Bản dịch ý nghĩa nội dung Qur'an - الترجمة الكنادية * - Mục lục các bản dịch

XML CSV Excel API
Please review the Terms and Policies

Ý nghĩa nội dung Câu: (17) Chương: Chương Hud
اَفَمَنْ كَانَ عَلٰی بَیِّنَةٍ مِّنْ رَّبِّهٖ وَیَتْلُوْهُ شَاهِدٌ مِّنْهُ وَمِنْ قَبْلِهٖ كِتٰبُ مُوْسٰۤی اِمَامًا وَّرَحْمَةً ؕ— اُولٰٓىِٕكَ یُؤْمِنُوْنَ بِهٖ ؕ— وَمَنْ یَّكْفُرْ بِهٖ مِنَ الْاَحْزَابِ فَالنَّارُ مَوْعِدُهٗ ۚ— فَلَا تَكُ فِیْ مِرْیَةٍ مِّنْهُ ۗ— اِنَّهُ الْحَقُّ مِنْ رَّبِّكَ وَلٰكِنَّ اَكْثَرَ النَّاسِ لَا یُؤْمِنُوْنَ ۟
ಒಬ್ಬ ವ್ಯಕ್ತಿ ತನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಪುರಾವೆಯ ಆಧಾರದಲ್ಲಿದ್ದಾನೆ.[1] ಅದರ ಹಿಂದೆ ಇನ್ನೊಂದು ಸಾಕ್ಷಿಯಿದೆ.[2] ಇದಕ್ಕೆ ಮೊದಲು ಮಾರ್ಗದರ್ಶಿ ಮತ್ತು ದಯೆಯಾಗಿದ್ದ ಮೂಸಾರ ಗ್ರಂಥವು ಕೂಡ ಆ ಸಾಕ್ಷಿಯನ್ನು ಬೆಂಬಲಿಸುತ್ತದೆ.[3] ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ. ವಿವಿಧ ಪಂಗಡಗಳಲ್ಲಿ ಯಾರು ಅದನ್ನು ನಿಷೇಧಿಸುತ್ತಾರೋ ಅವರಿಗೆ ವಾಗ್ದಾನ ಮಾಡಲಾದ ಸ್ಥಳವು ನರಕಾಗ್ನಿಯಾಗಿದೆ. ಆದ್ದರಿಂದ ನೀವು ಅದರ (ಕುರ್‌ಆನ್‌ನ) ಬಗ್ಗೆ ಯಾವುದೇ ಸಂಶಯವನ್ನಿಟ್ಟುಕೊಳ್ಳಬೇಡಿ. ನಿಶ್ಚಯವಾಗಿಯೂ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ.
[1] ಸ್ಪಷ್ಟ ಪುರಾವೆ ಎಂದರೆ ಮನುಷ್ಯನ ಸಹಜ ಮನೋಧರ್ಮ (ಫಿತ್ರ). ಎಲ್ಲಾ ಮನುಷ್ಯರೂ ಸಹಜ ಮನೋಧರ್ಮದಲ್ಲೇ (ಏಕದೇವವಿಶ್ವಾಸದಲ್ಲೇ) ಹುಟ್ಟುತ್ತಾರೆ. ನಂತರ ಅವರ ತಂದೆ-ತಾಯಿಗಳು ಅವರನ್ನು ಯಹೂದಿ, ಕ್ರೈಸ್ತ ಅಥವಾ ಅಗ್ನಿಪೂಜಕರನ್ನಾಗಿ ಮಾಡುತ್ತಾರೆ.
[2] ಅದರ ಹಿಂದೆ ಎಂದರೆ ಅದರ ಜೊತೆಗೆ. ಸಾಕ್ಷಿ ಎಂದರೆ ಪವಿತ್ರ ಕುರ್‌ಆನ್.
[3] ಇದರ ಅರ್ಥವೇನೆಂದರೆ ಒಬ್ಬ ವ್ಯಕ್ತಿ ತನ್ನ ಸಹಜ ಮನೋಧರ್ಮದ ಆಧಾರದಲ್ಲಿದ್ದು ಏಕೈಕ ದೇವನನ್ನು ಮಾತ್ರ ಆರಾಧಿಸುತ್ತಾನೆ. ಅವನ ಜೊತೆಗೆ ಅವನನ್ನು ಆ ಸಹಜ ಮನೋಧರ್ಮಕ್ಕೆ (ಏಕದೇವವಿಶ್ವಾಸಕ್ಕೆ) ಆಮಂತ್ರಿಸುವ ಪವಿತ್ರ ಕುರ್‌ಆನ್ ಇದೆ. ಮಾತ್ರವಲ್ಲ, ಇದಕ್ಕಿಂತ ಮುಂಚೆ ಅವತೀರ್ಣವಾದ ಮೂಸಾರ (ಅವರ ಮೇಲೆ ಶಾಂತಿಯಿರಲಿ) ಕೂಡ ಪವಿತ್ರ ಕುರ್‌ಆನನ್ನು ಅನುಸರಿಸಲು ಹೇಳುತ್ತದೆ. ಇಂತಹ ವ್ಯಕ್ತಿ ಖಂಡಿತ ಪವಿತ್ರ ಕುರ್‌ಆನ್‌ನಲ್ಲಿ ವಿಶ್ವಾಸವಿಡುತ್ತಾನೆ.
Các Tafsir tiếng Ả-rập:
 
Ý nghĩa nội dung Câu: (17) Chương: Chương Hud
Mục lục các chương Kinh Số trang
 
Bản dịch ý nghĩa nội dung Qur'an - الترجمة الكنادية - Mục lục các bản dịch

ترجمة معاني القرآن الكريم إلى اللغة الكنادية ترجمها محمد حمزة بتور.

Đóng lại