Check out the new design

แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี * - สารบัญ​คำแปล


แปลความหมาย​ สูเราะฮ์: Āl-‘Imrān   อายะฮ์:
وَلَىِٕنْ مُّتُّمْ اَوْ قُتِلْتُمْ لَاۡاِلَی اللّٰهِ تُحْشَرُوْنَ ۟
ನೀವು ಮರಣವನ್ನಪ್ಪಿದರೂ, ಅಥವಾ ಕೊಲ್ಲಲ್ಪಟ್ಟರು ಖಂಡಿತವಾಗಿಯು ಅಲ್ಲಾಹನ ಬಳಿಗೇ ನೀವು ಒಟ್ಟುಗೂಡಿಸಲಾಗುವಿರಿ.
ตัฟสีรต่างๆ​ ภาษาอาหรับ:
فَبِمَا رَحْمَةٍ مِّنَ اللّٰهِ لِنْتَ لَهُمْ ۚ— وَلَوْ كُنْتَ فَظًّا غَلِیْظَ الْقَلْبِ لَانْفَضُّوْا مِنْ حَوْلِكَ ۪— فَاعْفُ عَنْهُمْ وَاسْتَغْفِرْ لَهُمْ وَشَاوِرْهُمْ فِی الْاَمْرِ ۚ— فَاِذَا عَزَمْتَ فَتَوَكَّلْ عَلَی اللّٰهِ ؕ— اِنَّ اللّٰهَ یُحِبُّ الْمُتَوَكِّلِیْنَ ۟
ಅಲ್ಲಾಹನ ಕಾರುಣ್ಯದ ನಿಮಿತ್ತ ನೀವು ಅವರೊಂದಿಗೆ ಸೌಮ್ಯವಾಗಿ ವರ್ತಿಸುತ್ತಿರುವಿರಿ ನೀವೇನಾದರು ಒರಟರು, ಕಠಿಣ ಹೃದಯಿಯು ಅಗಿರುತ್ತಿದ್ದರೆ ಅವರು ನಿಮ್ಮ ಬಳಿಯಿಂದ ಚದುರಿ ಹೋಗುತ್ತಿದ್ದರು. ಆದ್ದರಿಂದ ನೀವು ಅವರಿಗೆ ಕ್ಷಮೆಯನ್ನು ನೀಡಿರಿ ಮತ್ತು ಅವರಿಗಾಗಿ ಪಾಪವಿಮೋಚನೆಯನ್ನು ಬೇಡಿರಿ. ಮತ್ತು ಅವರೊಂದಿಗೆ ಕಾರ್ಯ ನಿರ್ವಹಣೆಯಲ್ಲಿ ಸಮಾಲೋಚನೆಯನ್ನು ನಡೆಸಿರಿ. ಅನಂತರ ನೀವು ಒಂದು ದೃಢ ನಿರ್ಧಾರಕ್ಕೆ ಬಂದರೆ ಅಲ್ಲಾಹನ ಮೇಲೆ ಭರವಸೆಯನ್ನಿಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ತನ್ನ ಮೇಲೆ ಭರವಸೆಯನ್ನಿಡುವವರನ್ನು ಇಷ್ಟ ಪಡುತ್ತಾನೆ.
ตัฟสีรต่างๆ​ ภาษาอาหรับ:
اِنْ یَّنْصُرْكُمُ اللّٰهُ فَلَا غَالِبَ لَكُمْ ۚ— وَاِنْ یَّخْذُلْكُمْ فَمَنْ ذَا الَّذِیْ یَنْصُرُكُمْ مِّنْ بَعْدِهٖ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟
ಅಲ್ಲಾಹನು ನಿಮಗೆ ಸಹಾಯ ಮಾಡುವುದಾದರೆ ನಿಮ್ಮನ್ನು ಸೋಲಿಸುವವನು ಯಾರಿಲ್ಲ ಇನ್ನು ಅವನು ನಿಮ್ಮನ್ನು ಕೈಬಿಟ್ಟರೆ ಅವನಲ್ಲದೇ ನಿಮಗೆ ಸಹಾಯ ಮಾಡುವವರು ಯಾರಿದ್ದಾರೆ? ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯಿಡಲಿ.
ตัฟสีรต่างๆ​ ภาษาอาหรับ:
وَمَا كَانَ لِنَبِیٍّ اَنْ یَّغُلَّ ؕ— وَمَنْ یَّغْلُلْ یَاْتِ بِمَا غَلَّ یَوْمَ الْقِیٰمَةِ ۚ— ثُمَّ تُوَفّٰی كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟
ಪೈಗಂಬರ್‌ರವರಿAದ ವಂಚನೆ ಎಂಬುದು ಅಸಂಭವವಾಗಿದೆ. ಪ್ರತಿಯೊಬ್ಬ ವಂಚಕನೂ ಪುನರುತ್ಥಾನ ದಿನದಂದು ತಾನು ವಂಚಿಸಿದ ವಸ್ತುವಿನೊಂದಿಗೆ ಹಾಜರಾಗುವನು. ಅನಂತರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಂಪಾದನೆಯ ಫಲವನ್ನು ಪರಿಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಯಾವ ಅನ್ಯಾಯವನ್ನೂ ಮಾಡಲಾಗದು.
ตัฟสีรต่างๆ​ ภาษาอาหรับ:
اَفَمَنِ اتَّبَعَ رِضْوَانَ اللّٰهِ كَمَنْ بَآءَ بِسَخَطٍ مِّنَ اللّٰهِ وَمَاْوٰىهُ جَهَنَّمُ ؕ— وَبِئْسَ الْمَصِیْرُ ۟
ಅಲ್ಲಾಹನ ಸಂತೃಪ್ತಿಯನ್ನು ಅರಸಿದವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗಿ ಮರಳುವ ಒಬ್ಬ ವ್ಯಕ್ತಿಯಂತ್ತಾಗುವನೇ? ಮತ್ತು ಅವನ ವಾಸಸ್ಥಳವು ನರಕವಾಗಿದೆ. ಅದೆಷ್ಟು ನಿಕೃಷ್ಟ ವಾಸ ಸ್ಥಳ!
ตัฟสีรต่างๆ​ ภาษาอาหรับ:
هُمْ دَرَجٰتٌ عِنْدَ اللّٰهِ ؕ— وَاللّٰهُ بَصِیْرٌ بِمَا یَعْمَلُوْنَ ۟
ಅಲ್ಲಾಹನ ಬಳಿ ಅವರಿಗೆ ವಿವಿಧ ಪದವಿಗಳಿವೆ ಮತ್ತು ಅಲ್ಲಾಹನು ಅವರು ಮಾಡುತ್ತಿರುವುದೆಲ್ಲವನ್ನೂ ನೋಡುತ್ತಿರುವನು.
ตัฟสีรต่างๆ​ ภาษาอาหรับ:
لَقَدْ مَنَّ اللّٰهُ عَلَی الْمُؤْمِنِیْنَ اِذْ بَعَثَ فِیْهِمْ رَسُوْلًا مِّنْ اَنْفُسِهِمْ یَتْلُوْا عَلَیْهِمْ اٰیٰتِهٖ وَیُزَكِّیْهِمْ وَیُعَلِّمُهُمُ الْكِتٰبَ وَالْحِكْمَةَ ۚ— وَاِنْ كَانُوْا مِنْ قَبْلُ لَفِیْ ضَلٰلٍ مُّبِیْنٍ ۟
ಸತ್ಯವಿಶ್ವಾಸಿಗಳಿಗೆ ಅವರಿಂದಲೇ ಆದ ಒಬ್ಬ ಸಂದೇಶವಾಹಕನನ್ನು ಅವರ ನಡುವೆ ಕಳುಹಿಸುವ ಮೂಲಕ ಖಂಡಿತವಾಗಿಯು ಅವರ ಮೇಲೆ ಅಲ್ಲಾಹನು ಮಹಾ ಉಪಕಾರ ಮಾಡಿದ್ದಾನೆ. ಅವರು ಅವರಿಗೆ ಅಲ್ಲಾಹನ ಸೂಕ್ತಿಗಳನ್ನು ಓದಿ ಕೇಳಿಸುತ್ತಾರೆ ಮತ್ತು ಅವರನ್ನು ಸಂಸ್ಕರಿಸುತ್ತಾರೆ. ಮತ್ತು ಅವರಿಗೆ ಗ್ರಂಥವನ್ನೂ, ಸುಜ್ಞಾನವನ್ನೂ ಕಲಿಸಿಕೊಡುತ್ತಾರೆ. ಖಂಡಿತವಾಗಿಯೂ ಅವರೆಲ್ಲರೂ ಇದಕ್ಕೆ ಮೊದಲು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿದ್ದರು.
ตัฟสีรต่างๆ​ ภาษาอาหรับ:
اَوَلَمَّاۤ اَصَابَتْكُمْ مُّصِیْبَةٌ قَدْ اَصَبْتُمْ مِّثْلَیْهَا ۙ— قُلْتُمْ اَنّٰی هٰذَا ؕ— قُلْ هُوَ مِنْ عِنْدِ اَنْفُسِكُمْ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟
ಉಹುದ್ ಸಮಯದಲ್ಲಿ ನಿಮಗೊಂದು ವಿಪತ್ತು ಬಾಧಿಸಿದಾಗ ನೀವು ಇದೆಲ್ಲಿಂದ ಬಂತು ಎನ್ನತೊಡಗಿದಿರಾ ? ವಸ್ತುತಃ ನಿಮ್ಮ ಕೈಗಳಿಂದ ಅವರಿಗೆ (ಖುರೈಷರಿಗೆ) ಇಮ್ಮಡಿ ವಿಪತ್ತು ಬಾಧಿಸಿತ್ತು. ಓ ಪೈಗಂಬರರೇ ಹೇಳಿರಿ; ಅದು ಸ್ವತಃ ನಿಮ್ಮ ಕಡೆಯಿಂದ ಬಂದಿರುವುದಾಗಿದೆ, ಖಂಡಿತವಾಗಿಯೂ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ตัฟสีรต่างๆ​ ภาษาอาหรับ:
 
แปลความหมาย​ สูเราะฮ์: Āl-‘Imrān
สารบัญสูเราะฮ์ หมายเลข​หน้า​
 
แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี - สารบัญ​คำแปล

แปลโดยเชคบาชีร์ ไมซูรี ได้รับการพัฒนาภายใต้การดูแลของทีมงานศูนย์แปลรุว๊าด

ปิด