Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: هود   آیت:
وَیٰقَوْمِ لَاۤ اَسْـَٔلُكُمْ عَلَیْهِ مَالًا ؕ— اِنْ اَجْرِیَ اِلَّا عَلَی اللّٰهِ وَمَاۤ اَنَا بِطَارِدِ الَّذِیْنَ اٰمَنُوْا ؕ— اِنَّهُمْ مُّلٰقُوْا رَبِّهِمْ وَلٰكِنِّیْۤ اَرٰىكُمْ قَوْمًا تَجْهَلُوْنَ ۟
ಓ ನನ್ನ ಜನರೇ! ಇದಕ್ಕೆ ಪ್ರತಿಫಲವಾಗಿ ನಾನು ನಿಮ್ಮಲ್ಲಿ ಹಣವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದ ಹೊಣೆಯಿರುವುದು ಅಲ್ಲಾಹನಿಗೆ ಮಾತ್ರ. ನಾನು ಸತ್ಯವಿಶ್ವಾಸಿಗಳನ್ನು ದೂರ ಮಾಡುವುದಿಲ್ಲ.[1] ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವರು. ಆದರೆ ನಾನು ನಿಮ್ಮನ್ನು ತಿಳುವಳಿಕೆಯಿಲ್ಲದ ಜನರಂತೆ ಕಾಣುತ್ತಿದ್ದೇನೆ.
[1] ಆ ಕೆಳವರ್ಗದ ಜನರನ್ನು ನಿನ್ನ ಸಭೆಯಿಂದ ದೂರವಿಟ್ಟರೆ ನಾವು ನಿನ್ನ ಸಭೆಗೆ ಬರುತ್ತೇವೆ, ನಿನ್ನ ಮಾತನ್ನು ಕೇಳುತ್ತೇವೆ ಎಂದು ಮುಖಂಡರು ಹೇಳಿದಾಗ, ನೂಹ್ (ಅವರ ಮೇಲೆ ಶಾಂತಿಯಿರಲಿ) ಈ ಉತ್ತರವನ್ನು ನೀಡಿದರು.
عربي تفسیرونه:
وَیٰقَوْمِ مَنْ یَّنْصُرُنِیْ مِنَ اللّٰهِ اِنْ طَرَدْتُّهُمْ ؕ— اَفَلَا تَذَكَّرُوْنَ ۟
ಓ ನನ್ನ ಜನರೇ! ನಾನು ಅವರನ್ನು ದೂರ ಮಾಡಿದರೆ ಅಲ್ಲಾಹನ ಶಿಕ್ಷೆಯಿಂದ ನನ್ನನ್ನು ರಕ್ಷಿಸುವವರು ಯಾರು? ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ?
عربي تفسیرونه:
وَلَاۤ اَقُوْلُ لَكُمْ عِنْدِیْ خَزَآىِٕنُ اللّٰهِ وَلَاۤ اَعْلَمُ الْغَیْبَ وَلَاۤ اَقُوْلُ اِنِّیْ مَلَكٌ وَّلَاۤ اَقُوْلُ لِلَّذِیْنَ تَزْدَرِیْۤ اَعْیُنُكُمْ لَنْ یُّؤْتِیَهُمُ اللّٰهُ خَیْرًا ؕ— اَللّٰهُ اَعْلَمُ بِمَا فِیْۤ اَنْفُسِهِمْ ۖۚ— اِنِّیْۤ اِذًا لَّمِنَ الظّٰلِمِیْنَ ۟
ಅಲ್ಲಾಹನ ಖಜಾನೆಗಳು ನನ್ನ ಬಳಿಯಿವೆ ಎಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ಅದೃಶ್ಯ ಜ್ಞಾನವಿಲ್ಲ. ನಾನೊಬ್ಬ ದೇವದೂತನೆಂದು ನಾನು ಹೇಳುವುದಿಲ್ಲ. ನಿಮ್ಮ ಕಣ್ಣುಗಳು ಕೀಳಾಗಿ ಕಾಣುವ ಈ ಜನರಿಗೆ ಅಲ್ಲಾಹು ಒಳ್ಳೆಯದು ಮಾಡಲಾರನೆಂದು ನಾನು ಹೇಳುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. ನಾನು ಇಂತಹ ಮಾತುಗಳನ್ನು ಹೇಳಿದರೆ ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿಬಿಡುವೆನು.”
عربي تفسیرونه:
قَالُوْا یٰنُوْحُ قَدْ جَادَلْتَنَا فَاَكْثَرْتَ جِدَالَنَا فَاْتِنَا بِمَا تَعِدُنَاۤ اِنْ كُنْتَ مِنَ الصّٰدِقِیْنَ ۟
ಜನರು ಹೇಳಿದರು: “ಓ ನೂಹ್! ನೀನು ನಮ್ಮೊಂದಿಗೆ ತರ್ಕಿಸಿರುವೆ. ಬಹಳ ಚೆನ್ನಾಗಿ ತರ್ಕಿಸಿರುವೆ. ನೀನು ಸತ್ಯವನ್ನೇ ಹೇಳುವವನಾಗಿದ್ದರೆ ನಮ್ಮನ್ನು ಹೆದರಿಸುವ ಆ ಶಿಕ್ಷೆಯನ್ನು ಈಗಲೇ ತಂದು ತೋರಿಸು.”
عربي تفسیرونه:
قَالَ اِنَّمَا یَاْتِیْكُمْ بِهِ اللّٰهُ اِنْ شَآءَ وَمَاۤ اَنْتُمْ بِمُعْجِزِیْنَ ۟
ನೂಹ್ ಹೇಳಿದರು: “ಅದನ್ನು ಅಲ್ಲಾಹನೇ ತರುತ್ತಾನೆ. ಅವನು ತರಲಿಚ್ಛಿಸಿದರೆ! ನಿಮಗೆ ಅವನನ್ನು ಸೋಲಿಸಲು ಸಾಧ್ಯವಿಲ್ಲ.
عربي تفسیرونه:
وَلَا یَنْفَعُكُمْ نُصْحِیْۤ اِنْ اَرَدْتُّ اَنْ اَنْصَحَ لَكُمْ اِنْ كَانَ اللّٰهُ یُرِیْدُ اَنْ یُّغْوِیَكُمْ ؕ— هُوَ رَبُّكُمْ ۫— وَاِلَیْهِ تُرْجَعُوْنَ ۟ؕ
ಅಲ್ಲಾಹು ನಿಮ್ಮನ್ನು ದಾರಿತಪ್ಪಿಸಲು ಉದ್ದೇಶಿಸಿದರೆ, ನಾನು ನಿಮಗೆ ಉಪದೇಶ ಮಾಡಲು ಬಯಸಿದರೂ ನನ್ನ ಉಪದೇಶವು ನಿಮಗೆ ಉಪಕಾರ ಮಾಡುವುದಿಲ್ಲ. ಅವನೇ ನಿಮ್ಮ ಪರಿಪಾಲಕನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.”
عربي تفسیرونه:
اَمْ یَقُوْلُوْنَ افْتَرٰىهُ ؕ— قُلْ اِنِ افْتَرَیْتُهٗ فَعَلَیَّ اِجْرَامِیْ وَاَنَا بَرِیْٓءٌ مِّمَّا تُجْرِمُوْنَ ۟۠
“ಇದನ್ನು ಅವರು (ಪ್ರವಾದಿ) ಸ್ವಯಂ ರಚಿಸಿ ತಂದಿದ್ದಾರೆ” ಎಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ನಾನು ಇದನ್ನು ಸ್ವಯಂ ರಚಿಸಿ ತಂದಿದ್ದರೆ ನಾನು ಮಾಡಿದ ಅಪರಾಧವನ್ನು ನಾನೇ ಅನುಭವಿಸಬೇಕಾಗಿದೆ. ಅದರೆ, ನೀವು ಮಾಡುವ ಅಪರಾಧಗಳಿಂದ ನಾನು ಹೊಣೆಮುಕ್ತನಾಗಿದ್ದೇನೆ.”
عربي تفسیرونه:
وَاُوْحِیَ اِلٰی نُوْحٍ اَنَّهٗ لَنْ یُّؤْمِنَ مِنْ قَوْمِكَ اِلَّا مَنْ قَدْ اٰمَنَ فَلَا تَبْتَىِٕسْ بِمَا كَانُوْا یَفْعَلُوْنَ ۟ۚ
ನೂಹರಿಗೆ ದೇವವಾಣಿ ನೀಡಲಾಯಿತು: “ಈಗಾಗಲೇ ವಿಶ್ವಾಸವಿಟ್ಟವರ ಹೊರತು ನಿಮ್ಮ ಜನರಲ್ಲಿ ಬೇರೆ ಯಾರೂ ವಿಶ್ವಾಸವಿಡುವುದಿಲ್ಲ; ಆದ್ದರಿಂದ ಅವರು ಮಾಡುತ್ತಿರುವ ದುಷ್ಕರ್ಮಗಳ ಬಗ್ಗೆ ನೀವು ಬೇಸರಗೊಳ್ಳಬೇಡಿ.
عربي تفسیرونه:
وَاصْنَعِ الْفُلْكَ بِاَعْیُنِنَا وَوَحْیِنَا وَلَا تُخَاطِبْنِیْ فِی الَّذِیْنَ ظَلَمُوْا ۚ— اِنَّهُمْ مُّغْرَقُوْنَ ۟
ನಮ್ಮ ಕಣ್ಣುಗಳ ಮುಂದೆ ನಮ್ಮ ದೇವವಾಣಿಯಂತೆ ಒಂದು ನಾವೆಯನ್ನು ನಿರ್ಮಿಸಿರಿ. ಅಕ್ರಮಿಗಳ ಬಗ್ಗೆ ನನ್ನೊಂದಿಗೆ ಮಾತನಾಡಬೇಡಿ. ನಿಶ್ಚಯವಾಗಿಯೂ ಅವರು (ಜಲಪ್ರಳಯದಲ್ಲಿ) ಮುಳುಗಿ ನಾಶವಾಗುವರು.”
عربي تفسیرونه:
 
د معناګانو ژباړه سورت: هود
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول