Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ម៉ាអ៊ីដះ   អាយ៉ាត់:
وَاِذَا نَادَیْتُمْ اِلَی الصَّلٰوةِ اتَّخَذُوْهَا هُزُوًا وَّلَعِبًا ؕ— ذٰلِكَ بِاَنَّهُمْ قَوْمٌ لَّا یَعْقِلُوْنَ ۟
ನೀವು ನಮಾಝ್‌ಗಾಗಿ ಕರೆ ನೀಡಿದರೆ ಅವರು ಅದನ್ನು ಒಂದು ತಮಾಷೆ ಮತ್ತು ವಿನೋದದ ವಸ್ತುವನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಅವರು ಅವಿವೇಕಿಗಳಾಗಿರುವ ಕಾರಣದಿಂದಾಗಿದೆ.
តាហ្វសៀរជាភាសា​អារ៉ាប់ជាច្រេីន:
قُلْ یٰۤاَهْلَ الْكِتٰبِ هَلْ تَنْقِمُوْنَ مِنَّاۤ اِلَّاۤ اَنْ اٰمَنَّا بِاللّٰهِ وَمَاۤ اُنْزِلَ اِلَیْنَا وَمَاۤ اُنْزِلَ مِنْ قَبْلُ ۙ— وَاَنَّ اَكْثَرَكُمْ فٰسِقُوْنَ ۟
ನೀವು ಹೇಳಿರಿ: ಓ ಗ್ರಂಥದವರೇ ನಾವು ಅಲ್ಲಾಹನಲ್ಲೂ, ನಮ್ಮೆಡೆಗೆ ಅವತೀರ್ಣ ಗೊಳಿಸಲಾದ ಗ್ರಂಥದಲ್ಲೂ, ಇದಕ್ಕಿಂತ ಮುಂಚೆ ಅವತೀರ್ಣಗೊಳಿಸಲಾದ ಗ್ರಂಥದಲ್ಲೂ ವಿಶ್ವಾಸಿವಿರಿದ್ದೇವೆ ಎಂಬುದಕ್ಕಾಗಿ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ಧರ್ಮ ಧಿಕ್ಕಾರಿಗಳಾಗಿರುವುದರಿಂದಲೇ ಹೊರತು ಇನ್ನಾವ ಕಾರಣಕ್ಕಾಗಿ ನೀವು ನಮ್ಮನ್ನು ಆಪಾದಿಸುತ್ತಿರುವಿರಿ.
តាហ្វសៀរជាភាសា​អារ៉ាប់ជាច្រេីន:
قُلْ هَلْ اُنَبِّئُكُمْ بِشَرٍّ مِّنْ ذٰلِكَ مَثُوْبَةً عِنْدَ اللّٰهِ ؕ— مَنْ لَّعَنَهُ اللّٰهُ وَغَضِبَ عَلَیْهِ وَجَعَلَ مِنْهُمُ الْقِرَدَةَ وَالْخَنَازِیْرَ وَعَبَدَ الطَّاغُوْتَ ؕ— اُولٰٓىِٕكَ شَرٌّ مَّكَانًا وَّاَضَلُّ عَنْ سَوَآءِ السَّبِیْلِ ۟
ಹೇಳಿರಿ: ಅಲ್ಲಾಹನ ಬಳಿ ಅದಕ್ಕಿಂತಲು ಹೆಚ್ಚು ನಿಕೃಷ್ಟ ಪ್ರತಿಫಲವಿರುವವರು ಯಾರೆಂದು ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹನು ಶಪಿಸಿರುವನೋ, ಯಾರ ಮೇಲೆ ಅವನು ಕುಪಿತನಾಗಿರುವನೋ, ಮತ್ತು ಅವರ ಪೈಕಿ ಅವನು ಕಪಿಗಳನ್ನಾಗಿಯೂ, ಹಂದಿಗಳನ್ನಾಗಿಯೂ ಮಾಡಿರುವನೋ, ಯಾವ ಜನರು ಮಿಥ್ಯಾರಾಧ್ಯರುಗಳನ್ನು ಆರಾಧಿಸಿದರೋ ಅವರೇ ಅತ್ಯಂತ ನಿಕೃಷ್ಟ ಸ್ಥಾನದಲ್ಲಿರುವವರು ಮತ್ತು ನೇರ ಮಾರ್ಗದಿಂದ ಅತ್ಯಧಿಕವಾಗಿ ವ್ಯತಿಚಲಿಸಿದವರಾಗಿದ್ದಾರೆ.
តាហ្វសៀរជាភាសា​អារ៉ាប់ជាច្រេីន:
وَاِذَا جَآءُوْكُمْ قَالُوْۤا اٰمَنَّا وَقَدْ دَّخَلُوْا بِالْكُفْرِ وَهُمْ قَدْ خَرَجُوْا بِهٖ ؕ— وَاللّٰهُ اَعْلَمُ بِمَا كَانُوْا یَكْتُمُوْنَ ۟
ಕಪಟಿಗಳು ನಿಮ್ಮ ಬಳಿಗೆ ಬರುವಾಗ ಅವರು ಹೇಳುವರು: ನಾವು ವಿಶ್ವಾಸವಿರಿಸಿದ್ದೇವೆ. ವಾಸ್ತವದಲ್ಲಿ ಅವರು ಸತ್ಯನಿಷೇಧದೊಂದಿಗೆ ಬಂದಿದ್ದರು. ಸತ್ಯನಿಷೇಧದೊಂದಿಗೇ ಹಿಂದಿರುಗಿದರು ಮತ್ತು ಅವರು ಮರೆಮಾಚುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
وَتَرٰی كَثِیْرًا مِّنْهُمْ یُسَارِعُوْنَ فِی الْاِثْمِ وَالْعُدْوَانِ وَاَكْلِهِمُ السُّحْتَ ؕ— لَبِئْسَ مَا كَانُوْا یَعْمَلُوْنَ ۟
ಅವರಲ್ಲಿ ಹೆಚ್ಚಿನವರು ಪಾಪ ಕೃತ್ಯಗಳ ಕಡೆಗೆ, ಅತಿಕ್ರಮಗಳ ಕಡೆಗೆ, ನಿಷಿದ್ಧ ಸಂಪಾದನೆಯನ್ನು ತಿನ್ನುವುದರ ಕಡೆಗೆ ಧಾವಿಸಿ ಹೋಗುತ್ತಿರುವುದಾಗಿ ನೀವು ಕಾಣುವಿರಿ. ಅವರು ಮಾಡುತ್ತಿರುವುದೆಲ್ಲವೂ ನೀಚ ಕೃತ್ಯಗಳಾಗಿವೆ.
តាហ្វសៀរជាភាសា​អារ៉ាប់ជាច្រេីន:
لَوْلَا یَنْهٰىهُمُ الرَّبّٰنِیُّوْنَ وَالْاَحْبَارُ عَنْ قَوْلِهِمُ الْاِثْمَ وَاَكْلِهِمُ السُّحْتَ ؕ— لَبِئْسَ مَا كَانُوْا یَصْنَعُوْنَ ۟
ಅವರು ಪಾಪಕರ ಮಾತುಗಳನ್ನು ಆಡುವುದರಿಂದಲೂ ಮತ್ತು ನಿಷಿದ್ದವಾದ ಸಂಪಾದನೆಯನ್ನು ತಿನ್ನುವುದರಿಂದಲೂ ಸಜ್ಜನರು ಮತ್ತು ವಿದ್ವಾಂಸರು ಅವರನ್ನು ತಡೆಯದಿದ್ದುದೇಕೆ? ನಿಸ್ಸಂಶಯವಾಗಿಯು ಅವರು ಮಾಡುತ್ತಿರುವುದು ಬಹಳ ಕೆಟ್ಟದ್ದಾಗಿದೆ.
តាហ្វសៀរជាភាសា​អារ៉ាប់ជាច្រេីន:
وَقَالَتِ الْیَهُوْدُ یَدُ اللّٰهِ مَغْلُوْلَةٌ ؕ— غُلَّتْ اَیْدِیْهِمْ وَلُعِنُوْا بِمَا قَالُوْا ۘ— بَلْ یَدٰهُ مَبْسُوْطَتٰنِ ۙ— یُنْفِقُ كَیْفَ یَشَآءُ ؕ— وَلَیَزِیْدَنَّ كَثِیْرًا مِّنْهُمْ مَّاۤ اُنْزِلَ اِلَیْكَ مِنْ رَّبِّكَ طُغْیَانًا وَّكُفْرًا ؕ— وَاَلْقَیْنَا بَیْنَهُمُ الْعَدَاوَةَ وَالْبَغْضَآءَ اِلٰی یَوْمِ الْقِیٰمَةِ ؕ— كُلَّمَاۤ اَوْقَدُوْا نَارًا لِّلْحَرْبِ اَطْفَاَهَا اللّٰهُ ۙ— وَیَسْعَوْنَ فِی الْاَرْضِ فَسَادًا ؕ— وَاللّٰهُ لَا یُحِبُّ الْمُفْسِدِیْنَ ۟
ಅಲ್ಲಾಹನ ಕೈಗಳು ಬಿಗಿಯಲ್ಪಟ್ಟಿವೆ ಎಂದು ಯಹೂದರು ಹೇಳುತ್ತಾರೆ ಅವರದೇ ಕೈಗಳು ಬಿಗಿಯಲ್ಪಟ್ಟಿವೆ (ಜಿಪುಣತನದಿಂದ) ಮತ್ತು ಅವರ ಈ ಮಾತಿನ ನಿಮಿತ್ತ ಅವರ ಮೇಲೆ ಶಾಪ ಎರಗಿದೆ. ಹಾಗಲ್ಲ, ಅಲ್ಲಾಹನ ಎರಡೂ ಕೈಗಳು ವಿಶಾಲವಾಗಿ ತೆರೆದುಕೊಂಡಿವೆ. ಅವನು ಇಚ್ಛಿಸುವುದನ್ನು ಖರ್ಚು ಮಾಡುತ್ತಾನೆ ಮತ್ತು (ಓ ಪೈಗಂಬರರೇ) ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತ್ತಿರುವುದು (ಕುರ್‌ಆನ್) ಅವರ ಪೈಕಿ ಹೆಚ್ಚಿನವರ ಧಿಕ್ಕಾರ ಮತ್ತು ನಿಷೇಧವನ್ನು ಹೆಚ್ಚಿಸುತ್ತದೆ. ಮತ್ತು ನಾವು ಅವರ ನಡುವೆ ಪುನರುತ್ಥಾನದ ದಿನದವರೆಗೆ ಶತ್ರುತ್ವ ಮತ್ತು ವಿದ್ವೇಷವನ್ನು ಹಾಕಿಬಿಟ್ಟಿರುತ್ತೇವೆ. ಅವರು ಯುದ್ಧಾಗ್ನಿಯನ್ನು ಹೆಚ್ಚಿಸಲು ಇಚ್ಛಿಸುವಾಗಲೆಲ್ಲಾ ಅಲ್ಲಾಹನು ಅದನ್ನು ನಂದಿಸಿ ಬಿಡುತ್ತಾನೆ. ಅವರು ನಾಡಿನಲ್ಲಿ ಕ್ಷೆÆÃಭೆ ಹರಡುತ್ತಾರೆ ಮತ್ತು ಅಲ್ಲಾಹನು ಕ್ಷೆÆÃಭೆಗಾರರನ್ನು ಮೆಚ್ಚುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ម៉ាអ៊ីដះ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ