Check out the new design

แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี * - สารบัญ​คำแปล


แปลความหมาย​ สูเราะฮ์: Al-Baqarah   อายะฮ์:
وَاِذْ قَالَ اِبْرٰهٖمُ رَبِّ اَرِنِیْ كَیْفَ تُحْیِ الْمَوْتٰی ؕ— قَالَ اَوَلَمْ تُؤْمِنْ ؕ— قَالَ بَلٰی وَلٰكِنْ لِّیَطْمَىِٕنَّ قَلْبِیْ ؕ— قَالَ فَخُذْ اَرْبَعَةً مِّنَ الطَّیْرِ فَصُرْهُنَّ اِلَیْكَ ثُمَّ اجْعَلْ عَلٰی كُلِّ جَبَلٍ مِّنْهُنَّ جُزْءًا ثُمَّ ادْعُهُنَّ یَاْتِیْنَكَ سَعْیًا ؕ— وَاعْلَمْ اَنَّ اللّٰهَ عَزِیْزٌ حَكِیْمٌ ۟۠
(ಇಬ್ರಾಹೀಮ್(ಅ)) ಓ ನನ್ನ ಪ್ರಭು ನೀನು ಮೃತರನ್ನು ಹೇಗೆ ಜೀವಂತಗೊಳಿಸುವೆAಬುದನ್ನು ನನಗೆ ತೋರಿಸಿಕೊಡು ಎಂದು ನಿವೇದಿಸಿದರು. ಅವನು (ಅಲ್ಲಾಹ್)ಹೇಳಿದನು; ನಿನಗೆ ನಂಬಿಕೆಯಿಲ್ಲವೇ? ಅವರು ಹೇಳಿದರು; ಏಕಿಲ್ಲ ಆದರೆ ಇದು ನನ್ನ ಮನಸ್ಸಿಗೆ ಸಮಾಧಾನವಾಗಲೆಂದಾಗಿದೆ. ಅವನು (ಅಲ್ಲಾಹ್) ಹೇಳಿದನು; ನೀನು ನಾಲ್ಕು ಪಕ್ಷಿಗಳನ್ನು ಹಿಡಿದು ಅವುಗಳನ್ನು ಪಳಗಿಸಿ ನಂತರ ತುಂಡರಿಸಿ ಒಂದೊAದು ಭಾಗವನ್ನು ಪ್ರತಿಯೊಂದು ಬೆಟ್ಟದ ಮೇಲಿಡು. ಅನಂತರ ನೀನು ಅವುಗಳನ್ನು ಕೂಗಿ ಕರೆ. ಅವು ಧಾವಿಸುತ್ತಾ ನಿನ್ನೆಡೆಗೆ ಬರುವುವು ಮತ್ತು ನಿಶ್ಚಯವಾಗಿಯು ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ.
ตัฟสีรต่างๆ​ ภาษาอาหรับ:
مَثَلُ الَّذِیْنَ یُنْفِقُوْنَ اَمْوَالَهُمْ فِیْ سَبِیْلِ اللّٰهِ كَمَثَلِ حَبَّةٍ اَنْۢبَتَتْ سَبْعَ سَنَابِلَ فِیْ كُلِّ سُنْۢبُلَةٍ مِّائَةُ حَبَّةٍ ؕ— وَاللّٰهُ یُضٰعِفُ لِمَنْ یَّشَآءُ ؕ— وَاللّٰهُ وَاسِعٌ عَلِیْمٌ ۟
ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತುಗಳನ್ನು ಖರ್ಚುಮಾಡುವವರ ಉಪಮೆಯು ಒಂದು ಕಾಳಿನಂತೆ ಅದನ್ನು ಬಿತ್ತಿ ಅದು ಮೊಳಕೆಯೊಡೆದು ಏಳುತೆನೆಗಳನ್ನು ಬೆಳೆಸಿತು ಪ್ರತಿಯೊಂದು ತೆನೆಯಲ್ಲೂ ನೂರು ಕಾಳುಗಳಿವೆ ಮತ್ತು ಅಲ್ಲಾಹನು ತಾನಿಚ್ಛಿಸಿದವರಿಗೆ ಪ್ರತಿಫಲವನ್ನು ಇನ್ನೂ ಹೆಚ್ಚಿಸುವನು ಮತ್ತು ಅಲ್ಲಾಹನು ಅತಿವಿಶಾಲನೂ, ಸರ್ವಜ್ಞಾನಿಯೂ ಆಗಿರುವನು.
ตัฟสีรต่างๆ​ ภาษาอาหรับ:
اَلَّذِیْنَ یُنْفِقُوْنَ اَمْوَالَهُمْ فِیْ سَبِیْلِ اللّٰهِ ثُمَّ لَا یُتْبِعُوْنَ مَاۤ اَنْفَقُوْا مَنًّا وَّلَاۤ اَذًی ۙ— لَّهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಯಾರು ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತುಗಳನ್ನು ಖರ್ಚು ಮಾಡುತ್ತಾರೋ ಬಳಿಕ ತಾವು ಖರ್ಚು ಮಾಡಿದ್ದನ್ನು ಔದಾರ್ಯವಾಗಿ ಹೇಳಿಕೊಳ್ಳುವುದನ್ನಾಗಲೀ ಅಥವಾ ತೊಂದರೆ ಕೊಡುವುದನ್ನಾಗಲೀ ಮಾಡುವುದಿಲ್ಲವೋ ಅವರ ಪ್ರತಿಫಲವು ಅವರ ಪ್ರಭುವಿನ ಬಳಿಯಿದೆ ಮತ್ತು ಅವರ ಮೇಲೆ ಯಾವುದೇ ಭಯವಾಗಲೀ, ವ್ಯಥೆಯಾಗಲೀ ಬಾಧಿಸದು.
ตัฟสีรต่างๆ​ ภาษาอาหรับ:
قَوْلٌ مَّعْرُوْفٌ وَّمَغْفِرَةٌ خَیْرٌ مِّنْ صَدَقَةٍ یَّتْبَعُهَاۤ اَذًی ؕ— وَاللّٰهُ غَنِیٌّ حَلِیْمٌ ۟
ಮನ ನೋಯಿಸುವ ದಾನ ಧರ್ಮಕ್ಕಿಂತಲೂ ಸಭ್ಯವಾದ ಮಾತು ಮತ್ತು ಕ್ಷಮೆಯು ಉತ್ತಮವಾಗಿದೆ ಮತ್ತು ಅಲ್ಲಾಹನು ನಿರಪೇಕ್ಷನೂ, ಸಹನಶೀಲನೂ ಆಗಿರುವನು.
ตัฟสีรต่างๆ​ ภาษาอาหรับ:
یٰۤاَیُّهَا الَّذِیْنَ اٰمَنُوْا لَا تُبْطِلُوْا صَدَقٰتِكُمْ بِالْمَنِّ وَالْاَذٰی ۙ— كَالَّذِیْ یُنْفِقُ مَالَهٗ رِئَآءَ النَّاسِ وَلَا یُؤْمِنُ بِاللّٰهِ وَالْیَوْمِ الْاٰخِرِ ؕ— فَمَثَلُهٗ كَمَثَلِ صَفْوَانٍ عَلَیْهِ تُرَابٌ فَاَصَابَهٗ وَابِلٌ فَتَرَكَهٗ صَلْدًا ؕ— لَا یَقْدِرُوْنَ عَلٰی شَیْءٍ مِّمَّا كَسَبُوْا ؕ— وَاللّٰهُ لَا یَهْدِی الْقَوْمَ الْكٰفِرِیْنَ ۟
ಓ ಸತ್ಯವಿಶ್ವಾಸಿಗಳೇ, ಔದಾರ್ಯವಾಗಿ ಹೇಳಿಕೊಂಡಾಗಲಿ ಮನ ನೋಯಿಸಿಯಾಗಲಿ ನೀವು ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದೆÀ ಜನರಿಗೆ ತೋರಿಸಲು ಖರ್ಚು ಮಾಡುವ ಒಬ್ಬನ ಹಾಗೆ ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅವನ ಉಪಮೆಯು ಒಂದು ನುಣುಪಾದ ಬಂಡೆಯ ಮೇಲಿನ ಮಣ್ಣಿನಂತಿದೆ ಅವನು ಆ ಮಣ್ಣಿನಲ್ಲಿ ಬಿತ್ತಿ ಫಸಲನ್ನು ನಿರೀಕ್ಷಿಸುತ್ತಾನೆ. ಆದರೆ ಅದರ ಮೇಲೆ ಧಾರಾಕಾರವಾದ ಮಳೆ ಸುರಿದರೆ ಮಣ್ಣು ಕೊಚ್ಚಿ ಹೋಗಿ ಬಂಡೆ ಬರಿದಾಗಿ ಬಿಡುತ್ತದೆ. ಈ ರೀತಿ (ತೋರಿಕೆಗೆ) ಖರ್ಚು ಮಾಡುವರು ತಮ್ಮ ಪುಣ್ಯ ಕಾರ್ಯಗಳ ಸ್ವಲ್ಪ ಪ್ರತಿಫಲವನ್ನು ಪಡೆಯಲಾರರು. ಮತ್ತು ಅಲ್ಲಾಹನು ಸತ್ಯನಿಷೇಧಿ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ.
ตัฟสีรต่างๆ​ ภาษาอาหรับ:
 
แปลความหมาย​ สูเราะฮ์: Al-Baqarah
สารบัญสูเราะฮ์ หมายเลข​หน้า​
 
แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี - สารบัญ​คำแปล

แปลโดยเชคบาชีร์ ไมซูรี ได้รับการพัฒนาภายใต้การดูแลของทีมงานศูนย์แปลรุว๊าด

ปิด