Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அந்நிஸா   வசனம்:
وَاِذَا كُنْتَ فِیْهِمْ فَاَقَمْتَ لَهُمُ الصَّلٰوةَ فَلْتَقُمْ طَآىِٕفَةٌ مِّنْهُمْ مَّعَكَ وَلْیَاْخُذُوْۤا اَسْلِحَتَهُمْ ۫— فَاِذَا سَجَدُوْا فَلْیَكُوْنُوْا مِنْ وَّرَآىِٕكُمْ ۪— وَلْتَاْتِ طَآىِٕفَةٌ اُخْرٰی لَمْ یُصَلُّوْا فَلْیُصَلُّوْا مَعَكَ وَلْیَاْخُذُوْا حِذْرَهُمْ وَاَسْلِحَتَهُمْ ۚ— وَدَّ الَّذِیْنَ كَفَرُوْا لَوْ تَغْفُلُوْنَ عَنْ اَسْلِحَتِكُمْ وَاَمْتِعَتِكُمْ فَیَمِیْلُوْنَ عَلَیْكُمْ مَّیْلَةً وَّاحِدَةً ؕ— وَلَا جُنَاحَ عَلَیْكُمْ اِنْ كَانَ بِكُمْ اَذًی مِّنْ مَّطَرٍ اَوْ كُنْتُمْ مَّرْضٰۤی اَنْ تَضَعُوْۤا اَسْلِحَتَكُمْ ۚ— وَخُذُوْا حِذْرَكُمْ ؕ— اِنَّ اللّٰهَ اَعَدَّ لِلْكٰفِرِیْنَ عَذَابًا مُّهِیْنًا ۟
ಪೈಗಂಬರರೇ, ನೀವು ಅವರ (ಮುಜಾಹಿದ್‌ಗಳ) ಜೊತೆಗಿದ್ದು, ಅವರ ನಮಾಝ್‌ನ ನೇತೃತ್ವ ನಿರ್ವಹಿಸುತ್ತಿರುವಾಗ ಅವರಲ್ಲಿ ಒಂದು ಗುಂಪು ನಿಮ್ಮ ಹಿಂದೆ ಬಂದು ನಿಲ್ಲಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್(ಸಾಷ್ಟಾಂಗ)ಮುಗಿಸಿದ ನಂತರ ಸರಿದು ನಿಂತು ನಮಾಝ್ ಮಾಡಿರದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ಮಾಡಲಿ. ಅವರು ಎಚ್ಚರ ವಹಿಸಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಆಯುಧಗಳನ್ನು ಮತ್ತು ಸಾವiಗ್ರಿಗಳ ಕುರಿತು ಅಲಕ್ಷö್ಯರಾದರೆ, ನಿಮ್ಮ ಮೇಲೆ ಒಮ್ಮೇಲೆ ಮುಗಿಬೀಳಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನಿಮಗೆ ಮಳೆ ಅಥವಾ ರೋಗದ ನಿಮಿತ್ತ ತೊಂದರೆಯಿದ್ದರೆ ನಿಮ್ಮ ಆಯುಧಗಳನ್ನು ಕೆಳಗಿಡುವುದುರಲ್ಲಿ ದೋಷವಿಲ್ಲ ಮತ್ತು ನೀವು ನಿಮ್ಮ ಎಚ್ಚರ ವಹಿಸಿರಿ ಖಂಡಿತವಾಗಿಯು ಅಲ್ಲಾಹನು ಆ ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.
அரபு விரிவுரைகள்:
فَاِذَا قَضَیْتُمُ الصَّلٰوةَ فَاذْكُرُوا اللّٰهَ قِیٰمًا وَّقُعُوْدًا وَّعَلٰی جُنُوْبِكُمْ ۚ— فَاِذَا اطْمَاْنَنْتُمْ فَاَقِیْمُوا الصَّلٰوةَ ۚ— اِنَّ الصَّلٰوةَ كَانَتْ عَلَی الْمُؤْمِنِیْنَ كِتٰبًا مَّوْقُوْتًا ۟
ನೀವು ನಮಾಝ್ ನಿರ್ವಹಿಸಿದ ನಂತರ ನಿಂತುಕೊAಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹನನ್ನು ಸ್ಮರಿಸಿರಿ. ಮತ್ತು ಶಾಂತತೆ ಪ್ರಾಪ್ತವಾದರೆ ನಮಾಝನ್ನು ಕ್ರಮ ಪ್ರಕಾರ ನಿರ್ವಹಿಸಿರಿ. ಖಂಡಿತವಾಗಿಯು ನಮಾಝನ್ನು ಸತ್ಯವಿಶ್ವಾಸಿಗಳ ಮೇಲೆ ನಿಶ್ಚಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.
அரபு விரிவுரைகள்:
وَلَا تَهِنُوْا فِی ابْتِغَآءِ الْقَوْمِ ؕ— اِنْ تَكُوْنُوْا تَاْلَمُوْنَ فَاِنَّهُمْ یَاْلَمُوْنَ كَمَا تَاْلَمُوْنَ ۚ— وَتَرْجُوْنَ مِنَ اللّٰهِ مَا لَا یَرْجُوْنَ ؕ— وَكَانَ اللّٰهُ عَلِیْمًا حَكِیْمًا ۟۠
ಶತ್ರುಗಳನ್ನು ಬೆನ್ನಟ್ಟಿ ಹೋಗುವ ವಿಚಾರದಲ್ಲಿ ನೀವು ಎದೆಗುಂದಬಾರದು. ನೀವು ನೋವು ಅನುಭವಿಸಿದಂತೆ ಅವರೂ ನೋವು ಅನುಭವಿಸುತ್ತಾರೆ. ಮತ್ತು ಅವರು ನಿರೀಕ್ಷಿಸದ ಅನುಗ್ರಹವನ್ನು ನೀವೂ ಅಲ್ಲಾಹನಿಂದ (ಅವನ ಸನ್ನಿಧಿ ಹಾಗೂ ಸ್ವರ್ಗವನ್ನು) ನಿರೀಕ್ಷಿಸುತ್ತೀರಿ ಮತ್ತು ಅಲ್ಲಾಹನು ಸರ್ವಜ್ಞನೂ, ಯುಕ್ತಿಪೂರ್ಣನೂ ಆಗಿದ್ದಾನೆ.
அரபு விரிவுரைகள்:
اِنَّاۤ اَنْزَلْنَاۤ اِلَیْكَ الْكِتٰبَ بِالْحَقِّ لِتَحْكُمَ بَیْنَ النَّاسِ بِمَاۤ اَرٰىكَ اللّٰهُ ؕ— وَلَا تَكُنْ لِّلْخَآىِٕنِیْنَ خَصِیْمًا ۟ۙ
ಇದೇಕೆಂದರೆ ನೀವು (ಓ ಪೈಗಂಬರರೇ) ಅಲ್ಲಾಹನು ತೋರಿಸಿಕೊಟ್ಟ ಪ್ರಕಾರ ಜನರ ನಡುವೆ ತೀರ್ಪನ್ನು ನೀಡಲೆಂದು ನಾವು ಗ್ರಂಥವನ್ನು ನಿಮ್ಮೆಡೆಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ನೀವು ಮೋಸಗಾರರಿಗೆ ಬೆಂಬಲಿಗನಾಗಬೇಡಿರಿ.
அரபு விரிவுரைகள்:
 
மொழிபெயர்ப்பு அத்தியாயம்: அந்நிஸா
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக