Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: انعام   آیت:
قُلْ اَیُّ شَیْءٍ اَكْبَرُ شَهَادَةً ؕ— قُلِ اللّٰهُ ۫— شَهِیْدٌۢ بَیْنِیْ وَبَیْنَكُمْ ۫— وَاُوْحِیَ اِلَیَّ هٰذَا الْقُرْاٰنُ لِاُنْذِرَكُمْ بِهٖ وَمَنْ بَلَغَ ؕ— اَىِٕنَّكُمْ لَتَشْهَدُوْنَ اَنَّ مَعَ اللّٰهِ اٰلِهَةً اُخْرٰی ؕ— قُلْ لَّاۤ اَشْهَدُ ۚ— قُلْ اِنَّمَا هُوَ اِلٰهٌ وَّاحِدٌ وَّاِنَّنِیْ بَرِیْٓءٌ مِّمَّا تُشْرِكُوْنَ ۟ۘ
ಹೇಳಿರಿ: (ಓ ಪೈಗಂಬರರೇ) ಯಾರ ಸಾಕ್ಷö್ಯವು ಎಲ್ಲಕ್ಕಿಂತ ದೊಡ್ಡ ಸಾಕ್ಷö್ಯವಾಗಿದೆ? ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ. ಈ ಕುರ್‌ಆನನ್ನು ನನಗೆ ದಿವ್ಯ ಸಂದೇಶವಾಗಿ ನೀಡಲ್ಪಟ್ಟಿರುವುದು ಇದರ ಮೂಲಕ ನಿಮಗೂ, ಈ ಕುರ್‌ಆನ್ ತಲುಪುವ ಸರ್ವರಿಗೂ ನಾನು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ನಿಜವಾಗಿಯು ಅಲ್ಲಾಹನೊಂದಿಗೆ ಇತರೆ ಆರಾಧ್ಯರೂ ಇರುವರೆಂದು ನೀವು ಸಾಕ್ಷö್ಯ ವಹಿಸುತ್ತೀರಾ? ಹೇಳಿರಿ: ನಾನು ಸಾಕ್ಷö್ಯ ವಹಿಸುವುದಿಲ್ಲ. ನೀವು ಹೇಳಿರಿ: ಅವನು ಕೇವಲ ಏಕೈಕ ಆರಾಧ್ಯನಾಗಿದ್ದಾನೆ. ಮತ್ತು ನಾನು ನೀವು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಸಂಬAಧಮುಕ್ತನಾಗಿದ್ದೇನೆ.
عربی تفاسیر:
اَلَّذِیْنَ اٰتَیْنٰهُمُ الْكِتٰبَ یَعْرِفُوْنَهٗ كَمَا یَعْرِفُوْنَ اَبْنَآءَهُمْ ۘ— اَلَّذِیْنَ خَسِرُوْۤا اَنْفُسَهُمْ فَهُمْ لَا یُؤْمِنُوْنَ ۟۠
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ (ಯಹೂದಿಯರು) ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆ ಸಂದೇಶವಾಹಕ (ಮುಹಮ್ಮದ್(ಸ) ರವರನ್ನು ಗುರುತಿಸುತ್ತಾರೆ. ಆದರೆ ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದವರು ಸತ್ಯವಿಶ್ವಾಸವಿಡುವುದಿಲ್ಲ.
عربی تفاسیر:
وَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ كَذَّبَ بِاٰیٰتِهٖ ؕ— اِنَّهٗ لَا یُفْلِحُ الظّٰلِمُوْنَ ۟
ಅಲ್ಲಾಹನ ಮೇಲೆ ಸುಳ್ಳು ಹೆಣೆದವನಿಗಿಂತ ಅಥವಾ ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳೆಂದು ಹೇಳಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಇಂತಹ ಅಕ್ರಮಿಗಳು ಯಶಸ್ವಿಯಾಗಲಾರರು.
عربی تفاسیر:
وَیَوْمَ نَحْشُرُهُمْ جَمِیْعًا ثُمَّ نَقُوْلُ لِلَّذِیْنَ اَشْرَكُوْۤا اَیْنَ شُرَكَآؤُكُمُ الَّذِیْنَ كُنْتُمْ تَزْعُمُوْنَ ۟
ನಾವು ಇವರೆಲ್ಲರನ್ನು ಒಟ್ಟುಗೂಡಿಸುವ ದಿನ ಬಹುದೇವಾರಾಧಕರೊಂದಿಗೆ ಕೇಳುವೆವು: ನೀವು ಆರಾಧ್ಯರೆಂದು ವಾದಿಸುತ್ತಿದ್ದ ನಿಮ್ಮ ಸಹಭಾಗಿಗಳು ಎಲ್ಲಿದ್ದಾರೆ?
عربی تفاسیر:
ثُمَّ لَمْ تَكُنْ فِتْنَتُهُمْ اِلَّاۤ اَنْ قَالُوْا وَاللّٰهِ رَبِّنَا مَا كُنَّا مُشْرِكِیْنَ ۟
ಅನಂತರ ಅವರಿಗೆ “ನಮ್ಮ ಪ್ರಭುವಾದ ಅಲ್ಲಾಹನಾಣೆ! ನಾವು ಬಹುದೇವಾರಾಧಕರಾಗಿರಲಿಲ್ಲ” ಎಂದು ಹೇಳುವುದರ ವಿನಃ ಇನ್ನೇನೂ ನೆಪವಿರಲಾರದು.
عربی تفاسیر:
اُنْظُرْ كَیْفَ كَذَبُوْا عَلٰۤی اَنْفُسِهِمْ وَضَلَّ عَنْهُمْ مَّا كَانُوْا یَفْتَرُوْنَ ۟
ಆಗ ಅವರು ಸ್ವತಃ ತಮ್ಮ ಮೇಲೆಯೇ ಹೇಗೆ ಸುಳ್ಳು ಹೇಳಿದ್ದಾರೆಂಬುದನ್ನು ನೋಡಿರಿ? ಮತ್ತು ಅವರು ಸುಳ್ಳು ಸುಳ್ಳಾಗಿ ಹೇಳುತ್ತಿದ್ದ ಮಿಥ್ಯರಾಧ್ಯರು ಮಾಯವಾಗಿಬಿಟ್ಟವು .
عربی تفاسیر:
وَمِنْهُمْ مَّنْ یَّسْتَمِعُ اِلَیْكَ ۚ— وَجَعَلْنَا عَلٰی قُلُوْبِهِمْ اَكِنَّةً اَنْ یَّفْقَهُوْهُ وَفِیْۤ اٰذَانِهِمْ وَقْرًا ؕ— وَاِنْ یَّرَوْا كُلَّ اٰیَةٍ لَّا یُؤْمِنُوْا بِهَا ؕ— حَتّٰۤی اِذَا جَآءُوْكَ یُجَادِلُوْنَكَ یَقُوْلُ الَّذِیْنَ كَفَرُوْۤا اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟
ಮತ್ತು ಅವರಲ್ಲಿ ಕೆಲವರು ಮೇಲ್ನೋಟಕ್ಕೆ ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಮತ್ತು ನಾವು (ಅಲ್ಲಾಹ್) ಅವರದನ್ನು ಗ್ರಹಿಸದಂತೆ ಅವರ ಹೃದಯಗಳ ಮೇಲೆ ಪರದೆಯನ್ನು ಹಾಕಿದ್ದೇವೆ ಮತ್ತು ಅವರ ಕಿವಿಗಳಲ್ಲಿ ತಡೆÀಯನ್ನಿಟ್ಟಿದ್ದೇವೆ. ಮತ್ತು ಅವರು ಸಕಲ ದೃಷ್ಟಾಂತಗಳನ್ನು ಕಂಡರೂ ಅವುಗಳ ಮೇಲೆ ವಿಶ್ವಾಸವಿಡುವುದಿಲ್ಲ. ಇನ್ನು ಅವರು ನಿಮ್ಮ ಬಳಿಗೆ ಬಂದರೆ ತರ್ಕ ಮಾಡುತ್ತಾರೆ. ಇವು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಇನ್ನೇನೂ ಅಲ್ಲ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.
عربی تفاسیر:
وَهُمْ یَنْهَوْنَ عَنْهُ وَیَنْـَٔوْنَ عَنْهُ ۚ— وَاِنْ یُّهْلِكُوْنَ اِلَّاۤ اَنْفُسَهُمْ وَمَا یَشْعُرُوْنَ ۟
ಅವರು ಇದರಿಂದ (ಕುರ್‌ಆನಿನಿಂದ) ಜನರನ್ನು ತಡೆಯುತ್ತಾರೆ ಮತ್ತು ಸ್ವÀತಃ ಅವರೂ ಇದರಿಂದ ದೂರವಿರುತ್ತಾರೆ ಮತ್ತು ಅವರು ಸ್ವತಃ ತಮ್ಮನ್ನೇ ನಾಶ ಮಾಡುತ್ತಿದ್ದಾರೆ. ಹಾಗೂ ಒಂದಿಷ್ಟೂ ಭೋಧವನ್ನು ಹೊಂದಿರುವುದಿಲ್ಲ.
عربی تفاسیر:
وَلَوْ تَرٰۤی اِذْ وُقِفُوْا عَلَی النَّارِ فَقَالُوْا یٰلَیْتَنَا نُرَدُّ وَلَا نُكَذِّبَ بِاٰیٰتِ رَبِّنَا وَنَكُوْنَ مِنَ الْمُؤْمِنِیْنَ ۟
ಅವರನ್ನು ನರಕದ ಬಳಿ ನಿಲ್ಲಿಸಲಾಗುವಾಗ ಅವರ ಅವಸ್ಥೆಯನ್ನು ನೋಡಲು ನಿಮಗೆ ಸಾಧ್ಯವಾಗುತ್ತಿದ್ದರೆ ಆಗ ಅವರು ಹೇಳುವರು: ಅಕಟ ನಮ್ಮನ್ನು ಪುನಃ (ಭೂಲೋಕಕ್ಕೆ) ಕಳುಹಿಸಲಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಮತ್ತು ಹಾಗೇನಾದರೂ ಆದರೆ ನಾವು ನಮ್ಮ ಪ್ರಭುವಿನ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಿರಲಿಲ್ಲ. ಮತ್ತು ಸತ್ಯವಿಶ್ವಾಸಿಗಳೊಂದಿಗೆ ಸೇರಿದವರಾಗುತ್ತಿದ್ದೇವು.
عربی تفاسیر:
 
معانی کا ترجمہ سورت: انعام
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں