Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: هود   آیت:
اَمْ یَقُوْلُوْنَ افْتَرٰىهُ ؕ— قُلْ فَاْتُوْا بِعَشْرِ سُوَرٍ مِّثْلِهٖ مُفْتَرَیٰتٍ وَّادْعُوْا مَنِ اسْتَطَعْتُمْ مِّنْ دُوْنِ اللّٰهِ اِنْ كُنْتُمْ صٰدِقِیْنَ ۟
“ಇದನ್ನು ಅವರು (ಪ್ರವಾದಿ) ಸ್ವಯಂ ರಚಿಸಿ ತಂದಿದ್ದಾರೆ” ಎಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ಸರಿ, ಹಾಗಾದರೆ ಇದರಂತೆ ರಚಿಸಲಾದ ಹತ್ತು ಅಧ್ಯಾಯಗಳನ್ನು ತನ್ನಿರಿ. ಅಲ್ಲಾಹನನ್ನು ಬಿಟ್ಟು ನಿಮಗೆ ಸಾಧ್ಯವಾಗುವವರನ್ನೆಲ್ಲಾ ಸಹಾಯಕ್ಕಾಗಿ ಕರೆಯಿರಿ. ನೀವು ಸತ್ಯವಂತರಾಗಿದ್ದರೆ!”
عربي تفسیرونه:
فَاِلَّمْ یَسْتَجِیْبُوْا لَكُمْ فَاعْلَمُوْۤا اَنَّمَاۤ اُنْزِلَ بِعِلْمِ اللّٰهِ وَاَنْ لَّاۤ اِلٰهَ اِلَّا هُوَ ۚ— فَهَلْ اَنْتُمْ مُّسْلِمُوْنَ ۟
ಅವರೇನಾದರೂ ನಿಮ್ಮ ಕರೆಗೆ ಉತ್ತರಿಸದಿದ್ದರೆ, ತಿಳಿಯಿರಿ! ಇದು ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆ ಮತ್ತು ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಈಗಲಾದರೂ ನೀವು ಮುಸಲ್ಮಾನರಾಗಲು ಸಿದ್ಧರಿದ್ದೀರಾ?
عربي تفسیرونه:
مَنْ كَانَ یُرِیْدُ الْحَیٰوةَ الدُّنْیَا وَزِیْنَتَهَا نُوَفِّ اِلَیْهِمْ اَعْمَالَهُمْ فِیْهَا وَهُمْ فِیْهَا لَا یُبْخَسُوْنَ ۟
ಯಾರು ಇಹಲೋಕ ಜೀವನವನ್ನು ಮತ್ತು ಅದರ ಸೌಂದರ್ಯವನ್ನು ಬಯಸುತ್ತಾರೋ ಅವರಿಗೆ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಹಲೋಕದಲ್ಲೇ ಪೂರ್ಣವಾಗಿ ನೀಡುವೆವು. ಇಲ್ಲಿ ಅವರಿಗೆ ಏನೂ ಕಡಿಮೆಯಾಗುವುದಿಲ್ಲ.
عربي تفسیرونه:
اُولٰٓىِٕكَ الَّذِیْنَ لَیْسَ لَهُمْ فِی الْاٰخِرَةِ اِلَّا النَّارُ ۖؗ— وَحَبِطَ مَا صَنَعُوْا فِیْهَا وَبٰطِلٌ مَّا كَانُوْا یَعْمَلُوْنَ ۟
ಅವರಿಗೆ ಪರಲೋಕದಲ್ಲಿ ನರಕಾಗ್ನಿಯಲ್ಲದೆ ಬೇರೇನೂ ಇಲ್ಲ. ಇಹಲೋಕದಲ್ಲಿ ಅವರು ಮಾಡಿದ ಕರ್ಮಗಳೆಲ್ಲವೂ ವ್ಯರ್ಥವಾಗುವುವು. ಅವರು ಮಾಡುತ್ತಿದ್ದ ಕರ್ಮಗಳೆಲ್ಲವೂ ನಿಷ್ಪ್ರಯೋಜಕವಾಗುವುವು.
عربي تفسیرونه:
اَفَمَنْ كَانَ عَلٰی بَیِّنَةٍ مِّنْ رَّبِّهٖ وَیَتْلُوْهُ شَاهِدٌ مِّنْهُ وَمِنْ قَبْلِهٖ كِتٰبُ مُوْسٰۤی اِمَامًا وَّرَحْمَةً ؕ— اُولٰٓىِٕكَ یُؤْمِنُوْنَ بِهٖ ؕ— وَمَنْ یَّكْفُرْ بِهٖ مِنَ الْاَحْزَابِ فَالنَّارُ مَوْعِدُهٗ ۚ— فَلَا تَكُ فِیْ مِرْیَةٍ مِّنْهُ ۗ— اِنَّهُ الْحَقُّ مِنْ رَّبِّكَ وَلٰكِنَّ اَكْثَرَ النَّاسِ لَا یُؤْمِنُوْنَ ۟
ಒಬ್ಬ ವ್ಯಕ್ತಿ ತನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಪುರಾವೆಯ ಆಧಾರದಲ್ಲಿದ್ದಾನೆ.[1] ಅದರ ಹಿಂದೆ ಇನ್ನೊಂದು ಸಾಕ್ಷಿಯಿದೆ.[2] ಇದಕ್ಕೆ ಮೊದಲು ಮಾರ್ಗದರ್ಶಿ ಮತ್ತು ದಯೆಯಾಗಿದ್ದ ಮೂಸಾರ ಗ್ರಂಥವು ಕೂಡ ಆ ಸಾಕ್ಷಿಯನ್ನು ಬೆಂಬಲಿಸುತ್ತದೆ.[3] ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ. ವಿವಿಧ ಪಂಗಡಗಳಲ್ಲಿ ಯಾರು ಅದನ್ನು ನಿಷೇಧಿಸುತ್ತಾರೋ ಅವರಿಗೆ ವಾಗ್ದಾನ ಮಾಡಲಾದ ಸ್ಥಳವು ನರಕಾಗ್ನಿಯಾಗಿದೆ. ಆದ್ದರಿಂದ ನೀವು ಅದರ (ಕುರ್‌ಆನ್‌ನ) ಬಗ್ಗೆ ಯಾವುದೇ ಸಂಶಯವನ್ನಿಟ್ಟುಕೊಳ್ಳಬೇಡಿ. ನಿಶ್ಚಯವಾಗಿಯೂ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ.
[1] ಸ್ಪಷ್ಟ ಪುರಾವೆ ಎಂದರೆ ಮನುಷ್ಯನ ಸಹಜ ಮನೋಧರ್ಮ (ಫಿತ್ರ). ಎಲ್ಲಾ ಮನುಷ್ಯರೂ ಸಹಜ ಮನೋಧರ್ಮದಲ್ಲೇ (ಏಕದೇವವಿಶ್ವಾಸದಲ್ಲೇ) ಹುಟ್ಟುತ್ತಾರೆ. ನಂತರ ಅವರ ತಂದೆ-ತಾಯಿಗಳು ಅವರನ್ನು ಯಹೂದಿ, ಕ್ರೈಸ್ತ ಅಥವಾ ಅಗ್ನಿಪೂಜಕರನ್ನಾಗಿ ಮಾಡುತ್ತಾರೆ.
[2] ಅದರ ಹಿಂದೆ ಎಂದರೆ ಅದರ ಜೊತೆಗೆ. ಸಾಕ್ಷಿ ಎಂದರೆ ಪವಿತ್ರ ಕುರ್‌ಆನ್.
[3] ಇದರ ಅರ್ಥವೇನೆಂದರೆ ಒಬ್ಬ ವ್ಯಕ್ತಿ ತನ್ನ ಸಹಜ ಮನೋಧರ್ಮದ ಆಧಾರದಲ್ಲಿದ್ದು ಏಕೈಕ ದೇವನನ್ನು ಮಾತ್ರ ಆರಾಧಿಸುತ್ತಾನೆ. ಅವನ ಜೊತೆಗೆ ಅವನನ್ನು ಆ ಸಹಜ ಮನೋಧರ್ಮಕ್ಕೆ (ಏಕದೇವವಿಶ್ವಾಸಕ್ಕೆ) ಆಮಂತ್ರಿಸುವ ಪವಿತ್ರ ಕುರ್‌ಆನ್ ಇದೆ. ಮಾತ್ರವಲ್ಲ, ಇದಕ್ಕಿಂತ ಮುಂಚೆ ಅವತೀರ್ಣವಾದ ಮೂಸಾರ (ಅವರ ಮೇಲೆ ಶಾಂತಿಯಿರಲಿ) ಕೂಡ ಪವಿತ್ರ ಕುರ್‌ಆನನ್ನು ಅನುಸರಿಸಲು ಹೇಳುತ್ತದೆ. ಇಂತಹ ವ್ಯಕ್ತಿ ಖಂಡಿತ ಪವಿತ್ರ ಕುರ್‌ಆನ್‌ನಲ್ಲಿ ವಿಶ್ವಾಸವಿಡುತ್ತಾನೆ.
عربي تفسیرونه:
وَمَنْ اَظْلَمُ مِمَّنِ افْتَرٰی عَلَی اللّٰهِ كَذِبًا ؕ— اُولٰٓىِٕكَ یُعْرَضُوْنَ عَلٰی رَبِّهِمْ وَیَقُوْلُ الْاَشْهَادُ هٰۤؤُلَآءِ الَّذِیْنَ كَذَبُوْا عَلٰی رَبِّهِمْ ۚ— اَلَا لَعْنَةُ اللّٰهِ عَلَی الظّٰلِمِیْنَ ۟ۙ
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು? ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ಹಾಜರುಪಡಿಸಲಾಗುವುದು. ಆಗ ಸಾಕ್ಷಿಗಳು ಹೇಳುವರು: “ಇವರೇ ತಮ್ಮ ಪರಿಪಾಲಕನ (ಅಲ್ಲಾಹನ) ಹೆಸರಲ್ಲಿ ಸುಳ್ಳು ಹೇಳಿದವರು.” ತಿಳಿಯಿರಿ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.
عربي تفسیرونه:
الَّذِیْنَ یَصُدُّوْنَ عَنْ سَبِیْلِ اللّٰهِ وَیَبْغُوْنَهَا عِوَجًا ؕ— وَهُمْ بِالْاٰخِرَةِ هُمْ كٰفِرُوْنَ ۟
ಅವರು ಯಾರೆಂದರೆ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಪರಲೋಕವನ್ನು ನಿಷೇಧಿಸಿದವರಾಗಿದ್ದಾರೆ.
عربي تفسیرونه:
 
د معناګانو ژباړه سورت: هود
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول