Check out the new design

पवित्र कुरअानको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरः: माइदः   श्लोक:
وَحَسِبُوْۤا اَلَّا تَكُوْنَ فِتْنَةٌ فَعَمُوْا وَصَمُّوْا ثُمَّ تَابَ اللّٰهُ عَلَیْهِمْ ثُمَّ عَمُوْا وَصَمُّوْا كَثِیْرٌ مِّنْهُمْ ؕ— وَاللّٰهُ بَصِیْرٌ بِمَا یَعْمَلُوْنَ ۟
ಮತ್ತು ಅವರು ಯಾವುದೇ ಪರೀಕ್ಷೆ ಉಂಟಾಗದೆAದು ಭಾವಿಸಿದರು. ಆದ್ದರಿಂದ ಅವರು ಅಂಧರೂ, ಕಿವುಡರೂ ಆದರು. ನಂತರ ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಬಳಿಕವೂ ಅವರಪೈಕಿ ಹೆಚ್ಚಿನವರು ಅಂಧರೂ, ಕಿವುಡರೂ ಆದರು. ಅಲ್ಲಾಹನು ಅವರು ಮಾಡುತ್ತಿರುವುದನ್ನು ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.
अरबी व्याख्याहरू:
لَقَدْ كَفَرَ الَّذِیْنَ قَالُوْۤا اِنَّ اللّٰهَ هُوَ الْمَسِیْحُ ابْنُ مَرْیَمَ ؕ— وَقَالَ الْمَسِیْحُ یٰبَنِیْۤ اِسْرَآءِیْلَ اعْبُدُوا اللّٰهَ رَبِّیْ وَرَبَّكُمْ ؕ— اِنَّهٗ مَنْ یُّشْرِكْ بِاللّٰهِ فَقَدْ حَرَّمَ اللّٰهُ عَلَیْهِ الْجَنَّةَ وَمَاْوٰىهُ النَّارُ ؕ— وَمَا لِلظّٰلِمِیْنَ مِنْ اَنْصَارٍ ۟
ಮರ್ಯಮರ ಮಗನಾದ ಮಸೀಹನೇ ಅಲ್ಲಾಹನಾಗಿದ್ದಾನೆ ಎಂದು ಹೇಳಿದವರು ನಿಸ್ಸಂಶಯವಾಗಿಯು ಸತ್ಯನಿಷೇಧಿಗಳಾಗಿದ್ದಾರೆ. ವಸ್ತುತಃ ಸ್ವತಃ ಮಸೀಹರೆ ಅವರೊಂದಿಗೆ ಹೇಳಿದ್ದರು: ಓ ಇಸ್ರಾಯೀಲ್ ಸಂತತಿಗಳೇ, ನನ್ನ ಮತ್ತು ನಿಮ್ಮೆಲ್ಲರ ಪ್ರಭುವಾದ ಅಲ್ಲಾಹನ ಆರಾಧನೆಯನ್ನು ಮಾಡಿರಿ. ಯಾರು ಅಲ್ಲಾಹನೊಂದಿಗೆ ಸಹಭಾಗಿಯನ್ನು ನಿಶ್ಚಯಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ. ಅವನ ನೆಲೆಯು ನರಕವಾಗಿರುತ್ತದೆ ಮತ್ತು ಪಾಪಿಗಳ ಸಹಾಯಕರಾಗಿ ಯಾರೂ ಇರಲಾರರು.
अरबी व्याख्याहरू:
لَقَدْ كَفَرَ الَّذِیْنَ قَالُوْۤا اِنَّ اللّٰهَ ثَالِثُ ثَلٰثَةٍ ۘ— وَمَا مِنْ اِلٰهٍ اِلَّاۤ اِلٰهٌ وَّاحِدٌ ؕ— وَاِنْ لَّمْ یَنْتَهُوْا عَمَّا یَقُوْلُوْنَ لَیَمَسَّنَّ الَّذِیْنَ كَفَرُوْا مِنْهُمْ عَذَابٌ اَلِیْمٌ ۟
ಅಲ್ಲಾಹನು ಮೂವರಲ್ಲಿ ಒಬ್ಬನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ನಿಷೇಧಿಗಳಾಗಿದ್ದಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ. ಅವರ ಪೈಕಿ ಸತ್ಯನಿಷೇಧಿಗಳಾಗಿರುವವರಿಗೆ ವೇದನಾಜನಕವಾದ ಶಿಕ್ಷೆಯು ಖಂಡಿತ ತಲುಪುವುದು.
अरबी व्याख्याहरू:
اَفَلَا یَتُوْبُوْنَ اِلَی اللّٰهِ وَیَسْتَغْفِرُوْنَهٗ ؕ— وَاللّٰهُ غَفُوْرٌ رَّحِیْمٌ ۟
ಅವರು ಅಲ್ಲಾಹನೆಡೆಗೆ ಮರಳಿ ಅವನೊಂದಿಗೆ ಪಾಪವಿಮೋಚನೆಯನ್ನು ಏಕೆ ಬೇಡುವುದಿಲ್ಲ? ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
अरबी व्याख्याहरू:
مَا الْمَسِیْحُ ابْنُ مَرْیَمَ اِلَّا رَسُوْلٌ ۚ— قَدْ خَلَتْ مِنْ قَبْلِهِ الرُّسُلُ ؕ— وَاُمُّهٗ صِدِّیْقَةٌ ؕ— كَانَا یَاْكُلٰنِ الطَّعَامَ ؕ— اُنْظُرْ كَیْفَ نُبَیِّنُ لَهُمُ الْاٰیٰتِ ثُمَّ انْظُرْ اَنّٰی یُؤْفَكُوْنَ ۟
ಮರ್ಯಮಳ ಮಗನಾದ ಮಸೀಹನು ಸಂದೇಶವಾಹಕನೇ ಹೊರತು ಬೇರೇನೂ ಅಲ್ಲ. ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿ ಹೋಗಿದ್ದಾರೆ. ಅವರ ತಾಯಿಯು ಓರ್ವ ಸತ್ಯವಂತೆಯಾಗಿದ್ದರು. ಅವರಿಬ್ಬರೂ ಆಹಾರವನ್ನು ಸೇವಿಸುತ್ತಿದ್ದರು. ನಾವು ಅವರ ಮುಂದೆ ಯಾವ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸುತ್ತಿದ್ದೇವೆಂದು ನೋಡಿರಿ ಅವರು ಯಾವ ರೀತಿ ಅಲೆದಾಡುತ್ತಿದ್ದಾರೆಂದು ನೋಡಿರಿ.
अरबी व्याख्याहरू:
قُلْ اَتَعْبُدُوْنَ مِنْ دُوْنِ اللّٰهِ مَا لَا یَمْلِكُ لَكُمْ ضَرًّا وَّلَا نَفْعًا ؕ— وَاللّٰهُ هُوَ السَّمِیْعُ الْعَلِیْمُ ۟
(ಪೈಗಂಬರರೇ ಹೇಳಿರಿ:) ನಿಮಗೆ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವಿಲ್ಲದವರನ್ನು ನೀವು ಅಲ್ಲಾಹನ ಹೊರತು ಅರಾಧಿಸುತ್ತಿರುವಿರಾ? ಅಲ್ಲಾಹನೇ ಸರ್ವವನ್ನು, ಆಲಿಸುವವನೂ, ಸಂಪೂರ್ಣವಾಗಿ ಅರಿಯುವವನೂ ಆಗಿದ್ದಾನೆ.
अरबी व्याख्याहरू:
قُلْ یٰۤاَهْلَ الْكِتٰبِ لَا تَغْلُوْا فِیْ دِیْنِكُمْ غَیْرَ الْحَقِّ وَلَا تَتَّبِعُوْۤا اَهْوَآءَ قَوْمٍ قَدْ ضَلُّوْا مِنْ قَبْلُ وَاَضَلُّوْا كَثِیْرًا وَّضَلُّوْا عَنْ سَوَآءِ السَّبِیْلِ ۟۠
ಹೇಳಿರಿ: ಗ್ರಂಥದವರೇ, ನೀವು ತಮ್ಮ ಧರ್ಮದ ವಿಚಾರದಲ್ಲಿ ಅನ್ಯಾಯವಾಗಿ ಹದ್ದುಮೀರದಿರಿ. ಮತ್ತು ಅತಿಕ್ರಮ ಮಾಡಬೇಡಿರಿ. ಮೊದಲಿನಿಂದಲೇ ದಾರಿಗೆಟ್ಟು, ಅನೇಕ ಜನರನ್ನು ದಾರಿಗೆಡಿಸಿ ಬಿಟ್ಟಂತಹ, ಮತ್ತು ರುಜು ಮಾರ್ಗದಿಂದ ಭ್ರಷ್ಟರಾದಂತಹ ಜನರ ಸ್ವೇಚ್ಛೆಗಳನ್ನು ನೀವು ಅನುಸರಿಸಬೇಡಿರಿ.
अरबी व्याख्याहरू:
 
अर्थको अनुवाद सूरः: माइदः
अध्यायहरूको (सूरःहरूको) सूची رقم الصفحة
 
पवित्र कुरअानको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुस्