿಸಿಲ್ಲ.
अरबी व्याख्याहरू:
وَاِنْ یُّكَذِّبُوْكَ فَقَدْ كَذَّبَ الَّذِیْنَ مِنْ قَبْلِهِمْ ۚ— جَآءَتْهُمْ رُسُلُهُمْ بِالْبَیِّنٰتِ وَبِالزُّبُرِ وَبِالْكِتٰبِ الْمُنِیْرِ ۟
ಇನ್ನು ಇವರು ನಿಮ್ಮನ್ನು ಸುಳ್ಳಾಗಿಸುವುದಾದರೆ ನಿಶ್ಚಯವಾಗಿಯೂ ಇವರಿಗಿಂತ ಮುಂಚಿನವರೂ ಸಹ ಸುಳ್ಳಾಗಿಸಿದ್ದಾರೆ. ಅವರೆಡೆಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳನ್ನು ಕಿರುಹೊತ್ತಿಗೆಗಳನ್ನು ಪ್ರಕಾಶ ಬೀರುವ ಗ್ರಂಥಗಳನ್ನು ತಂದಿದ್ದರು.
अरबी व्याख्याहरू:
ثُمَّ اَخَذْتُ الَّذِیْنَ كَفَرُوْا فَكَیْفَ كَانَ نَكِیْرِ ۟۠
ಅನಂತರ ನಾವು ಆ ಸತ್ಯನಿಷೇಧಿಗಳನ್ನು ಹಿಡಿದೆವು. ಆಗ ನನ್ನ ಶಿಕ್ಷೆಯು ಹೇಗಿತ್ತು ?
अरबी व्याख्याहरू:
اَلَمْ تَرَ اَنَّ اللّٰهَ اَنْزَلَ مِنَ السَّمَآءِ مَآءً ۚ— فَاَخْرَجْنَا بِهٖ ثَمَرٰتٍ مُّخْتَلِفًا اَلْوَانُهَا ؕ— وَمِنَ الْجِبَالِ جُدَدٌ بِیْضٌ وَّحُمْرٌ مُّخْتَلِفٌ اَلْوَانُهَا وَغَرَابِیْبُ سُوْدٌ ۟
ಅನಂತರ ನಾವು ಆ ಸತ್ಯನಿಷೇಧಿಗಳನ್ನು ಹಿಡಿದೆವು. ಆಗ ನನ್ನ ಶಿಕ್ಷೆಯು ಹೇಗಿತ್ತು ?
अरबी व्याख्याहरू:
وَمِنَ النَّاسِ وَالدَّوَآبِّ وَالْاَنْعَامِ مُخْتَلِفٌ اَلْوَانُهٗ كَذٰلِكَ ؕ— اِنَّمَا یَخْشَی اللّٰهَ مِنْ عِبَادِهِ الْعُلَمٰٓؤُا ؕ— اِنَّ اللّٰهَ عَزِیْزٌ غَفُوْرٌ ۟
ಇದೇರೀತಿ ಮನುಷ್ಯರಲ್ಲೂ ಪ್ರಾಣಿಗಳಲ್ಲೂ ಹಾಗೂ ಜಾನುವಾರುಗಳಲ್ಲೂ ವಿವಿಧ ಬಣ್ಣಗಳಿವೆ. ಖಂಡಿತವಾಗಿಯು ಜ್ಞಾನವುಳ್ಳ ದಾಸರು ಮಾತ್ರ ಅಲ್ಲಾಹನನ್ನು ಭಯಪಡುತ್ತಾರೆ. ನಿಶ್ಚಯವಾಗಿಯು ಅಲ್ಲಾಹನು ಪ್ರಚಂಡನೂ, ಕ್ಷಮಾಶೀಲನೂ ಆಗಿದ್ದಾನೆ.
अरबी व्याख्याहरू:
اِنَّ الَّذِیْنَ یَتْلُوْنَ كِتٰبَ اللّٰهِ وَاَقَامُوا الصَّلٰوةَ وَاَنْفَقُوْا مِمَّا رَزَقْنٰهُمْ سِرًّا وَّعَلَانِیَةً یَّرْجُوْنَ تِجَارَةً لَّنْ تَبُوْرَ ۟ۙ
ನಿಶ್ಚಯವಾಗಿಯು ಯಾರು ಅಲ್ಲಾಹನ ಗ್ರಂಥವನ್ನು ಪಠಿಸುತ್ತಾರೋ, ನಮಾಝ್ ಸಂಸ್ಥಾಪಿಸುತ್ತಾರೋ ಮತ್ತು ನಾವು ಅವರಿಗೆ ದಯಪಾಲಿಸಿದ ಜೀವನಾಧಾರದಿಂದ ರಹಸ್ಯವಾಗಿಯೂ, ಬಹಿರಂಗವಾಗಿಯೂ ಖರ್ಚು ಮಾಡುತ್ತಾರೋ ಅವರು ಎಂದಿಗೂ ನಷ್ಟವಾಗದ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
अरबी व्याख्याहरू:
لِیُوَفِّیَهُمْ اُجُوْرَهُمْ وَیَزِیْدَهُمْ مِّنْ فَضْلِهٖ ؕ— اِنَّهٗ غَفُوْرٌ شَكُوْرٌ ۟
ಇದೇಕೆಂದರೆ ಅಲ್ಲಾಹನು ಅವರ ಪ್ರತಿಫಲಗಳನ್ನು ಪರಿಪೂರ್ಣವಾಗಿ ನೀಡಲೆಂದೂ, ಅವನು ತನ್ನ ಅನುಗ್ರಹದಿಂದ ಅಧಿಕವಾಗಿ ಕೊಡಲೆಂದೂ ಆಗಿರುತ್ತದೆ. ನಿಸ್ಸಂಶಯವಾಗಿಯೂ ಅವನು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ.
अरबी व्याख्याहरू:
 
अर्थको अनुवाद सूरः: फातिर
अध्यायहरूको (सूरःहरूको) सूची رقم الصفحة
 
पवित्र कुरअानको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुस्