Check out the new design

Bản dịch ý nghĩa nội dung Qur'an - 加拿大语翻译:伯希尔·麦苏里 * - Mục lục các bản dịch


Ý nghĩa nội dung Chương: Al-Shura   Câu:
وَتَرٰىهُمْ یُعْرَضُوْنَ عَلَیْهَا خٰشِعِیْنَ مِنَ الذُّلِّ یَنْظُرُوْنَ مِنْ طَرْفٍ خَفِیٍّ ؕ— وَقَالَ الَّذِیْنَ اٰمَنُوْۤا اِنَّ الْخٰسِرِیْنَ الَّذِیْنَ خَسِرُوْۤا اَنْفُسَهُمْ وَاَهْلِیْهِمْ یَوْمَ الْقِیٰمَةِ ؕ— اَلَاۤ اِنَّ الظّٰلِمِیْنَ فِیْ عَذَابٍ مُّقِیْمٍ ۟
ಅವರನ್ನು ಅಪಮಾನದ ನಿಮಿತ್ತ ತಲೆತಗ್ಗಿಸಿದವರಾಗಿ ನರಕದ ಮುಂದೆ ತರಲಾಗುವುದನ್ನು ನೀವು ಕಾಣಲಿರುವಿರಿ ಅವರು ಕುಡಿನೋಟದಿಂದ ನೋಡುತ್ತಿರುವರು. ಸತ್ಯವಿಶ್ವಾಸಿಗಳು ಹೇಳುವರು: ಪುನರುತ್ಥಾನ ದಿನದಂದು ಸ್ವತಃ ತನ್ನನ್ನು ಮತ್ತು ತನ್ನ ಮನೆಯವರನ್ನು ನಷ್ಟಕ್ಕೀಡಾಗಿಸಿದವರೇ ವಾಸ್ತವದಲ್ಲಿ ನಷ್ಟ ಹೊಂದಿದವರಾಗಿದ್ದಾರೆ ತಿಳಿಯಿರಿ! ಖಂಡಿತವಾಗಿಯು ಅಕ್ರಮಿಗಳು ಶಾಶ್ವತವಾದ ಶಿಕ್ಷೆಯಲ್ಲಿರುವರು.
Các Tafsir tiếng Ả-rập:
وَمَا كَانَ لَهُمْ مِّنْ اَوْلِیَآءَ یَنْصُرُوْنَهُمْ مِّنْ دُوْنِ اللّٰهِ ؕ— وَمَنْ یُّضْلِلِ اللّٰهُ فَمَا لَهٗ مِنْ سَبِیْلٍ ۟ؕ
ಅಲ್ಲಾಹನಿಗೆದುರಾಗಿ ಅವರಿಗೆ ಸಹಾಯವೊದಗಿಸುವ ಯಾವ ರಕ್ಷಕರೂ ಅವರಿಗಿರಲಾರರು. ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುತ್ತಾನೋ ಅವನಿಗೆ ಯಾವ ಮಾರ್ಗವೂ ಇರಲಾರದು.
Các Tafsir tiếng Ả-rập:
اِسْتَجِیْبُوْا لِرَبِّكُمْ مِّنْ قَبْلِ اَنْ یَّاْتِیَ یَوْمٌ لَّا مَرَدَّ لَهٗ مِنَ اللّٰهِ ؕ— مَا لَكُمْ مِّنْ مَّلْجَاٍ یَّوْمَىِٕذٍ وَّمَا لَكُمْ مِّنْ نَّكِیْرٍ ۟
ಯಾರಿಂದಲೂ ತಡೆದಿರಿಸಲಾಗದ ಅಲ್ಲಾಹನ ಕಡೆಯಿಂದಿರುವ ಆ ದಿನ ಬರುವುದಕ್ಕೆ ಮುಂಚೆ ನೀವು ನಿಮ್ಮ ಪ್ರಭುವಿನ ಕರೆಗೆ ಓಗೊಡಿರಿ; ಅಂದು ನಿಮಗೆ ಯಾವುದೇ ಅಭಯ ಸ್ಥಾನವಿರದು. ಮತ್ತು ನಿಮಗೆ ನಿಮ್ಮ ಅಪರಾಧಗಳನ್ನು ನಿರಾಕರಿಸಲೂ ಸಾಧ್ಯವಾಗದು.
Các Tafsir tiếng Ả-rập:
فَاِنْ اَعْرَضُوْا فَمَاۤ اَرْسَلْنٰكَ عَلَیْهِمْ حَفِیْظًا ؕ— اِنْ عَلَیْكَ اِلَّا الْبَلٰغُ ؕ— وَاِنَّاۤ اِذَاۤ اَذَقْنَا الْاِنْسَانَ مِنَّا رَحْمَةً فَرِحَ بِهَا ۚ— وَاِنْ تُصِبْهُمْ سَیِّئَةٌ بِمَا قَدَّمَتْ اَیْدِیْهِمْ فَاِنَّ الْاِنْسَانَ كَفُوْرٌ ۟
ಇನ್ನು ಅವರೇನಾದರೂ ವಿಮುಖರಾದರೆ ನಾವು ನಿಮ್ಮನ್ನು ಅವರ ಮೇಲ್ವಿಚಾರಕರಾಗಿ ಕಳುಹಿಸಿರುವುದಿಲ್ಲ. ನಿಮ್ಮ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನಿಶ್ಚಯವಾಗಿಯೂ ನಾವು ಮನುಷ್ಯನಿಗೆ ನಮ್ಮ ಕೃಪೆಯಿಂದ ಸವಿಯನ್ನುಣಿಸಿದರೆ ಅವನು ಅದರ ನಿಮಿತ್ತ ಬೀಗುತ್ತಾನೆ. ಮತ್ತು ಅವರಿಗೆ ಅವರ ಕರ್ಮಗಳ ನಿಮಿತ್ತ ಯಾವುದಾದರೂ ಆಪತ್ತು ಬಾಧಿಸಿದರೆ ನಿಸ್ಸಂಶಯವಾಗಿಯೂ ಮನುಷ್ಯನು ಮಹಾ ಕೃತಘ್ನನಾಗಿ ಬಿಡುತ್ತಾನೆ.
Các Tafsir tiếng Ả-rập:
لِلّٰهِ مُلْكُ السَّمٰوٰتِ وَالْاَرْضِ ؕ— یَخْلُقُ مَا یَشَآءُ ؕ— یَهَبُ لِمَنْ یَّشَآءُ اِنَاثًا وَّیَهَبُ لِمَنْ یَّشَآءُ الذُّكُوْرَ ۟ۙ
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸುವುದನ್ನು ಸೃಷ್ಟಿಸುತ್ತಾನೆ. ತಾನಿಚ್ಛಿಸುವವರಿಗೆ ಹೆಣ್ಣುಮಕ್ಕಳನ್ನು ದಯಪಾಲಿಸುತ್ತಾನೆ ಮತ್ತು ತಾನಿಚ್ಛಿಸುವವರಿಗೆ ಗಂಡು ಮಕ್ಕಳನ್ನು ನೀಡುತ್ತಾನೆ.
Các Tafsir tiếng Ả-rập:
اَوْ یُزَوِّجُهُمْ ذُكْرَانًا وَّاِنَاثًا ۚ— وَیَجْعَلُ مَنْ یَّشَآءُ عَقِیْمًا ؕ— اِنَّهٗ عَلِیْمٌ قَدِیْرٌ ۟
ಅಥವಾ ತಾನಿಚ್ಛಿಸುವವರಿಗೆ ಗಂಡು ಹೆಣ್ಣು ಎರಡನ್ನೂ, ಸೇರಿಸಿ ಕೊಡುತ್ತಾನೆ. ಮತ್ತು ತಾನಿಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ಖಂಡಿತವಾಗಿಯು ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿದ್ದಾನೆ.
Các Tafsir tiếng Ả-rập:
وَمَا كَانَ لِبَشَرٍ اَنْ یُّكَلِّمَهُ اللّٰهُ اِلَّا وَحْیًا اَوْ مِنْ وَّرَآئِ حِجَابٍ اَوْ یُرْسِلَ رَسُوْلًا فَیُوْحِیَ بِاِذْنِهٖ مَا یَشَآءُ ؕ— اِنَّهٗ عَلِیٌّ حَكِیْمٌ ۟
ಅಲ್ಲಾಹನು ಯಾವೊಬ್ಬ ದಾಸನೊಂದಿಗೆ ಮಾತನಾಡುವುದು ಅಸಂಭವವಾಗಿದೆ. ಆದರೆ ದಿವ್ಯವಾಣಿಯ ಮೂಲಕ ಅಥವಾ ತೆರೆಯ ಹಿಂದಿನಿAದ ಅಥವಾ ಒಬ್ಬ ದೂತನನ್ನು ಕಳುಹಿಸುವುದರ ಮೂಲಕ ಆ ದೂತನು ಅಲ್ಲಾಹನ ಅಪ್ಪಣೆ ಪ್ರಕಾರ ಅವನು ಉದ್ದೇಶಿಸಿರುವುದರ ಸಂದೇಶ ಕೊಡುತ್ತಾನೆ. ನಿಸ್ಸಂಶಯವಾಗಿಯು ಅವನು ಉನ್ನತನೂ, ಯುಕ್ತಿಪೂರ್ಣನೂ ಆಗಿದ್ದಾನೆ.
Các Tafsir tiếng Ả-rập:
 
Ý nghĩa nội dung Chương: Al-Shura
Mục lục các chương Kinh Số trang
 
Bản dịch ý nghĩa nội dung Qur'an - 加拿大语翻译:伯希尔·麦苏里 - Mục lục các bản dịch

谢赫伯西尔·麦苏里翻译,由先锋翻译中心主持发行。

Đóng lại