Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ម៉ាអ៊ីដះ   អាយ៉ាត់:
اِنَّمَا یُرِیْدُ الشَّیْطٰنُ اَنْ یُّوْقِعَ بَیْنَكُمُ الْعَدَاوَةَ وَالْبَغْضَآءَ فِی الْخَمْرِ وَالْمَیْسِرِ وَیَصُدَّكُمْ عَنْ ذِكْرِ اللّٰهِ وَعَنِ الصَّلٰوةِ ۚ— فَهَلْ اَنْتُمْ مُّنْتَهُوْنَ ۟
ಶೈತಾನನು ಮದ್ಯ ಮತ್ತು ಜೂಜಾಟದ ಮೂಲಕ ನಿಮ್ಮ ನಡುವೆ ಶತ್ರುತ್ವ ಹಾಗೂ ವಿದ್ವೇಷವನ್ನುಂಟು ಮಾಡಲು, ಅಲ್ಲಾಹನ ಸ್ಮರಣೆ ಹಾಗೂ ನಮಾಝ್‌ನಿಂದ ನಿಮ್ಮನ್ನು ದೂರವಿಡಲು ಬಯಸುತ್ತಾನೆ. ಆದ್ದರಿಂದ ನೀವು ಅವುಗಳಿಂದ ದೂರವಿರುವಿರಾ?
តាហ្វសៀរជាភាសា​អារ៉ាប់ជាច្រេីន:
وَاَطِیْعُوا اللّٰهَ وَاَطِیْعُوا الرَّسُوْلَ وَاحْذَرُوْا ۚ— فَاِنْ تَوَلَّیْتُمْ فَاعْلَمُوْۤا اَنَّمَا عَلٰی رَسُوْلِنَا الْبَلٰغُ الْمُبِیْنُ ۟
ನೀವು ಅಲ್ಲಾಹನ ಆಜ್ಞಾನುಸರಣೆಯನ್ನು ಮಾಡಿರಿ ಮತ್ತು ಸಂದೇಶವಾಹಕರ ಅನುಸರಣೆಯನ್ನು ಮಾಡಿರಿ ಮತ್ತು (ಪಾಪಕೃತ್ಯಗಳಿಂದ) ಎಚ್ಚರವಹಿಸಿರಿ. ಇನ್ನು ನೀವು ವಿಮುಖರಾಗುವುದಾದರೆ ನಮ್ಮ ಸಂದೇಶವಾಹಕರ ಕರ್ತವ್ಯವು ಸ್ಪಷ್ಟವಾಗಿ ಸಂದೇಶ ತಲುಪಿಸುವುದು ಮಾತ್ರವಾಗಿದೆಂಬುದನ್ನು ತಿಳಿದುಕೊಳ್ಳಿರಿ.
តាហ្វសៀរជាភាសា​អារ៉ាប់ជាច្រេីន:
لَیْسَ عَلَی الَّذِیْنَ اٰمَنُوْا وَعَمِلُوا الصّٰلِحٰتِ جُنَاحٌ فِیْمَا طَعِمُوْۤا اِذَا مَا اتَّقَوْا وَّاٰمَنُوْا وَعَمِلُوا الصّٰلِحٰتِ ثُمَّ اتَّقَوْا وَّاٰمَنُوْا ثُمَّ اتَّقَوْا وَّاَحْسَنُوْا ؕ— وَاللّٰهُ یُحِبُّ الْمُحْسِنِیْنَ ۟۠
ಸತ್ಯವಿಶ್ವಾಸವಿರಿಸಿ ಸತ್ಕರ್ಮಗೈದವರ ಮೇಲೆ ಅವರು ಈ ಹಿಂದೆ ಸೇವಿಸಿದುದರಲ್ಲಿ ಅವರ ಮೇಲೆ ಯಾವ ದೋಷವಿಲ್ಲ ಅವರು ಇನ್ನು ಮುಂದೆ ನಿಷಿದ್ಧ ವಸ್ತುಗಳನ್ನು ವರ್ಜಿಸಿದರೆ ನಂತರ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಸತ್ಯ ವಿಶ್ವಾಸವಿರಿಸಿದರೆ ಆ ಬಳಿಕವೂ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಸತ್ಕರ್ಮಗಳನ್ನೆಸಗಿದರೆ ಅಲ್ಲಾಹನು ಇಂತಹ ಸದಾಚಾರಿಗಳನ್ನು ಇಷ್ಟಪಡುತ್ತಾನೆ.
តាហ្វសៀរជាភាសា​អារ៉ាប់ជាច្រេីន:
یٰۤاَیُّهَا الَّذِیْنَ اٰمَنُوْا لَیَبْلُوَنَّكُمُ اللّٰهُ بِشَیْءٍ مِّنَ الصَّیْدِ تَنَالُهٗۤ اَیْدِیْكُمْ وَرِمَاحُكُمْ لِیَعْلَمَ اللّٰهُ مَنْ یَّخَافُهٗ بِالْغَیْبِ ۚ— فَمَنِ اعْتَدٰی بَعْدَ ذٰلِكَ فَلَهٗ عَذَابٌ اَلِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮ ಕೈಗಳು ಹಾಗೂ ಭರ್ಚಿಗಳಿಂದ ಬೇಟೆಯಾಡುವ ಪ್ರಾಣಿಗಳ ಮೂಲಕ ಅಲ್ಲಾಹನು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಇದು ಅಲ್ಲಾಹನು ಯಾರು ತನ್ನನ್ನು ಅಗೋಚರವಾಗಿ ಭಯಪಡುತ್ತಾನೆಂದು ತಿಳಿಯಲೆಂದಾಗಿದೆ. ಆದ್ದರಿಂದ ಯಾರು ಇದರ ನಂತರ ಹದ್ದು ಮೀರುತ್ತಾನೋ ಅವನಿಗೆ ಯಾತನಾಮಯವಾದ ಶಿಕ್ಷೆಯಿದೆ.
តាហ្វសៀរជាភាសា​អារ៉ាប់ជាច្រេីន:
یٰۤاَیُّهَا الَّذِیْنَ اٰمَنُوْا لَا تَقْتُلُوا الصَّیْدَ وَاَنْتُمْ حُرُمٌ ؕ— وَمَنْ قَتَلَهٗ مِنْكُمْ مُّتَعَمِّدًا فَجَزَآءٌ مِّثْلُ مَا قَتَلَ مِنَ النَّعَمِ یَحْكُمُ بِهٖ ذَوَا عَدْلٍ مِّنْكُمْ هَدْیًا بٰلِغَ الْكَعْبَةِ اَوْ كَفَّارَةٌ طَعَامُ مَسٰكِیْنَ اَوْ عَدْلُ ذٰلِكَ صِیَامًا لِّیَذُوْقَ وَبَالَ اَمْرِهٖ ؕ— عَفَا اللّٰهُ عَمَّا سَلَفَ ؕ— وَمَنْ عَادَ فَیَنْتَقِمُ اللّٰهُ مِنْهُ ؕ— وَاللّٰهُ عَزِیْزٌ ذُو انْتِقَامٍ ۟
ಓ ಸತ್ಯವಿಶ್ವಾಸಿಗಳೇ, ನೀವು ಇಹ್ರಾಮ್‌ನಲ್ಲಿರುವಾಗ ಬೇಟೆ ಪ್ರಾಣಿಯನ್ನು ಕೊಲ್ಲಬೇಡಿರಿ. ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಕೊಂದರೆ ಅವನು ಅದಕ್ಕೆ ಸಮಾನವಾದ ಪ್ರಾಣಿಯನ್ನು ಪ್ರಾಯಶ್ಚಿತ್ತವಾಗಿ ನೀಡುವುದು ಕಡ್ಡಾಯವಾಗಿದೆ. ನಿಮ್ಮ ಪೈಕಿ ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ಇದರ ತೀರ್ಮಾನ ಮಾಡಲಿ, ಪ್ರಾಯಶ್ಚಿತ್ತವು ಕಾಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪಿಸಬೇಕಾಗಿದೆ ಅಥವಾ ಪ್ರಾಯಶ್ಚಿತ್ತವನ್ನು ದರಿದ್ರರಿಗೆ ಆಹಾರವಾಗಿ ನೀಡಲಿ ಮತ್ತು ಅದಕ್ಕೆ ಸಮಾನವಾಗಿ ಉಪವಾಸ ಆಚರಿಸಲಿ. ಇದು ಅವನು ಮಾಡಿದ ಕೃತ್ಯದ ಪರಿಣಾಮವನ್ನು ಸ್ವತಃ ಅವನು ಅನುಭವಿಸಲೆಂದಾಗಿದೆ. ಈ ಮುಂಚೆ ಮಾಡಿರುವುದನ್ನು ಅಲ್ಲಾಹು ಕ್ಷಮಿಸಿರುತ್ತಾನೆ ಮತ್ತು ಯಾರು ಪುನಃ ಅಂತಹದೇ ಕೃತ್ಯವನ್ನು ಎಸಗುತ್ತಾನೋ ಅಲ್ಲಾಹನು ಪ್ರತೀಕಾರ ಶಿಕ್ಷಾಕ್ರಮವನ್ನು ಕೈಗೊಳ್ಳುವನು. ಅಲ್ಲಾಹನು ಪ್ರತಾಪಶಾಲಿಯೂ, ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ម៉ាអ៊ីដះ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ