Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: احزاب   آیت:
قُلْ لَّنْ یَّنْفَعَكُمُ الْفِرَارُ اِنْ فَرَرْتُمْ مِّنَ الْمَوْتِ اَوِ الْقَتْلِ وَاِذًا لَّا تُمَتَّعُوْنَ اِلَّا قَلِیْلًا ۟
ಓ ಪೈಗಂಬರರೇ ಹೇಳಿರಿ: ನೀವು ಮರಣದಿಂದ ಅಥವಾ ಹತ್ಯೆಯ ಭಯದಿಂದ ಓಡಿಹೋದರೆ ಈ ಪಲಾಯನವು ನಿಮಗೆ ಒಂದಿಷ್ಟೂ ಪ್ರಯೋಜನ ನೀಡದು ಮತ್ತು ಆಗ ನೀವು ಅಲ್ಪ ಮಾತ್ರ ಸುಖಭೋಗ ಅನುಭವಿಸುವಿರಿ.
عربي تفسیرونه:
قُلْ مَنْ ذَا الَّذِیْ یَعْصِمُكُمْ مِّنَ اللّٰهِ اِنْ اَرَادَ بِكُمْ سُوْٓءًا اَوْ اَرَادَ بِكُمْ رَحْمَةً ؕ— وَلَا یَجِدُوْنَ لَهُمْ مِّنْ دُوْنِ اللّٰهِ وَلِیًّا وَّلَا نَصِیْرًا ۟
ಕೇಳಿರಿ: ಅಲ್ಲಾಹನು ನಿಮಗೇನಾದರೂ ವಿಪತ್ತು ಎರಗಿಸಲು ಬಯಸಿದರೆ ಅಥವಾ ಏನಾದರೂ ಒಳಿತನ್ನು ಮಾಡಲು ಬಯಸಿದರೆ ಅಲ್ಲಾಹನಿಂದ ನಿಮ್ಮನ್ನು ತಡೆದಿರಿಸಿಕೊಳ್ಳುವವನು ಯಾರು? ಅವರು ತಮಗೆ ಅಲ್ಲಾಹನ ಹೊರತು ಯಾವ ರಕ್ಷಕ ಮಿತ್ರನನ್ನಾಗಲೀ, ಯಾವ ಸಹಾಯಕನನ್ನಾಗಲೀ ಪಡೆಯಲಾರರು.
عربي تفسیرونه:
قَدْ یَعْلَمُ اللّٰهُ الْمُعَوِّقِیْنَ مِنْكُمْ وَالْقَآىِٕلِیْنَ لِاِخْوَانِهِمْ هَلُمَّ اِلَیْنَا ۚ— وَلَا یَاْتُوْنَ الْبَاْسَ اِلَّا قَلِیْلًا ۟ۙ
ನಿಮ್ಮ ಪೈಕಿ ಯುದ್ಧದಿಂದ ತಡೆಯುವವರನ್ನು ಮತ್ತು ತಮ್ಮ ಸಹೋದರರೊಂದಿಗೆ ನೀವು ನಮ್ಮೆಡೆಗೆ ಹೊರಟು ಬನ್ನಿರಿ ಎಂದು ಹೇಳುವವರನ್ನು ಅಲ್ಲಾಹನು (ಚೆನ್ನಾಗಿ) ಬಲ್ಲನು. ಮತ್ತು ಅವರು ಹೆಸರಿಗಾಗಿ ಎಂದಾದರೂ ಒಮ್ಮೆ ಯುದ್ಧದಲ್ಲಿ ಭಾಗವಹಿಸುತ್ತಾರೆ.
عربي تفسیرونه:
اَشِحَّةً عَلَیْكُمْ ۖۚ— فَاِذَا جَآءَ الْخَوْفُ رَاَیْتَهُمْ یَنْظُرُوْنَ اِلَیْكَ تَدُوْرُ اَعْیُنُهُمْ كَالَّذِیْ یُغْشٰی عَلَیْهِ مِنَ الْمَوْتِ ۚ— فَاِذَا ذَهَبَ الْخَوْفُ سَلَقُوْكُمْ بِاَلْسِنَةٍ حِدَادٍ اَشِحَّةً عَلَی الْخَیْرِ ؕ— اُولٰٓىِٕكَ لَمْ یُؤْمِنُوْا فَاَحْبَطَ اللّٰهُ اَعْمَالَهُمْ ؕ— وَكَانَ ذٰلِكَ عَلَی اللّٰهِ یَسِیْرًا ۟
ನಿಮ್ಮ ವಿಚಾರದಲ್ಲಿ ಅವರು ಜಿಪುಣರಾಗಿರುತ್ತಾರೆ ಬಳಿಕ ಯುದ್ಧ ಭೀತಿಯು ಎದುರಾದರೆ ನೀವು ಅವರನ್ನು ಮರಣ ಮೂರ್ಛೆಯು ಬಂದAತಹ ವ್ಯಕ್ತಿಯ ಹಾಗೆ ಅವರ ಕಣ್ಣುಗಳು ನಿಮ್ಮೆಡೆಗೆ ಹೊರಳಿಸುತ್ತಿರುವುದಾಗಿ ಕಾಣುವಿರಿ. ನಂತರ ಭೀತಿಯು ನೀಗತೊಡಗಿದರೆ ಸಂಪತ್ತಿನ ಅತಿಯಾಸೆಯುಳ್ಳವರಾಗಿ ಅವರು ತಮ್ಮ ಹರಿತವಾದ ನಾಲಗೆಯಿಂದ ನಿಮ್ಮನ್ನು ಟೀಕಿಸುತ್ತಾರೆ ಇವರು ವಿಶ್ವಾಸವಿರಿಸಲಿಲ್ಲ. ಹಾಗಾಗಿ ಅಲ್ಲಾಹನು ಅವರ ಸಕಲ ಕರ್ಮಗಳನ್ನು ನಿಷ್ಫಲಗೊಳಿಸುವನು. ಮತ್ತು ಇದು ಅಲ್ಲಾಹನಿಗೆ ಅತೀ ಸರಳ ಕಾರ್ಯವಾಗಿದೆ.
عربي تفسیرونه:
یَحْسَبُوْنَ الْاَحْزَابَ لَمْ یَذْهَبُوْا ۚ— وَاِنْ یَّاْتِ الْاَحْزَابُ یَوَدُّوْا لَوْ اَنَّهُمْ بَادُوْنَ فِی الْاَعْرَابِ یَسْاَلُوْنَ عَنْ اَنْۢبَآىِٕكُمْ ؕ— وَلَوْ كَانُوْا فِیْكُمْ مَّا قٰتَلُوْۤا اِلَّا قَلِیْلًا ۟۠
ಶತ್ರು ಪಡೆಗಳು ಇನ್ನೂ ಹೋಗಿಲ್ಲವೆಂದು ಅವರು ಭಾವಿಸುತ್ತಾರೆ ಮತ್ತು ಇನ್ನೇನಾದರೂ ಶತ್ರು ಪಡೆಗಳು ಪುನಃ ಮರಳಿ ಬಂದರೆ ತಾವು ಗ್ರಾಮೀಣರ ಜೊತೆಯಲ್ಲಿದ್ದು ನಿಮ್ಮ ಸುದ್ಧಿಗಳನ್ನು ವಿಚಾರಿಸುತ್ತಿದ್ದೆವು ಎಂದು ಬಯಸತೊಡ ಗುತ್ತಾರೆ ಹಾಗೂ ಅವರು ನಿಮ್ಮ ಜೊತೆಯಲ್ಲಿ ಇರುತ್ತಿದ್ದರೂ ಅಲ್ಪ ಮಾತ್ರ ಯುದ್ಧ ಮಾಡುವರು.
عربي تفسیرونه:
لَقَدْ كَانَ لَكُمْ فِیْ رَسُوْلِ اللّٰهِ اُسْوَةٌ حَسَنَةٌ لِّمَنْ كَانَ یَرْجُوا اللّٰهَ وَالْیَوْمَ الْاٰخِرَ وَذَكَرَ اللّٰهَ كَثِیْرًا ۟ؕ
ನಿಶ್ಚಯವಾಗಿಯು ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಇದು ಅಲ್ಲಾಹ ಹಾಗೂ ಅಂತ್ಯ ದಿನವನ್ನು ನಿರೀಕ್ಷಿಸುವವನಿಗೆ ಮತ್ತು ಅಲ್ಲಾಹನನ್ನು ಅತಿ ಹೆಚ್ಚು ಸ್ಮರಿಸುವವನಿಗೆ.
عربي تفسیرونه:
وَلَمَّا رَاَ الْمُؤْمِنُوْنَ الْاَحْزَابَ ۙ— قَالُوْا هٰذَا مَا وَعَدَنَا اللّٰهُ وَرَسُوْلُهٗ وَصَدَقَ اللّٰهُ وَرَسُوْلُهٗ ؗ— وَمَا زَادَهُمْ اِلَّاۤ اِیْمَانًا وَّتَسْلِیْمًا ۟ؕ
ಮತ್ತು ಸತ್ಯವಿಶ್ವಾಸಿಗಳು ಶತ್ರು ಪಡೆಗಳನ್ನು ಕಂಡಾಗ ಹೇಳುತ್ತಾರೆ: ಇದು ನಮಗೆ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮಾಡಿದ ವಾಗ್ದಾನವಾಗಿದೆ. ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಸತ್ಯವನ್ನೇ ನುಡಿದಿರುತ್ತಾರೆ ಮತ್ತು ಇದು ಅವರಿಗೆ ಸತ್ಯವಿಶ್ವಾಸ ಹಾಗೂ ಸಮರ್ಪಣೆಯನ್ನು ಇನ್ನಷ್ಟು ಹೆಚ್ಚಿಸಿತು.
عربي تفسیرونه:
 
د معناګانو ژباړه سورت: احزاب
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول