Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 伊斯拉仪   段:
مَنْ كَانَ یُرِیْدُ الْعَاجِلَةَ عَجَّلْنَا لَهٗ فِیْهَا مَا نَشَآءُ لِمَنْ نُّرِیْدُ ثُمَّ جَعَلْنَا لَهٗ جَهَنَّمَ ۚ— یَصْلٰىهَا مَذْمُوْمًا مَّدْحُوْرًا ۟
ಯಾರಾದರೂ ಶೀಘ್ರವಾಗಿ ದೊರಕುವುದನ್ನು ಅಪೇಕ್ಷಿಸಿದರೆ ನಾವಿಚ್ಛಿಸಿದವನಿಗೆ ಇಹಲೋಕದಲ್ಲೇ ನಾವಿಚ್ಛಿಸಿದ್ದನ್ನು ಶೀಘ್ರವಾಗಿ ನೀಡುತ್ತೇವೆ. ಅನಂತರ ನಾವು ಅವನಿಗೆ ನರಕವನ್ನು ನಿಶ್ಚಯಿಸುತ್ತೇವೆ. ಅಲ್ಲಿ ಅವನು ಅಪಮಾನಿತನೂ, ತಿರಸ್ಕರಿಸಲ್ಪಟ್ಟವನೂ ಆಗಿ ಪ್ರವೇಶಿಸುವನು.
阿拉伯语经注:
وَمَنْ اَرَادَ الْاٰخِرَةَ وَسَعٰی لَهَا سَعْیَهَا وَهُوَ مُؤْمِنٌ فَاُولٰٓىِٕكَ كَانَ سَعْیُهُمْ مَّشْكُوْرًا ۟
ಮತ್ತು ಯಾರಾದರು ಪರಲೋಕವನ್ನು ಅಪೇಕ್ಷಿಸಿ ಹಾಗೂ ಸತ್ಯ ವಿಶ್ವಾಸಿಯಾಗಿದ್ದುಕೊಂಡು ಅದಕ್ಕಾಗಿ ಶ್ರಮ ವಹಿಸಬೇಕಾದಂತೆ ಶ್ರಮ ವಹಿಸಿದರೆ ಅಂಥವರ ಪರಿಶ್ರಮವು ಕೃತಜ್ಞಾರ್ಹವಾಗುವುದು.
阿拉伯语经注:
كُلًّا نُّمِدُّ هٰۤؤُلَآءِ وَهٰۤؤُلَآءِ مِنْ عَطَآءِ رَبِّكَ ؕ— وَمَا كَانَ عَطَآءُ رَبِّكَ مَحْظُوْرًا ۟
(ಓ ಪೈಗಂಬರರೇ) ನಾವು ಪ್ರತಿಯೊಬ್ಬರಿಗೂ (ಲೌಕಿಕ ಕೊಡುಗೆಗಳಿಂದ) ನೀಡುವೆವು ಅವರಿಗೂ (ಪರಲೋಕ ಬಯಸುವವರಿಗೆ), ಇವರಿಗೂ (ಇಹಲೋಕ ಬಹಯಸುವವರಿಗೆ) ಮತ್ತು ನಿಮ್ಮ ಪ್ರಭುವಿನ ಕೊಡುಗೆಯೂ (ಯಾರಿಂದರಲೂ) ತಡೆದಿರಿಸಲಾಗದು.
阿拉伯语经注:
اُنْظُرْ كَیْفَ فَضَّلْنَا بَعْضَهُمْ عَلٰی بَعْضٍ ؕ— وَلَلْاٰخِرَةُ اَكْبَرُ دَرَجٰتٍ وَّاَكْبَرُ تَفْضِیْلًا ۟
ನಾವು ಅವರ ಪೈಕಿ ಕೆಲವರನ್ನು ಇನ್ನು ಕೆಲವರ ಮೇಲೆ ಹೇಗೆ ಶ್ರೇಷ್ಠತೆ ನೀಡಿದ್ದೇವೆಂಬುದನ್ನು ನೋಡಿರಿ. ಪರಲೋಕವಂತು ಸ್ಥಾನಮಾನಗಳಲ್ಲಿ ಹೆಚ್ಚು ಹಿರಿದಾದುದ್ದು ಮತ್ತು ಶ್ರೇಷ್ಠತೆಯಲ್ಲೂ ಅತ್ಯಂತ ಹಿರಿದಾದ್ದುದಾಗಿದೆ.
阿拉伯语经注:
لَا تَجْعَلْ مَعَ اللّٰهِ اِلٰهًا اٰخَرَ فَتَقْعُدَ مَذْمُوْمًا مَّخْذُوْلًا ۟۠
ನೀವು ಅಲ್ಲಾಹನೊಂದಿಗೆ ಬೇರಾವ ಆರಾಧ್ಯನನ್ನು ನಿಶ್ಚಯಿಸದಿರಿ. ಅನ್ಯಥಾ ನೀವು ನಿಂದ್ಯರಾಗಿಯೂ, ನಿಸ್ಸಹಾಯಕರಾಗಿಯೂ ಕುಳಿತು ಬಿಡುವಿರಿ.
阿拉伯语经注:
وَقَضٰی رَبُّكَ اَلَّا تَعْبُدُوْۤا اِلَّاۤ اِیَّاهُ وَبِالْوَالِدَیْنِ اِحْسَانًا ؕ— اِمَّا یَبْلُغَنَّ عِنْدَكَ الْكِبَرَ اَحَدُهُمَاۤ اَوْ كِلٰهُمَا فَلَا تَقُلْ لَّهُمَاۤ اُفٍّ وَّلَا تَنْهَرْهُمَا وَقُلْ لَّهُمَا قَوْلًا كَرِیْمًا ۟
ನೀವು ಅವನ ಹೊರತು ಇನ್ನಾರನ್ನೂ ಆರಾಧಿಸಕೂಡದು ಮತ್ತು ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಿಮ್ಮ ಪ್ರಭೂ ತೀರ್ಮಾನಿಸಿದ್ದಾನೆ. ನಿಮ್ಮ ಜೀವನದಲ್ಲಿ ಅವರಿಬ್ಬರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧಾಪ್ಯವನ್ನು ತಲುಪಿದರೆ ನೀವು ಅವರಿಗೆ ಛೇ ಎಂದು ಹೇಳಬೇಡಿ ಮತ್ತು ಅವರಿಗೆ ಗದರಿಸಬೇಡಿರಿ, ಮಾತ್ರವಲ್ಲ ನೀವು ಅವರೊಂದಿಗೆ ಗೌರವಪೂರ್ವಕವಾಗಿ ಮಾತನ್ನಾಡಿರಿ.
阿拉伯语经注:
وَاخْفِضْ لَهُمَا جَنَاحَ الذُّلِّ مِنَ الرَّحْمَةِ وَقُلْ رَّبِّ ارْحَمْهُمَا كَمَا رَبَّیٰنِیْ صَغِیْرًا ۟ؕ
ಮತ್ತು ಕರುಣೆಯಿಂದ ಅವರ ಮುಂದೆ ನಯವಿನಯದ ಭುಜವನ್ನು ತಗ್ಗಿಸಿರಿ ಹಾಗೂ ಓ ನನ್ನ ಪ್ರಭುವೇ, ಅವರು ನನ್ನ ಬಾಲ್ಯದಲ್ಲಿ ಪಾಲನೆ-ಪೋಷಣೆ ಮಾಡಿದಂತೆಯೇ ಅವರ ಮೇಲೆ ಕರುಣೆ ತೋರು ಎಂದು ಪ್ರಾರ್ಥಿಸಿರಿ.
阿拉伯语经注:
رَبُّكُمْ اَعْلَمُ بِمَا فِیْ نُفُوْسِكُمْ ؕ— اِنْ تَكُوْنُوْا صٰلِحِیْنَ فَاِنَّهٗ كَانَ لِلْاَوَّابِیْنَ غَفُوْرًا ۟
ನಿಮ್ಮ ಪ್ರಭುವು ನಿಮ್ಮ ಅಂತರAಗದಲ್ಲಿರುವುದನ್ನು ಚೆನ್ನಾಗಿ ಬಲ್ಲನು. ನೀವು ಸಜ್ಜನರಾಗಿದ್ದರೆ ಖಂಡಿತವಾಗಿಯೂ ಅವನು ಪಶ್ಚಾತ್ತಾಪ ಹೊಂದಿ ಮರಳಿ ಬರುವವರಿಗೆ ಕ್ಷಮಾಶೀಲನಾಗಿರುತ್ತಾನೆ.
阿拉伯语经注:
وَاٰتِ ذَا الْقُرْبٰی حَقَّهٗ وَالْمِسْكِیْنَ وَابْنَ السَّبِیْلِ وَلَا تُبَذِّرْ تَبْذِیْرًا ۟
ನೀವು ಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಯಾತ್ರಿಕರಿಗೆ ಅವರ ಹಕ್ಕನ್ನು ಕೊಡಿ ಮತ್ತು ದುಂದುವೆಚ್ಚ ಮಾಡಬೇಡಿರಿ.
阿拉伯语经注:
اِنَّ الْمُبَذِّرِیْنَ كَانُوْۤا اِخْوَانَ الشَّیٰطِیْنِ ؕ— وَكَانَ الشَّیْطٰنُ لِرَبِّهٖ كَفُوْرًا ۟
ದುಂದುವೆಚ್ಚ ಮಾಡುವವರು ಶೈತಾನನ ಸಹೋದರರಾಗಿದ್ದಾರೆ ಮತ್ತು ಶೈತಾನನು ತನ್ನ ಪ್ರಭುವಿನ ಕೃತಘ್ನನಾಗಿದ್ದಾನೆ.
阿拉伯语经注:
 
含义的翻译 章: 伊斯拉仪
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭