Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 奈哈里   段:
وَتَحْمِلُ اَثْقَالَكُمْ اِلٰی بَلَدٍ لَّمْ تَكُوْنُوْا بٰلِغِیْهِ اِلَّا بِشِقِّ الْاَنْفُسِ ؕ— اِنَّ رَبَّكُمْ لَرَءُوْفٌ رَّحِیْمٌ ۟ۙ
ಮತ್ತು ಅವು ನಿಮ್ಮ ಭಾರವನ್ನು ನಿಮಗೆ ಅರ್ಧಜೀವವಾಗದೆ ತಲುಪಿಸಲು ಸಾಧ್ಯವಾಗದಂತಹ ಪಟ್ಟಣಗಳಿಗೆ ಹೊತ್ತುಕೊಂಡು ಹೋಗುತ್ತವೆ. ನಿಶ್ಚಯವಾಗಿಯು ನಿಮ್ಮ ಪ್ರಭು ವತ್ಸಲನು, ಕರುಣಾನಿಧಿಯು ಆಗಿದ್ದಾನೆ.
阿拉伯语经注:
وَّالْخَیْلَ وَالْبِغَالَ وَالْحَمِیْرَ لِتَرْكَبُوْهَا وَزِیْنَةً ؕ— وَیَخْلُقُ مَا لَا تَعْلَمُوْنَ ۟
ಅವನು ಕುದುರೆಗಳನ್ನು, ಹೆಸರಗತ್ತೆಗಳನ್ನು ಮತ್ತು ಕತ್ತೆಗಳನ್ನು ನಿಮ್ಮ ಸವಾರಿಗಾಗಿ ಹಾಗೂ ಅಲಂಕಾರಕ್ಕಾಗಿ ಸೃಷ್ಟಿಸಿರುತ್ತಾನೆ ಮತ್ತು ಅವನು ನಿಮಗೆ ಅರಿವೇ ಇಲ್ಲಂದತಹ ಎಷ್ಟೋ ವಸ್ತುಗಳನ್ನು ಸೃಷ್ಟಿಸುತ್ತಾನೆ.
阿拉伯语经注:
وَعَلَی اللّٰهِ قَصْدُ السَّبِیْلِ وَمِنْهَا جَآىِٕرٌ ؕ— وَلَوْ شَآءَ لَهَدٰىكُمْ اَجْمَعِیْنَ ۟۠
ಕೆಲವು ಅಡ್ಡಮಾರ್ಗಗಳಿರುವಾಗ ಅಲ್ಲಾಹನ ಮೇಲೆಯೇ ಸನ್ಮಾರ್ಗವನ್ನು ತೋರಿಸಿ ಕೊಡುವ ಹೊಣೆಯಿದೆ ಮತ್ತು ಅವನು ಇಚ್ಛಿಸಿರುತ್ತಿದ್ದರೆ ನಿಮ್ಮೆಲ್ಲರನ್ನು (ಬಲವಂತವಾಗಿ) ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದನು (ಆದರೆ ಇದು ಅವನ ಯುಕ್ತಿಗೆ ವಿರುದ್ಧವಾಗಿದೆ.)
阿拉伯语经注:
هُوَ الَّذِیْۤ اَنْزَلَ مِنَ السَّمَآءِ مَآءً لَّكُمْ مِّنْهُ شَرَابٌ وَّمِنْهُ شَجَرٌ فِیْهِ تُسِیْمُوْنَ ۟
ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದನು. ಅದನ್ನು ನೀವು ಕುಡಿಯುತ್ತೀರಿ ಮತ್ತು ಅದರಿಂದಲೇ ಬೆಳೆದ ಮರಗಳನ್ನು ನಿಮ್ಮ ಜಾನುವಾರುಗಳಿಗೆ ಮೇಯಿಸುತ್ತೀರಿ.
阿拉伯语经注:
یُنْۢبِتُ لَكُمْ بِهِ الزَّرْعَ وَالزَّیْتُوْنَ وَالنَّخِیْلَ وَالْاَعْنَابَ وَمِنْ كُلِّ الثَّمَرٰتِ ؕ— اِنَّ فِیْ ذٰلِكَ لَاٰیَةً لِّقَوْمٍ یَّتَفَكَّرُوْنَ ۟
ಅದರಿಂದಲೇ ಅವನು ನಿಮಗೆ ಕೃಷಿಯನ್ನು, ಝೈತೂನನ್ನು (ಆಲೀವ್), ಖರ್ಜೂರವನ್ನು, ದ್ರಾಕ್ಷೆಗಳನ್ನು ಮತ್ತು ನಾನಾ ವಿಧದ ಹಣ್ಣು ಹಂಪಲುಗಳನ್ನು ಬೆಳೆಸುತ್ತಾನೆ. ನಿಸ್ಸಂಶಯವಾಗಿಯು ಇದರಲ್ಲಿ ಚಿಂತಿಸುವ ಜನರಿಗೆ ನಿದರ್ಶನವಿದೆ.
阿拉伯语经注:
وَسَخَّرَ لَكُمُ الَّیْلَ وَالنَّهَارَ ۙ— وَالشَّمْسَ وَالْقَمَرَ ؕ— وَالنُّجُوْمُ مُسَخَّرٰتٌ بِاَمْرِهٖ ؕ— اِنَّ فِیْ ذٰلِكَ لَاٰیٰتٍ لِّقَوْمٍ یَّعْقِلُوْنَ ۟ۙ
ಅವನೇ ನಿಮಗೆ ರಾತ್ರಿಯನ್ನು, ಹಗಲನ್ನು, ಸೂರ್ಯನನ್ನು ಮತ್ತು ಚಂದ್ರನನ್ನು ಅಧೀನಗೊಳಿಸಿದನು ಮತ್ತು ನಕ್ಷತ್ರಗಳು ಸಹ ಅವನ ಆಜ್ಞೆಯನುಸಾರ ಅಧೀನದಲ್ಲಿವೆ. ಇದರಲ್ಲಿ ಬುದ್ಧಿವಂತ ಜನರಿಗೆ ಅನೇಕ ನಿದರ್ಶನಗಳಿವೆ.
阿拉伯语经注:
وَمَا ذَرَاَ لَكُمْ فِی الْاَرْضِ مُخْتَلِفًا اَلْوَانُهٗ ؕ— اِنَّ فِیْ ذٰلِكَ لَاٰیَةً لِّقَوْمٍ یَّذَّكَّرُوْنَ ۟
ಅವನೇ ನಿಮಗಾಗಿ ಭೂಮಿಯಲ್ಲಿ ಅನೇಕ ವಸ್ತುಗಳನ್ನು ವಿವಿಧ ಬಣ್ಣಗಳಲ್ಲಿ ಸೃಷ್ಟಿಸಿದನು. ನಿಸ್ಸಂಶಯವಾಗಿಯೂ ಇದರಲ್ಲಿ ಉಪದೇಶ ಸ್ವೀಕರಿಸುವವರಿಗೆ ದೃಷ್ಟಾಂತವಿದೆ.
阿拉伯语经注:
وَهُوَ الَّذِیْ سَخَّرَ الْبَحْرَ لِتَاْكُلُوْا مِنْهُ لَحْمًا طَرِیًّا وَّتَسْتَخْرِجُوْا مِنْهُ حِلْیَةً تَلْبَسُوْنَهَا ۚ— وَتَرَی الْفُلْكَ مَوَاخِرَ فِیْهِ وَلِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟
ಅವನೇ ಸಮುದ್ರವನ್ನು ನಿಮಗೆ ಅಧೀನಗೊಳಿಸಿದನು. ನೀವು ಅದರಿಂದ ತಾಜಾ ಮಾಂಸವನ್ನು ಸೇವಿಸಲಿಕ್ಕಾಗಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು ಅದರಿಂದ ಹೊರ ತೆಗೆಯಲಿಕ್ಕಾಗಿದೆ ಮತ್ತು ಅದರಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಚಲಿಸುತ್ತಿರುವುದನ್ನು ನೀವು ಕಾಣುತ್ತೀರಿ. ಇದೆಲ್ಲಾ ನೀವು ಅವನ ಅನುಗ್ರಹವನ್ನು ಅರಸಲೆಂದಾಗಿದೆ ಮತ್ತು ಪ್ರಾಯಶಃ ನೀವು ಕೃತಜ್ಞತೆಯನ್ನು ತೋರಬಹುದು.
阿拉伯语经注:
 
含义的翻译 章: 奈哈里
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭