Check out the new design

《古兰经》译解 - 卡纳达语翻译 - 哈姆宰·比图尔 * - 译解目录

PDF XML CSV Excel API
Please review the Terms and Policies

含义的翻译 章: 赛智德   段:
وَلَنُذِیْقَنَّهُمْ مِّنَ الْعَذَابِ الْاَدْنٰی دُوْنَ الْعَذَابِ الْاَكْبَرِ لَعَلَّهُمْ یَرْجِعُوْنَ ۟
ಆ ಮಹಾ ಶಿಕ್ಷೆಗೆ ಮೊದಲು ನಾವು ಅವರಿಗೆ (ಇಹಲೋಕದಲ್ಲಿ) ಕೆಲವು ಸಣ್ಣ ಶಿಕ್ಷೆಗಳ ರುಚಿಯನ್ನು ತೋರಿಸುತ್ತೇವೆ. ಅವರು (ಪಶ್ಚಾತ್ತಾಪಪಟ್ಟು) ಮರಳಿ ಬರಲೆಂದು.
阿拉伯语经注:
وَمَنْ اَظْلَمُ مِمَّنْ ذُكِّرَ بِاٰیٰتِ رَبِّهٖ ثُمَّ اَعْرَضَ عَنْهَا ؕ— اِنَّا مِنَ الْمُجْرِمِیْنَ مُنْتَقِمُوْنَ ۟۠
ತನ್ನ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಮುಖ ತಿರುಗಿಸಿ ನಡೆಯುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ನಾವು ಅಂತಹ ಅಪರಾಧಿಗಳಿಂದ ಪ್ರತೀಕಾರ ಪಡೆಯುವೆವು.
阿拉伯语经注:
وَلَقَدْ اٰتَیْنَا مُوْسَی الْكِتٰبَ فَلَا تَكُنْ فِیْ مِرْیَةٍ مِّنْ لِّقَآىِٕهٖ وَجَعَلْنٰهُ هُدًی لِّبَنِیْۤ اِسْرَآءِیْلَ ۟ۚ
ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೇವೆ. ಆದ್ದರಿಂದ ಅವರನ್ನು ಭೇಟಿಯಾಗುವ ವಿಷಯದಲ್ಲಿ ನಿಮಗೆ ಸಂಶಯವುಂಟಾಗದಿರಲಿ.[1] ನಾವು ಅದನ್ನು (ಗ್ರಂಥವನ್ನು) ಇಸ್ರಾಯೇಲ್ ಮಕ್ಕಳಿಗೆ ಮಾರ್ಗದರ್ಶಿಯಾಗಿ ಮಾಡಿದೆವು.
[1] ಆಕಾಶಯಾನ (ಮಿಅರಾಜ್) ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿ ಮೂಸಾರನ್ನು ಭೇಟಿಯಾಗಿದ್ದರು.
阿拉伯语经注:
وَجَعَلْنَا مِنْهُمْ اَىِٕمَّةً یَّهْدُوْنَ بِاَمْرِنَا لَمَّا صَبَرُوْا ؕ۫— وَكَانُوْا بِاٰیٰتِنَا یُوْقِنُوْنَ ۟
ಅವರು ತಾಳ್ಮೆಯಿಂದ ಜೀವಿಸಿದಾಗ ನಾವು ಅವರಲ್ಲಿ ಕೆಲವರನ್ನು ನಮ್ಮ ಆಜ್ಞೆಯ ಪ್ರಕಾರ ಜನರಿಗೆ ಸನ್ಮಾರ್ಗ ತೋರಿಸುವ ಮುಖಂಡರನ್ನಾಗಿ ಮಾಡಿದೆವು. ಅವರು ನಮ್ಮ ವಚನಗಳಲ್ಲಿ ದೃಢನಂಬಿಕೆಯುಳ್ಳವರಾಗಿದ್ದರು.
阿拉伯语经注:
اِنَّ رَبَّكَ هُوَ یَفْصِلُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಅವರು ಭಿನ್ನಮತ ತಳೆದಿರುವ ವಿಷಯಗಳಲ್ಲಿ ನಿಮ್ಮ ಪರಿಪಾಲಕನು (ಅಲ್ಲಾಹು) ಪುನರುತ್ಥಾನ ದಿನದಂದು ಅವರ ನಡುವೆ ಖಂಡಿತ ತೀರ್ಪು ನೀಡುತ್ತಾನೆ.
阿拉伯语经注:
اَوَلَمْ یَهْدِ لَهُمْ كَمْ اَهْلَكْنَا مِنْ قَبْلِهِمْ مِّنَ الْقُرُوْنِ یَمْشُوْنَ فِیْ مَسٰكِنِهِمْ ؕ— اِنَّ فِیْ ذٰلِكَ لَاٰیٰتٍ ؕ— اَفَلَا یَسْمَعُوْنَ ۟
ನಾವು ಅವರಿಗಿಂತ ಮೊದಲು ಎಷ್ಟೆಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆ ಎಂಬ ಸತ್ಯವು ಅವರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ವಾಸಸ್ಥಳಗಳ ಮೂಲಕ ಇವರು ಸಾಗುತ್ತಿದ್ದಾರೆ! ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ. ಆದರೂ ಇವರು ಕಿವಿಗೊಡುವುದಿಲ್ಲವೇ?
阿拉伯语经注:
اَوَلَمْ یَرَوْا اَنَّا نَسُوْقُ الْمَآءَ اِلَی الْاَرْضِ الْجُرُزِ فَنُخْرِجُ بِهٖ زَرْعًا تَاْكُلُ مِنْهُ اَنْعَامُهُمْ وَاَنْفُسُهُمْ ؕ— اَفَلَا یُبْصِرُوْنَ ۟
ನಾವು ಬರಡು ಭೂಮಿಗೆ ನೀರು ಹರಿಸುವುದನ್ನು ಅವರು ನೋಡಿಲ್ಲವೇ? ನಂತರ ಅದರಿಂದ ನಾವು ಬೆಳೆಗಳನ್ನು ಹೊರತರುತ್ತೇವೆ. ಅದನ್ನು ಅವರ ಜಾನುವಾರುಗಳು ಮತ್ತು ಸ್ವತಃ ಅವರು ಕೂಡ ತಿನ್ನುತ್ತಾರೆ. ಆದರೂ ಅವರು ನೋಡುವುದಿಲ್ಲವೇ?
阿拉伯语经注:
وَیَقُوْلُوْنَ مَتٰی هٰذَا الْفَتْحُ اِنْ كُنْتُمْ صٰدِقِیْنَ ۟
ಅವರು ಹೇಳುತ್ತಾರೆ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ ಈ ತೀರ್ಪು ಯಾವಾಗ ಬರುತ್ತದೆ ಎಂದು ಹೇಳಿರಿ!”
阿拉伯语经注:
قُلْ یَوْمَ الْفَتْحِ لَا یَنْفَعُ الَّذِیْنَ كَفَرُوْۤا اِیْمَانُهُمْ وَلَا هُمْ یُنْظَرُوْنَ ۟
ಹೇಳಿರಿ: “ತೀರ್ಪು ಬರುವ ದಿನದಂದು ಸತ್ಯನಿಷೇಧಿಗಳು ವಿಶ್ವಾಸವನ್ನು ಸ್ವೀಕರಿಸಿದರೆ ಅದು ಅವರಿಗೆ ಪ್ರಯೋಜನಪಡುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.”
阿拉伯语经注:
فَاَعْرِضْ عَنْهُمْ وَانْتَظِرْ اِنَّهُمْ مُّنْتَظِرُوْنَ ۟۠
ಆದ್ದರಿಂದ ನೀವು ಅವರಿಂದ ವಿಮುಖರಾಗಿರಿ ಮತ್ತು ಕಾಯಿರಿ. ನಿಶ್ಚಯವಾಗಿಯೂ ಅವರೂ ಕಾಯುತ್ತಿದ್ದಾರೆ.
阿拉伯语经注:
 
含义的翻译 章: 赛智德
章节目录 页码
 
《古兰经》译解 - 卡纳达语翻译 - 哈姆宰·比图尔 - 译解目录

由穆罕默德·哈姆扎·巴图尔翻译。在立瓦德翻译中心的监督之下已完成开发。

关闭