Check out the new design

แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี * - สารบัญ​คำแปล


แปลความหมาย​ สูเราะฮ์: Al-Baqarah   อายะฮ์:
كُتِبَ عَلَیْكُمُ الْقِتَالُ وَهُوَ كُرْهٌ لَّكُمْ ۚ— وَعَسٰۤی اَنْ تَكْرَهُوْا شَیْـًٔا وَّهُوَ خَیْرٌ لَّكُمْ ۚ— وَعَسٰۤی اَنْ تُحِبُّوْا شَیْـًٔا وَّهُوَ شَرٌّ لَّكُمْ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟۠
ಧರ್ಮ ಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ, ನಿಮಗದನ್ನು ಶಾಸನಗೊಳಿಸಲಾಗಿದೆ. ನೀವು ಒಂದು ವಸ್ತುವನ್ನು ಅಸಹ್ಯ ಪಡುತ್ತೀರಾ ಆದರೆ ಅದು ನಿಮ್ಮ ಪಾಲಿಗೆ ಒಳಿತಾಗಿರಬಹುದು. ಮತ್ತು ನೀವು ಒಂದು ವಸ್ತುವನ್ನು ಇಷ್ಟಪಡುತ್ತೀರಾದರೆ ಅದು ನಿಮ್ಮ ಪಾಲಿಗೆ ಹಾನಿಕರವಾಗಿರಬಹುದು. ಅಲ್ಲಾಹನು ಅರಿಯುತ್ತಾನೆ. ಮತ್ತು ನೀವು ಅರಿಯದವರಾಗಿದ್ದೀರಿ.
ตัฟสีรต่างๆ​ ภาษาอาหรับ:
یَسْـَٔلُوْنَكَ عَنِ الشَّهْرِ الْحَرَامِ قِتَالٍ فِیْهِ ؕ— قُلْ قِتَالٌ فِیْهِ كَبِیْرٌ ؕ— وَصَدٌّ عَنْ سَبِیْلِ اللّٰهِ وَكُفْرٌ بِهٖ وَالْمَسْجِدِ الْحَرَامِ ۗ— وَاِخْرَاجُ اَهْلِهٖ مِنْهُ اَكْبَرُ عِنْدَ اللّٰهِ ۚ— وَالْفِتْنَةُ اَكْبَرُ مِنَ الْقَتْلِ ؕ— وَلَا یَزَالُوْنَ یُقَاتِلُوْنَكُمْ حَتّٰی یَرُدُّوْكُمْ عَنْ دِیْنِكُمْ اِنِ اسْتَطَاعُوْا ؕ— وَمَنْ یَّرْتَدِدْ مِنْكُمْ عَنْ دِیْنِهٖ فَیَمُتْ وَهُوَ كَافِرٌ فَاُولٰٓىِٕكَ حَبِطَتْ اَعْمَالُهُمْ فِی الدُّنْیَا وَالْاٰخِرَةِ ۚ— وَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಆದರಣೀಯ ತಿಂಗಳಲ್ಲಿ ಯುದ್ಧ ಮಾಡುವುದರ ಕುರಿತು ಅವರು ನಿಮ್ಮೊಡನೆ ಕೇಳುತ್ತಾರೆ? ಹೇಳಿರಿ! ಅವುಗಳಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿರುತ್ತದೆ. ಆದರೆ ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದು ಹಾಗೂ ಅವನಲ್ಲಿ ಅವಿಶ್ವಾಸ ತಾಳುವುದು ಮತ್ತು ಮಸ್ಜಿದುಲ್ ಹರಾಮ್‌ನಿಂದ ತಡೆಯುವುದು ಮತ್ತು ಅಲ್ಲಿನ (ಮಕ್ಕಾ) ನಿವಾಸಿಗಳನ್ನು ಅಲ್ಲಿಂದ ಹೊರ ಹಾಕುವುದು ಅಲ್ಲಾಹನ ಬಳಿ ಅದಕ್ಕಿಂತಲೂ ಗಂಭೀರ ಅಪರಾಧವಾಗಿರುತ್ತದೆ ಮತ್ತು ಕ್ಷೆÆÃಭೆ ಕೊಲೆಗಿಂತಲೂ ಗಂಭೀರ ಅಪರಾಧವಾಗಿರುತ್ತದೆ. ತಿಳಿದಿರಲೀ ! ಎಲ್ಲಿಯವರೆಗೆ ಅಂದರೆ ಅವರಿಗೆ ಸಾಧ್ಯವಾಗುವುದಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ಅವರು ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ಮತ್ತು ನಿಮ್ಮ ಪೈಕಿ ಯಾರು ತನ್ನ ಧರ್ಮದಿಂದ ವಿಮುಖನಾಗಿ ಸತ್ಯನಿಷೇಧಿಯಾಗಿರುವ ಸ್ಥಿತಿಯಲ್ಲಿ ಮರಣ ಹೊಂದುತ್ತಾರೋ ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿಬಿಡುವುವು ಮತ್ತು ಅವರು ನರಕಾಗ್ನಿಯವರಾಗಿರುವರು ಮತ್ತು ನರಕದಲ್ಲೇ ಶಾಶ್ವತರಾಗಿರುವರು.
ตัฟสีรต่างๆ​ ภาษาอาหรับ:
اِنَّ الَّذِیْنَ اٰمَنُوْا وَالَّذِیْنَ هَاجَرُوْا وَجٰهَدُوْا فِیْ سَبِیْلِ اللّٰهِ ۙ— اُولٰٓىِٕكَ یَرْجُوْنَ رَحْمَتَ اللّٰهِ ؕ— وَاللّٰهُ غَفُوْرٌ رَّحِیْمٌ ۟
ನಿಶ್ಚಯವಾಗಿಯು ಸತ್ಯವಿಶ್ವಾಸವಿರಿಸಿದವರು, (ಮನೆಮಾರು ಬಿಟ್ಟು) ವಲಸೆ ಹೋದವರು, ಅಲ್ಲಾಹನ ಮಾರ್ಗದಲ್ಲಿ ಹೋರಾಟ ಮಾಡಿದವರೇ ಅಲ್ಲಾಹನ ಕಾರುಣ್ಯದ ನಿರೀಕ್ಷೆಯಲ್ಲಿರುವವರು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯು ಆಗಿದ್ದಾನೆ.
ตัฟสีรต่างๆ​ ภาษาอาหรับ:
یَسْـَٔلُوْنَكَ عَنِ الْخَمْرِ وَالْمَیْسِرِ ؕ— قُلْ فِیْهِمَاۤ اِثْمٌ كَبِیْرٌ وَّمَنَافِعُ لِلنَّاسِ ؗ— وَاِثْمُهُمَاۤ اَكْبَرُ مِنْ نَّفْعِهِمَا ؕ— وَیَسْـَٔلُوْنَكَ مَاذَا یُنْفِقُوْنَ ؕ۬— قُلِ الْعَفْوَؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَتَفَكَّرُوْنَ ۟ۙ
ಅವರು ನಿಮ್ಮೊಡನೆ ಮದ್ಯ, ಜೂಜಾಟಗಳ ಕುರಿತು ಕೇಳುತ್ತಾರೆ. ಹೇಳಿರಿ; ಅವೆರಡರಲ್ಲಿ ಮಹಾಪಾಪವಿದೆ ಮತ್ತು ಜನರಿಗೆ ಅದರಲ್ಲಿ ಭೌತಿಕ ಪ್ರಯೋಜನಗಳೂ ಇವೆ ಮತ್ತು ಅವೆರಡರ ಪಾಪವು ಅವುಗಳ ಪ್ರಯೋಜಕ್ಕಿಂತಲೂ ಅತ್ಯಂತ ದೊಡ್ಡದಾಗಿರುತ್ತದೆ. ಅವರು ಏನನ್ನು ಖರ್ಚು ಮಾಡಬೇಕೆಂದು ಕೇಳುತ್ತಾರೆ ಹೇಳಿರಿ; ಅಗತ್ಯಕ್ಕಿಂತ ಅಧಿಕವಾಗಿರುವುದನ್ನು (ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ) ಇದೇ ಪ್ರಕಾರ ಅಲ್ಲಾಹನು ತನ್ನ ಸೂಕ್ತಿಗಳನ್ನು ನೀವು ಚಿಂತಿಸುವ ಸಲುವಾಗಿ ವಿವರಿಸಿಕೊಡುತ್ತಾನೆ.
ตัฟสีรต่างๆ​ ภาษาอาหรับ:
 
แปลความหมาย​ สูเราะฮ์: Al-Baqarah
สารบัญสูเราะฮ์ หมายเลข​หน้า​
 
แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี - สารบัญ​คำแปล

แปลโดยเชคบาชีร์ ไมซูรี ได้รับการพัฒนาภายใต้การดูแลของทีมงานศูนย์แปลรุว๊าด

ปิด