Bản dịch ý nghĩa nội dung Qur'an - الترجمة الكنادية - بشير ميسوري * - Mục lục các bản dịch


Ý nghĩa nội dung Chương: Chương Al-Mulk   Câu:

ಸೂರ ಅಲ್ -ಮುಲ್ಕ್

تَبٰرَكَ الَّذِیْ بِیَدِهِ الْمُلْكُ ؗ— وَهُوَ عَلٰی كُلِّ شَیْءٍ قَدِیْرُ ۟ۙ
ಅಧಿಪತ್ಯವು ಯಾರ ಕೈಯಲ್ಲಿದೆಯೋ ಅವನು(ಅಲ್ಲಾಹ) ಮಹಾ ಸಮೃದ್ಧನಾಗಿರುವನು, ಅವನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನಾಗಿ ರುವನು.
Các Tafsir tiếng Ả-rập:
١لَّذِیْ خَلَقَ الْمَوْتَ وَالْحَیٰوةَ لِیَبْلُوَكُمْ اَیُّكُمْ اَحْسَنُ عَمَلًا ؕ— وَهُوَ الْعَزِیْزُ الْغَفُوْرُ ۟ۙ
ನಿಮ್ಮ ಪೈಕಿ ಉತ್ತಮ ರ‍್ಮವೆಸಗುವವರು ಯಾರೆಂದು ಪರೀಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು. ಅವನು ಪ್ರತಾಪಶಾಲಿಯು ಕ್ಷಮಾಶೀಲನು ಆಗಿದ್ದಾನೆ.
Các Tafsir tiếng Ả-rập:
الَّذِیْ خَلَقَ سَبْعَ سَمٰوٰتٍ طِبَاقًا ؕ— مَا تَرٰی فِیْ خَلْقِ الرَّحْمٰنِ مِنْ تَفٰوُتٍ ؕ— فَارْجِعِ الْبَصَرَ ۙ— هَلْ تَرٰی مِنْ فُطُوْرٍ ۟
ಅವನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದನು ಪರಮ ದಯಾಮಯನ ಸೃಷ್ಟಿಯಲ್ಲಿ ನೀವು ಯಾವ ಅವ್ಯವಸ್ಥೆಯನ್ನೂ ಕಾಣಲಾರಿರಿ. ಮತ್ತೊಮ್ಮೆ ದೃಷ್ಟಿ ಹಾಯಿಸಿ ನೋಡಿ, ಯಾವುದಾದರೂ ಬಿರುಕನ್ನು ಕಾಣುತ್ತಿರುವಿರಾ ?
Các Tafsir tiếng Ả-rập:
ثُمَّ ارْجِعِ الْبَصَرَ كَرَّتَیْنِ یَنْقَلِبْ اِلَیْكَ الْبَصَرُ خَاسِئًا وَّهُوَ حَسِیْرٌ ۟
ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.
Các Tafsir tiếng Ả-rập:
وَلَقَدْ زَیَّنَّا السَّمَآءَ الدُّنْیَا بِمَصَابِیْحَ وَجَعَلْنٰهَا رُجُوْمًا لِّلشَّیٰطِیْنِ وَاَعْتَدْنَا لَهُمْ عَذَابَ السَّعِیْرِ ۟
ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.
Các Tafsir tiếng Ả-rập:
وَلِلَّذِیْنَ كَفَرُوْا بِرَبِّهِمْ عَذَابُ جَهَنَّمَ ؕ— وَبِئْسَ الْمَصِیْرُ ۟
ಯಾರು ತಮ್ಮ ಪ್ರಭುವನ್ನು ನಿಷೇಧಿಸುತ್ತಾರೋ ಅವರಿಗೆ ನರಕ ಶಿಕ್ಷೆಯಿದೆ ಮತ್ತು ಅದೆಷ್ಟು ನಿಕೃಷ್ಟ ತಾಣವಾಗಿದೆ ?
Các Tafsir tiếng Ả-rập:
اِذَاۤ اُلْقُوْا فِیْهَا سَمِعُوْا لَهَا شَهِیْقًا وَّهِیَ تَفُوْرُ ۟ۙ
ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.
Các Tafsir tiếng Ả-rập:
تَكَادُ تَمَیَّزُ مِنَ الْغَیْظِ ؕ— كُلَّمَاۤ اُلْقِیَ فِیْهَا فَوْجٌ سَاَلَهُمْ خَزَنَتُهَاۤ اَلَمْ یَاْتِكُمْ نَذِیْرٌ ۟
ಕ್ರೋಧಾವೇಶದಿಂದ ಅದು ಸಿಡಿದು ಬೀಳುವಂತಿರುವುದು ಪ್ರತಿಯೊಂದು ಬಾರಿ ಅದರೊಳಗೆ ಯಾವುದಾದರೂ ಗುಂಪನ್ನು ಹಾಕಲಾದಾಗ ಅದರ ಕಾವಲುಗಾರರು ಅವರೊಡನೆ; ನಿಮ್ಮ ಬಳಿಗೆ ಮುನ್ನೆಚ್ಚರಿಕೆ ನೀಡುರ‍್ಯಾರು ಬಂದಿರಲಿಲ್ಲವೇ ? ಎಂದು ಕೇಳುವರು ?
Các Tafsir tiếng Ả-rập:
قَالُوْا بَلٰی قَدْ جَآءَنَا نَذِیْرٌ ۙ۬— فَكَذَّبْنَا وَقُلْنَا مَا نَزَّلَ اللّٰهُ مِنْ شَیْءٍ ۖۚ— اِنْ اَنْتُمْ اِلَّا فِیْ ضَلٰلٍ كَبِیْرٍ ۟
ಅವರು ಹೇಳುವರು ಯಾಕಿಲ್ಲ ನಿಸ್ಸಂಶಯವಾಗಿಯೂ ಮುನ್ನೆಚ್ಚರಿಕೆ ನೀಡುವವರು ನಮ್ಮ ಬಳಿ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತರ‍್ಣಗೊಳಿಸಿಲ್ಲ, ನೀವು ಬಹುದೊಡ್ಡ ಪಥಭ್ರಷ್ಟತೆಯಲ್ಲಿರುವಿರಿ ಎಂದು ನಾವು ಹೇಳಿದೆವು.
Các Tafsir tiếng Ả-rập:
وَقَالُوْا لَوْ كُنَّا نَسْمَعُ اَوْ نَعْقِلُ مَا كُنَّا فِیْۤ اَصْحٰبِ السَّعِیْرِ ۟
ಮತ್ತು ಹೇಳುವರು; ನಾವು ಆಲಿಸಿರುತ್ತಿದ್ದರೆ ಮತ್ತು ಗ್ರಹಿಸಿರುತ್ತಿದ್ದರೆ, ನರಕ ವಾಸಿಗಳಲ್ಲಾಗುತ್ತಿರಲಿಲ್ಲ ಎಂದು ಅವರು ಹೇಳುವರು.
Các Tafsir tiếng Ả-rập:
فَاعْتَرَفُوْا بِذَنْۢبِهِمْ ۚ— فَسُحْقًا لِّاَصْحٰبِ السَّعِیْرِ ۟
ಹೀಗೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು, ಆ ನರಕವಾಸಿಗಳಿಗೆ ಶಾಪವಿರಲಿ.
Các Tafsir tiếng Ả-rập:
اِنَّ الَّذِیْنَ یَخْشَوْنَ رَبَّهُمْ بِالْغَیْبِ لَهُمْ مَّغْفِرَةٌ وَّاَجْرٌ كَبِیْرٌ ۟
ಯಾರು ತಮ್ಮ ಪ್ರಭುವನ್ನು ಅಗೋಚರವಾಗಿ ಭಯಪಡುತ್ತಾರೋ ಅವರಿಗೆ ಕ್ಷಮೆಯು ಮತ್ತು ಮಹಾ ಪ್ರತಿಫಲವಿದೆ.
Các Tafsir tiếng Ả-rập:
وَاَسِرُّوْا قَوْلَكُمْ اَوِ اجْهَرُوْا بِهٖ ؕ— اِنَّهٗ عَلِیْمٌۢ بِذَاتِ الصُّدُوْرِ ۟
ನೀವು ನಿಮ್ಮ ಮಾತನ್ನು ರಹಸ್ಯವಾಗಿಡಿರಿ ಅಥವಾ ಬಹಿರಂಗ ಪಡಿಸಿರಿ, ಖಂಡಿತವಾಗಿಯೂ ಅವನು ಹೃದಯಗಳಲ್ಲಿರು ವುದನ್ನೂ ಚೆನ್ನಾಗಿ ಅರಿಯುತ್ತಾನೆ.
Các Tafsir tiếng Ả-rập:
اَلَا یَعْلَمُ مَنْ خَلَقَ ؕ— وَهُوَ اللَّطِیْفُ الْخَبِیْرُ ۟۠
ಏನು ಸೃಷ್ಟಿಸಿದವನೇ ಅರಿಯದಿರುವನೇ ? ಅವನು ಸೂಕ್ಷö್ಮಜ್ಞಾನಿಯೂ, ವಿವರ ಪರ‍್ಣನೂ ಆಗಿದ್ದಾನೆ.
Các Tafsir tiếng Ả-rập:
هُوَ الَّذِیْ جَعَلَ لَكُمُ الْاَرْضَ ذَلُوْلًا فَامْشُوْا فِیْ مَنَاكِبِهَا وَكُلُوْا مِنْ رِّزْقِهٖ ؕ— وَاِلَیْهِ النُّشُوْرُ ۟
ಅವನೇ ನಿಮಗೆ ಭೂಮಿಯನ್ನು ಅಧೀನಗೊಳಿಸಿದವನು ಆದ್ದರಿಂದ ನೀವು ಅದರ ಮರ‍್ಗಗಳಲ್ಲಿ ಸಂಚರಿಸಿರಿ ಮತ್ತು ಅವನು ದಯಪಾಲಿಸಿದ ಆಹಾರದಿಂದ ಸೇವಿಸಿರಿ, ನೀವು ಮರಣದ ನಂತರ ಅವನೆಡೆಗೆ ಎಬ್ಬಿಸಿ ಮರಳಿಸಲಾಗುವಿರಿ.
Các Tafsir tiếng Ả-rập:
ءَاَمِنْتُمْ مَّنْ فِی السَّمَآءِ اَنْ یَّخْسِفَ بِكُمُ الْاَرْضَ فَاِذَا هِیَ تَمُوْرُ ۟ۙ
ಏನು ಆಕಾಶದಲ್ಲಿರುವ ಅಲ್ಲಾಹನು ನಿಮ್ಮನ್ನು ಭೂಮಿಯಲ್ಲಿ ಹುದುಗಿ ಬಿಡುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ಅದು ಹಠಾತ್ತನೆ ಕಂಪಿಸತೊಡಗುವುದು.
Các Tafsir tiếng Ả-rập:
اَمْ اَمِنْتُمْ مَّنْ فِی السَّمَآءِ اَنْ یُّرْسِلَ عَلَیْكُمْ حَاصِبًا ؕ— فَسَتَعْلَمُوْنَ كَیْفَ نَذِیْرِ ۟
ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ ಕಲ್ಲು ಮಳೆಯನ್ನು ಸುರಿಸುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ನನ್ನ ಎಚ್ಚರಿಕೆ ಹೇಗಿತ್ತೆಂದು ನಿಮಗೆ ತಿಳಿಯಲಿರುವುದು.
Các Tafsir tiếng Ả-rập:
وَلَقَدْ كَذَّبَ الَّذِیْنَ مِنْ قَبْلِهِمْ فَكَیْفَ كَانَ نَكِیْرِ ۟
ನಿಶ್ಚಯವಾಗಿಯೂ ಅವರಿಗಿಂತ ಮುಂಚಿನವರೂ (ಸಂದೇಶವನ್ನು) ಸುಳ್ಳಾಗಿಸಿದ್ದರು. ಆಗ ನನ್ನ ಶಿಕ್ಷೆ ಹೇಗಿತ್ತೆಂಬುದನ್ನು ನೋಡಿರಿ.
Các Tafsir tiếng Ả-rập:
اَوَلَمْ یَرَوْا اِلَی الطَّیْرِ فَوْقَهُمْ صٰٓفّٰتٍ وَّیَقْبِضْنَ ؕۘؔ— مَا یُمْسِكُهُنَّ اِلَّا الرَّحْمٰنُ ؕ— اِنَّهٗ بِكُلِّ شَیْءٍ بَصِیْرٌ ۟
ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ ? ಪರಮ ದಯಾಮಯನ ಹೊರತು ಅವುಗಳನ್ನು ಯಾರೂ ಆಧರಿಸಿಲ್ಲ. ನಿಸ್ಸಂಶಯವಾಗಿಯೂ ಅವನು ಸಕಲ ವಸ್ತುಗಳ ವೀಕ್ಷಕನಾಗಿರುವನು.
Các Tafsir tiếng Ả-rập:
اَمَّنْ هٰذَا الَّذِیْ هُوَ جُنْدٌ لَّكُمْ یَنْصُرُكُمْ مِّنْ دُوْنِ الرَّحْمٰنِ ؕ— اِنِ الْكٰفِرُوْنَ اِلَّا فِیْ غُرُوْرٍ ۟ۚ
ಪರಮ ದಯಾಮಯನ ಎದುರು ನಿಮಗೆ ಸಹಾಯ ಮಾಡಬಹುದಾದಂತಹ ಸೈನ್ಯವು ನಿಮ್ಮ ಬಳಿ ಯಾವುದಿದೆ ? ಸತ್ಯನಿಷೇಧಿಗಳು ವಂಚನೆಯಲ್ಲಿ ಸಿಲುಕಿಕೊಂಡಿದ್ದಾರೆ.
Các Tafsir tiếng Ả-rập:
اَمَّنْ هٰذَا الَّذِیْ یَرْزُقُكُمْ اِنْ اَمْسَكَ رِزْقَهٗ ۚ— بَلْ لَّجُّوْا فِیْ عُتُوٍّ وَّنُفُوْرٍ ۟
ಪರಮ ದಯಾಮಯನು ತನ್ನ ಜೀವನಾಧಾರವನ್ನು ತಡೆಹಿಡಿದರೆ ನಿಮಗೆ ಜೀವನಾಧಾರವನ್ನು ನೀಡುವವನು ಯಾರಿದ್ದಾನೆ ? ಹಾಗಲ್ಲ ಸತ್ಯನಿಷೇಧಿಗಳಂತು ಧಿಕ್ಕಾರ ಮತ್ತು ತಿರಸ್ಕಾರಕ್ಕೆ ಅಂಟಿಕೊಂಡಿದ್ದಾರೆ.
Các Tafsir tiếng Ả-rập:
اَفَمَنْ یَّمْشِیْ مُكِبًّا عَلٰی وَجْهِهٖۤ اَهْدٰۤی اَمَّنْ یَّمْشِیْ سَوِیًّا عَلٰی صِرَاطٍ مُّسْتَقِیْمٍ ۟
ಅಧೋಮುಖಿಯಾಗಿ ಚಲಿಸುವವನು ಹೆಚ್ಚು ಸನ್ಮರ‍್ಗದಲ್ಲಿರುವನೇ? ಅಥವಾ ನೇರವಾಗಿ ಸನ್ಮರ‍್ಗದಲ್ಲಿ ಚಲಿಸುವವನೇ ?
Các Tafsir tiếng Ả-rập:
قُلْ هُوَ الَّذِیْۤ اَنْشَاَكُمْ وَجَعَلَ لَكُمُ السَّمْعَ وَالْاَبْصَارَ وَالْاَفْـِٕدَةَ ؕ— قَلِیْلًا مَّا تَشْكُرُوْنَ ۟
ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದವನು, ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತೀರಿ.
Các Tafsir tiếng Ả-rập:
قُلْ هُوَ الَّذِیْ ذَرَاَكُمْ فِی الْاَرْضِ وَاِلَیْهِ تُحْشَرُوْنَ ۟
ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.
Các Tafsir tiếng Ả-rập:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ನೀವು ಸತ್ಯವಂತರಾಗಿದ್ದರೆ ಈ (ಪುನರುತ್ಥಾನದ) ವಾಗ್ದಾನವು ಪ್ರಕಟವಾಗುವುದು ಯಾವಾಗ ? ಎಂದು ಅವರು ಕೇಳುತ್ತಾರೆ.
Các Tafsir tiếng Ả-rập:
قُلْ اِنَّمَا الْعِلْمُ عِنْدَ اللّٰهِ ۪— وَاِنَّمَاۤ اَنَا نَذِیْرٌ مُّبِیْنٌ ۟
. ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ, ನಾನು ಕೇವಲ ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
Các Tafsir tiếng Ả-rập:
فَلَمَّا رَاَوْهُ زُلْفَةً سِیْٓـَٔتْ وُجُوْهُ الَّذِیْنَ كَفَرُوْا وَقِیْلَ هٰذَا الَّذِیْ كُنْتُمْ بِهٖ تَدَّعُوْنَ ۟
ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು ಬೇಡುತ್ತಿದ್ದಂತಹ ವಸ್ತು ಇದುವೇ ಆಗಿದೆ ಎಂದು ಅವರೊಂದಿಗೆ ಹೇಳಲಾಗುವುದು.
Các Tafsir tiếng Ả-rập:
قُلْ اَرَءَیْتُمْ اِنْ اَهْلَكَنِیَ اللّٰهُ وَمَنْ مَّعِیَ اَوْ رَحِمَنَا ۙ— فَمَنْ یُّجِیْرُ الْكٰفِرِیْنَ مِنْ عَذَابٍ اَلِیْمٍ ۟
ಹೇಳಿರಿ; ನೀವು ಆಲೋಚಿಸಿದ್ದೀರಾ ನನ್ನನ್ನು ಮತ್ತು ನನ್ನ ಸಂಗಾತಿಗಳನ್ನು ಅಲ್ಲಾಹನು ಮರಣಗೊಳಿಸಬಹುದು ಅಥವಾ ನಮ್ಮ ಮೇಲೆ ಅವನು ಕರುಣೆ ತೋರಬಹುದು, ಆದರೆ ಸತ್ಯನಿಷೇಧಿಗಳನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವವರು ಯಾರಿದ್ದಾರೆ ?
Các Tafsir tiếng Ả-rập:
قُلْ هُوَ الرَّحْمٰنُ اٰمَنَّا بِهٖ وَعَلَیْهِ تَوَكَّلْنَا ۚ— فَسَتَعْلَمُوْنَ مَنْ هُوَ فِیْ ضَلٰلٍ مُّبِیْنٍ ۟
ಹೇಳಿರಿ; ಅವನು ಪರಮದಯಾಮಯನಾ ಗಿದ್ದಾನೆ, ನಾವು ಅವನ ಮೇಲೆಯೇ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ನಾವು ಭರವಸೆಯಿಟ್ಟಿದ್ದೇವೆ. ಸದ್ಯದಲ್ಲೇ ನಿಮಗೆ ಸ್ಪಷ್ಟವಾದ ಪಥಭ್ರಷ್ಟತೆಯ ಲ್ಲಿರುವವರು ಯಾರೆಂದು ತಿಳಿಯಲಿರುವುದು.
Các Tafsir tiếng Ả-rập:
قُلْ اَرَءَیْتُمْ اِنْ اَصْبَحَ مَآؤُكُمْ غَوْرًا فَمَنْ یَّاْتِیْكُمْ بِمَآءٍ مَّعِیْنٍ ۟۠
ಹೇಳಿರಿ; ನಿಮ್ಮ ಬಾವಿಗಳ ನೀರು ಭೂಮಿಯೊಳಗೆ ಇಂಗಿ ಹೋದರೆ ನರ‍್ಮಲವಾದ ನೀರನ್ನು ನಿಮಗೆ ತರುವವರು ಯಾರಿದ್ದಾರೆಂದು ಯೋಚಿಸಿದ್ದೀರಾ ?
Các Tafsir tiếng Ả-rập:
 
Ý nghĩa nội dung Chương: Chương Al-Mulk
Mục lục các chương Kinh Số trang
 
Bản dịch ý nghĩa nội dung Qur'an - الترجمة الكنادية - بشير ميسوري - Mục lục các bản dịch

ترجمة معاني القرآن الكريم إلى اللغة الكنادية ترجمها بشير ميسوري.

Đóng lại