Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: انعام   آیت:
وَمَا قَدَرُوا اللّٰهَ حَقَّ قَدْرِهٖۤ اِذْ قَالُوْا مَاۤ اَنْزَلَ اللّٰهُ عَلٰی بَشَرٍ مِّنْ شَیْءٍ ؕ— قُلْ مَنْ اَنْزَلَ الْكِتٰبَ الَّذِیْ جَآءَ بِهٖ مُوْسٰی نُوْرًا وَّهُدًی لِّلنَّاسِ تَجْعَلُوْنَهٗ قَرَاطِیْسَ تُبْدُوْنَهَا وَتُخْفُوْنَ كَثِیْرًا ۚ— وَعُلِّمْتُمْ مَّا لَمْ تَعْلَمُوْۤا اَنْتُمْ وَلَاۤ اٰبَآؤُكُمْ ؕ— قُلِ اللّٰهُ ۙ— ثُمَّ ذَرْهُمْ فِیْ خَوْضِهِمْ یَلْعَبُوْنَ ۟
ಅಲ್ಲಾಹನು ಯಾವೊಬ್ಬ ಮನುಷ್ಯನಿಗೂ ಏನನ್ನು ಅವತೀರ್ಣಗೊಳಿಸಿಲ್ಲ ಎಂದು ಅವರು ಹೇಳಿದ ಸಂದರ್ಭವನ್ನು ಸ್ಮರಿಸಿರಿ ಅವರು ಅಲ್ಲಾಹನ ಮಹತ್ವವನ್ನು ಗ್ರಹಿಸುವಂತೆ ಗ್ರಹಿಸಲಿಲ್ಲ. ಹೇಳಿರಿ: ಹಾಗಾದರೆ ಜನರಿಗೆ ಪ್ರಕಾಶ ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ಅದನ್ನು ನೀವು ವಿಭಿನ್ನ ಹಾಳೆಗಳಲ್ಲಿಟ್ಟು ಬಿಟ್ಟರಿ. ಅವುಗಳಲ್ಲಿ ಕೆಲವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನ ವಿಷಯಗಳನ್ನು ಬಚ್ಚಿಡುತ್ತೀರಿ. ಅದರ ಮೂಲಕ ನೀವಾಗಲೀ, ನಿಮ್ಮ ಪೂರ್ವಿಕರಾಗಲೀ ಅರಿತಿರದಂತಹ ವಿಚಾರಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಡಲಾಗಿದೆ. ಹೇಳಿರಿ: ಅಲ್ಲಾಹನೇ ಅದನ್ನು ಅವತೀರ್ಣಗೊ ಳಿಸಿರುವನು. ನಂತರ ಅವರನ್ನು ಅವರ ವ್ಯರ್ಥಮಾತುಗಳಲ್ಲಿ ಆಟವಾಡುತ್ತಿರಲು ಬಿಟ್ಟು ಬಿಡಿರಿ.
عربی تفاسیر:
وَهٰذَا كِتٰبٌ اَنْزَلْنٰهُ مُبٰرَكٌ مُّصَدِّقُ الَّذِیْ بَیْنَ یَدَیْهِ وَلِتُنْذِرَ اُمَّ الْقُرٰی وَمَنْ حَوْلَهَا ؕ— وَالَّذِیْنَ یُؤْمِنُوْنَ بِالْاٰخِرَةِ یُؤْمِنُوْنَ بِهٖ وَهُمْ عَلٰی صَلَاتِهِمْ یُحَافِظُوْنَ ۟
ಮತ್ತು ಇದು ನಾವು ಅವತೀರ್ಣಗೊಳಿಸಿರುವ ಸಮೃದ್ಧಪೂರ್ಣ (ಮತ್ತೊಂದು) ಗ್ರಂಥವಾಗಿದೆ. ಹಾಗೂ ತನಗಿಂತ ಮುಂಚಿನ ಗ್ರಂಥಗಳನ್ನು ಸತ್ಯವೆಂದು ದೃಢೀಕರಿಸುತ್ತದೆ. ಇದು ನೀವು ಮಕ್ಕಾನಿವಾಸಿಗಳಿಗೆ ಮತ್ತು ಅದರ ಸುತ್ತ ಮುತ್ತಲಿನಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಮತ್ತು ಪರಲೋಕದಲ್ಲಿ ವಿಶ್ವಾಸ ವಿಡುವವರು ಇದರಲ್ಲಿ ವಿಶ್ವಾಸ ಇಡುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
عربی تفاسیر:
وَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ قَالَ اُوْحِیَ اِلَیَّ وَلَمْ یُوْحَ اِلَیْهِ شَیْءٌ وَّمَنْ قَالَ سَاُنْزِلُ مِثْلَ مَاۤ اَنْزَلَ اللّٰهُ ؕ— وَلَوْ تَرٰۤی اِذِ الظّٰلِمُوْنَ فِیْ غَمَرٰتِ الْمَوْتِ وَالْمَلٰٓىِٕكَةُ بَاسِطُوْۤا اَیْدِیْهِمْ ۚ— اَخْرِجُوْۤا اَنْفُسَكُمْ ؕ— اَلْیَوْمَ تُجْزَوْنَ عَذَابَ الْهُوْنِ بِمَا كُنْتُمْ تَقُوْلُوْنَ عَلَی اللّٰهِ غَیْرَ الْحَقِّ وَكُنْتُمْ عَنْ اٰیٰتِهٖ تَسْتَكْبِرُوْنَ ۟
ಮತ್ತು ಅಲ್ಲಾಹನ ಮೇಲೆ ಸುಳ್ಳು ಹೆಣೆದವನಿಗಿಂತ ಅಥವಾ ಅವನಿಗೆ ಯಾವ ದಿವ್ಯ ಸಂದೇಶÀ ನೀಡದಿದ್ದರೂ ತನಗೆ ದಿವ್ಯಸಂದೇಶ ನೀಡಲ್ಪಟ್ಟಿದೆಂದು ಹೇಳಿದವನಿಗಿಂತ ಮತ್ತು ಅಲ್ಲಾಹನು ಅವತೀರ್ಣಗೊಳಿಸಿದಂತಿರುವುದನ್ನು ತಾನೂ ಅವತೀರ್ಣಗೊಳಿಸುವೆನೆಂದು ಹೇಳಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅಂತಹ ಅಕ್ರಮಿಗಳು ಪ್ರಾಣಸಂಕಟದಲ್ಲಿರುವ ಸಂದರ್ಭದಲ್ಲಿ ಮತ್ತು ಮಲಕ್‌ಗಳು ತಮ್ಮ ಕೈಗಳನ್ನು ಚಾಚಿ “ನೀವು ನಿಮ್ಮ ಪ್ರಾಣಗಳನ್ನು ಹೊರತೆಗೆಯಿರಿ ನೀವು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದುದರ ನಿಮಿತ್ತ ಮತ್ತು ಅಲ್ಲಾಹನ ದೃಷ್ಟಾಂತಗಳೊAದಿಗೆ ಅಹಂಕಾರ ತೋರಿಸುತ್ತಿದ್ದುದರ ನಿಮಿತ್ತ ಇಂದು ನಿಮಗೆ ನಿಂದ್ಯತೆಯ ಯಾತನೆಯನ್ನು ನೀಡಲಾಗುವುದೆಂದು (ಮಲಕ್‌ಗಳು) ಹೇಳುತ್ತಿರುವ ಸಂಧರ್ಭವನ್ನು ನೀವು ಕಂಡಿದ್ದರೆ (ಅದೂ ಭಯಾನಕ ದೃಶ್ಯವಾಗಿತ್ತು)
عربی تفاسیر:
وَلَقَدْ جِئْتُمُوْنَا فُرَادٰی كَمَا خَلَقْنٰكُمْ اَوَّلَ مَرَّةٍ وَّتَرَكْتُمْ مَّا خَوَّلْنٰكُمْ وَرَآءَ ظُهُوْرِكُمْ ۚ— وَمَا نَرٰی مَعَكُمْ شُفَعَآءَكُمُ الَّذِیْنَ زَعَمْتُمْ اَنَّهُمْ فِیْكُمْ شُرَكٰٓؤُا ؕ— لَقَدْ تَّقَطَّعَ بَیْنَكُمْ وَضَلَّ عَنْكُمْ مَّا كُنْتُمْ تَزْعُمُوْنَ ۟۠
(ಅಲ್ಲಾಹನು ಹೇಳುವನು) ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿರುವಂತೇ ನೀವು ನಮ್ಮ ಬಳಿಗೆ ಒಬ್ಬಂಟಿಯಾಗಿ ಬಂದಿರುವಿರಿ; ನಿಮಗೆ ನಾವು ನೀಡಿರುವುದನ್ನೆಲ್ಲಾ ನೀವು ನಿಮ್ಮ ಬೆನ್ನ ಹಿಂದೆಯೇ ಬಿಟ್ಟು ಬಂದಿರುವಿರಿ ಮತ್ತು ನೀವು ನಿಮ್ಮ ವಿಚಾರದಲ್ಲಿ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸ್ಸುಗಾರರನ್ನು ನಾವು ನಿಮ್ಮೊಂದಿಗೆ ಕಾಣುತ್ತಿಲ್ಲ. ವಾಸ್ತವದಲ್ಲಿ ನಿಮ್ಮ ನಡುವಿನ ಸಂಬAಧಗಳು ಮುರಿದು ಹೋಗಿವೆ ಮತ್ತು ನೀವು ವಾದಿಸುತ್ತಿದ್ದವುಗಳೆಲ್ಲವೂ ನಿಮ್ಮಿಂದ ಕಣ್ಮರೆಯಾಗಿ ಬಿಟ್ಟಿವೆ.
عربی تفاسیر:
 
معانی کا ترجمہ سورت: انعام
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں