Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ម៉ាអ៊ីដះ   អាយ៉ាត់:
وَلَوْ اَنَّ اَهْلَ الْكِتٰبِ اٰمَنُوْا وَاتَّقَوْا لَكَفَّرْنَا عَنْهُمْ سَیِّاٰتِهِمْ وَلَاَدْخَلْنٰهُمْ جَنّٰتِ النَّعِیْمِ ۟
ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಮತ್ತು ಭಯಭಕ್ತಿ ಪಾಲಿಸಿದ್ದರೆ ನಾವು ಅವರ ಸಕಲ ಪಾಪಗಳನ್ನು ಮನ್ನಿಸಿ ಬಿಡುತ್ತಿದ್ದೆವು ಮತ್ತು ಅನುಗ್ರಹಪೂರ್ಣವಾದ ಸ್ವರ್ಗೋದ್ಯಾನಗಳಿಗೆ ಅವರನ್ನು ಕೊಂಡೊಯ್ಯುತ್ತಿದ್ದೆವು
តាហ្វសៀរជាភាសា​អារ៉ាប់ជាច្រេីន:
وَلَوْ اَنَّهُمْ اَقَامُوا التَّوْرٰىةَ وَالْاِنْجِیْلَ وَمَاۤ اُنْزِلَ اِلَیْهِمْ مِّنْ رَّبِّهِمْ لَاَكَلُوْا مِنْ فَوْقِهِمْ وَمِنْ تَحْتِ اَرْجُلِهِمْ ؕ— مِنْهُمْ اُمَّةٌ مُّقْتَصِدَةٌ ؕ— وَكَثِیْرٌ مِّنْهُمْ سَآءَ مَا یَعْمَلُوْنَ ۟۠
ಅವರು ತೌರಾತ್, ಇಂಜೀಲ್ ಮತ್ತು ಅವರ ಪ್ರಭುವಿನ ವತಿಯಿಂದ ಅವರೆಡೆಗೆ ಅವತೀರ್ಣಗೊಳಿಸಲಾದ ಕುರ್‌ಆನನ್ನು ಅನುಸರಿಸುತ್ತಿದ್ದರೆ ಅವರು ತಮ್ಮ ಮೇಲ್ಗಡೆಯಿಂದಲೂ, ಕಾಲಡಿಯಿಂದಲೂ ಅನ್ನಾಧಾರವನ್ನು ಪಡೆಯುತ್ತಿದ್ದರು ಮತ್ತು ತಿನ್ನುತ್ತಿದ್ದರು. ಅವರ ಪೈಕಿ ಒಂದು ಗುಂಪು ಮದ್ಯಮ ನಿಲುವಿನದ್ದಾಗಿದೆ ಮತ್ತು ಅವರ ಪೈಕಿಯ ಹೆಚ್ಚಿನವರು ದುಷ್ಕೃತ್ಯಗಳನ್ನೆಸಗುತ್ತಿದ್ದಾರೆ.
តាហ្វសៀរជាភាសា​អារ៉ាប់ជាច្រេីន:
یٰۤاَیُّهَا الرَّسُوْلُ بَلِّغْ مَاۤ اُنْزِلَ اِلَیْكَ مِنْ رَّبِّكَ ؕ— وَاِنْ لَّمْ تَفْعَلْ فَمَا بَلَّغْتَ رِسَالَتَهٗ ؕ— وَاللّٰهُ یَعْصِمُكَ مِنَ النَّاسِ ؕ— اِنَّ اللّٰهَ لَا یَهْدِی الْقَوْمَ الْكٰفِرِیْنَ ۟
ಓ ಸಂದೇಶವಾಹಕರೇ, ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವುದನ್ನು ಜನರಿಗೆ ತಲುಪಿಸಿರಿ. ಇನ್ನು ನೀವು ಹಾಗೆ ಮಾಡದಿದ್ದರೆ ನೀವು ಅಲ್ಲಾಹನ ದೌತ್ಯವನ್ನು ಈಡೇರಿಸಿಲ್ಲ ಮತ್ತು ನಿಮ್ಮನ್ನು ಅಲ್ಲಾಹನು ಜನರ ಕುತಂತ್ರಗಳಿAದ ರಕ್ಷಿಸುವನು. ನಿಸ್ಸಂಶಯವಾಗಿಯು ಅಲ್ಲಾಹನು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
قُلْ یٰۤاَهْلَ الْكِتٰبِ لَسْتُمْ عَلٰی شَیْءٍ حَتّٰی تُقِیْمُوا التَّوْرٰىةَ وَالْاِنْجِیْلَ وَمَاۤ اُنْزِلَ اِلَیْكُمْ مِّنْ رَّبِّكُمْ ؕ— وَلَیَزِیْدَنَّ كَثِیْرًا مِّنْهُمْ مَّاۤ اُنْزِلَ اِلَیْكَ مِنْ رَّبِّكَ طُغْیَانًا وَّكُفْرًا ۚ— فَلَا تَاْسَ عَلَی الْقَوْمِ الْكٰفِرِیْنَ ۟
ಹೇಳಿರಿ: ಓ ಗ್ರಂಥದವರೇ, ತೌರಾತ್, ಇಂಜೀಲ್ ಮತ್ತು ಈಗ ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತ್ತಿರುವುದನ್ನು (ಕುರ್‌ಆನ್) ಸ್ಥಾಪಿಸುವವರೆಗೆ ನೀವು ಯಾವುದೇ ಆಧಾರದಲ್ಲಿಲ್ಲ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತಿರುವುದು ಅವರ ಪೈಕಿ ಹೆಚ್ಚಿನವರ ಧಿಕ್ಕಾರ ಮತ್ತು ನಿಷೇಧವನ್ನು ಹೆಚ್ಚಿಸುತ್ತದೆ. ಅದ್ದರಿಂದ ಸತ್ಯನಿಷೇಧಿಗಳ ಮೇಲೆ ನೀವು ದುಃಖಿಸಬೇಡಿರಿ.
តាហ្វសៀរជាភាសា​អារ៉ាប់ជាច្រេីន:
اِنَّ الَّذِیْنَ اٰمَنُوْا وَالَّذِیْنَ هَادُوْا وَالصّٰبِـُٔوْنَ وَالنَّصٰرٰی مَنْ اٰمَنَ بِاللّٰهِ وَالْیَوْمِ الْاٰخِرِ وَعَمِلَ صَالِحًا فَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಸತ್ಯವಿಶ್ವಾಸಿಗಳು, ಯಹೂದರು, ಸಾಬಿಗಳು (ನಕ್ಷತ್ರಾರಾಧಕರು), ಕ್ರೆöÊಸ್ತರು ಯಾರೆ ಆಗಿರಲಿ ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿಡುತ್ತಾರೋ ಮತ್ತು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ಯಾವ ಭಯವಿಲ್ಲ. ಮತ್ತು ಅವರು ದುಃಖಿಸಬೇಕಾಗಿಯೂ ಇಲ್ಲ.
តាហ្វសៀរជាភាសា​អារ៉ាប់ជាច្រេីន:
لَقَدْ اَخَذْنَا مِیْثَاقَ بَنِیْۤ اِسْرَآءِیْلَ وَاَرْسَلْنَاۤ اِلَیْهِمْ رُسُلًا ؕ— كُلَّمَا جَآءَهُمْ رَسُوْلٌۢ بِمَا لَا تَهْوٰۤی اَنْفُسُهُمْ ۙ— فَرِیْقًا كَذَّبُوْا وَفَرِیْقًا یَّقْتُلُوْنَ ۟ۗ
ನಾವು ಇಸ್ರಾಯೀಲ್ ಸಂತತಿಗಳಿAದ ಕರಾರನ್ನು ಪಡೆದೆವು ಮತ್ತು ಅವರ ಕಡೆಗೆ ಸಂದೇಶವಾಹಕರನ್ನು ನಿಯೋಗಿಸಿದೆವು. ಸಂದೇಶವಾಹಕರು ಅವರ ಸ್ವೇಚ್ಛೆಗೆ ವಿರುದ್ಧವಾದ ನಿಯಮಗಳೊಂದಿಗೆ ಅವರ ಬಳಿಗೆ ಬಂದಾಗ ಅವರ ಪೈಕಿ ಕೆಲವರನ್ನು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆಗೈದರು.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ម៉ាអ៊ីដះ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ