Check out the new design

Bản dịch ý nghĩa nội dung Qur'an - 加拿大语翻译:伯希尔·麦苏里 * - Mục lục các bản dịch


Ý nghĩa nội dung Chương: Al-Baqarah   Câu:
قُلْ اِنْ كَانَتْ لَكُمُ الدَّارُ الْاٰخِرَةُ عِنْدَ اللّٰهِ خَالِصَةً مِّنْ دُوْنِ النَّاسِ فَتَمَنَّوُا الْمَوْتَ اِنْ كُنْتُمْ صٰدِقِیْنَ ۟
ಹೇಳಿರಿ, ಅಲ್ಲಾಹನ ಬಳಿಯಿರುವ ಪರಲೋಕ ಭವನವು ಇತರ ಜನರಿಗಿಲ್ಲದೆ ನಿಮಗೆ ಮಾತ್ರ ಮೀಸಲಾಗಿದ್ದರೆ; ನೀವು ಮರಣವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ.
Các Tafsir tiếng Ả-rập:
وَلَنْ یَّتَمَنَّوْهُ اَبَدًا بِمَا قَدَّمَتْ اَیْدِیْهِمْ ؕ— وَاللّٰهُ عَلِیْمٌۢ بِالظّٰلِمِیْنَ ۟
ಆದರೆ ಅವರ ಕೈಗಳು ಮಾಡಿಟ್ಟಿರುವ ಪಾಪಗಳ ಪರಿಣಾಮವಾಗಿ ಅವರೆಂದಿಗೂ ಮರಣವನ್ನು ಬಯಸಲಾರರು ಮತ್ತು ಅಕ್ರಮಿಗಳ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು.
Các Tafsir tiếng Ả-rập:
وَلَتَجِدَنَّهُمْ اَحْرَصَ النَّاسِ عَلٰی حَیٰوةٍ ۛۚ— وَمِنَ الَّذِیْنَ اَشْرَكُوْا ۛۚ— یَوَدُّ اَحَدُهُمْ لَوْ یُعَمَّرُ اَلْفَ سَنَةٍ ۚ— وَمَا هُوَ بِمُزَحْزِحِهٖ مِنَ الْعَذَابِ اَنْ یُّعَمَّرَ ؕ— وَاللّٰهُ بَصِیْرٌ بِمَا یَعْمَلُوْنَ ۟۠
ಓ ಪೈಗಂಬರರೆ ಖಂಡಿತವಾಗಿಯೂ ನೀವು ಜನರ ಪೈಕಿ ಐಹಿಕ ಜೀವನದ ಬಗ್ಗೆ ಬಹುದೇವಾರಾಧಕರಿಗಿಂತಲೂ ಅವರನ್ನು (ಯಹೂದಿಯರನ್ನು) ಅತ್ಯಾಧಿಕ ಆಸೆ ಉಳ್ಳವರಾಗಿ ಕಾಣುವಿರಿ. ಅವರ ಪೈಕಿ ಪ್ರತಿಯೊಬ್ಬನೂ ಸಾವಿರ ವರ್ಷಗಳ ದೀರ್ಘಾಯುಷ್ಯವನ್ನು ಆಶಿಸುತ್ತಾನೆ. ಇನ್ನು ದೀರ್ಘಾಯುಷ್ಯವನ್ನು ನೀಡಲಾದರೂ ಅದು ಅವರನ್ನು ಯಾತನೆಯಿಂದ ಪಾರುಗೊಳಿಸದು, ಅಲ್ಲಾಹನು ಅವರು ಮಾಡುತ್ತಿರುವುದರ ಕುರಿತು ಸೂಕ್ಷö್ಮವಾಗಿ ವೀಕ್ಷಿಸುತ್ತಿದ್ದಾನೆ
Các Tafsir tiếng Ả-rập:
قُلْ مَنْ كَانَ عَدُوًّا لِّجِبْرِیْلَ فَاِنَّهٗ نَزَّلَهٗ عَلٰی قَلْبِكَ بِاِذْنِ اللّٰهِ مُصَدِّقًا لِّمَا بَیْنَ یَدَیْهِ وَهُدًی وَّبُشْرٰی لِلْمُؤْمِنِیْنَ ۟
ಹೇಳಿರಿ (ಓ ಪೈಗಂಬರರೆ) ಜಿಬ್ರೀಲ್‌ನ ಶತ್ರುವಾಗಿರುವವನಿಗೆ (ತಿಳಿದಿರಲಿ ಅವನಿಗೆ ವಿನಾಶವಿದೆ) ನಿಸ್ಸಂದೇಹವಾಗಿ ಇದನ್ನು (ಈ ಕುರ್‌ಆನನ್ನು) ಅವನು (ಜಿಬ್ರೀಲ್) ಅಲ್ಲಾಹನ ಆಜ್ಞೆಯ ಪ್ರಕಾರ ನಿಮ್ಮ ಹೃದಯದ ಮೇಲೆ ಇಳಿಸಿರುವನು. ಅದು, (ಕುರ್‌ಆನ್) ಇದಕ್ಕಿಂತ ಮುಂಚೆ ಅವತೀರ್ಣಗೊಂಡಿರುವ ದೈವಿಕ ಗ್ರಂಥಗಳನ್ನು ಧೃಢೀಕರಿಸುತ್ತದೆ. ಹಾಗೂ ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ದರ್ಶಕವೂ ಸುವಾರ್ತೆಯೂ ಆಗಿದೆ.
Các Tafsir tiếng Ả-rập:
مَنْ كَانَ عَدُوًّا لِّلّٰهِ وَمَلٰٓىِٕكَتِهٖ وَرُسُلِهٖ وَجِبْرِیْلَ وَمِیْكٰىلَ فَاِنَّ اللّٰهَ عَدُوٌّ لِّلْكٰفِرِیْنَ ۟
ಯಾರು ಅಲ್ಲಾಹನಿಗೂ ಅವನ ದೂತರಿಗೂ, ಅವನ ಸಂದೇಶವಾಹಕರಿಗೂ, ಜಿಬ್ರೀಲನಿಗೂ, ಮೀಕಾಯೀಲನಿಗೂ ಶತ್ರುವಾಗಿರುತ್ತಾನೋ ಅಲ್ಲಾಹನು ಸಹ ಅಂತಹ ಸತ್ಯನಿಷೇಧಿಗಳ ಶತ್ರ‍್ರುವಾಗಿರುತ್ತಾನೆ.
Các Tafsir tiếng Ả-rập:
وَلَقَدْ اَنْزَلْنَاۤ اِلَیْكَ اٰیٰتٍۢ بَیِّنٰتٍ ۚ— وَمَا یَكْفُرُ بِهَاۤ اِلَّا الْفٰسِقُوْنَ ۟
(ಓ ಪೈಗಂಬರರೇ) ನಿಸ್ಸಂಶಯವಾಗಿಯು ನಾವು ನಿಮ್ಮೆಡೆಗೆ ಸುಸ್ಪಷ್ಟವಾದ ಪ್ರಮಾಣಗಳನ್ನು ಅವತೀರ್ಣಗೊಳಿಸಿರುತ್ತೇವೆ. ಮತ್ತು ದುಷ್ಟರ ಹೊರತು ಅವುಗಳನ್ನು ಇನ್ನಾರೂ ನಿಷೇಧಿಸುವುದಿಲ್ಲ.
Các Tafsir tiếng Ả-rập:
اَوَكُلَّمَا عٰهَدُوْا عَهْدًا نَّبَذَهٗ فَرِیْقٌ مِّنْهُمْ ؕ— بَلْ اَكْثَرُهُمْ لَا یُؤْمِنُوْنَ ۟
ಅವರು (ಯಹೂದಿಗಳು) ಯಾವುದಾದರೂ ಒಪ್ಪಂದವನ್ನು ಮಾಡಿದಾಗ ಅವರ ಪೈಕಿಯ ಒಂದಲ್ಲಾ ಒಂದು ಪಂಗಡವು ಅದನ್ನು ಮುರಿದು ಹಾಕಲಿಲ್ಲವೇ? ವಾಸ್ತವದಲ್ಲಿ ಅವರಲ್ಲಿ ಅಧಿಕ ಮಂದಿ ವಿಶ್ವಾಸವಿರಿಸುವುದಿಲ್ಲ.
Các Tafsir tiếng Ả-rập:
وَلَمَّا جَآءَهُمْ رَسُوْلٌ مِّنْ عِنْدِ اللّٰهِ مُصَدِّقٌ لِّمَا مَعَهُمْ نَبَذَ فَرِیْقٌ مِّنَ الَّذِیْنَ اُوْتُوا الْكِتٰبَ ۙۗ— كِتٰبَ اللّٰهِ وَرَآءَ ظُهُوْرِهِمْ كَاَنَّهُمْ لَا یَعْلَمُوْنَ ۟ؗ
ಅವರ ಬಳಿಗೆ ಅಲ್ಲಾಹನ ವತಿಯಿಂದ ಯಾವೊಬ್ಬ ಸಂದೇಶವಾಹಕನು ಅವರ ಬಳಿಯಿರುವ ಗ್ರಂಥವನ್ನು ಸತ್ಯವೆಂದು ಧೃಢೀಕರಿಸುವವನಾಗಿ ಬಂದಾಗ, ಗ್ರಂಥದವರ ಪೈಕಿ ಒಂದು ಗುಂಪು ತಮಗೇನೂ ತಿಳಿದಿಲ್ಲವೆಂಬAತೆ ಅಲ್ಲಾಹನ ಗ್ರಂಥವನ್ನು ತಮ್ಮ ಬೆನ್ನ ಹಿಂದೆ ಎಸೆದು ಬಿಟ್ಟಿತು.
Các Tafsir tiếng Ả-rập:
 
Ý nghĩa nội dung Chương: Al-Baqarah
Mục lục các chương Kinh Số trang
 
Bản dịch ý nghĩa nội dung Qur'an - 加拿大语翻译:伯希尔·麦苏里 - Mục lục các bản dịch

谢赫伯西尔·麦苏里翻译,由先锋翻译中心主持发行。

Đóng lại