Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: احزاب   آیت:
تَحِیَّتُهُمْ یَوْمَ یَلْقَوْنَهٗ سَلٰمٌ ۖۚ— وَّاَعَدَّ لَهُمْ اَجْرًا كَرِیْمًا ۟
ಅವರು ಅಲ್ಲಾಹನನ್ನು ಭೇಟಿಯಾಗುವ ದಿನ. ಅವರ ಸ್ವಾಗತವು ಸಲಾಮ್‌ನೊಂದಿಗೆ ಆಗಿರುವುದು ಮತ್ತು ಅವನು ಅವರಿಗೆ ಗೌರವಾರ್ಹ ಪ್ರತಿಫಲವನ್ನು ಸಿದ್ಧಗೊಳಿಸಿಟ್ಟಿರುತ್ತಾನೆ.
عربي تفسیرونه:
یٰۤاَیُّهَا النَّبِیُّ اِنَّاۤ اَرْسَلْنٰكَ شَاهِدًا وَّمُبَشِّرًا وَّنَذِیْرًا ۟ۙ
ಓ ಪೈಗಂಬರರೇ, ನಿಶ್ಚಯವಾಗಿಯೂ ನಾವು ನಿಮ್ಮನ್ನು ಸಾಕ್ಷö್ಯವಹಿಸುವವರನ್ನಾಗಿಯೂ, ಸುವಾರ್ತೆ ನೀಡುವವರನ್ನಾ ಗಿಯೂ, ಮುನ್ನೆಚ್ಚರಿಕೆ ಕೊಡುವವರಾಗಿಯೂ.
عربي تفسیرونه:
وَّدَاعِیًا اِلَی اللّٰهِ بِاِذْنِهٖ وَسِرَاجًا مُّنِیْرًا ۟
ಮತ್ತು ಅಲ್ಲಾಹನ ಅಪ್ಪಣೆಯಿಂದ ಅವನೆಡೆಗೆ ಆಹ್ವಾನಿಸುವವರನ್ನಾಗಿಯೂ ಮತ್ತು ಪ್ರಕಾಶ ಬೀರುವ ಒಂದು ಜ್ಯೋತಿಯನ್ನಾಗಿಯೂ ಮಾಡಿ ಕಳುಹಿಸಿರುತ್ತೇವೆ.
عربي تفسیرونه:
وَبَشِّرِ الْمُؤْمِنِیْنَ بِاَنَّ لَهُمْ مِّنَ اللّٰهِ فَضْلًا كَبِیْرًا ۟
ಸತ್ಯವಿಶ್ವಾಸಿಗಳಿಗೆ ಅಲ್ಲಾಹನ ವತಿಯಿಂದ ಮಹಾ ಅನುಗ್ರಹವಿದೆಯೆಂಬ ಸುವಾರ್ತೆಯನ್ನು ಅವರಿಗೆ ನೀಡಿರಿ.
عربي تفسیرونه:
وَلَا تُطِعِ الْكٰفِرِیْنَ وَالْمُنٰفِقِیْنَ وَدَعْ اَذٰىهُمْ وَتَوَكَّلْ عَلَی اللّٰهِ ؕ— وَكَفٰی بِاللّٰهِ وَكِیْلًا ۟
ಸತ್ಯನಿಷೇಧಿಗಳನ್ನು, ಕಪಟ ವಿಶ್ವಾಸಿಗಳನ್ನು ಅನುಸರಿಸಬೇಡಿರಿ ಮತ್ತು ಅವರ ಕಿರುಕುಳವನ್ನು ಕಡೆಗಣಿಸಿರಿ. ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ ಕಾರ್ಯಸಾಧಕನಾಗಿ ಅಲ್ಲಾಹನೇ ಸಾಕು.
عربي تفسیرونه:
یٰۤاَیُّهَا الَّذِیْنَ اٰمَنُوْۤا اِذَا نَكَحْتُمُ الْمُؤْمِنٰتِ ثُمَّ طَلَّقْتُمُوْهُنَّ مِنْ قَبْلِ اَنْ تَمَسُّوْهُنَّ فَمَا لَكُمْ عَلَیْهِنَّ مِنْ عِدَّةٍ تَعْتَدُّوْنَهَا ۚ— فَمَتِّعُوْهُنَّ وَسَرِّحُوْهُنَّ سَرَاحًا جَمِیْلًا ۟
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿನಿಯನ್ನು ವಿವಾಹವಾದ ಬಳಿಕ ಅವರನ್ನು ಸ್ಪರ್ಶಿಸುವುದಕ್ಕೂ ಮೊದಲು ಅವರನ್ನು ವಿಚ್ಛೇಧಿಸಿದರೆ ಆಗ ನಿಮ್ಮ ಕಡೆಯಿಂದ ಅವರ ಮೇಲೆ ನೀವು ಎಣಿಸುವಂತಹ ಯಾವುದೇ ಇದ್ದತ್ (ನಿಗದಿತ ಅವಧಿ) ಇರುವುದಿಲ್ಲ. ಹಾಗೆಯೇ ನೀವು ಅವರಿಗೆ ಏನಾದರೂ ಸಂಭಾವನೆ ಕೊಡಿರಿ ಹಾಗೂ ಉತ್ತಮವಾದ ರೀತಿಯಲ್ಲಿ ವಿದಾಯವನ್ನು ಹೇಳಿರಿ.
عربي تفسیرونه:
یٰۤاَیُّهَا النَّبِیُّ اِنَّاۤ اَحْلَلْنَا لَكَ اَزْوَاجَكَ الّٰتِیْۤ اٰتَیْتَ اُجُوْرَهُنَّ وَمَا مَلَكَتْ یَمِیْنُكَ مِمَّاۤ اَفَآءَ اللّٰهُ عَلَیْكَ وَبَنٰتِ عَمِّكَ وَبَنٰتِ عَمّٰتِكَ وَبَنٰتِ خَالِكَ وَبَنٰتِ خٰلٰتِكَ الّٰتِیْ هَاجَرْنَ مَعَكَ ؗ— وَامْرَاَةً مُّؤْمِنَةً اِنْ وَّهَبَتْ نَفْسَهَا لِلنَّبِیِّ اِنْ اَرَادَ النَّبِیُّ اَنْ یَّسْتَنْكِحَهَا ۗ— خَالِصَةً لَّكَ مِنْ دُوْنِ الْمُؤْمِنِیْنَ ؕ— قَدْ عَلِمْنَا مَا فَرَضْنَا عَلَیْهِمْ فِیْۤ اَزْوَاجِهِمْ وَمَا مَلَكَتْ اَیْمَانُهُمْ لِكَیْلَا یَكُوْنَ عَلَیْكَ حَرَجٌ ؕ— وَكَانَ اللّٰهُ غَفُوْرًا رَّحِیْمًا ۟
ಓ ಪೈಗಂಬರರೇ, ನೀವು ವಧುದಕ್ಷಿಣೆಯನ್ನು ನೀಡಿ ವರಿಸಿರುವಂತಹ ನಿಮ್ಮ ಪತ್ನಿಯರನ್ನು ಹಾಗೂ ಅಲ್ಲಾಹನು ನಿಮಗೆ ಯುದ್ಧಾರ್ಜಿತ ಸೊತ್ತಾಗಿ ನಿಮ್ಮ ಸ್ವಾಧೀನಕ್ಕೆ ನೀಡಿದ ದಾಸಿಯರನ್ನು ನಿಮಗೆ ಧರ್ಮಸಮ್ಮತಗೊಳಿಸಿದ್ದಾನೆ. ಮತ್ತು ನಿಮ್ಮೊಂದಿಗೆ ವಲಸೆ ಬಂದಿರುವAತಹ ನಿಮ್ಮ ಚಿಕ್ಕಪ್ಪನ ಪುತ್ರಿಯರನ್ನೂ, ನಿಮ್ಮ ಸೋದರತ್ತೆಯರ ಪುತ್ರಿಯರನ್ನೂ, ನಿಮ್ಮ ಸಹೋದರಮಾವಂದಿರ ಪುತ್ರಿಯರನ್ನೂ, ನಿಮ್ಮ ಮಾತೃ ಸೋದರಿಯರ ಪುತ್ರಿಯರನ್ನೂ, (ವಿವಾಹ ಧರ್ಮಸಮ್ಮತವಾಗಿದೆ) ಮತ್ತು ಸತ್ಯವಿಶ್ವಾಸಿನಿಯಾದ ಇನ್ನಾವುದೇ ಸ್ತಿçÃಯು ಸ್ವತಃ ತನ್ನನ್ನು ಪೈಗಂಬರರಿಗೆ ಅರ್ಪಿಸಿದರೆ; ಪೈಗಂಬರು ಆಕೆಯನ್ನು ವಿವಾಹ ಮಾಡಿಕೊಳ್ಳಲು ಬಯಸಿದರೆ. ಇದು ನಿಮಗೆ ಮಾತ್ರ ವಿಶೇಷ ಧರ್ಮ ಸಮ್ಮತವಾಗಿದೆ. ಇತರ ಸತ್ಯವಿಶ್ವಾಸಿಗಳಿಗಿರುವಂತಹದ್ದಲ್ಲ. ನಾವು ಅವರ ಮೇಲೆ ಅವರ ಪತ್ನಿಯರಲ್ಲೂ, ಅವರ ದಾಸಿಯರಲ್ಲೂ ನಿಶ್ಚಯಿಸಿರುವುದನ್ನು ಚೆನ್ನಾಗಿ ಬಲ್ಲೆವು. ಇದು ನಿಮ್ಮ ಮೇಲೆ ಯಾವುದೇ ದೋಷವಿರಬಾರದೆಂದಾಗಿರುತ್ತದೆ. ಅಲ್ಲಾಹನು ಮಹಾ ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
عربي تفسیرونه:
 
د معناګانو ژباړه سورت: احزاب
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول