Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಅಅ್ ರಾಫ್   ಶ್ಲೋಕ:
وَاذْكُرُوْۤا اِذْ جَعَلَكُمْ خُلَفَآءَ مِنْ بَعْدِ عَادٍ وَّبَوَّاَكُمْ فِی الْاَرْضِ تَتَّخِذُوْنَ مِنْ سُهُوْلِهَا قُصُوْرًا وَّتَنْحِتُوْنَ الْجِبَالَ بُیُوْتًا ۚ— فَاذْكُرُوْۤا اٰلَآءَ اللّٰهِ وَلَا تَعْثَوْا فِی الْاَرْضِ مُفْسِدِیْنَ ۟
ಅಲ್ಲಾಹನು ನಿಮ್ಮನ್ನು ಆದ್ ಸಮುದಾಯದ ನಂತರ ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಭೂಮಿಯಲ್ಲಿ ವಾಸಸ್ಥಳವನ್ನು ಮಾಡಿಕೊಟ್ಟನು. ಹೀಗೆ ನೀವು ಸಮತಟ್ಟಾದ ಭೂಮಿಯಲ್ಲಿ ಉನ್ನತ ಸೌಧಗಳನ್ನು ಕಟ್ಟುತ್ತೀರಿ ಮತ್ತು ಪರ್ವತಗಳನ್ನು ಕೊರೆದು ಅವುಗಳಲ್ಲಿ ಭವನಗಳನ್ನು ನಿರ್ಮಿಸುತ್ತೀರಿ. ಆದ್ದರಿಂದ ನೀವು ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡಬೇಡಿರಿ.
ಅರಬ್ಬಿ ವ್ಯಾಖ್ಯಾನಗಳು:
قَالَ الْمَلَاُ الَّذِیْنَ اسْتَكْبَرُوْا مِنْ قَوْمِهٖ لِلَّذِیْنَ اسْتُضْعِفُوْا لِمَنْ اٰمَنَ مِنْهُمْ اَتَعْلَمُوْنَ اَنَّ صٰلِحًا مُّرْسَلٌ مِّنْ رَّبِّهٖ ؕ— قَالُوْۤا اِنَّا بِمَاۤ اُرْسِلَ بِهٖ مُؤْمِنُوْنَ ۟
ಅವರ ಜನಾಂಗದ ಅಹಂಕಾರಿಗಳಾದ ಪ್ರಮುಖರು ಅವರ ಪೈಕಿ ಸತ್ಯವಿಶ್ವಾಸವಿರಿಸಿದಂತಹ ದುರ್ಬಲರೊಂದಿಗೆ ಕೇಳಿದರು: ಸ್ವಾಲಿಹ್ ತಮ್ಮ ಪ್ರಭುವಿನ ವತಿಯಿಂದ ಕಳುಹಿಸಲ್ಪಟ್ಟವರೆಂಬುದರ ಬಗ್ಗೆ ನಿಮಗೆ ನಂಬಿಕೆಯಿದೆಯೇ? ಅವರು ಹೇಳಿದರು: ನಿಸ್ಸಂಶಯವಾಗಿಯು ಅವರು ಯಾವ ಸಂದೇಶದೊAದಿಗೆ ಕಳುಹಿಸಲ್ಪಟ್ಟಿರುವರೋ ಅದರಲ್ಲಿ ನಮಗೆ ಸಂಪೂರ್ಣವಾಗಿ ನಂಬಿಕೆಯಿದೆ.
ಅರಬ್ಬಿ ವ್ಯಾಖ್ಯಾನಗಳು:
قَالَ الَّذِیْنَ اسْتَكْبَرُوْۤا اِنَّا بِالَّذِیْۤ اٰمَنْتُمْ بِهٖ كٰفِرُوْنَ ۟
ಆ ಅಹಂಕಾರಿಗಳು ಹೇಳಿದರು: ನೀವು ಯಾವುದರಲ್ಲಿ ವಿಶ್ವಾಸವಿಟ್ಟಿರುವಿರೋ ನಿಸ್ಸಂಶಯವಾಗಿಯು ನಾವು ಅದನ್ನು ಧಿಕ್ಕರಿಸುವವರಾಗಿದ್ದೇವೆ.
ಅರಬ್ಬಿ ವ್ಯಾಖ್ಯಾನಗಳು:
فَعَقَرُوا النَّاقَةَ وَعَتَوْا عَنْ اَمْرِ رَبِّهِمْ وَقَالُوْا یٰصٰلِحُ ائْتِنَا بِمَا تَعِدُنَاۤ اِنْ كُنْتَ مِنَ الْمُرْسَلِیْنَ ۟
ಕೊನೆಗೆ ಅವರು ಆ ಒಂಟೆಯನ್ನು ಕೊಂದು ಬಿಟ್ಟರು ಮತ್ತು ತಮ್ಮ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದರು ಮತ್ತು ಹೇಳಿದರು: ಓ ಸ್ವಾಲಿಹ್, ನೀನು ಸಂದೇಶವಾಹಕರಲ್ಲಿ ಸೇರಿದವನಾಗಿದ್ದರೆ ನಮ್ಮನ್ನು ಯಾವ ಯಾತನೆಯ ಬಗ್ಗೆ ಬೆದರಿಸುತ್ತಿದ್ದೆಯೋ ಅದನ್ನು ತಂದು ಕೊಡು.
ಅರಬ್ಬಿ ವ್ಯಾಖ್ಯಾನಗಳು:
فَاَخَذَتْهُمُ الرَّجْفَةُ فَاَصْبَحُوْا فِیْ دَارِهِمْ جٰثِمِیْنَ ۟
ಕೊನೆಗೆ ಭೂಕಂಪವು ಅವರನ್ನು ಹಿಡಿದು ಬಿಟ್ಟಿತು ಮತ್ತು ಪ್ರಭಾತವಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
ಅರಬ್ಬಿ ವ್ಯಾಖ್ಯಾನಗಳು:
فَتَوَلّٰی عَنْهُمْ وَقَالَ یٰقَوْمِ لَقَدْ اَبْلَغْتُكُمْ رِسَالَةَ رَبِّیْ وَنَصَحْتُ لَكُمْ وَلٰكِنْ لَّا تُحِبُّوْنَ النّٰصِحِیْنَ ۟
ಆಗ ಅವರು (ಸ್ವಾಲಿಹ್) ಅವರಲ್ಲಿಂದ ನಿರ್ಗಮಿಸುತ್ತಾ ಹೇಳಿದರು: ಓ ನನ್ನ ಜನತೆಯೇ, ನಾನಂತು ನಿಮಗೆ ನನ್ನ ಪ್ರಭುವಿನ ಆದೇಶವನ್ನು ತಲುಪಿಸಿದ್ದೆನು ಮತ್ತು ನಾನು ನಿಮ್ಮ ಹಿತಚಿಂತನೆಯನ್ನು ಮಾಡಿದೆನು. ಆದರೆ ಹಿತಚಿಂತಕರನ್ನು ನೀವು ಇಷ್ಟಪಡುವವರಾಗಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَلُوْطًا اِذْ قَالَ لِقَوْمِهٖۤ اَتَاْتُوْنَ الْفَاحِشَةَ مَا سَبَقَكُمْ بِهَا مِنْ اَحَدٍ مِّنَ الْعٰلَمِیْنَ ۟
ಮತ್ತು ನಾವು ಲೂತ್‌ರವರನ್ನು ಕಳಿಹಿಸಿದೆವು. ಅವರು ತಮ್ಮ ಜನಾಂಗದೊAದಿಗೆ ಹೇಳಿದ ಸಂದರ್ಭ: ನಿಮಗಿಂತ ಮುಂಚೆ ಲೋಕದಲ್ಲಿ ಯಾರೂ ಮಾಡಿರದಂತಹ ನೀಚ ಕೃತ್ಯವನ್ನು ನೀವು ಮಾಡುತ್ತಿರುವಿರಾ?
ಅರಬ್ಬಿ ವ್ಯಾಖ್ಯಾನಗಳು:
اِنَّكُمْ لَتَاْتُوْنَ الرِّجَالَ شَهْوَةً مِّنْ دُوْنِ النِّسَآءِ ؕ— بَلْ اَنْتُمْ قَوْمٌ مُّسْرِفُوْنَ ۟
ನೀವು ಸ್ತಿçÃಯರನ್ನು ಬಿಟ್ಟು ಪುರುಷರೊಂದಿಗೆ ಕಾಮಶಮನವನ್ನು ಮಾಡುತ್ತಿದ್ದೀರಿ. ಅಲ್ಲ ನೀವಂತು ಹದ್ದು ಮೀರಿದ ಜನಾಂಗವಾಗಿರುವಿರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಅಅ್ ರಾಫ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ