《古兰经》译解 - الترجمة الكنادية - بشير ميسوري * - 译解目录


含义的翻译 章: 盖拉姆   段:

ಸೂರ ಅಲ್- ಕಲಮ್

نٓ وَالْقَلَمِ وَمَا یَسْطُرُوْنَ ۟ۙ
ನೂನ್, ಲೇಖನಿ ಮತ್ತು ಅವರು (ಮಲಕ್) ಬರೆಯುತ್ತಿರುವುದರಾಣೆ.
阿拉伯语经注:
مَاۤ اَنْتَ بِنِعْمَةِ رَبِّكَ بِمَجْنُوْنٍ ۟ۚ
ನಿಮ್ಮ ಪ್ರಭುವಿನ ಅನುಗ್ರಹದಿಂದ (ಪೈಗಂಬರರೇ) ನೀವು ಹುಚ್ಚರಲ್ಲ.
阿拉伯语经注:
وَاِنَّ لَكَ لَاَجْرًا غَیْرَ مَمْنُوْنٍ ۟ۚ
ನಿಸ್ಸಂಶಯವಾಗಿಯೂ ನಿಮಗೆ ಅನಂತ ಪ್ರತಿಫಲವಿದೆ.
阿拉伯语经注:
وَاِنَّكَ لَعَلٰی خُلُقٍ عَظِیْمٍ ۟
ನಿಸ್ಸಂಶಯವಾಗಿಯೂ ನೀವು ಅತ್ತುö್ಯನ್ನತ ಗುಣಸ್ವಭಾವದವರಾಗಿರುವಿರಿ.
阿拉伯语经注:
فَسَتُبْصِرُ وَیُبْصِرُوْنَ ۟ۙ
ಸಧ್ಯವೇ ನೀವು ನೋಡುವಿರಿ, ಅವರೂ (ಸತ್ಯನಿಷೇಧಿಗಳು) ನೋಡಲಿರುವರು.
阿拉伯语经注:
بِاَیِّىكُمُ الْمَفْتُوْنُ ۟
ನಿಮ್ಮಲ್ಲಿ ಹುಚ್ಚನಾರೆಂದು.
阿拉伯语经注:
اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ ۪— وَهُوَ اَعْلَمُ بِالْمُهْتَدِیْنَ ۟
ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು ಸನ್ಮರ‍್ಗ ಪಡೆದವರ ಕುರಿತೂ ಅವನು ಚೆನ್ನಾಗಿ ಬಲ್ಲನು.
阿拉伯语经注:
فَلَا تُطِعِ الْمُكَذِّبِیْنَ ۟
ಆದ್ದರಿಂದ ನೀವು ಸುಳ್ಳಾಗಿಸುವವರನ್ನು ಅನುಸರಿಸಬೇಡಿರಿ.
阿拉伯语经注:
وَدُّوْا لَوْ تُدْهِنُ فَیُدْهِنُوْنَ ۟
ನೀವು (ರ‍್ಮದ ವಿಷಯದಲ್ಲಿ) ಮೃದುತ್ವ ತೋರಿದರೆ ನಾವೂ ಮೃದುತ್ವ ತೋರುವೆವೆಂದು ಅವರು ಬಯಸುತ್ತಾರೆ,
阿拉伯语经注:
وَلَا تُطِعْ كُلَّ حَلَّافٍ مَّهِیْنٍ ۟ۙ
ನೀವು ಅತ್ಯಧಿಕ ಆಣೆ ಹಾಕುವ ಯಾವೊಬ್ಬ ವ್ಯಕ್ತಿಯನ್ನೂ ಅನುಸರಿಸಕೂಡದು,
阿拉伯语经注:
هَمَّازٍ مَّشَّآءٍ بِنَمِیْمٍ ۟ۙ
ಪರದೋಷಣೆ ಮಾಡುವವನ, ಚಾಡಿಕೋರನ.
阿拉伯语经注:
مَّنَّاعٍ لِّلْخَیْرِ مُعْتَدٍ اَثِیْمٍ ۟ۙ
ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,
阿拉伯语经注:
عُتُلٍّۢ بَعْدَ ذٰلِكَ زَنِیْمٍ ۟ۙ
ಕ್ರೂರ ಮತ್ತು ಕುಲಗೆಟ್ಟವನ (ಅನುಸರಿಸಬೇಡಿರಿ)
阿拉伯语经注:
اَنْ كَانَ ذَا مَالٍ وَّبَنِیْنَ ۟ؕ
ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).
阿拉伯语经注:
اِذَا تُتْلٰی عَلَیْهِ اٰیٰتُنَا قَالَ اَسَاطِیْرُ الْاَوَّلِیْنَ ۟
ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಹೇಳಲಾದರೆ ಇವೆಲ್ಲಾ ‘ಪರ‍್ವಿಕರ ಕಟ್ಟು ಕಥೆಗಳು' ಎನ್ನುತ್ತಾನೆ.
阿拉伯语经注:
سَنَسِمُهٗ عَلَی الْخُرْطُوْمِ ۟
ಸದ್ಯವೇ ನಾವು ಅವನ ಸೊಂಡಲಿನ ಮೇಲೆ ಬರೆ ಹಾಕಲಿರುವೆವು.
阿拉伯语经注:
اِنَّا بَلَوْنٰهُمْ كَمَا بَلَوْنَاۤ اَصْحٰبَ الْجَنَّةِ ۚ— اِذْ اَقْسَمُوْا لَیَصْرِمُنَّهَا مُصْبِحِیْنَ ۟ۙ
ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ ಫಲಗಳನ್ನು ಕೊಯ್ಯುವೆವೆಂದು ಅವರು ಆಣೆ ಹಾಕಿದ ಸಂರ‍್ಭವನ್ನು ಸ್ಮರಿಸಿರಿ.
阿拉伯语经注:
وَلَا یَسْتَثْنُوْنَ ۟
ಅವರು ಇನ್ಶಾಅಲ್ಲಾಹ್ (ಅಲ್ಲಾಹನು ಇಚ್ಛಿಸಿದರೆ) ಎಂದು ಹೇಳಲಿಲ್ಲ.
阿拉伯语经注:
فَطَافَ عَلَیْهَا طَآىِٕفٌ مِّنْ رَّبِّكَ وَهُمْ نَآىِٕمُوْنَ ۟
ಅವರು ನಿದ್ರಿಸುತ್ತಿದ್ದಾಗ ನಿಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ಒಂದು ವಿಪತ್ತು ಆವರಿಸಿಬಿಟ್ಟಿತು.
阿拉伯语经注:
فَاَصْبَحَتْ كَالصَّرِیْمِ ۟ۙ
ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.
阿拉伯语经注:
فَتَنَادَوْا مُصْبِحِیْنَ ۟ۙ
ಮುಂಜಾನೆ ಆಗುತ್ತಲೇ ಅವರು ಪರಸ್ಪರ ಕೂಗಿ ಹೇಳಿದರು;
阿拉伯语经注:
اَنِ اغْدُوْا عَلٰی حَرْثِكُمْ اِنْ كُنْتُمْ صٰرِمِیْنَ ۟
ನಿಮಗೆ ಕೊಯ್ಯಲಿಕ್ಕಿದ್ದರೆ ನಿಮ್ಮ ತೋಟದೆಡೆಗೆ ಹೊರಡಿರಿ.
阿拉伯语经注:
فَانْطَلَقُوْا وَهُمْ یَتَخَافَتُوْنَ ۟ۙ
ಅನಂತರ ಅವರೆಲ್ಲರೂ ಪರಸ್ಪರ ಪಿಸುಗುಟ್ಟುತ್ತಾ ತೆರಳಿದರು.
阿拉伯语经注:
اَنْ لَّا یَدْخُلَنَّهَا الْیَوْمَ عَلَیْكُمْ مِّسْكِیْنٌ ۟ۙ
ಇಂದು ಯಾವೊಬ್ಬ ಬಡವನೂ ನಿಮ್ಮ ಬಳಿಗೆ ಬರದಂತಾಗಲಿ.
阿拉伯语经注:
وَّغَدَوْا عَلٰی حَرْدٍ قٰدِرِیْنَ ۟
ನಾವು ಬಡವರನ್ನು ತಡೆಯಲು ಶಕ್ತರು ಎಂದು ಭಾವಿಸಿ ಅವರು ಮುಂಜಾನೆಯೇ ತೆರಳಿದರು,
阿拉伯语经注:
فَلَمَّا رَاَوْهَا قَالُوْۤا اِنَّا لَضَآلُّوْنَ ۟ۙ
ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ
阿拉伯语经注:
بَلْ نَحْنُ مَحْرُوْمُوْنَ ۟
. ಅಲ್ಲ, ನಾವು ವಂಚಿತರಾಗಿದ್ದೇವೆ.
阿拉伯语经注:
قَالَ اَوْسَطُهُمْ اَلَمْ اَقُلْ لَّكُمْ لَوْلَا تُسَبِّحُوْنَ ۟
ಅವರ ಪೈಕಿ ಉತ್ತಮನಾಗಿದ್ದವನು ಹೇಳಿದನು; ನೀವು ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುವುದಿಲ್ಲವೇಕೆ? ಎಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
阿拉伯语经注:
قَالُوْا سُبْحٰنَ رَبِّنَاۤ اِنَّا كُنَّا ظٰلِمِیْنَ ۟
ಆಗ ಅವರು ನಮ್ಮ ಪ್ರಭು ಪರಮಪಾವವನು. ನಿಸ್ಸಂದೇಹವಾಗಿಯೂ ನಾವು ಅಕ್ರಮಿಗಳಾಗಿದ್ದೆವು ಎಂದರು.
阿拉伯语经注:
فَاَقْبَلَ بَعْضُهُمْ عَلٰی بَعْضٍ یَّتَلَاوَمُوْنَ ۟
ಬಳಿಕ ಅವರು ಪರಸ್ಪರರನ್ನು ಆಕ್ಷೇಪಿಸತೊಡಗಿದರು.
阿拉伯语经注:
قَالُوْا یٰوَیْلَنَاۤ اِنَّا كُنَّا طٰغِیْنَ ۟
ಅಯ್ಯೋ ದರ‍್ಗತಿಯೇ, ಖಂಡಿತವಾಗಿಯೂ ನಾವು ಅತಿಕ್ರಮಿಗಳಾಗಿದ್ದೆವು ಎಂದರು.
阿拉伯语经注:
عَسٰی رَبُّنَاۤ اَنْ یُّبْدِلَنَا خَیْرًا مِّنْهَاۤ اِنَّاۤ اِلٰی رَبِّنَا رٰغِبُوْنَ ۟
ನಮ್ಮ ಪ್ರಭು ನಮಗೆ ಇದಕ್ಕಿಂತಲೂ ಉತ್ತಮವಾಗಿರುವುದನ್ನು ಇದರ ಬದಲಿಗೆ ಕೊಡಬಹುದು. ನಿಸ್ಸಂದೇಹವಾಗಿಯೂ ನಾವು ನಮ್ಮ ಪ್ರಭುವಿನಲ್ಲೇ ನಿರೀಕ್ಷೆಯನ್ನಿರಿಸಿದ್ದೇವೆ.
阿拉伯语经注:
كَذٰلِكَ الْعَذَابُ ؕ— وَلَعَذَابُ الْاٰخِرَةِ اَكْبَرُ ۘ— لَوْ كَانُوْا یَعْلَمُوْنَ ۟۠
ಶಿಕ್ಷೆ ಹೀಗೆಯೇ ಇರುತ್ತದೆ ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ. ಅಕಟ ಅವರು ಅರಿಯುತ್ತಿದ್ದರೆ!
阿拉伯语经注:
اِنَّ لِلْمُتَّقِیْنَ عِنْدَ رَبِّهِمْ جَنّٰتِ النَّعِیْمِ ۟
ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹಪರ‍್ಣ ಸ್ರ‍್ಗೋದ್ಯಾನಗಳಿವೆ.
阿拉伯语经注:
اَفَنَجْعَلُ الْمُسْلِمِیْنَ كَالْمُجْرِمِیْنَ ۟ؕ
ನಾವು ಆಜ್ಞಾಪಾಲಕರನ್ನು ಅಪರಾಧಿಗಳಂತೆ ಮಾಡುವೆವೇ ?
阿拉伯语经注:
مَا لَكُمْ ۫— كَیْفَ تَحْكُمُوْنَ ۟ۚ
ನಿಮಗೇನಾಗಿದೆ ? ನೀವು ಹೇಗೆ ತರ‍್ಮಾನ ಮಾಡುತ್ತಿರುವಿರಿ ?
阿拉伯语经注:
اَمْ لَكُمْ كِتٰبٌ فِیْهِ تَدْرُسُوْنَ ۟ۙ
ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?
阿拉伯语经注:
اِنَّ لَكُمْ فِیْهِ لَمَا تَخَیَّرُوْنَ ۟ۚ
ಅಂದರೆ ಅದರಲ್ಲಿ ನೀವು ಮೆಚ್ಚುವಂತಹ ವಿಚಾರಗಳು ಬರೆದಿವೆಯೇ ?
阿拉伯语经注:
اَمْ لَكُمْ اَیْمَانٌ عَلَیْنَا بَالِغَةٌ اِلٰی یَوْمِ الْقِیٰمَةِ ۙ— اِنَّ لَكُمْ لَمَا تَحْكُمُوْنَ ۟ۚ
ನೀವು ತರ‍್ಮಾನಿಸುದೆಲ್ಲವೂ ನಿಮಗಿರುವುದೆಂದು ಪುನರುತ್ಥಾನದ ದಿನದವರೆಗೆ ನಾವು ಪಾಲಿಸಲೇಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದುಕೊಂಡಿರುವಿರಾ ?
阿拉伯语经注:
سَلْهُمْ اَیُّهُمْ بِذٰلِكَ زَعِیْمٌ ۟ۚۛ
ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.
阿拉伯语经注:
اَمْ لَهُمْ شُرَكَآءُ ۛۚ— فَلْیَاْتُوْا بِشُرَكَآىِٕهِمْ اِنْ كَانُوْا صٰدِقِیْنَ ۟
ಅಥವಾ, ಅವರಿಗೆ ಸಹಭಾಗಿಗಳಿದ್ದಾರೆಯೇ ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ಕರೆತರಲಿ.
阿拉伯语经注:
یَوْمَ یُكْشَفُ عَنْ سَاقٍ وَّیُدْعَوْنَ اِلَی السُّجُوْدِ فَلَا یَسْتَطِیْعُوْنَ ۟ۙ
ಕಣಕಾಲನ್ನು ಪ್ರಕಟ ಮಾಡಲಾಗುವ ದಿನ ಸಾಷ್ಟಾಂಗ ಮಾಡಲು ಅವರನ್ನು ಕರೆಯಲಾಗುವುದು, ಆಗ ಅವರಿಗೆ ಸಾಷ್ಟಾಂಗ ಮಾಡಲು ಸಾಧ್ಯವಾಗದು.
阿拉伯语经注:
خَاشِعَةً اَبْصَارُهُمْ تَرْهَقُهُمْ ذِلَّةٌ ؕ— وَقَدْ كَانُوْا یُدْعَوْنَ اِلَی السُّجُوْدِ وَهُمْ سٰلِمُوْنَ ۟
ಅವರ ದೃಷ್ಟಿಗಳು ತಗ್ಗಿರುವುವು ಮತ್ತು ಅಪಮಾನವು ಅವರನ್ನು ಆವರಿಸಿಕೊಂಡಿರುವುದು. ವಸ್ತುತಃ ಅವರು ಕ್ಷೇಮವಾಗಿದ್ದ ಸಮಯದಲ್ಲಿ ಸಾಷ್ಟಾಂಗ ಮಾಡಲಿಕ್ಕಾಗಿ ಕರೆಯಲ್ಪಡುತ್ತಿದ್ದರು.
阿拉伯语经注:
فَذَرْنِیْ وَمَنْ یُّكَذِّبُ بِهٰذَا الْحَدِیْثِ ؕ— سَنَسْتَدْرِجُهُمْ مِّنْ حَیْثُ لَا یَعْلَمُوْنَ ۟ۙ
(ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ, ಅವರಿಗೆ ಅರಿವೇ ಆಗದಂತಹ ರೀತಿಯಲ್ಲಿ ನಾವು ಅವರನ್ನು ಮೆಲ್ಲ ಮೆಲ್ಲನೆ (ನರಕದೆಡೆಗೆ) ಎಳೆದೊಯ್ಯುವೆವು.
阿拉伯语经注:
وَاُمْلِیْ لَهُمْ ؕ— اِنَّ كَیْدِیْ مَتِیْنٌ ۟
ನಾನು ಅವರಿಗೆ ಕಾಲಾವಕಾಶ ನೀಡುತ್ತೇನೆ, ನಿಸ್ಸಂಶಯವಾಗಿಯೂ ನನ್ನ ತಂತ್ರವು ಪ್ರಬಲವಾಗಿದೆ.
阿拉伯语经注:
اَمْ تَسْـَٔلُهُمْ اَجْرًا فَهُمْ مِّنْ مَّغْرَمٍ مُّثْقَلُوْنَ ۟ۚ
ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?
阿拉伯语经注:
اَمْ عِنْدَهُمُ الْغَیْبُ فَهُمْ یَكْتُبُوْنَ ۟
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರದನ್ನು ಬರೆದಿಡುತ್ತಿದ್ದಾರೆಯೇ ?
阿拉伯语经注:
فَاصْبِرْ لِحُكْمِ رَبِّكَ وَلَا تَكُنْ كَصَاحِبِ الْحُوْتِ ۘ— اِذْ نَادٰی وَهُوَ مَكْظُوْمٌ ۟ؕ
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗಬೇಡಿರಿ. ಅವರು ತೀವ್ರ ದುಃಖಪೀಡಿತರಾಗಿದ್ದು ಪ್ರರ‍್ಥಿಸಿದ ಸಂರ‍್ಭ.
阿拉伯语经注:
لَوْلَاۤ اَنْ تَدٰرَكَهٗ نِعْمَةٌ مِّنْ رَّبِّهٖ لَنُبِذَ بِالْعَرَآءِ وَهُوَ مَذْمُوْمٌ ۟
ತಮ್ಮ ಪ್ರಭುವಿನ ಅನುಗ್ರಹವು ಅವರಿಗೆ ಲಭಿಸದಿರುತ್ತಿದ್ದರೆ ಅವರು ನಿಂಧ್ಯರಾಗಿ ಬಟ್ಟಬಯಲಿನಲ್ಲಿ ಎಸೆಯಲ್ಪಡುತ್ತಿದ್ದರು.
阿拉伯语经注:
فَاجْتَبٰىهُ رَبُّهٗ فَجَعَلَهٗ مِنَ الصّٰلِحِیْنَ ۟
ಆದರೆ ಅವರ ಪ್ರಭು ಅವರನ್ನು ಪುನಃ ಆರಿಸಿಕೊಂಡನು. ಮತ್ತು ಅವರನ್ನು ಸಜ್ಜನರೊಂದಿಗೆ ಸೇರಿಸಿದನು.
阿拉伯语经注:
وَاِنْ یَّكَادُ الَّذِیْنَ كَفَرُوْا لَیُزْلِقُوْنَكَ بِاَبْصَارِهِمْ لَمَّا سَمِعُوا الذِّكْرَ وَیَقُوْلُوْنَ اِنَّهٗ لَمَجْنُوْنٌ ۟ۘ
ಸತ್ಯನಿಷೇಧಿಗಳು ಕುರ್ಆನನ್ನು ಆಲಿಸುವಾಗಲೆಲ್ಲ ತಮ್ಮ ತೀಕ್ಷ÷್ಣಕಣ್ಣುಗಳಿಂದ ನಿಮ್ಮನ್ನು ಬೀಳ್ಮಾಡುವಷ್ಟಕ್ಕೆ (ಮುಗ್ಗರಿಸಿ ಬೀಳಿಸಲು) ತಲುಪಿದ್ದಾರೆ ಮತ್ತು ಹೇಳುತ್ತಾರೆ; ಖಂಡಿತ ಇವನೊಬ್ಬ ಹುಚ್ಚನಾಗಿದ್ದಾನೆ.
阿拉伯语经注:
وَمَا هُوَ اِلَّا ذِكْرٌ لِّلْعٰلَمِیْنَ ۟۠
ವಾಸ್ತವದಲ್ಲಿ ಇದು (ಕುರ್ಆನ್) ರ‍್ವಲೋಕದವರಿಗೆ ಸ್ಪಷ್ಟ ಉದ್ಭೋಧೆಯಾಗಿದೆ.
阿拉伯语经注:
 
含义的翻译 章: 盖拉姆
章节目录 页码
 
《古兰经》译解 - الترجمة الكنادية - بشير ميسوري - 译解目录

ترجمة معاني القرآن الكريم إلى اللغة الكنادية ترجمها بشير ميسوري.

关闭