Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 尼萨仪   段:
وَلَكُمْ نِصْفُ مَا تَرَكَ اَزْوَاجُكُمْ اِنْ لَّمْ یَكُنْ لَّهُنَّ وَلَدٌ ۚ— فَاِنْ كَانَ لَهُنَّ وَلَدٌ فَلَكُمُ الرُّبُعُ مِمَّا تَرَكْنَ مِنْ بَعْدِ وَصِیَّةٍ یُّوْصِیْنَ بِهَاۤ اَوْ دَیْنٍ ؕ— وَلَهُنَّ الرُّبُعُ مِمَّا تَرَكْتُمْ اِنْ لَّمْ یَكُنْ لَّكُمْ وَلَدٌ ۚ— فَاِنْ كَانَ لَكُمْ وَلَدٌ فَلَهُنَّ الثُّمُنُ مِمَّا تَرَكْتُمْ مِّنْ بَعْدِ وَصِیَّةٍ تُوْصُوْنَ بِهَاۤ اَوْ دَیْنٍ ؕ— وَاِنْ كَانَ رَجُلٌ یُّوْرَثُ كَلٰلَةً اَوِ امْرَاَةٌ وَّلَهٗۤ اَخٌ اَوْ اُخْتٌ فَلِكُلِّ وَاحِدٍ مِّنْهُمَا السُّدُسُ ۚ— فَاِنْ كَانُوْۤا اَكْثَرَ مِنْ ذٰلِكَ فَهُمْ شُرَكَآءُ فِی الثُّلُثِ مِنْ بَعْدِ وَصِیَّةٍ یُّوْصٰی بِهَاۤ اَوْ دَیْنٍ ۙ— غَیْرَ مُضَآرٍّ ۚ— وَصِیَّةً مِّنَ اللّٰهِ ؕ— وَاللّٰهُ عَلِیْمٌ حَلِیْمٌ ۟ؕ
ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ ಅವರು ಬಿಟ್ಟು ಹೋದ ಸೊತ್ತಿನ ಅರ್ಧಾಂಶವು ನಿಮ್ಮದಾಗಿರುತ್ತದೆ ಮತ್ತು ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಸೊತ್ತಿನ ನಾಲ್ಕನೇ ಒಂದAಶವು ನಿಮ್ಮದಾಗಿರುತ್ತದೆ. ಇದು ಅವರು ಮಾಡಿ ಹೋದ ಉಯಿಲಿನ ನಂತರ ಮತ್ತು ಸಾಲ ಪಾವತಿಯ ನಂತರವಾಗಿದೆ. ಮತ್ತು ನಿಮಗೆ ಮಕ್ಕಳಿಲ್ಲದಿದ್ದರೆ ನೀವು ಬಿಟ್ಟು ಹೋದ ಸೊತ್ತಿನ ನಾಲ್ಕನೇ ಒಂದAಶವು ಅವರಿಗಾಗಿರುತ್ತದೆ; ಇನ್ನು ನಿಮಗೆ ಮಕ್ಕಳಿದ್ದರೆ ನೀವು ಬಿಟ್ಟುಹೋದ ಸೊತ್ತಿನ ಎಂಟನೇ ಒಂದAಶವು ಅವರಿಗೆ ಲಭಿಸುತ್ತದೆ. ಇದು ನೀವು ಮಾಡಿ ಹೋಗುವ ಉಯಿಲಿನ ನಂತರ ಮತ್ತು ಸಾಲ ಪಾವತಿಯ ನಂತರವಾಗಿದೆ ಮತ್ತು ಕಲಾಲಃ (ತಂದೆ ಹಾಗೂ ಮಕ್ಕಳಿಲ್ಲದವರು) ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಅವನಿಗೆ ತಾಯಿಯ ಕಡೆಯಿಂದ ಒಬ್ಬ ಸಹೋದರನಾಗಲಿ ಅಥವಾ ಒಬ್ಬಳು ತಾಯಿಯ ಕಡೆಯಿಂದ ಸಹೋದರಿಯಾಗಲಿ ಇದ್ದರೆ ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದAಶವಿರುತ್ತದೆ. ಇನ್ನು ಅವರು ಅದಕ್ಕಿಂತಲೂ ಹೆಚ್ಚಿದ್ದರೆ ಅವರು ಮೂರನೇ ಒಂದAಶದಲ್ಲಿ ಎಲ್ಲರೂ ಪಾಲುದಾರರಾಗಿರುವರು. ಇದು ಉಯಿಲು ಮಾಡಲಾದ ಮತ್ತು ಸಾಲ ಪಾವತಿಯ ನಂತರವಾಗಿದೆ; ಆದರೆ ಇತರರೊಂದಿಗೆ ಅನ್ಯಾಯ ನಡೆದಿರಬಾರದು. ಈ ನಿಶ್ಚಯವು ಅಲ್ಲಾಹನ ಕಡೆಯಿಂದಾಗಿದೆ. ಮತ್ತು ಅಲ್ಲಾಹನು ಸರ್ವಜ್ಞನೂ, ವಿವೇಕಪೂರ್ಣನೂ ಆಗಿದ್ದಾನೆ.
阿拉伯语经注:
تِلْكَ حُدُوْدُ اللّٰهِ ؕ— وَمَنْ یُّطِعِ اللّٰهَ وَرَسُوْلَهٗ یُدْخِلْهُ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَذٰلِكَ الْفَوْزُ الْعَظِیْمُ ۟
ಇವು ಅಲ್ಲಾಹನ ಮೇರೆಗಳು ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಅನುಸರಿಸುತ್ತಾನೋ ಅವನನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಅವರು ಅದರಲ್ಲಿ ಶಾಶ್ವತರಾಗಿರುವರು ಮತ್ತು ಇದು ಮಹಾ ಯಶಸ್ಸಾಗಿದೆ.
阿拉伯语经注:
وَمَنْ یَّعْصِ اللّٰهَ وَرَسُوْلَهٗ وَیَتَعَدَّ حُدُوْدَهٗ یُدْخِلْهُ نَارًا خَالِدًا فِیْهَا ۪— وَلَهٗ عَذَابٌ مُّهِیْنٌ ۟۠
ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಧಿಕ್ಕರಿಸುತ್ತಾನೋ ಮತ್ತು ಅವನ ಮೇರೆಗಳನ್ನು ಮೀರುತ್ತಾನೋ ಅವನನ್ನು ಅಲ್ಲಾಹನು ನರಕದಲ್ಲಿ ಹಾಕುವನು. ಅವನದರಲ್ಲಿ ಶಾಶ್ವತನಾಗಿರುವನು. ಅಂಥಹವನಿಗೇ ಅಪಮಾನಕರ ಶಿಕ್ಷೆಯಿರುವುದು.
阿拉伯语经注:
 
含义的翻译 章: 尼萨仪
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭