Check out the new design

《古兰经》译解 - 卡纳达语翻译 - 哈姆宰·比图尔 * - 译解目录

PDF XML CSV Excel API
Please review the Terms and Policies

含义的翻译 章: 穆罕默德   段:

ಮುಹಮ್ಮದ್

اَلَّذِیْنَ كَفَرُوْا وَصَدُّوْا عَنْ سَبِیْلِ اللّٰهِ اَضَلَّ اَعْمَالَهُمْ ۟
ಸತ್ಯವನ್ನು ನಿಷೇಧಿಸಿದವರು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಯಾರೋ ಅವರ ಕರ್ಮಗಳನ್ನು ಅಲ್ಲಾಹು ನಿಷ್ಫಲಗೊಳಿಸುವನು.
阿拉伯语经注:
وَالَّذِیْنَ اٰمَنُوْا وَعَمِلُوا الصّٰلِحٰتِ وَاٰمَنُوْا بِمَا نُزِّلَ عَلٰی مُحَمَّدٍ وَّهُوَ الْحَقُّ مِنْ رَّبِّهِمْ ۙ— كَفَّرَ عَنْهُمْ سَیِّاٰتِهِمْ وَاَصْلَحَ بَالَهُمْ ۟
ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು ಮತ್ತು ಮುಹಮ್ಮದರಿಗೆ ಅವತೀರ್ಣವಾದ ಸಂದೇಶದಲ್ಲಿ—ಅದು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ—ವಿಶ್ವಾಸವಿಟ್ಟವರು ಯಾರೋ ಅವರ ಕೆಡುಕುಗಳನ್ನು ಅಲ್ಲಾಹು ಅಳಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
阿拉伯语经注:
ذٰلِكَ بِاَنَّ الَّذِیْنَ كَفَرُوا اتَّبَعُوا الْبَاطِلَ وَاَنَّ الَّذِیْنَ اٰمَنُوا اتَّبَعُوا الْحَقَّ مِنْ رَّبِّهِمْ ؕ— كَذٰلِكَ یَضْرِبُ اللّٰهُ لِلنَّاسِ اَمْثَالَهُمْ ۟
ಅದೇಕೆಂದರೆ ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವನ್ನು ಅನುಸರಿಸಿದರು. ಈ ರೀತಿ ಅಲ್ಲಾಹು ಜನರಿಗೆ ಅವರ ಸ್ಥಿತಿಗಳನ್ನು ವಿವರಿಸಿಕೊಡುತ್ತಾನೆ.
阿拉伯语经注:
فَاِذَا لَقِیْتُمُ الَّذِیْنَ كَفَرُوْا فَضَرْبَ الرِّقَابِ ؕ— حَتّٰۤی اِذَاۤ اَثْخَنْتُمُوْهُمْ فَشُدُّوا الْوَثَاقَ ۙ— فَاِمَّا مَنًّا بَعْدُ وَاِمَّا فِدَآءً حَتّٰی تَضَعَ الْحَرْبُ اَوْزَارَهَا— ذٰلِكَ ۛؕ— وَلَوْ یَشَآءُ اللّٰهُ لَانْتَصَرَ مِنْهُمْ ۙ— وَلٰكِنْ لِّیَبْلُوَاۡ بَعْضَكُمْ بِبَعْضٍ ؕ— وَالَّذِیْنَ قُتِلُوْا فِیْ سَبِیْلِ اللّٰهِ فَلَنْ یُّضِلَّ اَعْمَالَهُمْ ۟
ನೀವು ಸತ್ಯನಿಷೇಧಿಗಳೊಡನೆ (ಯುದ್ಧದಲ್ಲಿ) ಮುಖಾಮುಖಿಯಾದರೆ ಅವರ ಕತ್ತುಗಳ ಮೇಲೆ ಬೀಸಿರಿ. ಅವರನ್ನು ಚೆನ್ನಾಗಿ ಬಗ್ಗುಬಡಿದ ನಂತರ ಅವರನ್ನು ಬಿಗಿಯಾಗಿ ಬಂಧಿಸಿರಿ. ನಂತರ ಒಂದೋ ಅವರೊಡನೆ ದಾಕ್ಷಿಣ್ಯ ತೋರಿರಿ[1] ಅಥವಾ ವಿಮೋಚನಾ ಶುಲ್ಕವನ್ನು ಪಡೆದು ಅವರನ್ನು ಸ್ವತಂತ್ರಗೊಳಿಸಿರಿ—ಯುದ್ಧವು ಅದರ ಭಾರವನ್ನು ಕಳಚುವ ತನಕ.[2] ಇದೇ ನಿಯಮ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನೇ ಅವರಿಂದ ಪ್ರತೀಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸುವುದಕ್ಕಾಗಿದೆ. ಯಾರು ಅಲ್ಲಾಹನ ಮಾರ್ಗದಲ್ಲಿ ಹತರಾಗುತ್ತಾರೋ ಅವರ ಕರ್ಮಗಳನ್ನು ಅವನು ಎಂದಿಗೂ ನಿಷ್ಫಲಗೊಳಿಸುವುದಿಲ್ಲ.
[1] ದಾಕ್ಷಿಣ್ಯ ತೋರುವುದು ಎಂದರೆ ಪರಿಹಾರ ಪಡೆಯದೆ ಅವರನ್ನು ಬಿಟ್ಟುಬಿಡುವುದು.
[2] ಅಂದರೆ ಯುದ್ಧವು ಮುಗಿಯುವ ತನಕ.
阿拉伯语经注:
سَیَهْدِیْهِمْ وَیُصْلِحُ بَالَهُمْ ۟ۚ
ಅವನು ಅವರಿಗೆ ದಾರಿ ತೋರಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
阿拉伯语经注:
وَیُدْخِلُهُمُ الْجَنَّةَ عَرَّفَهَا لَهُمْ ۟
ಅವನು ಅವರಿಗೆ ಪರಿಚಯಿಸಿಕೊಟ್ಟ ಆ ಸ್ವರ್ಗಕ್ಕೆ ಅವನು ಅವರನ್ನು ಪ್ರವೇಶ ಮಾಡಿಸುವನು.
阿拉伯语经注:
یٰۤاَیُّهَا الَّذِیْنَ اٰمَنُوْۤا اِنْ تَنْصُرُوا اللّٰهَ یَنْصُرْكُمْ وَیُثَبِّتْ اَقْدَامَكُمْ ۟
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನು ನಿಮಗೆ ಸಹಾಯ ಮಾಡುತ್ತಾನೆ ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸುತ್ತಾನೆ.
阿拉伯语经注:
وَالَّذِیْنَ كَفَرُوْا فَتَعْسًا لَّهُمْ وَاَضَلَّ اَعْمَالَهُمْ ۟
ಸತ್ಯನಿಷೇಧಿಗಳು ಯಾರೋ ಅವರಿಗೆ ವಿನಾಶ ಕಾದಿದೆ. ಅಲ್ಲಾಹು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.
阿拉伯语经注:
ذٰلِكَ بِاَنَّهُمْ كَرِهُوْا مَاۤ اَنْزَلَ اللّٰهُ فَاَحْبَطَ اَعْمَالَهُمْ ۟
ಅದೇಕೆಂದರೆ ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅವರು ದ್ವೇಷಿಸಿದರು. ಆದ್ದರಿಂದ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.
阿拉伯语经注:
اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— دَمَّرَ اللّٰهُ عَلَیْهِمْ ؗ— وَلِلْكٰفِرِیْنَ اَمْثَالُهَا ۟
ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅಲ್ಲಾಹು ಅವರನ್ನು ನಿರ್ನಾಮ ಮಾಡಿದನು. ಸತ್ಯನಿಷೇಧಿಗಳಿಗೆ ಅಂತಹುದೇ ಶಿಕ್ಷೆಯಿದೆ.
阿拉伯语经注:
ذٰلِكَ بِاَنَّ اللّٰهَ مَوْلَی الَّذِیْنَ اٰمَنُوْا وَاَنَّ الْكٰفِرِیْنَ لَا مَوْلٰی لَهُمْ ۟۠
ಅದೇಕೆಂದರೆ ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿದ್ದಾನೆ ಮತ್ತು ಸತ್ಯನಿಷೇಧಿಗಳಿಗೆ ಯಾವುದೇ ರಕ್ಷಕರಿಲ್ಲ.
阿拉伯语经注:
 
含义的翻译 章: 穆罕默德
章节目录 页码
 
《古兰经》译解 - 卡纳达语翻译 - 哈姆宰·比图尔 - 译解目录

由穆罕默德·哈姆扎·巴图尔翻译。在立瓦德翻译中心的监督之下已完成开发。

关闭