Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அந்நிஸா   வசனம்:
اُولٰٓىِٕكَ الَّذِیْنَ لَعَنَهُمُ اللّٰهُ ؕ— وَمَنْ یَّلْعَنِ اللّٰهُ فَلَنْ تَجِدَ لَهٗ نَصِیْرًا ۟ؕ
ಅಲ್ಲಾಹನು ಶಪಿಸಿರುವುದು ಅವರನ್ನೇ ಆಗಿದೆ. ಮತ್ತು ಅಲ್ಲಾಹನು ಯಾರನ್ನೂ ಶಪಿಸಿರುವನೋ ಅವನಿಗೆ ಯಾವೊಬ್ಬ ಸಹಾಯಕನನ್ನೂ ನೀವು ಕಾಣಲಾರಿರಿ.
அரபு விரிவுரைகள்:
اَمْ لَهُمْ نَصِیْبٌ مِّنَ الْمُلْكِ فَاِذًا لَّا یُؤْتُوْنَ النَّاسَ نَقِیْرًا ۟ۙ
ಅಧಿಪತ್ಯದಲ್ಲಿ ಅವರಿಗೆ ಯಾವುದಾದರೂ ಪಾಲಿದೆಯೇ? ಹಾಗೇನಾದರೂ ಇರುತ್ತಿದ್ದರೆ ಅವರು ಯಾರಿಗೂ ಎಳ್ಳಷ್ಟನ್ನೂ ನೀಡುತ್ತಿರಲಿಲ್ಲ.
அரபு விரிவுரைகள்:
اَمْ یَحْسُدُوْنَ النَّاسَ عَلٰی مَاۤ اٰتٰىهُمُ اللّٰهُ مِنْ فَضْلِهٖ ۚ— فَقَدْ اٰتَیْنَاۤ اٰلَ اِبْرٰهِیْمَ الْكِتٰبَ وَالْحِكْمَةَ وَاٰتَیْنٰهُمْ مُّلْكًا عَظِیْمًا ۟
ಅಥವಾ ಅಲ್ಲಾಹನು ತನ್ನ ಔದಾರ್ಯದಿಂದ ಇತರರಿಗೆ ನೀಡಿರುವ ವಿಚಾರದಲ್ಲಿ ಅವರು ಅಸೂಯೆಪಡುತ್ತಿದ್ದಾರೆಯೇ? ಹಾಗೆಯೇ ನಾವು ಇಬ್ರಾಹೀಮರ ಕುಟುಂಬಕ್ಕೆ ಗ್ರಂಥವನ್ನೂ, ಸುಜ್ಞಾನವನ್ನೂ ನೀಡಿದ್ದೇವೆ ಮತ್ತು ಅವರಿಗೆ ನಾವು ಮಹಾ ಅಧಿಪತ್ಯವನ್ನೂ ಕರುಣಿಸಿದ್ದೇವೆ.
அரபு விரிவுரைகள்:
فَمِنْهُمْ مَّنْ اٰمَنَ بِهٖ وَمِنْهُمْ مَّنْ صَدَّ عَنْهُ ؕ— وَكَفٰی بِجَهَنَّمَ سَعِیْرًا ۟
ಅನಂತರ ಅವರ ಪೈಕಿ ಕೆಲವರು ಈ ಗ್ರಂಥವನ್ನು ನಂಬಿದರು ಮತ್ತು ಇನ್ನು ಕೆಲವರು ಸ್ಥಗಿತಗೊಂಡರು ಮತ್ತು ಅವರಿಗೆ ಧಗಧಗಿಸುವ ನರಕಾಗ್ನಿಯೇ ಸಾಕು.
அரபு விரிவுரைகள்:
اِنَّ الَّذِیْنَ كَفَرُوْا بِاٰیٰتِنَا سَوْفَ نُصْلِیْهِمْ نَارًا ؕ— كُلَّمَا نَضِجَتْ جُلُوْدُهُمْ بَدَّلْنٰهُمْ جُلُوْدًا غَیْرَهَا لِیَذُوْقُوا الْعَذَابَ ؕ— اِنَّ اللّٰهَ كَانَ عَزِیْزًا حَكِیْمًا ۟
ಯಾರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದರೋ, ಅವರನ್ನು ನಾವು ಖಂಡಿತ ನರಕಾಗ್ನಿಯಲ್ಲಿ ಹಾಕಿಬಿಡವೆವು. ಅವರ ಚರ್ಮಗಳು ಕರಗಿ ಹೋದಾಗಲೆಲ್ಲಾ ಅವರು ಶಿಕ್ಷೆಯನ್ನು ಸವಿಯುತ್ತಿರಲೆಂದು ನಾವು ಅವರಿಗೆ ಬೇರೆ ಚರ್ಮಗಳನ್ನು ಬದಲಾಯಿಸಿ ಕೊಡುವೆವು. ಖಂಡಿತವಾಗಿಯು ಅಲ್ಲಾಹನು ಪ್ರಬಲನೂ, ಸುಜ್ಞಾನಿಯೂ ಆಗಿದ್ದಾನೆ.
அரபு விரிவுரைகள்:
وَالَّذِیْنَ اٰمَنُوْا وَعَمِلُوا الصّٰلِحٰتِ سَنُدْخِلُهُمْ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— لَهُمْ فِیْهَاۤ اَزْوَاجٌ مُّطَهَّرَةٌ ؗ— وَّنُدْخِلُهُمْ ظِلًّا ظَلِیْلًا ۟
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡುತ್ತಾರೋ ಅವರನ್ನು ನಾವು ಸದ್ಯದಲ್ಲೇ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವೆವು. ಅವರು ಅದರಲ್ಲಿ ಶಾಶ್ವತವಾಗಿರುವರು. ಅವರಿಗೆ ಅಲ್ಲಿ ಪರಿಶುದ್ಧರಾದ ಪತ್ನಿಯರಿರುವರು ನಾವು ದಟ್ಟವಾದ ನೆರಳುಗಳಲ್ಲಿ ಅವರನ್ನು ಪ್ರವೇಶಗೊಳಿಸುವೆವು.
அரபு விரிவுரைகள்:
اِنَّ اللّٰهَ یَاْمُرُكُمْ اَنْ تُؤَدُّوا الْاَمٰنٰتِ اِلٰۤی اَهْلِهَا ۙ— وَاِذَا حَكَمْتُمْ بَیْنَ النَّاسِ اَنْ تَحْكُمُوْا بِالْعَدْلِ ؕ— اِنَّ اللّٰهَ نِعِمَّا یَعِظُكُمْ بِهٖ ؕ— اِنَّ اللّٰهَ كَانَ سَمِیْعًا بَصِیْرًا ۟
ಅಮಾನತ್ತುಗಳನ್ನು ಅದರ ಹಕ್ಕುದಾರರಿಗೆ ತಲುಪಿಸಿಕೊಡಬೇಕೆಂದೂ, ಜನರ ಮಧ್ಯೆ, ನೀವು ತೀರ್ಪು ನೀಡುವಾಗ ನ್ಯಾಯಪೂರ್ವಕವಾಗಿ ತೀರ್ಪು ನೀಡಬೇಕೆಂದೂ ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ. ಖಂಡಿತವಾಗಿಯು ಅಲ್ಲಾಹನು ನಿಮಗೆ ಉತ್ತಮವಾದ ಉಪದೇಶವನ್ನು ನೀಡುತ್ತಾನೆ. ನಿಸ್ಸಂಶಯವಾಗಿಯು ಅಲ್ಲಾಹನು ಆಲಿಸುವವನೂ, ನೋಡುವವನೂ ಆಗಿದ್ದಾನೆ.
அரபு விரிவுரைகள்:
یٰۤاَیُّهَا الَّذِیْنَ اٰمَنُوْۤا اَطِیْعُوا اللّٰهَ وَاَطِیْعُوا الرَّسُوْلَ وَاُولِی الْاَمْرِ مِنْكُمْ ۚ— فَاِنْ تَنَازَعْتُمْ فِیْ شَیْءٍ فَرُدُّوْهُ اِلَی اللّٰهِ وَالرَّسُوْلِ اِنْ كُنْتُمْ تُؤْمِنُوْنَ بِاللّٰهِ وَالْیَوْمِ الْاٰخِرِ ؕ— ذٰلِكَ خَیْرٌ وَّاَحْسَنُ تَاْوِیْلًا ۟۠
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಅಲ್ಲಾಹನ ಸಂದೇಶವಾಹಕರನ್ನೂ, ಹಾಗೂ ನಿಮ್ಮಿಂದಲೇ ಇರುವ ಆಡಳಿತಾಧಿಕಾರಿಗಳನ್ನೂ ಅನುಸರಿಸಿರಿ. ಇನ್ನು ಯಾವುದಾದರೂ ವಿಚಾರದಲ್ಲಿ ನೀವು ಭಿನ್ನರಾದರೆ ನೀವು ಅದನ್ನು ಅಲ್ಲಾಹನೆಡೆಗೂ, ಸಂದೇಶವಾಹಕರೆಡೆಗೂ ಮರಳಿಸಿರಿ. ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿರುಸುವುದಾದರೆ. ಇದು ತುಂಬಾ ಉತ್ತಮವೂ, ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.
அரபு விரிவுரைகள்:
 
மொழிபெயர்ப்பு அத்தியாயம்: அந்நிஸா
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக