Check out the new design

ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි * - පරිවර්තන පටුන


අර්ථ කථනය පරිච්ඡේදය: අල් බකරා   වාක්‍යය:
حٰفِظُوْا عَلَی الصَّلَوٰتِ وَالصَّلٰوةِ الْوُسْطٰی ۗ— وَقُوْمُوْا لِلّٰهِ قٰنِتِیْنَ ۟
ನೀವು ನಮಾಝ್‌ಗಳನ್ನು (ಎಚ್ಚರಿಕೆಯಿಂದ ಪಾಲಿಸಿರಿ) ವಿಶೇಷತಃ ಮಧ್ಯದ (ಅಸರ್) ನಮಾಝನ್ನು ಸಂರಕ್ಷಿಸಿರಿ. ಮತ್ತು ಅಲ್ಲಾಹನಿಗಾಗಿ ನಿಷ್ಠಾವಂತರಾಗಿ ನಿಲ್ಲಿರಿ.
අල්කුර්ආන් අරාබි අර්ථ විවරණ:
فَاِنْ خِفْتُمْ فَرِجَالًا اَوْ رُكْبَانًا ۚ— فَاِذَاۤ اَمِنْتُمْ فَاذْكُرُوا اللّٰهَ كَمَا عَلَّمَكُمْ مَّا لَمْ تَكُوْنُوْا تَعْلَمُوْنَ ۟
ಇನ್ನು ನಿಮಗೆ (ರಣಭೂಮಿಯಲ್ಲಿ) ಶತ್ರುಗಳ ದಾಳಿಯ ಭಯವಿದ್ದರೆ ನಡೆಯುತ್ತಾ ಅಥವಾ ವಾಹನದಲ್ಲಿ (ಯಾವ ಸ್ಥಿತಿಯಲ್ಲಿದ್ದರೂ ನಮಾಝ್ ಸಂಸ್ಥಾಪಿಸಿರಿ) ಇನ್ನು ನೀವು ನಿರ್ಭಯರಾಗಿದ್ದರೆ ಮುಂಚೆ ನೀವು ತಿಳಿಯದ್ದನ್ನು ಅವನು ನಿಮಗೆ ಕಲಿಸಿರುವ ಹಾಗೆ ಅವನನ್ನು ಸ್ಮರಿಸಿರಿ.
අල්කුර්ආන් අරාබි අර්ථ විවරණ:
وَالَّذِیْنَ یُتَوَفَّوْنَ مِنْكُمْ وَیَذَرُوْنَ اَزْوَاجًا ۖۚ— وَّصِیَّةً لِّاَزْوَاجِهِمْ مَّتَاعًا اِلَی الْحَوْلِ غَیْرَ اِخْرَاجٍ ۚ— فَاِنْ خَرَجْنَ فَلَا جُنَاحَ عَلَیْكُمْ فِیْ مَا فَعَلْنَ فِیْۤ اَنْفُسِهِنَّ مِنْ مَّعْرُوْفٍ ؕ— وَاللّٰهُ عَزِیْزٌ حَكِیْمٌ ۟
ನಿಮ್ಮ ಪೈಕಿ ಪತ್ನಿಯರನ್ನು ಬಿಟ್ಟು ಮರಣಹೊಂದುವವರು ತಮ್ಮ ಪತ್ನಿಯರಿಗೆ ಮನೆಯಿಂದ ಹೊರಹಾಕದೆ ಒಂದು ವರ್ಷದವರೆಗೆ ಜೀವನಾಂಶವನ್ನು ನೀಡಲು ಉಯಿಲು ಮಾಡಲಿ. ಆದರೆ ಅವರು ತಮ್ಮ (ವಿವಾಹದ) ವಿಚಾರದಲ್ಲಿ ಸದಾಚಾರದೊಂದಿಗೆ ಸ್ವತಃ ಅವರೇ ಹೊರಟು ಹೋದರೆ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ ಮತ್ತು ಅಲ್ಲಾಹನು ಪ್ರಬಲನೂ ಯುಕ್ತಿಪೂರ್ಣನೂ ಆಗಿದ್ದಾನೆ.
අල්කුර්ආන් අරාබි අර්ථ විවරණ:
وَلِلْمُطَلَّقٰتِ مَتَاعٌ بِالْمَعْرُوْفِ ؕ— حَقًّا عَلَی الْمُتَّقِیْنَ ۟
ಮತ್ತು ವಿಚ್ಛೇಧಿತ ಸ್ತಿçÃಯರಿಗೆ ಸದಾಚಾರದೊಂದಿಗೆ ಜೀವನಾಂಶ ನೀಡುವುದು ಭಯಭಕ್ತಿಯುಳ್ಳವರ ಮೇಲಿನ ಬಾಧ್ಯತೆಯಾಗಿರುತ್ತದೆ.
අල්කුර්ආන් අරාබි අර්ථ විවරණ:
كَذٰلِكَ یُبَیِّنُ اللّٰهُ لَكُمْ اٰیٰتِهٖ لَعَلَّكُمْ تَعْقِلُوْنَ ۟۠
ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ನೀವು ಚಿಂತಿಸಲೆAದು ವಿವರಿಸಿಕೊಡುತ್ತಾನೆ.
අල්කුර්ආන් අරාබි අර්ථ විවරණ:
اَلَمْ تَرَ اِلَی الَّذِیْنَ خَرَجُوْا مِنْ دِیَارِهِمْ وَهُمْ اُلُوْفٌ حَذَرَ الْمَوْتِ ۪— فَقَالَ لَهُمُ اللّٰهُ مُوْتُوْا ۫— ثُمَّ اَحْیَاهُمْ ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟
ಸಾವಿರಾರು ಸಂಖ್ಯೆಯಲ್ಲಿದ್ದು ಮೃತ್ಯುಭಯದಿಂದ ತಮ್ಮ ಮನೆಗಳಿಂದ ಹೊರಟು ಹೋದವರನ್ನು ನೀವು ನೋಡಲಿಲ್ಲವೇ? ಅಲ್ಲಾಹನು ಅವರಿಗೆ ನೀವು ಮರಣ ಹೊಂದಿರಿ ಎಂದು ಹೇಳಿದನು. ಬಳಿಕ ಅವನು ಅವರನ್ನು ಜೀವಂತಗೊಳಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಜನರ ಮೇಲೆ ಮಹಾ ಅನುಗ್ರಹದಾತನಾಗಿದ್ದಾನೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
අල්කුර්ආන් අරාබි අර්ථ විවරණ:
وَقَاتِلُوْا فِیْ سَبِیْلِ اللّٰهِ وَاعْلَمُوْۤا اَنَّ اللّٰهَ سَمِیْعٌ عَلِیْمٌ ۟
ನೀವು ಅಲ್ಲಾಹನ ಮಾರ್ಗದಲ್ಲಿ (ದೌರ್ಜನ್ಯವೆಸಗುವವರ ಮೇಲೆ) ಯುದ್ಧ ಮಾಡಿರಿ ಮತ್ತು ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
අල්කුර්ආන් අරාබි අර්ථ විවරණ:
مَنْ ذَا الَّذِیْ یُقْرِضُ اللّٰهَ قَرْضًا حَسَنًا فَیُضٰعِفَهٗ لَهٗۤ اَضْعَافًا كَثِیْرَةً ؕ— وَاللّٰهُ یَقْبِضُ وَیَبْصُۜطُ ۪— وَاِلَیْهِ تُرْجَعُوْنَ ۟
ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವನಾರಿದ್ದಾನೆ? ಹಾಗೆಯೇ ಮಾಡುವುದಾದರೆ ಅಲ್ಲಾಹನು ಅವನಿಗೆ ಅನೇಕ ಪಟ್ಟು ಹೆಚ್ಚಿಸಿ ಕೊಡುವವನಾಗಿದ್ದಾನೆ. ಮತ್ತು ಸಂಕುಚಿತಗೊಳಿಸುವವನು ಹಾಗೂ ವೃದ್ಧಿಸುವವನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
අල්කුර්ආන් අරාබි අර්ථ විවරණ:
 
අර්ථ කථනය පරිච්ඡේදය: අල් බකරා
සූරා පටුන පිටු අංක
 
ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි - පරිවර්තන පටුන

එය ශේඛ් බෂීර් මයිසූරි විසින් පරිවර්තනය කරන ලදී. රුව්වාද් පරිවර්තන මධ්‍යස්ථානයේ අධීක්ෂණය යටතේ වැඩි දියුණ කර ඇත.

වසන්න