Check out the new design

Salin ng mga Kahulugan ng Marangal na Qur'an - Salin sa Wikang Kannada ni Bashir Mysore * - Indise ng mga Salin


Salin ng mga Kahulugan Surah: An-Naml   Ayah:
وَجَحَدُوْا بِهَا وَاسْتَیْقَنَتْهَاۤ اَنْفُسُهُمْ ظُلْمًا وَّعُلُوًّا ؕ— فَانْظُرْ كَیْفَ كَانَ عَاقِبَةُ الْمُفْسِدِیْنَ ۟۠
ಅವರು ಅಕ್ರಮ ಮತ್ತು ಅಹಂಕಾರದಿAದಾಗಿ ಅವುಗಳನ್ನು ನಿಷೇಧಿಸಿ ಬಿಟ್ಟರು. ವಸ್ತುತಃ ಅವರ ಹೃದಯಗಳು ದೃಢವಾಗಿ ನಂಬಿದ್ದವು. ಇನ್ನು ಕ್ಷೆÆÃಭೆ ಹರಡುವವರ ದುಷ್ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ.
Ang mga Tafsir na Arabe:
وَلَقَدْ اٰتَیْنَا دَاوٗدَ وَسُلَیْمٰنَ عِلْمًا ۚ— وَقَالَا الْحَمْدُ لِلّٰهِ الَّذِیْ فَضَّلَنَا عَلٰی كَثِیْرٍ مِّنْ عِبَادِهِ الْمُؤْمِنِیْنَ ۟
ನಿಶ್ಚಯವಾಗಿಯು ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ದಯಪಾಲಿಸಿದೆವು ಮತ್ತು ಅವರಿಬ್ಬರು ಹೇಳಿದರು: ತನ್ನ ಅನೇಕ ಸತ್ಯವಿಶ್ವಾಸಿ ದಾಸರ ಮೇಲೆ ನಮಗೆ ಶ್ರೇಷ್ಠತೆ ನೀಡಿದಂತಹ ಅಲ್ಲಾಹನಿಗೆ ಸರ್ವಸ್ತುತಿಯು ಮೀಸಲು.
Ang mga Tafsir na Arabe:
وَوَرِثَ سُلَیْمٰنُ دَاوٗدَ وَقَالَ یٰۤاَیُّهَا النَّاسُ عُلِّمْنَا مَنْطِقَ الطَّیْرِ وَاُوْتِیْنَا مِنْ كُلِّ شَیْءٍ ؕ— اِنَّ هٰذَا لَهُوَ الْفَضْلُ الْمُبِیْنُ ۟
ಸುಲೈಮಾನರು ದಾವೂದರ ವಾರೀಸುದಾರರಾದರು ಮತ್ತು ಹೇಳಿದರು: ಓ ಜನರೇ, ನಮಗೆ ಪಕ್ಷಿಗಳ ಮಾತನ್ನು ಕಲಿಸಲಾಗಿದೆ ಮತ್ತು ನಾವು ಎಲ್ಲಾ ವಸ್ತುಗಳಿಂದಲೂ ಕರುಣಿಸಲಾಗಿದ್ದೇವೆ. ನಿಸ್ಸಂಶಯವಾಗಿಯು ಇದು ಸುಸ್ಪಷ್ಟ ಅನುಗ್ರಹವಾಗಿದೆ.
Ang mga Tafsir na Arabe:
وَحُشِرَ لِسُلَیْمٰنَ جُنُوْدُهٗ مِنَ الْجِنِّ وَالْاِنْسِ وَالطَّیْرِ فَهُمْ یُوْزَعُوْنَ ۟
ಸುಲೈಮಾನರಿಗಾಗಿ ಜಿನ್ನ್ (ಯಕ್ಷ) ಮನುಷ್ಯ ಮತ್ತು ಪಕ್ಷಿಗಳ ಸೈನ್ಯವನ್ನು ಒಟ್ಟುಗೂಡಿಸಲಾಯಿತು. ಮತ್ತು ಪ್ರತಿಯೊಂದು ವರ್ಗವನ್ನು ಸಂಪೂರ್ಣ ಶಿಸ್ತಿನೊಂದಿಗೆ ಇಡಲಾಯಿತು.
Ang mga Tafsir na Arabe:
حَتّٰۤی اِذَاۤ اَتَوْا عَلٰی وَادِ النَّمْلِ ۙ— قَالَتْ نَمْلَةٌ یّٰۤاَیُّهَا النَّمْلُ ادْخُلُوْا مَسٰكِنَكُمْ ۚ— لَا یَحْطِمَنَّكُمْ سُلَیْمٰنُ وَجُنُوْدُهٗ ۙ— وَهُمْ لَا یَشْعُرُوْنَ ۟
ಹಾಗೆಯೇ ಅವರು ಇರುವೆಯ ಕಣಿವೆಗೆ ಬಂದಾಗ ಒಂದು ಇರುವೆಯು ಹೇಳಿತು: ಓ ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಸೈನ್ಯವು ತಮಗರಿವಿಲ್ಲ ದಂತೆಯೇ ನಿಮ್ಮನ್ನು ತುಳಿಯದಂತಾಗದಿರಲಿ.
Ang mga Tafsir na Arabe:
فَتَبَسَّمَ ضَاحِكًا مِّنْ قَوْلِهَا وَقَالَ رَبِّ اَوْزِعْنِیْۤ اَنْ اَشْكُرَ نِعْمَتَكَ الَّتِیْۤ اَنْعَمْتَ عَلَیَّ وَعَلٰی وَالِدَیَّ وَاَنْ اَعْمَلَ صَالِحًا تَرْضٰىهُ وَاَدْخِلْنِیْ بِرَحْمَتِكَ فِیْ عِبَادِكَ الصّٰلِحِیْنَ ۟
ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ, ನೀನು ನನ್ನ ಮೇಲೂ, ನನ್ನ ಮಾತಾಪಿತರ ಮೇಲೂ ದಯಪಾಲಿಸಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ಸಲ್ಲಿಸಲು ಮತ್ತು ನೀನು ಮೆಚ್ಚುವಂತಹ ಸತ್ಕರ್ಮವೆಸಗಲು ನನಗೆ ಸ್ಪೂರ್ತಿ ನೀಡು ಮತ್ತು ನೀನು ನನ್ನನ್ನು ನಿನ್ನ ಸಜ್ಜನರಾದ ದಾಸರಲ್ಲಿ ಸೇರಿಸು.
Ang mga Tafsir na Arabe:
وَتَفَقَّدَ الطَّیْرَ فَقَالَ مَا لِیَ لَاۤ اَرَی الْهُدْهُدَ ۖؗ— اَمْ كَانَ مِنَ الْغَآىِٕبِیْنَ ۟
ಅವರು ಪಕ್ಷಿಗಳನ್ನು ಪರಿಶೀಲಿಸಿದರು ಮತ್ತು ಹೇಳಿದರು: ಏನು ಸಮಾಚಾರ; ನಾನು ಹುದ್‌ಹುದ್‌ನನ್ನು (ಮರಕುಟಿಕ) ಕಾಣುತ್ತಿಲ್ಲವಲ್ಲ? ಅದು ಅನುಪಸ್ಥಿತಿ ಯಾಗಿದೆಯಲ್ಲವೇ?
Ang mga Tafsir na Arabe:
لَاُعَذِّبَنَّهٗ عَذَابًا شَدِیْدًا اَوْ لَاَاذْبَحَنَّهٗۤ اَوْ لَیَاْتِیَنِّیْ بِسُلْطٰنٍ مُّبِیْنٍ ۟
ಖಂಡಿತ ನಾನದಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುತ್ತೇನೆ ಅಥವಾ ಅದನ್ನು ನಾನು ಕೊಯ್ದು ಬಿಡುತ್ತೇನೆ. ಇಲ್ಲವೇ ಅದು ನನ್ನ ಮುಂದೆ ಯಾವುದಾದರು ಸುಸ್ಪಷ್ಟ ಕಾರಣವನ್ನು ಹೇಳಬೇಕು.
Ang mga Tafsir na Arabe:
فَمَكَثَ غَیْرَ بَعِیْدٍ فَقَالَ اَحَطْتُّ بِمَا لَمْ تُحِطْ بِهٖ وَجِئْتُكَ مِنْ سَبَاٍ بِنَبَاٍ یَّقِیْنٍ ۟
ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ. ನಾನು 'ಸಬಾ ಪಟ್ಟಣದ' ಒಂದು ಖಾತರಿ ಸುದ್ಧಿಯನ್ನು ನಿಮ್ಮಲ್ಲಿಗೆ ತಂದಿರುತ್ತೇನೆ.
Ang mga Tafsir na Arabe:
 
Salin ng mga Kahulugan Surah: An-Naml
Indise ng mga Surah Numero ng Pahina
 
Salin ng mga Kahulugan ng Marangal na Qur'an - Salin sa Wikang Kannada ni Bashir Mysore - Indise ng mga Salin

Isinalin ito ni Sheikh Bashir Maisuri. Binuo sa ilalim ng pangangasiwa ng Sentro ng Pagsasalin ng Rowᾱd.

Isara