Check out the new design

Salin ng mga Kahulugan ng Marangal na Qur'an - Salin sa Wikang Kannada ni Bashir Mysore * - Indise ng mga Salin


Salin ng mga Kahulugan Surah: An-Noor   Ayah:
وَاِذَا بَلَغَ الْاَطْفَالُ مِنْكُمُ الْحُلُمَ فَلْیَسْتَاْذِنُوْا كَمَا اسْتَاْذَنَ الَّذِیْنَ مِنْ قَبْلِهِمْ ؕ— كَذٰلِكَ یُبَیِّنُ اللّٰهُ لَكُمْ اٰیٰتِهٖ ؕ— وَاللّٰهُ عَلِیْمٌ حَكِیْمٌ ۟
ನಿಮ್ಮ ಮಕ್ಕಳು ಯೌವ್ವನಾವಸ್ಥೆಗೆ ತಲುಪಿದರೆ ಅವರ ಹಿರಿಯರು ಅನುಮತಿ ಪಡೆಯುವ ಹಾಗೆಯೇ ಅವರು ಸಹ ಅನುಮತಿ ಪಡೆದುಕೊಂಡು ಬರಲಿ. ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ನಿಯಮಗಳನ್ನು ವಿವರಿಸಿ ಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ.
Ang mga Tafsir na Arabe:
وَالْقَوَاعِدُ مِنَ النِّسَآءِ الّٰتِیْ لَا یَرْجُوْنَ نِكَاحًا فَلَیْسَ عَلَیْهِنَّ جُنَاحٌ اَنْ یَّضَعْنَ ثِیَابَهُنَّ غَیْرَ مُتَبَرِّجٰتٍ بِزِیْنَةٍ ؕ— وَاَنْ یَّسْتَعْفِفْنَ خَیْرٌ لَّهُنَّ ؕ— وَاللّٰهُ سَمِیْعٌ عَلِیْمٌ ۟
ವಿವಾಹದ ನಿರೀಕ್ಷೆಯನ್ನಿಟ್ಟುಕೊಳ್ಳದ ವೃದ್ಧ ಸ್ತಿçÃಯರು ತಮ್ಮ ಮುಸುಕುಗಳನ್ನು ಕಳಚಿಡುವುದರಿಂದ ದೋಷವೇನೂ ಇಲ್ಲ. ಆದರೆ ತಮ್ಮ ಕೃತಕ ಶೃಂಗಾರವನ್ನು ಪ್ರಕಟಿಸುವವರಾಗಿರಬಾರದು. ಆದರೆ ಅವರೂ ಸಹ ಸೂಕ್ಷö್ಮತೆಯನ್ನು ಪಾಲಿಸಿದರೆ ಅವರ ಪಾಲಿಗೆ ಅತ್ಯುತ್ತಮವಾಗಿರುತ್ತದೆ. ಅಲ್ಲಾಹನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.
Ang mga Tafsir na Arabe:
لَیْسَ عَلَی الْاَعْمٰی حَرَجٌ وَّلَا عَلَی الْاَعْرَجِ حَرَجٌ وَّلَا عَلَی الْمَرِیْضِ حَرَجٌ وَّلَا عَلٰۤی اَنْفُسِكُمْ اَنْ تَاْكُلُوْا مِنْ بُیُوْتِكُمْ اَوْ بُیُوْتِ اٰبَآىِٕكُمْ اَوْ بُیُوْتِ اُمَّهٰتِكُمْ اَوْ بُیُوْتِ اِخْوَانِكُمْ اَوْ بُیُوْتِ اَخَوٰتِكُمْ اَوْ بُیُوْتِ اَعْمَامِكُمْ اَوْ بُیُوْتِ عَمّٰتِكُمْ اَوْ بُیُوْتِ اَخْوَالِكُمْ اَوْ بُیُوْتِ خٰلٰتِكُمْ اَوْ مَا مَلَكْتُمْ مَّفَاتِحَهٗۤ اَوْ صَدِیْقِكُمْ ؕ— لَیْسَ عَلَیْكُمْ جُنَاحٌ اَنْ تَاْكُلُوْا جَمِیْعًا اَوْ اَشْتَاتًا ؕ— فَاِذَا دَخَلْتُمْ بُیُوْتًا فَسَلِّمُوْا عَلٰۤی اَنْفُسِكُمْ تَحِیَّةً مِّنْ عِنْدِ اللّٰهِ مُبٰرَكَةً طَیِّبَةً ؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَعْقِلُوْنَ ۟۠
ಅಂಧನ ಮೇಲೆ, ಕುಂಟನ ಮೇಲೆ, ರೋಗಿಯ ಮೇಲೆ, ಸ್ವತಃ ನಿಮ್ಮ ಮೇಲೆ (ಯಾವ) ದೋಷವಿರುವುದಿಲ್ಲ; ನೀವು ನಿಮ್ಮ ತಂದೆ ತಾತಂದಿರ ಮನೆಗಳಲ್ಲಿ ಅಥವಾ ನಿಮ್ಮ ತಾಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಗಳಲ್ಲಿ ಅಥವಾ ನಿಮ್ಮ ಚಿಕ್ಕಪ್ಪಂದಿರ (ಪಿತೃ ಸಹೋದರ) ಮನೆಗಳಲ್ಲಿ ಅಥವಾ ನಿಮ್ಮ ಸೋದರತ್ತೆಯರ (ಪಿತೃ ಸಹೋದರಿಯರ) ಮನೆಗಳಲ್ಲಿ ಅಥವಾ ನಿಮ್ಮ ಮಾಮಂದಿರ (ಮಾತೃ ಸಹೋದರರ) ಮನೆಗಳಲ್ಲಿ ಅಥವಾ ನಿಮ್ಮ ಚಿಕ್ಕಮ್ಮರ (ಮಾತೃ ಸಹೋದರಿಯರ) ಮನೆಗಳಲ್ಲಿ ಅಥವಾ ಬೀಗದ ಕೈಗಳು ನಿಮ್ಮ ಸ್ವಾಧೀನದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಸ್ನೇಹಿತರ ಮನೆಗಳಲ್ಲಿ ತಿನ್ನುವುದರಿಂದ ದೋಷವಿಲ್ಲ. ನೀವು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಅಥವಾ ಪತ್ಯೇಕವಾಗಿ ತಿನ್ನುವುದರಿಂದಲೂ ನಿಮ್ಮ ಮೇಲೆ ತಪ್ಪೇನೂ ಇಲ್ಲ. ಹಾಗೆಯೇ ನೀವು ಮನೆಗಳನ್ನು ಪ್ರವೇಶಿಸುವಾಗ ಅಲ್ಲಾಹನ ಕಡೆಯಿಂದಿರುವ ಸಮೃದ್ಧಪೂರ್ಣವೂ ಪವಿತ್ರವೂ ಆದ ಶುಭ ಕೋರಿಕೆ ಎಂಬAತೆ ನಿಮ್ಮ ಮನೆಯವರ ಮೇಲೆ ಸಲಾಮ್ ಹೇಳರಿ. ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ನಿಯಮಗಳನ್ನು ವಿವರಿಸಿ ಕೊಡುತ್ತಾನೆ. ಇದು ನೀವು ವಿವೇಚಿಸಿಕೊಳ್ಳಲೆಂದಾಗಿರುತ್ತದೆ.
Ang mga Tafsir na Arabe:
 
Salin ng mga Kahulugan Surah: An-Noor
Indise ng mga Surah Numero ng Pahina
 
Salin ng mga Kahulugan ng Marangal na Qur'an - Salin sa Wikang Kannada ni Bashir Mysore - Indise ng mga Salin

Isinalin ito ni Sheikh Bashir Maisuri. Binuo sa ilalim ng pangangasiwa ng Sentro ng Pagsasalin ng Rowᾱd.

Isara