Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 艾尔拉夫   段:
وَلَقَدْ جِئْنٰهُمْ بِكِتٰبٍ فَصَّلْنٰهُ عَلٰی عِلْمٍ هُدًی وَّرَحْمَةً لِّقَوْمٍ یُّؤْمِنُوْنَ ۟
ಜ್ಞಾನದ ಆಧಾರದಲ್ಲಿ ಸ್ಪಷ್ಟ ಪಡಿಸಿರುವಂತಹ ಒಂದು ಗ್ರಂಥವನ್ನು ಖಂಡಿತವಾಗಿಯು ನಾವು ಅವರ ಬಳಿಗೆ ತಂದೆವು. ಅದು ಸತ್ಯವಿಶ್ವಾಸ ಹೊಂದುವ ಜನರಿಗೆ ಸನ್ಮಾರ್ಗವು, ಕಾರಣ್ಯವು ಆಗಿದೆ.
阿拉伯语经注:
هَلْ یَنْظُرُوْنَ اِلَّا تَاْوِیْلَهٗ ؕ— یَوْمَ یَاْتِیْ تَاْوِیْلُهٗ یَقُوْلُ الَّذِیْنَ نَسُوْهُ مِنْ قَبْلُ قَدْ جَآءَتْ رُسُلُ رَبِّنَا بِالْحَقِّ ۚ— فَهَلْ لَّنَا مِنْ شُفَعَآءَ فَیَشْفَعُوْا لَنَاۤ اَوْ نُرَدُّ فَنَعْمَلَ غَیْرَ الَّذِیْ كُنَّا نَعْمَلُ ؕ— قَدْ خَسِرُوْۤا اَنْفُسَهُمْ وَضَلَّ عَنْهُمْ مَّا كَانُوْا یَفْتَرُوْنَ ۟۠
ಅವರು ಅದರ ಪ್ರಳಯದ ಅಂತ್ಯ ಪರಿಣಾಮವನ್ನಲ್ಲದೇ ಇನ್ನೇನಾದರು ನಿರೀಕ್ಷಿಸುತ್ತಿದ್ದಾರೆಯೇ? ಈ ಮುಂಚೆ ಅದನ್ನು ಮರೆತು ಬಿಟ್ಟವರು ಅದರ ಪರಿಣಾಮವು ಪ್ರಕಟವಾಗುವ ದಿನ ಹೇಳುವರು: ನಿಜವಾಗಿಯು ನಮ್ಮ ಪ್ರಭುವಿನ ಸಂದೇಶವಾಹಕರು ಸತ್ಯವನ್ನು ತಂದಿದ್ದರು. ಇನ್ನು ನಮಗಾಗಿ ಶಿಫಾರಸ್ಸು ಮಾಡುವ ಶಿಫಾರಸ್ಸುಗಾರರು ಯಾರಾದರೂ ಇದ್ದಾರೆಯೇ? ಅಥವಾ ನಮ್ಮನ್ನು (ಭೂಲೋಕಕ್ಕೆ) ಮರಳಿ ಕಳುಹಿಸಲಾಗುವುದೇ? ಹಾಗಿದ್ದರೆ ನಾವು ಮುಂಚೆ ಮಾಡುತ್ತಿದ್ದಂತಹ ಕರ್ಮಗಳಿಗೆ ವಿರುದ್ಧವಾದ ಕರ್ಮಗಳನ್ನು ಮಾಡುತ್ತಿದ್ದೆವು. ಖಂಡಿತವಾಗಿಯು ಅವರು ಸ್ವತಃ ತಮ್ಮನ್ನು ನಷ್ಟಕ್ಕೊಳಗಾಗಿಸಿದವರು. ಅವರು ಹೆಣೆಯುತ್ತಿದ್ದುದೆಲ್ಲವೂ ಕಣ್ಮರೆಯಾಗಿಬಿಟ್ಟವು.
阿拉伯语经注:
اِنَّ رَبَّكُمُ اللّٰهُ الَّذِیْ خَلَقَ السَّمٰوٰتِ وَالْاَرْضَ فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ ۫— یُغْشِی الَّیْلَ النَّهَارَ یَطْلُبُهٗ حَثِیْثًا ۙ— وَّالشَّمْسَ وَالْقَمَرَ وَالنُّجُوْمَ مُسَخَّرٰتٍ بِاَمْرِهٖ ؕ— اَلَا لَهُ الْخَلْقُ وَالْاَمْرُ ؕ— تَبٰرَكَ اللّٰهُ رَبُّ الْعٰلَمِیْنَ ۟
ನಿಸ್ಸಂಶಯವಾಗಿಯು ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ನಿಮ್ಮ ಪ್ರಭು ಅಲ್ಲಾಹನೆ. ನಂತರ ಅವನು ಸಿಂಹಾಸನದ ಮೇಲೆ ಆರೂಢನಾದನು ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ ಮತ್ತು ರಾತ್ರಿಯು ಕ್ಷಿಪ್ರಗತಿಯಲ್ಲಿ ಹಗಲನ್ನು ಬೆನ್ನತ್ತಿ ಬರುವುದು ಮತ್ತು ಸೂರ್ಯ, ಚಂದ್ರ ಹಾಗೂ ಇತರ ನಕ್ಷತ್ರಗಳನ್ನು ಅವನ ಆಜ್ಞೆಗೆ ವಿಧೇಯಗೊಳಿಸಿ ಸೃಷ್ಟಿಸಿದ್ದಾನೆ. ಗಮನಿಸಿ, ಸೃಷ್ಟಿಯು ಅವನದೇ ಹಾಗೂ ಆಜ್ಞಾಧಿಕಾರವು ಅವನದೇ. ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಅನುಗ್ರಹಪೂರ್ಣನಾಗಿದ್ದಾನೆ.
阿拉伯语经注:
اُدْعُوْا رَبَّكُمْ تَضَرُّعًا وَّخُفْیَةً ؕ— اِنَّهٗ لَا یُحِبُّ الْمُعْتَدِیْنَ ۟ۚ
ನೀವು ನಿಮ್ಮ ಪ್ರಭುವನ್ನು ವಿನಮ್ರತೆ ಹಾಗೂ ರಹಸ್ಯವಾಗಿ ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯು ಅವನು ಹದ್ದು ಮೀರಿರುವವರನ್ನು ಇಷ್ಟಪಡುವುದಿಲ್ಲ.
阿拉伯语经注:
وَلَا تُفْسِدُوْا فِی الْاَرْضِ بَعْدَ اِصْلَاحِهَا وَادْعُوْهُ خَوْفًا وَّطَمَعًا ؕ— اِنَّ رَحْمَتَ اللّٰهِ قَرِیْبٌ مِّنَ الْمُحْسِنِیْنَ ۟
ಮತ್ತು ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಕ್ಷೆÆÃಭೆ ಹರಡಬೇಡಿರಿ ಮತ್ತು ಅಲ್ಲಾಹನನ್ನು ಭಯ ಹಾಗೂ ನಿರೀಕ್ಷೆಯೊಂದಿಗೆ ಕರೆದು ಪ್ರಾರ್ಥಿಸಿರಿ. ನಿಸ್ಸಂಶಯವಾಗಿಯು ಅಲ್ಲಾಹನ ಕರುಣೆಯು ಸತ್ಕರ್ಮಿಗಳಿಗೆ ನಿಕಟವಾಗಿದೆ.
阿拉伯语经注:
وَهُوَ الَّذِیْ یُرْسِلُ الرِّیٰحَ بُشْرًاۢ بَیْنَ یَدَیْ رَحْمَتِهٖ ؕ— حَتّٰۤی اِذَاۤ اَقَلَّتْ سَحَابًا ثِقَالًا سُقْنٰهُ لِبَلَدٍ مَّیِّتٍ فَاَنْزَلْنَا بِهِ الْمَآءَ فَاَخْرَجْنَا بِهٖ مِنْ كُلِّ الثَّمَرٰتِ ؕ— كَذٰلِكَ نُخْرِجُ الْمَوْتٰی لَعَلَّكُمْ تَذَكَّرُوْنَ ۟
ಅವನು ತನ್ನ ಅನುಗ್ರಹಕ್ಕೆ ಮುಂಚಿತವಾಗಿ ಶುಭವಾರ್ತೆಯನ್ನು ತಿಳಿಸುವ ಮಾರುತಗಳನ್ನು ಕಳುಹಿಸುವವನಾಗಿದ್ದಾನೆ. ಆ ಮಾರುತಗಳು ಘನೀಕೃತ ಮೋಡಗಳನ್ನು ಹೊತ್ತುಕೊಂಡಾಗ ನಾವು ಆ ಮೋಡವನ್ನು ನಿರ್ಜೀವ ಭೂಮಿಯ ಕಡೆಗೆ ಸಾಗಿಸುತ್ತೇವೆ. ನಂತರ ಆ ಮೋಡದಿಂದ ನಾವು ನೀರನ್ನು ಸುರಿಸುತ್ತೇವೆ. ನಂತರ ಅದರಿಂದ ಸಕಲ ವಿಧದ ಫಲಗಳನ್ನು ಹೊರತರುತ್ತೇವೆ. ಇದೇ ರೀತಿ ನಾವು ಮೃತರನ್ನು ಹೊರತರುತ್ತೇವೆ. ಇದು ನೀವು ಅರಿತುಕೊಳ್ಳಲೆಂದಾಗಿದೆ.
阿拉伯语经注:
 
含义的翻译 章: 艾尔拉夫
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭