Check out the new design

Salin ng mga Kahulugan ng Marangal na Qur'an - Salin sa Wikang Kannada ni Bashir Mysore * - Indise ng mga Salin


Salin ng mga Kahulugan Surah: Al-Baqarah   Ayah:
قُلْنَا اهْبِطُوْا مِنْهَا جَمِیْعًا ۚ— فَاِمَّا یَاْتِیَنَّكُمْ مِّنِّیْ هُدًی فَمَنْ تَبِعَ هُدَایَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟
ನಾವು ಹೇಳಿದೆವು; ನೀವೆಲ್ಲರು ಇಲ್ಲಿಂದ ಇಳಿದು ಹೋಗಿರಿ. ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನ ಬಂದಾಗ ಅದನ್ನು ಯಾರು ಅನುಸರಿಸುತ್ತಾರೋ, ಅವರಿಗೆ ಯಾವುದೇ ಭಯ ಮತ್ತು ವ್ಯಥೆ ಇರಲಾರದು.
Ang mga Tafsir na Arabe:
وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟۠
ಮತ್ತು ಯಾರು ಸತ್ಯ ನಿಷೇಧಿಸಿ ನಮ್ಮ “ಆಯತ್ (ದುಷ್ಟಾಂತಗಳನ್ನು) ಗಳನ್ನು ಸುಳ್ಳಾಗಿಸಿದರೋ, ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು
Ang mga Tafsir na Arabe:
یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَوْفُوْا بِعَهْدِیْۤ اُوْفِ بِعَهْدِكُمْ ۚ— وَاِیَّایَ فَارْهَبُوْنِ ۟
ಓ ಇಸ್ರಾಯೀಲ್ ಸಂತತಿಗಳೇ, ನಾನು (ಅಲ್ಲಾಹ್) ನಿಮ್ಮ ಮೇಲೆ ಅನುಗ್ರಹಿಸಿರುವಂತಹ ನನ್ನ ಅನುಗ್ರಹವನ್ನು ನೀವು ಸ್ಮರಿಸಿರಿ ಹಾಗೂ ನನ್ನೊಂದಿಗೆ ಮಾಡಿರುವ ಒಪ್ಪಂದವನ್ನು ಪೂರೈಸಿರಿ. ನಿಮ್ಮ ಜೊತೆ ಮಾಡಿರುವ ಒಪ್ಪಂದವನ್ನು ನಾನು ಪೂರೈಸುವೆನು ಮತ್ತು ನನ್ನನ್ನು ಮಾತ್ರ ನೀವು ಭಯಪಡಿರಿ.
Ang mga Tafsir na Arabe:
وَاٰمِنُوْا بِمَاۤ اَنْزَلْتُ مُصَدِّقًا لِّمَا مَعَكُمْ وَلَا تَكُوْنُوْۤا اَوَّلَ كَافِرٍ بِهٖ ۪— وَلَا تَشْتَرُوْا بِاٰیٰتِیْ ثَمَنًا قَلِیْلًا ؗ— وَّاِیَّایَ فَاتَّقُوْنِ ۟
ನಾನು ನಿಮ್ಮ ಬಳಿ ಇರುವ ಗ್ರಂಥಗಳನ್ನು ದೃಢೀಕರಿಸುವಂತದ್ದಾಗಿ (ಮಹಮ್ಮದ್(ಸ) ಪೈಗಂಬರರಿಗೆ) ಅವತೀರ್ಣಗೊಳಿಸಿರುವ ಈ ಗ್ರಂಥದಲ್ಲಿ (ಕುರ್‌ಆನಿನಲ್ಲಿ) ನೀವು ವಿಶ್ವಾಸವಿಡಿರಿ. ನೀವು ಅದನ್ನು ಧಿಕ್ಕರಿಸುವವರಲ್ಲಿ ಮೊದಲಿಗರಾಗಬೇಡಿರಿ. ಮತ್ತು ನನ್ನ ಸೂಕ್ತಿಗಳನ್ನು ತುಚ್ಛ ಬೆಲೆಗೆ ಮಾರಬೇಡಿರಿ ಮತ್ತು ನನ್ನನ್ನು (ಅಲ್ಲಾಹನನ್ನು) ಮಾತ್ರ ಭಯಪಡಿರಿ.
Ang mga Tafsir na Arabe:
وَلَا تَلْبِسُوا الْحَقَّ بِالْبَاطِلِ وَتَكْتُمُوا الْحَقَّ وَاَنْتُمْ تَعْلَمُوْنَ ۟
ನೀವು ಸತ್ಯವನ್ನು ಮಿಥ್ಯದೊಂದಿಗೆ ಬೆರಸದಿರಿ ಮತ್ತು ಅರಿತವರಾಗಿದ್ದೂ ಸತ್ಯವನ್ನು (ವಾಸ್ತವಿಕತೆಯನ್ನು) ಮರೆಮಾಚದಿರಿ.
Ang mga Tafsir na Arabe:
وَاَقِیْمُوا الصَّلٰوةَ وَاٰتُوا الزَّكٰوةَ وَارْكَعُوْا مَعَ الرّٰكِعِیْنَ ۟
ನೀವು ನಮಾಜನ್ನು ಸಂಸ್ಥಾಪಿಸಿರಿ ಹಾಗೂ ಝಕಾತ್ (ಕಡ್ಡಾಯ ಧನ) ಪಾವತಿಸಿರಿ ಮತ್ತು ಬಾಗುವವರೊಂದಿಗೆ ನೀವೂ ಬಾಗಿರಿ.
Ang mga Tafsir na Arabe:
اَتَاْمُرُوْنَ النَّاسَ بِالْبِرِّ وَتَنْسَوْنَ اَنْفُسَكُمْ وَاَنْتُمْ تَتْلُوْنَ الْكِتٰبَ ؕ— اَفَلَا تَعْقِلُوْنَ ۟
ನೀವು ಜನರಿಗೆ ಒಳಿತನ್ನು ಆದೇಶಿಸುತ್ತಾ ಸ್ವತಃ ನಿಮ್ಮನ್ನೇ ಮರೆತು ಬಿಡುತ್ತೀರಾ? ನೀವು ಗ್ರಂಥವನ್ನು ಪಠಿಸುವವರಾಗಿದ್ದೂ ಯೋಚಿಸುವುದಿಲ್ಲವೇ?.
Ang mga Tafsir na Arabe:
وَاسْتَعِیْنُوْا بِالصَّبْرِ وَالصَّلٰوةِ ؕ— وَاِنَّهَا لَكَبِیْرَةٌ اِلَّا عَلَی الْخٰشِعِیْنَ ۟ۙ
ಸಹನೆ ಮತ್ತು ನಮಾಜ್‌ನ ಮೂಲಕ (ಅಲ್ಲಾಹ ನೊಂದಿಗೆ) ಸಹಾಯ ಯಾಚಿಸಿರಿ. ಇದು ಭಯಭಕ್ತಿ ಹೊಂದಿದವರ ಹೊರತು ಇತರರಿಗೆ ಪ್ರಯಾಸಕರ ವಾಗಿರುತ್ತದೆ.
Ang mga Tafsir na Arabe:
الَّذِیْنَ یَظُنُّوْنَ اَنَّهُمْ مُّلٰقُوْا رَبِّهِمْ وَاَنَّهُمْ اِلَیْهِ رٰجِعُوْنَ ۟۠
ಅವರು ತಮ್ಮ ಪ್ರಭುವನ್ನು ಭೇಟಿಯಾಗಲಿರುವೆವೆಂದೂ ಮತ್ತು ಖಂಡಿತವಾಗಿ ಅವನೆಡೆಗೆ ಮರಳಿ ಹೋಗುವವರೆಂದೂ ಅರಿತವರಾಗಿದ್ದಾರೆ.
Ang mga Tafsir na Arabe:
یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَنِّیْ فَضَّلْتُكُمْ عَلَی الْعٰلَمِیْنَ ۟
ಓ ಇಸ್ರಾಯೀಲ್ ಸಂತತಿಗಳೇ, ನಾನು (ಅಲ್ಲಾಹ್) ನಿಮ್ಮ ಮೇಲೆ ಅನುಗ್ರಹಿಸಿದ್ದ ನನ್ನ ಅನುಗ್ರಹವನ್ನು ಮತ್ತು ನಾನು ನಿಮ್ಮನ್ನು ಸರ್ವಲೋಕದವರ ಮೇಲೆ ಶ್ರೇಷ್ಠತೆ ದಯಪಾಲಿಸಿದುದನ್ನು ಸ್ಮರಿಸಿರಿ.
Ang mga Tafsir na Arabe:
وَاتَّقُوْا یَوْمًا لَّا تَجْزِیْ نَفْسٌ عَنْ نَّفْسٍ شَیْـًٔا وَّلَا یُقْبَلُ مِنْهَا شَفَاعَةٌ وَّلَا یُؤْخَذُ مِنْهَا عَدْلٌ وَّلَا هُمْ یُنْصَرُوْنَ ۟
ಮತ್ತು ಯಾವೊಬ್ಬ ವ್ಯಕ್ತಿಯು ಇನ್ನಾವುದೇ ವ್ಯಕ್ತಿಗೆ ಯಾವ ಪ್ರಯೋಜನಕ್ಕೂ ಬಾರದ, ಯಾವೊಬ್ಬನಿಂದ ಶಿಫಾರಸ್ಸು ಸ್ವೀರಿಸಲಾಗದ, ಯಾವೊಬ್ಬನಿಂದ (ಮುಕ್ತಿ ಪಡೆಯಲು) ಪರಿಹಾರಧನವನ್ನು ಪಡೆಯಲಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಸಹಾಯ ನೀಡಲಾಗದ ಆ ಒಂದು ದಿನವನ್ನು ಭಯಪಡಿರಿ.
Ang mga Tafsir na Arabe:
 
Salin ng mga Kahulugan Surah: Al-Baqarah
Indise ng mga Surah Numero ng Pahina
 
Salin ng mga Kahulugan ng Marangal na Qur'an - Salin sa Wikang Kannada ni Bashir Mysore - Indise ng mga Salin

Isinalin ito ni Sheikh Bashir Maisuri. Binuo sa ilalim ng pangangasiwa ng Sentro ng Pagsasalin ng Rowᾱd.

Isara