Check out the new design

पवित्र कुरअानको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरः: न्निसा   श्लोक:
فَبِمَا نَقْضِهِمْ مِّیْثَاقَهُمْ وَكُفْرِهِمْ بِاٰیٰتِ اللّٰهِ وَقَتْلِهِمُ الْاَنْۢبِیَآءَ بِغَیْرِ حَقٍّ وَّقَوْلِهِمْ قُلُوْبُنَا غُلْفٌ ؕ— بَلْ طَبَعَ اللّٰهُ عَلَیْهَا بِكُفْرِهِمْ فَلَا یُؤْمِنُوْنَ اِلَّا قَلِیْلًا ۪۟
ಅವರು ಕರಾರನ್ನು ಉಲ್ಲಂಘಿಸಿದರ ನಿಮಿತ್ತ ಅಲ್ಲಾಹನ ನಿಯಮಗಳನ್ನು ನಿಷೇಧಿಸಿದುದರ ನಿಮಿತ್ತ, ಅನ್ಯಾಯವಾಗಿ ಅಲ್ಲಾಹನ ಪೈಗಂಬರರನ್ನು ವಧಿಸಿದುದರ ನಿಮಿತ್ತ, ತಮ್ಮ ಹೃದಯಗಳು ಮುಚ್ಚಿಹೋಗಿವೆಯೆಂದು ಅವರು ಹೇಳಿದುದರ ನಿಮಿತ್ತ (ಅಲ್ಲಾಹನು ಅವರನ್ನು ಶಪಿಸಿದನು) ವಸ್ತುತಃ ಅವರ ಸತ್ಯನಿಷೇಧದ ಕಾರಣದಿಂದ ಅಲ್ಲಾಹನು ಹೃದಯಗಳ ಮೆಲೆ ಮುದ್ರೆಯೊತ್ತಿರುವನು. ಆದ್ದರಿಂದ ಅವರು ಅತ್ಯಲ್ಪವೇ ವಿಶ್ವಾಸವಿಡುತ್ತಾರೆ.
अरबी व्याख्याहरू:
وَّبِكُفْرِهِمْ وَقَوْلِهِمْ عَلٰی مَرْیَمَ بُهْتَانًا عَظِیْمًا ۟ۙ
ಮತ್ತು ಅವರ ಸತ್ಯನಿಷೇಧದ ನಿಮಿತ್ತ, ಹಾಗೂ ಮರ್ಯಮಳ ಮೇಲೆ ಅವರು ಹೊರಿಸಿದ ಘೋರ ಸುಳ್ಳಾರೋಪದ ನಿಮಿತ್ತವೂ (ಅಲ್ಲಾಹನು ಅವರನ್ನು ಶಪಿಸಿದನು)
अरबी व्याख्याहरू:
وَّقَوْلِهِمْ اِنَّا قَتَلْنَا الْمَسِیْحَ عِیْسَی ابْنَ مَرْیَمَ رَسُوْلَ اللّٰهِ ۚ— وَمَا قَتَلُوْهُ وَمَا صَلَبُوْهُ وَلٰكِنْ شُبِّهَ لَهُمْ ؕ— وَاِنَّ الَّذِیْنَ اخْتَلَفُوْا فِیْهِ لَفِیْ شَكٍّ مِّنْهُ ؕ— مَا لَهُمْ بِهٖ مِنْ عِلْمٍ اِلَّا اتِّبَاعَ الظَّنِّ ۚ— وَمَا قَتَلُوْهُ یَقِیْنًا ۟ۙ
ಅಲ್ಲಾಹನ ಸಂದೇಶವಾಹಕ ಮಸೀಹ ಈಸಾ ಬಿನ್ ಮರ್ಯಮರನ್ನು ನಾವು ಕೊಂದಿದ್ದೇವೆAದು ಅವರು ಹೇಳಿದ ನಿಮಿತ್ತವೂ (ಅವರನ್ನು ಶಪಿಸಲಾಯಿತು) ವಾಸ್ತವದಲ್ಲಿ ಅವರು ಅವರನ್ನು ವಧಿಸಲಿಲ್ಲ ಮತ್ತು ಶಿಲುಬೆಗೇರಿಸಲೂ ಇಲ್ಲ. ಆದರೆ ಅವರಿಗೆ ಅವರ ವಾಸ್ತವ ವಿಚಾರವನ್ನು ಅಸ್ಪಷ್ಟಗೊಳಿಸಲಾಯಿತು. ಖಂಡಿತವಾಗಿಯು ಅವರ (ಈಸಾರವರ) ವಿಚಾರದಲ್ಲಿ ಭಿನ್ನಾಭಿಪ್ರಾಯ ತೋರಿದವರು ಅವರ ಕುರಿತು ಸಂದೇಹದಲ್ಲಿದ್ದಾರೆ ಮತ್ತು ಅವರು (ಯಹೂದಿಗಳು) ಕೇವಲ ಊಹಾಪೊಹಗಳನ್ನು ಅನುಸರಿಸುತ್ತಿದ್ದಾರೆಯೇ ಹೊರತು ಅದರ ಕುರಿತು ಅವರಿಗೆ ಜ್ಞಾನವಿಲ್ಲ ಅವರು (ಯಹೂದಿಗಳು) ಅವರನ್ನು (ಈಸಾರವರನ್ನು) ಖಂಡಿತ ವಧಿಸಿಲ್ಲ.
अरबी व्याख्याहरू:
بَلْ رَّفَعَهُ اللّٰهُ اِلَیْهِ ؕ— وَكَانَ اللّٰهُ عَزِیْزًا حَكِیْمًا ۟
ಆದರೆ ಅಲ್ಲಾಹ್ ಅವರನ್ನು ತನ್ನ ಕಡೆಗೆ ಎತ್ತಿಕೊಂಡಿರುವನು ಮತ್ತು ಅಲ್ಲಾಹನು ಮಹಾ ಪ್ರತಾಪಶಾಲಿಯು ಯುಕ್ತಿಪೂರ್ಣನೂ ಆಗಿದ್ದಾನೆ.
अरबी व्याख्याहरू:
وَاِنْ مِّنْ اَهْلِ الْكِتٰبِ اِلَّا لَیُؤْمِنَنَّ بِهٖ قَبْلَ مَوْتِهٖ ۚ— وَیَوْمَ الْقِیٰمَةِ یَكُوْنُ عَلَیْهِمْ شَهِیْدًا ۟ۚ
ಗ್ರಂಥದವರ ಪೈಕಿ ಯಾವೊಬ್ಬನು ಪ್ರವಾದಿ ಈಸಾ(ಅ)ರ ಮರಣಕ್ಕೆ ಮೊದಲು ಅವರಲ್ಲಿ ವಿಶ್ವಾಸವಿಡದೇ ಉಳಿದಿರಲಾರನು ಮತ್ತು ಪುನರುತ್ಥಾನ ದಿನದಂದು ಈಸಾರವರು ಅವರ ಕುರಿತು ಸಾಕ್ಷö್ಯವಹಿಸುವರು.
अरबी व्याख्याहरू:
فَبِظُلْمٍ مِّنَ الَّذِیْنَ هَادُوْا حَرَّمْنَا عَلَیْهِمْ طَیِّبٰتٍ اُحِلَّتْ لَهُمْ وَبِصَدِّهِمْ عَنْ سَبِیْلِ اللّٰهِ كَثِیْرًا ۟ۙ
ಯಹೂದರಿಗೆ ಅವರ ಅಕ್ರಮದ ನಿಮಿತ್ತ ಮತ್ತು ಅವರು ಅಲ್ಲಾಹನ ಮಾರ್ಗದಿಂದ ಅನೇಕ ಜನರನ್ನು ತಡೆ ಹಿಡಿಯುತ್ತಿದ್ದ ನಿಮಿತ್ತ ಅವರಿಗೆ ಧರ್ಮ ಸಮ್ಮತವಾದ ಹಲವಾರು ಉತ್ತಮ ವಸ್ತುಗಳನ್ನು ನಾವು ನಿಷಿದ್ಧಗೊಳಿಸಿದೆವು.
अरबी व्याख्याहरू:
وَّاَخْذِهِمُ الرِّبٰوا وَقَدْ نُهُوْا عَنْهُ وَاَكْلِهِمْ اَمْوَالَ النَّاسِ بِالْبَاطِلِ ؕ— وَاَعْتَدْنَا لِلْكٰفِرِیْنَ مِنْهُمْ عَذَابًا اَلِیْمًا ۟
ಬಡ್ಡಿಯನ್ನು ಅವರಿಗೆ ನಿಷೇಧಿಸಲಾಗಿದ್ದರೂ ಅವರು ಅದನ್ನು ಪಡೆದುದರ ನಿಮಿತ್ತ ಮತ್ತು ಅವರು ಜನರ ಸಂಪತ್ತನ್ನು ಅನ್ಯಾಯವಾಗಿ ತಿನ್ನುತ್ತಿದ್ದುದರ ನಿಮಿತ್ತ ನಾವು ಅವರ ಪೈಕಿ ಸತ್ಯನಿಷೇಧಿಗಳಿಗೆ ವೇದನಾಜನಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
अरबी व्याख्याहरू:
لٰكِنِ الرّٰسِخُوْنَ فِی الْعِلْمِ مِنْهُمْ وَالْمُؤْمِنُوْنَ یُؤْمِنُوْنَ بِمَاۤ اُنْزِلَ اِلَیْكَ وَمَاۤ اُنْزِلَ مِنْ قَبْلِكَ وَالْمُقِیْمِیْنَ الصَّلٰوةَ وَالْمُؤْتُوْنَ الزَّكٰوةَ وَالْمُؤْمِنُوْنَ بِاللّٰهِ وَالْیَوْمِ الْاٰخِرِ ؕ— اُولٰٓىِٕكَ سَنُؤْتِیْهِمْ اَجْرًا عَظِیْمًا ۟۠
ಆದರೆ ಅವರ ಪೈಕಿ ಪರಿಪಕ್ವ ಜ್ಞಾನವಿರುವವರು ಮತ್ತು ನಿಮಗೆ ಅವತೀರ್ಣವಾದುದರಲ್ಲೂ ನಿಮಗಿಂತ ಮುಂಚೆ ಅವತೀರ್ಣವಾದುದರಲ್ಲೂ ವಿಶ್ವಾಸವಿಡುವ ಸತ್ಯ ವಿಶ್ವಾಸಿಗಳಾಗಿರುವರು ಮತ್ತು ಅವರು ನಮಾಝನ್ನು ಸಂಸ್ಥಾಪಿಸುವರು, ಝಕಾತ್ ನೀಡುವವರು ಮತ್ತು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರಾಗಿದ್ದಾರೆ. ಅಂತಹವರಿಗೆ ನಾವು ಮಹಾಪ್ರತಿಫಲವನ್ನು ನೀಡಲಿರುವೆವು.
अरबी व्याख्याहरू:
 
अर्थको अनुवाद सूरः: न्निसा
अध्यायहरूको (सूरःहरूको) सूची رقم الصفحة
 
पवित्र कुरअानको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुस्